Home
ಸುದ್ದಿಜಾಲ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಸರಣಿ ಬಿಡುಗಡೆ; ಸ್ಟೈಲಿಶ್‌ ಲುಕ್‌, ಜಬರ್ದಸ್ತ್‌ ಫೀಚರ್ಸ್‌

ಟೆಕ್‌ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಸರಣಿ ಬಿಡುಗಡೆಯಾಗಿದೆ. ಸ್ಯಾಮ್‌ಸಂಗ್‌ ಕಂಪೆನಿಯ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಈವೆಂಟ್‌ನಲ್ಲಿ ಇದನ್ನು ಅನಾವರಣಗೊಳಿಸಲಾಗಿದೆ. ಇನ್ನು ಈ ಸರಣಿಯು ಬೇಸ್ ಗ್ಯಾಲಕ್ಸಿ ವಾಚ್ 6 ಮತ್ತು ಗ್ಯಾಲಕ್ಸಿ ವಾಚ್ 6 ಕ್ಲಾಸಿಕ್ ಮಾದರಿಗಳನ್ನು ಒಳಗೊಂಡಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್ 6 ಸರಣಿ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಎಂಟ್ರಿಯಲ್ಲೇ ಸುನಾಮಿಯಂತೆ ಅಬ್ಬರಿಸುತ್ತಿದ್ದು, ಟೆಕ್‌ ವಲಯವೇ ಶೇಕ್‌ ಆಗುವಂತೆ ಮಾಡಿದೆ. ಇನ್ನು ಈ ಸರಣಿಯ ಸ್ಮಾರ್ಟ್‌ವಾಚ್‌ಗಳು 40mm ನಿಂದ 47mm ಡಯಲ್‌ಗಳ ಗಾತ್ರದಲ್ಲಿ ಬರಲಿವೆ. ಜೊತೆಗೆ LTE ಮತ್ತು ಬ್ಲೂಟೂತ್ v5.3 ಸಂಪರ್ಕವನ್ನು ಬೆಂಬಲಿಸಲಿವೆ. ಹಾಗಾದ್ರೆ ಗ್ಯಾಲಕ್ಸಿ ವಾಚ್ 6 ಸರಣಿಯ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಸರಣಿ ಬಿಡುಗಡೆ; ಸ್ಟೈಲಿಶ್‌ ಲುಕ್‌

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ವಿಶೇಷತೆ ಏನು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಸರಣಿಯಲ್ಲಿ ಬೇಸ್‌ ಮಾಡೆಲ್‌ ಗ್ಯಾಲಕ್ಸಿ ವಾಚ್ 6 40mm ಮಾದರಿಯು 1.3 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 432×432 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ನ 44mm ಮಾದರಿಯು 1.5 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು 480×480 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿದೆ. ಈ ಡಿಸ್‌ಪ್ಲೇ ಫುಲ್‌ ಕಲರ್‌ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಆಗಿದೆ.

ಇನ್ನು ಈ ಸ್ಮಾರ್ಟ್‌ವಾಚ್‌ ಸ್ಯಾಮ್‌ಸಂಗ್‌ ಎಕ್ಸಿನೋಸ್‌ W930 ಡ್ಯುಯಲ್-ಕೋರ್ 1.4GHz ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ವಾಚ್‌ AFib ಮಾನಿಟರ್‌ಗಳನ್ನು ಸಹ ಹೊಂದಿದ್ದು, ಅನಿಯಮಿತ ಹೃದಯದ ಲಯವನ್ನು ಪರಿಶೀಲಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಹೃದಯ ಬಡಿತ, ಆಮ್ಲಜನಕ ಮತ್ತು ನಿದ್ರೆಯ ಮೇಲ್ವಿಚಾರಣೆಯಂತಹ ಫಿಟ್‌ನೆಸ್ ಟ್ರ್ಯಾಕರ್‌ಗಳೊಂದಿಗೆ ಬರುತ್ತವೆ. ಜೊತೆಗೆ ಸುಧಾರಿತ ನಿದ್ರೆಯ ಅನುಭವಗಳ ಬಗ್ಗೆ ಬಳಕೆದಾರರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಕ್ಲಾಸಿಕ್‌ ವಿಶೇಷತೆ ಏನು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಕ್ಲಾಸಿಕ್‌ 43mm ಮಾದರಿಯು 1.3 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರ 47 mm ಆವೃತ್ತಿಯು 1.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ AFib ಮಾನಿಟರ್‌ಗಳನ್ನು ಹೊಂದಿದೆ. ಇದರಿಂದ ಅನಿಯಮಿತ ಹೃದಯದ ಲಯವನ್ನು ಪರಿಶೀಲಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಜೊತೆಗೆ ರಕ್ತದೊತ್ತಡದ ಮಾನಿಟರಿಂಗ್ ಮತ್ತು ಋತುಚಕ್ರದ ಮುನ್ಸೂಚನೆಯನ್ನು ಸಹ ಅನುಮತಿಸುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್‌ 6 ಸರಣಿ ಬಿಡುಗಡೆ; ಸ್ಟೈಲಿಶ್‌ ಲುಕ್‌

ಇನ್ನು ಈ ಸರಣಿಯ ಸ್ಮಾರ್ಟ್‌ವಾಚ್‌ಗಳು 2GB RAM + 16GB ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಇದಲ್ಲದೆ ಗ್ಯಾಲಕ್ಸಿ ವಾಚ್‌ 6 ನ 40mm ಆಯ್ಕೆಯು 300mAh ಮತ್ತು 44mm ಆಯ್ಕೆಯು 400mAh ಬ್ಯಾಟರಿ ಹೊಂದಿದೆ. ಆದರೆ ಗ್ಯಾಲಕ್ಸಿ ವಾಚ್‌ 6 ಕ್ಲಾಸಿಕ್‌ 43mm ಆಯ್ಕೆಯು 300mAh ಮತ್ತು 47mm ಆಯ್ಕೆಯು 400mAh ಬ್ಯಾಟರಿಯನ್ನು ಹೊಂದಿವೆ. ಸ್ಮಾರ್ಟ್‌ವಾಚ್‌ ಆಲ್‌ವೇಸ್‌ ಡಿಸ್‌ಪ್ಲೇ ಆಫ್‌ ಆಗಿರುವಾಗ 40 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ ಆಲ್‌ವೇಸ್‌ ಡಿಸ್‌ಪ್ಲೇ ಆನ್‌ ಅಲ್ಲಿ ಇರುವಾಗ 30 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ನೀಡಲಿವೆ. ಈ ವಾಚ್‌ಗಳು ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿವೆ. ಅಲ್ಲದೆ ಸ್ಯಾಮ್‌ಸಂಗ್ ಬಯೋಆಕ್ಟಿವ್ ಸೆನ್ಸರ್, ಟೆಂಪರೇಚರ್ ಸೆನ್ಸರ್, ಅಕ್ಸೆಲೆರೊಮೀಟರ್, ಬ್ಯಾರೋಮೀಟರ್, ಗೈರೋ ಸೆನ್ಸರ್, ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಲೈಟ್ ಸೆನ್ಸರ್ ಅನ್ನು ಒಳಗೊಂಡಿವೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್ 6 ಸರಣಿ ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್ 6 USD 299 (ಅಂದಾಜು 24,500ರೂ) ಬೆಲೆಯನ್ನು ಹೊಂದಿದೆ. ಆದರೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ವಾಚ್ 6 ಕ್ಲಾಸಿಕ್ USD 399 (ಅಂದಾಜು 32,700ರೂ) ನಿಂದ ಪ್ರಾರಂಭವಾಗಲಿದೆ. ಈ ಎರಡೂ ಮಾದರಿಗಳು ಇಂದಿನಿಂದ (ಜುಲೈ 26 ರಿಂದ) ಆಯ್ದ ಮಾರುಕಟ್ಟೆಗಳಲ್ಲಿ ಮುಂಗಡ-ಕೋರಿಕೆಗೆ ಲಭ್ಯವಿರುತ್ತವೆ. ಇವುಗಳನ್ನು ಆಗಸ್ಟ್ 11 ರಿಂದ ಸೇಲ್‌ ಆಗಲಿವೆ. ಇದರ ಭಾರತದ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ.

Best Mobiles in India

English summary
Samsung Galaxy Watch 6 series With Improved Health Tracking Launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+