ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್3 !
ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳಿಂದ ಮಾತ್ರವ್ಲ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ಗಳಿಂದಲೂ ಸೈ ಎನಿಸಿಕೊಂಡಿದೆ. ಫಿಟ್ನೆಸ್ ಆಧಾರಿತ ಬ್ಯಾಂಡ್, ಸ್ಮಾರ್ಟ್‌ವಾಚ್‌ಗಲ ಜನಪ್ರಿಯತೆ ಹೆಚ್ಚಾದಂತೆ ಸ್ಯಾಮ್‌ಸಂಗ್ ಕಂಪೆನಿ ಕೂಡ ತನ್ನ ಹೊಸ ಬಗೆಯ ಸ್ಮಾರ್ಟ್‌ವಾಚ್‌ಗಳನ್ನ ಪರಿಚಯಿಸಿದೆ. ಈಗಾಗಲೇ ಹಲವು ಹೊಸ ಸ್ಮಾರ್ಟ್‌ವಾಚ್‌ಗಳನ್ನ ಬಿಡುಗಡೆ ಮಾಡಿರುವ ಸ್ಯಾಮ್‌ಸಂಗ್ ಇದೀಗ ತನ್ನ ಗ್ಯಾಲಕ್ಸಿ ವಾಚ್ 3 ಮತ್ತು ಗ್ಯಾಲಕ್ಸಿ ಬಡ್ಸ್ ಲೈವ್ ಇನ್ ಇಂಡಿಯಾವನ್ನು ಬಿಡುಗಡೆ ಮಾಡಿದೆ.

ಹೌದು, ಸ್ಯಾಮ್‌ಸಂಗ್ ಕಂಪೆನಿ ತನ್ನ ಹೊಸ ಗ್ಯಾಲಕ್ಸಿ ವಾಚ್ 3 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ಲೈವ್ ಇನ್ ಅನ್ನಯ ಸಹ ಬಿಡುಗಡೆ ಮಾಡಿದೆ. ಇದರಲ್ಲಿ ಗ್ಯಾಲಕ್ಸಿ ವಾಚ್ 3 ಇದೇ ಆಗಸ್ಟ್ 27 ರಿಂದ ಮಾರಾಟವಾಗಲಿದ್ದು, ಆಗಸ್ಟ್ 25 ರಿಂದ ಗ್ಯಾಲಕ್ಸಿ ಬಡ್ಸ್ ಲೈವ್ ಲಭ್ಯವಿರುತ್ತದೆ. ಚಿಲ್ಲರೆ ಅಂಗಡಿಗಳು, ಸ್ಯಾಮ್‌ಸಂಗ್ ಒಪೇರಾ ಹೌಸ್, ಸ್ಯಾಮ್‌ಸಂಗ್.ಕಾಮ್ ಮತ್ತು ಪ್ರಮುಖ ಆನ್‌ಲೈನ್ ಪೋರ್ಟಲ್‌ಗಳಲ್ಲಿ ಈ ಹೊಸ ವೆರಿಯೆಬಲ್ಸ್ ಪ್ರಾಡಕ್ಟ್‌ಗಳು ಲಭ್ಯವಾಗಲಿವೆ. ಹಾಗಾದ್ರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3 ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3 ನಲ್ಲಿ ದೊಡ್ಡ ಗಾತ್ರದ ಆವೃತ್ತಿಯು 1.4-ಇಂಚಿನ ವೃತ್ತಾಕಾರದ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಸಣ್ಣ ಗಾತ್ರದ ಆವೃತ್ತಿಯು 1.2-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಎರಡೂ ರೂಪಾಂತರಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಅನ್ನು ಹೊಂದಿವೆ. ಅಲ್ಲದೆ ಈ ಸ್ಮಾರ್ಟ್‌ವಾಚ್ AMOLED ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ. ಇದಲ್ಲದೆ ಸ್ಯಾಮ್ಸಂಗ್ ಗ್ಯಾಲಕ್ಸಿ ವಾಚ್ 3 ತಿರುಗುವ ಅಂಚಿನ ವಿನ್ಯಾಸವನ್ನು ಹೊಂದಿದೆ.

ಇನ್ನು ಈ ಸ್ಮಾರ್ಟ್‌ವಾಚ್ ವಾಯುಮಂಡಲದ ಒತ್ತಡ ಸಂವೇದಕ, ಜಿಪಿಎಸ್ ಆಂಟೆನಾ, ಲೈಟ್ ಸೆನ್ಸರ್, ಟಚ್‌ಸ್ಕ್ರೀನ್ ಮತ್ತು ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಒತ್ತಡದ ತೆರಪಿನ ಮತ್ತು ಹಿಂಭಾಗದಲ್ಲಿ ಹೃದಯ ಬಡಿತ ಸೆನ್ಸಾರ್ ಮತ್ತು ನಿದ್ರೆಯ ಮೇಲ್ವಿಚಾರಣೆಯನ್ನು ಮಾಡುವ ಹೊಸ ಫೀಚರ್ಸ್ ಅನ್ನು ಸಹ ಒಳಗೊಂಡಿದೆ. ಇದಲ್ಲದೆ ಇದು 5ATM ಮತ್ತು IP68 ನೀರು ಮತ್ತು ಧೂಳು ನಿರೋಧಕ ದೃಡೀಕರಣವನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್‌ನಲ್ಲಿ ಪತನ-ಪತ್ತೆ ಫೀಚರ್ಸ್ ಕೂಡ ಲಭ್ಯವಿದೆ. ಅಲ್ಲದೆ ಇದು ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ಸ್ಪಂದಿಸದಿದ್ದಲ್ಲಿ ನಿಮ್ಮ ಆಯ್ಕೆಯ ಸಂಪರ್ಕಕ್ಕೆ ತುರ್ತು ಸಂದೇಶವನ್ನು ಕಳುಹಿಸುತ್ತದೆ.

ಇನ್ನು ಸ್ಪೆಕ್ಸ್‌ಗೆ ಸಂಬಂಧಿಸಿದಂತೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 3 ಟಿಜೆನ್ OSನಲ್ಲಿ 1GB RAM, 8GB ಇಂಟರ್‌ಬಿಲ್ಟ್ ಸ್ಟೋರೇಜ್, ಮತ್ತು ಎಕ್ಸಿನೋಸ್ 9110 ಡ್ಯುಯಲ್-ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದಲ್ಲದೆ ಈ ವಾಚ್ 41mm ಮಿಸ್ಟಿಕ್ ಕಂಚು ಮತ್ತು ಮಿಸ್ಟಿಕ್ ಸಿಲ್ವರ್ ಬಣ್ಣಗಳಲ್ಲಿ ಬರುತ್ತದೆ. ಅಲ್ಲದೆ ಗ್ಯಾಲಕ್ಸಿ ವಾಚ್ 3 45mm ಮಿಸ್ಟಿಕ್ ಸಿಲ್ವರ್ ಮತ್ತು ಮಿಸ್ಟಿಕ್ ಬ್ಲ್ಯಾಕ್ ಕಲರ್ ಆಯ್ಕೆಯನ್ನು ಸಹ ಹೊಂದಿದೆ. ಇನ್ನು ಗ್ಯಾಲಕ್ಸಿ ವಾಚ್ 3 41mm ಕ್ರಮವಾಗಿ ಬ್ಲೂಟೂತ್ ಮತ್ತು 4G ರೂಪಾಂತರಗಳಿಗೆ 29,990ರೂ ಮತ್ತು, 34,490ರೂ ಬೆಲೆಯನ್ನ ಹೊಂದಿದೆ. ಜೊತೆಗೆ ಗ್ಯಾಲಕ್ಸಿ ವಾಚ್ 3 45mm ಬ್ಲೂಟೂತ್ ರೂಪಾಂತರಕ್ಕೆ 32,990 ರೂ, ಮತ್ತು 4G ರೂಪಾಂತರಕ್ಕೆ, 38,990 ಬೆಲೆಯನ್ನು ಹೊಂದಿದೆ.


Click it and Unblock the Notifications








