ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನ ಬೆಲೆ ಕಡಿತ!
ಸ್ಮಾರ್ಟ್‌ಫೋನ್ ದಿಗ್ಗಜ ಸ್ಯಾಮ್‌ಸಂಗ್ ಕಂಪೆನಿ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೊನ್‌ಗಳ ಮೂಲಕ ಗುರುತಿಸಿಕೊಂಡಿದೆ. ತನ್ನ ವಿಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸಿ ಸೈ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನ ಗಟ್ಟಿ ಪಡಿಸಿಕೊಂಡಿದೆ. ಸದ್ಯ ಇದೀಗ ಸ್ಯಾಮ್‌ಸಂಗ್ ಕಂಪೆನಿ ಭಾರತದಲ್ಲಿ ಪ್ರೀಮಿಯಂ ಗ್ಯಾಲಕ್ಸಿ Z ಫ್ಲಿಪ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನ ಬೆಲೆಯಲ್ಲಿ 7,000 ರೂ.ಗಳಷ್ಟು ಬೆಲೆಯನ್ನ ಕಡಿತ ಮಾಡಿದೆ.

ಹೌದು, ಸ್ಯಾಮ್‌ಸಂಗ್ ಕಂಪೆನಿ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ ಮೇಲಿನ ಬೆಲೆಯಲ್ಲಿ 7,000 ರೂಗಳನ್ನ ಕಡಿತ ಮಾಡಿದ್ದು, 1,15,999 ರೂ (1.16 ಲಕ್ಷ ರೂ) ಬದಲಿಗೆ 1,08,999 (1.9 ಲಕ್ಷ ರೂ.) ಗೆ ಮಾರಾಟ ಮಾಡಲು ಮುಂದಾಗಿದೆ. ಹಾಗೇ ನೋಡುವುದಾದರೆ ಸ್ಯಾಮ್‌ಸಂಗ್ ಕಂಪನಿಯು ಆರಂಭದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ ಅನ್ನು ಭಾರತದಲ್ಲಿ 1,09,999 ರೂ. (1.10 ಲಕ್ಷ ರೂ.) ಗೆ ಬಿಡುಗಡೆ ಮಾಡಿತ್ತು, ನಂತರ ಅದನ್ನು 1,15,999 ರೂ,ಗಳಿಗೆ ಏರಿಸಿತು. ಸದ್ಯ ಇದೀಗ ಏಳು ಸಾವಿರ ರೂ ಅನ್ನು ಕಡಿಮೆ ಮಾಡಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ವಿಶೇಷತೆ ಹಾಗೂ ಬೆಲೆಯ ವಿವರವನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋಲ್ಡಬಲ್ ಸ್ಮಾರ್ಟ್‌ಫೋನ್ 6.7-ಇಂಚಿನ ಫುಲ್ ಹೆಚ್‌ಡಿ+ ಫೋಲ್ಡಬಲ್ ಸ್ಕ್ರೀನ್ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು ಪ್ರಾಥಮಿಕ ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ಸ್ಮಾರ್ಟ್‌ಫೋನ್ ಅನ್ನು ಬಿಚ್ಚಿದಾಗ ಲಭ್ಯವಾಗುತ್ತದೆ. ಮಡಿಸಿದಾಗ, 300 x 112 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿರುವ 1.1-ಇಂಚಿನ ಸಣ್ಣ ದ್ವಿತೀಯ ಡಿಸ್‌ಪ್ಲೇಯನ್ನು ಸಹ ಹೊಂದಿದೆ. ಇದರಲ್ಲಿ ನೊಟಿಫೀಕೇಶನ್‌ಗಳನ್ನ ನೋಡುವುದಕ್ಕೆ ಸುಲಭವಾಗಲಿದೆ. ಜೊತೆಗೆ ಇದು ವ್ಯೂಫೈಂಡರ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ.

ಇನ್ನು ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 855+ SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 8GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್‌ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಎರಡು ಕ್ಯಾಮೆರಾಗಳು ಕೂಡ 12 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿವೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 10 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್ 3,300mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು, 15W ವೇಗದ ಚಾರ್ಜಿಂಗ್ ಮತ್ತು ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ಹಾಟ್‌ಸ್ಪಾಟ್, ವೈಫೈ, ಅನ್ನು ಬೆಂಬಲಿಸಲಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಬೆಲೆ 7,000 ರೂ ಬೆಲೆ ಕಡಿತವಾಗಿದ್ದು, 1,08,999 (ರೂ. 1.10 ಲಕ್ಷ) ಕ್ಕೆ ಲಭ್ಯವಾಗಲಿದೆ.


Click it and Unblock the Notifications








