ಸ್ಯಾಮ್‌ಸಂಗ್‌ನಿಂದ 'ಗ್ಯಾಲ್ಯಾಕ್ಸಿ ಆಕ್ಟಿವ್2 ವಾಚ್' ನ 4G ಆವೃತ್ತಿ ಬಿಡುಗಡೆ!
ಟೆಕ್ ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಉತ್ಪನ್ನಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿರುವ ಜನಪ್ರಿಯ 'ಸ್ಯಾಮ್‌ಸಂಗ್' ಕಂಪನಿಯು 'ಗ್ಯಾಲ್ಯಾಕ್ಸಿ ಆಕ್ಟಿವ್ 2 ವಾಚ್' ಅನ್ನ ಮಾರುಕಟ್ಟೆಗೆ ಪರಿಚಯಿಸಿದ್ದು ನಿಮಗೆಲ್ಲಾ ಗೊತ್ತೆ ಇದೆ. ಇದೀಗ ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ವಾಚ್ ಆಕ್ಟಿವ್ 2'ನ 4G ಡಿವೈಸ್ ನ ಅನ್ನು ಬಿಡುಗಡೆ ಮಾಡಿದೆ. 4G ಮಾದರಿಯಲ್ಲಿ ಬಿಡುಗಡೆಯಾಗಿರೋ ಈ ಹೊಸ ಡಿವೈಸ್ ಅತ್ಯುತ್ತಮ ಫಿಟ್ನೆಸ್ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಮಾರುಕಟ್ಟೆಯಲ್ಲಿ ಇನ್ನಷ್ಟು ಸೌಂಡ್ ಮಾಡೋ ಸೂಚನೆ ನೀಡಿದೆ.

ಹೌದು ಸ್ಯಾಮ್‌ಸಂಗ್ ಕಂಪೆನಿ ಈ ಹಿಂದೆ ಬಿಡುಗಡೆ ಮಾಡಿದ್ದ ಗ್ಯಾಲಕ್ಸಿ ವಾಚ್ ಆಕ್ಟಿವ್ 2 ನ 4G ಡಿವೈಸ್ ಅನ್ನ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಕೇವಲ ಪಿಟ್ನೆಸ್ ಬ್ಯಾಂಡ್ ಮಾತ್ರವಲ್ಲದೆ ಕರೆಗಳನ್ನು ಸಹ ಮಾಡಲು ಬಳಸಬಹುದಾಗಿದ್ದು,ಹೊಸ ಮಾದರಿಯಲ್ಲಿ ಡಿವೈಸ್ ಅನ್ನ ವಿನ್ಯಾಸ ಮಾಡಲಾಗಿದೆ. ಸದ್ಯ ಸ್ಮಾರ್ಟ್ ವಾಚ್ ಸಿಲ್ವರ್, ಕಪ್ಪು ಮತ್ತು ಗೋಲ್ಡ್ ಕಲರ್‌ನ 44 ಎಂಎಂ ಸ್ಟೀಲ್ ಡಯಲ್‌ನಲ್ಲಿ ಲಭ್ಯವಿದೆ.

ಸದ್ಯ ಈ ಸ್ಮಾರ್ಟ್‌ವಾಚ್ ಇಸಿಮ್ ಸಂಪರ್ಕವನ್ನ ಹೊಂದಿದ್ದು ವೈ-ಫೈ-ಸಂಪರ್ಕವನ್ನು ಸಹ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಗ್ಯಾಲಕ್ಸಿ ವಾಚ್ ಆಕ್ಟಿವ್ 2 4Gಬಳಕೆದಾರರು ಪರಸ್ಪರ ಸಂಪರ್ಕದಲ್ಲಿರಲು ಮತ್ತು ಸ್ಮಾರ್ಟ್ ವಾಚ್‌ನಿಂದ ನೇರವಾಗಿ ಕರೆಗಳನ್ನು ಮಾಡಲು ಅಥವಾ ಸ್ವೀಕರಿಸಲು ಅವಕಾಶವನ್ನ ಕಲ್ಪಿಸಲಾಗಿದೆ. ಅಲ್ಲದೆ ಸೋಶೀಯಲ್ ಮೀಡಿಯಾ ಆಪ್‌ಗಳನ್ನ ಇದರಲ್ಲಿ ಇನ್‌ಸ್ಟಾಲ್ ಮಾಡಬಹುದಾಗಿದೆ.

ಅಲ್ಲದೆ ಈ ಸ್ಮಾರ್ಟ್ ವಾಚ್‌ನಲ್ಲಿ ಹೊಸದಾಗಿ ನವೀಕರಿಸಿದ ‘ರನ್ನಿಂಗ್ ಕೋಚ್' ಜೊತೆಗೆ ಏಳು ವಿಭಿನ್ನ ಪ್ರೋಗ್ರಾಂಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ವಾಕಿಂಗ್, ರನ್ನಿಂಗ್, ಸೈಕ್ಲಿಂಗ್, ರೋಯಿಂಗ್, ಎಲಿಪ್ಟಿಕಲ್ ಟ್ರೈನರ್, ಡೈನಾಮಿಕ್ ವರ್ಕೌಟ್ಸ್ ಮತ್ತು ಸ್ವಿಮ್ಮಿಂಗ್, ಸೇರಿದಂತೆ 39 ರೀತಿಯ ವಿಭಿನ್ನ ಚಟುವಟಿಕೆಗಳನ್ನು ಆಟೋ ಟ್ರ್ಯಾಕಿಂಗ್ ಮಾಡಬಲ್ಲ ಸೆನ್ಸಾರ್‌ಗಳನ್ನ ಈ ಸ್ಮಾಟ್ ವಾಚ್‌ನಲ್ಲಿ ಒದಗಿಸಲಾಗಿದೆ. ಜೊತೆಗೆ ಗ್ಯಾಲಕ್ಸಿ ಆಕ್ಟಿವ್ 2 4 ಜಿ ನಿದ್ರೆ ಮತ್ತು ಧ್ಯಾನ ಅಪ್ಲಿಕೇಶನ್ ‘ಕಾಮ್' ಮೂಲಕ ಧ್ಯಾನ ಕಾರ್ಯಕ್ರಮಗಳ ಮಾರ್ಗದರ್ಶನವನ್ನ ನೀಡುತ್ತದೆ.

ಇನ್ನು ಈ "ಗ್ಯಾಲಕ್ಸಿ ವಾಚ್ ಆಕ್ಟಿವ್ 2 4G ಬಿಡುಗಡೆಯೊಂದಿಗೆ, ಸ್ಯಾಮ್‌ಸಂಗ್ ಭಾರತದಲ್ಲಿ 4G ಮಾದರಿಯ ಸ್ಮಾರ್ಟ್‌ವಾಚ್‌ಗಳ ಶ್ರೇಣಿಯನ್ನು ಹೊಂದಿದೆ, ಸದ್ಯ 4G ಸ್ಮಾರ್ಟ್‌ವಾಚ್ ವಿಶಿಷ್ಟ ವಿನ್ಯಾಸದ ಟೆಂಪ್ಲೇಟ್‌ಗಳನ್ನು ಹೊಂದಿದೆ. ಭಾಷೆ ಮತ್ತು ವಿನ್ಯಾಸದಲ್ಲಿ ಕ್ರಿಯಾತ್ಮಕತೆಯನ್ನು ಒಳಗೊಂಡಿದ್ದು, ಬಳಕೆದಾರರಿಗೆ ಉತ್ತಮ ಅನುಭವವನ್ನ ನೀಡುತ್ತದೆ ಎಂದು ಸ್ಯಾಮ್‌ಸಂಗ್ ಮೊಬೈಲ್ ಬಿಸಿನೆಸ್ ನಿರ್ದೇಶಕಿ ಆದಿತ್ಯ ಬಬ್ಬರ್ ಹೇಳಿದ್ದಾರೆ.

ಸದ್ಯ ಗ್ಯಾಲಕ್ಸಿ ವಾಚ್ ಆಕ್ಟಿವ್ 2 4G ಸ್ಮಾರ್ಟ್‌ವಾಚ್ ಅನ್ನು ಸ್ಯಾಮ್‌ಸಂಗ್ ಒಪೇರಾ ಹೌಸ್, ಸ್ಯಾಮ್‌ಸಂಗ್ ಇ-ಶಾಪ್ ಮತ್ತು ಪ್ರಮುಖ ಆನ್‌ಲೈನ್ ಪೋರ್ಟಲ್‌ಗಳ ಮೂಲಕ ಖರೀದಿಸಬಹುದಾಗಿದ್ದು, ಇದರ ಬೆಲೆ 35,990,ರೂ. ಆಗಿದೆ.


Click it and Unblock the Notifications








