ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್ ವಿನ್ಯಾಸ ಪುಸ್ತಕದಂತಿದೆ..!

By Shwetha Ps
|

ಫೋಲ್ಡ್ ಮಾಡಬಹುದಾದ ಸ್ಮಾರ್ಟ್‌ಫೋನ್ ಅನ್ನು ಸ್ಯಾಮ್‌ಸಂಗ್ ಮಾರುಕಟ್ಟೆಗೆ ಬಿಡುಗಡೆ ಮಾಡಿ ದಶಕಗಳೇ ಕಳೆದಿದೆ. ಈಗ ಗ್ಯಾಲಕ್ಸಿ ಎಕ್ಸ್ ಅನ್ನು ಕಂಪನಿ ಲಾಂಚ್ ಮಾಡುವ ನಿಟ್ಟಿನಲ್ಲಿದ್ದು ಈ ಡಿವೈಸ್ ಕುರಿತು ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಗ್ಯಾಲಕ್ಸಿ ಎಕ್ಸ್ ಮಾಡೆಲ್ ಸಂಖ್ಯೆ SM - G888N0 ಅನ್ನು ಒಳಗೊಂಡಿದ್ದು ಮುಂದಿನ ವರ್ಷದವರೆಗೆ ಫೋನ್ ಬಿಡುಗಡೆಯಾಗುವುದಿಲ್ಲ ಎಂಬ ಸುದ್ದಿಯನ್ನು ಅರುಹುತ್ತಿದೆ ಆದರೆ ಸ್ಯಾಮ್‌ಸಂಗ್ ಕೊರಿಯಾ ವೆಬ್‌ಸೈಟ್ ಡಿವೈಸ್ ಲಾಂಚ್ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುವುದಿಲ್ಲ ಎಂಬ ಮಾಹಿತಿಯನ್ನು ನೀಡಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್ ವಿನ್ಯಾಸ ಪುಸ್ತಕದಂತಿದೆ..!

ಡಿವೈಸ್ ಬಗ್ಗೆ ವೈಶಿಷ್ಟ್ಯಗಳನ್ನು ಕೆಲವು ವೆಬ್‌ಸೈಟ್‌ಗಳು ನಿಖರವಾಗಿ ತಿಳಿಸದೇ ಇದ್ದರೂ ಇದು ಮಡಚಬಹುದಾದ ವೈಶಿಷ್ಟ್ಯತೆಯೊಂದಿಗೆ ಬಂದಿದೆ ಎಂಬುದು ತಿಳಿದು ಬಂದಿದೆ.

ಕೆಲವು ತಿಂಗಳ ಹಿಂದೆಯಷ್ಟೇ SM - G888N0 ಬ್ಲ್ಯೂಟೂತ್ ಮತ್ತು ವೈ-ಫೈ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಆದರೆ ಡಿವೈಸ್‌ನ ಸಂಪೂರ್ಣ ವಿವರ ಗೊತ್ತಾಗಿಲ್ಲ. ZTE ಆಕ್ಸನ್ ಎಮ್‌ನಂತೆ ಬಾಗಿರುವ ಅದೇ ವಿನ್ಯಾಸವನ್ನು ಡಿವೈಸ್ ಪಡೆದುಕೊಳ್ಳಬಹುದು ಎಂಬ ಸುದ್ದಿ ಇದೆ. ಇದು ಪುಸ್ತಕದ ಮಾದರಿಯ ವಿನ್ಯಾಸವನ್ನು ಪಡೆದುಕೊಳ್ಳಲಿದೆ ಎಂಬುದು ಇನ್ನೊಂದು ಮೂಲಗಳಿಂದ ತಿಳಿದು ಬಂದ ಸುದ್ದಿಯಾಗಿದೆ. ಬಳಸಲಾದ ಪ್ರೊಸೆಸರ್ ಮತ್ತು ಸ್ಕ್ರೀನ್ ಗಾತ್ರ ತಿಳಿದಿಲ್ಲ.

ಎಕ್ಸೋನಸ್ 9810 ಅಥವಾ ಸ್ನ್ಯಾಪ್‌ಡ್ರ್ಯಾಗನ್ 845 ಚಿಪ್‌ಸೆಟ್ ಅನ್ನು ಪಡೆದುಕೊಳ್ಳಬಹುದಾಗಿದೆ. ಗ್ಯಾಲಕ್ಸಿ ಎಸ್9 ಮತ್ತು ಗ್ತಾಲಕ್ಸಿ ಎಸ್9 + ನಲ್ಲಿ ಇದೇ ಪ್ರೊಸೆಸರ್‌ಗಳಿವೆ. ಇನ್ನು ಗ್ಯಾಲಕ್ಸಿ ಎಸ್8 ಮತ್ತು ಎಸ್8 + ನಲ್ಲಿರುವ ಅದೇ ವಿಶೇಷತೆಗಳನ್ನು ಡಿವೈಸ್ ಪಡೆದುಕೊಳ್ಳಲಿದೆ ಎಂಬ ಸುದ್ದಿ ಕೂಡ ಇದೆ.

ಜಿಯೋಗಿಂತಲೂ ಏರ್‌ಟೆಲ್ ಮೇಲೆ ಪ್ರೀತಿ ಹೆಚ್ಚಾಗಲು ಇದೊಂದೇ ಕಾರಣ ಸಾಕು!!ಜಿಯೋಗಿಂತಲೂ ಏರ್‌ಟೆಲ್ ಮೇಲೆ ಪ್ರೀತಿ ಹೆಚ್ಚಾಗಲು ಇದೊಂದೇ ಕಾರಣ ಸಾಕು!!

ಸ್ಯಾಮ್‌ಸಂಗ್‌ನ ದೇಶದಲ್ಲಿ ಡಿವೈಸ್ ಮೊದಲು ಬಿಡುಗಡೆಯಾದ ನಂತರವಷ್ಟೇ ಈ ಡಿವೈಸ್ ಕುರಿತು ಮತ್ತಷ್ಟು ಮಾಹಿತಿಗಳನ್ನು ನಮಗೆ ತಿಳಿದುಕೊಳ್ಳಬಹುದಾಗಿದೆ. ಅಂತೂ ಇಂತೂ 2018 ರ ಮುಂಚೆಯೇ ಈ ಹೊಸ ಡಿವೈಸ್ ನಮ್ಮ ದೇಶಕ್ಕೂ ಕಾಲಿಡಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ.

Best Mobiles in India

Read more about:
English summary
The Samsung Galaxy X support page confirms the existence of the foldable smartphone with the model number SM-G888N0.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X