Home
ಸುದ್ದಿಜಾಲ

ಶೀಘ್ರದಲ್ಲೇ Samsung Galaxy Z Fold 6 ಲಾಂಚ್ ! ಫೀಚರ್ಸ್‌ ಸೋರಿಕೆ

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು (Samsung Smartphones) ಮಾರುಕಟ್ಟೆಯಲ್ಲಿ ತನ್ನದೇ ಆದ ವಿಶೇಷ ಬೇಡಿಕೆ ಹೊಂದಿವೆ. ಇದು ತನ್ನ ವಿಭಿನ್ನ ಶೈಲಿಯ ಫೀಚರ್ಸ್‌ ಹಾಗೂ ವಿನ್ಯಾಸದ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಸ್ಯಾಮ್‌ಸಂಗ್ (Samsung) ತನ್ನ ಬಹುನಿರೀಕ್ಷಿತ ಫೋಲ್ಡಬಲ್ ಫೋನ್ ಒಂದನ್ನು ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದೆ ಎಂದು ಅನೇಕ ವದಂತಿಗಳು ಹರಿದಾಡುತ್ತಿವೆ. ಇತ್ತೀಚಿನ ವದಂತಿಯ ಪ್ರಕಾರ Samsung Galaxy Z Fold 6 ಮತ್ತು Galaxy Z Flip 6 ಮುಂದಿನ ತಿಂಗಳು ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ. ಹಾಗಾದ್ರೆ ಈ ಮೊಬೈಲ್‌ ಕುರಿತು ಸೋರಿಕೆಯಾಗಿರುವ ಅಂಶಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಸಕೊಡುತ್ತೇವೆ ಪೂರ್ತಿ ಓದಿ.

ಸ್ಯಾಮ್‌ಸಂಗ್ ತನ್ನ ಮುಂದಿನ ಜನರೇಶನ್‌ನ ಫೋಲ್ಡಬಲ್‌ ಮೊಬೈಲ್‌ಗಳ ಕುರಿತುವಿಷಯವನ್ನು ಎಷ್ಟೇ ಗೌಪ್ಯವಾಗಿ ಇಟ್ಟರೂ, ಕಳೆದ ವಾರಗಳಲ್ಲಿ ಅವುಗಳ ಬೆಲೆ ಮತ್ತು ವಿನ್ಯಾಸದ ಬಗ್ಗೆ ಬಹಳಷ್ಟು ವಿಷಯಗಳು ಬಹಿರಂಗವಾಗಿತ್ತು. ಇದೀಗ Galaxy Z Fold 6 ರ ಸಂಪೂರ್ಣ ವಿಶೇಷತೆಗಳನ್ನು ಸೂಚಿಸುವ ಹೊಸ ಸೋರಿಕೆಯೊಂದು ಹೊರ ಬಂದಿದೆ. ಸೋರಿಕೆಯು ಮೊಬೈಲ್‌ ಕುರಿತಾದ ಇತ್ತೀಚಿನ ವದಂತಿಗಳನ್ನು ದೃಢೀಕರಿಸುತ್ತದೆ. ಫೋನ್ Galaxy SoC ಗಾಗಿ ಕಸ್ಟಮ್ ಸ್ನಾಪ್‌ಡ್ರಾಗನ್ 8 Gen 3 ಮೊಬೈಲ್ ಪ್ಲಾಟ್‌ಫಾರ್ಮ್ ರಲ್ಲಿ ರನ್ ಮಾಡುತ್ತದೆ ಮತ್ತು 4,400mAh ಬ್ಯಾಟರಿಯನ್ನು ಹೊಂದಿರಲಿದೆ ಎಂದು ಊಹಿಸಲಾಗಿದೆ.

ಶೀಘ್ರದಲ್ಲೇ Samsung Galaxy Z Fold 6 ಲಾಂಚ್ ! ಫೀಚರ್ಸ್‌ ಸೋರಿಕೆ

Galaxy Z Fold 6 ಮೊಬೈಲ್‌ನ ಹಲವು ವೈಶಿಷ್ಟ್ಯಗಳನ್ನು ತಿಳಿಸುವ ವಿವರಣೆಯ ಪೇಜ್ ಒಂದನ್ನು Smartprix ಹಂಚಿಕೊಂಡಿದೆ. ವರದಿ ಪ್ರಕಾರ, ಬುಕ್ ಶೈಲಿಯ ಫೋಲ್ಡಬಲ್ ಮೊಬೈಲ್ ನೇವಿ, ಪಿಂಕ್ ಮತ್ತು ಸಿಲ್ವರ್ ಶ್ಯಾಡೋ ಶೇಡ್‌ಗಳಲ್ಲಿ ಲಭ್ಯವಿರುತ್ತದೆ. ಒಳಗಿನ ದೊಡ್ಡ ಡಿಸ್‌ಪ್ಲೇ ಮತ್ತು Galaxy Z Fold 5 ಮೇಲೆ ಹಗುರವಾಗಿ ನಿರ್ಮಾಣದಂತಹ ಸಣ್ಣ ಸುಧಾರಣೆಗಳ ಕುರಿತು ಸುಳಿವು ನೀಡಿದೆ.

Samsung Galaxy Z Fold 6 ಸೋರಿಕೆಯಾದ ವಿಶೇಷತೆಗಳು:
ಈ ಮೊಬೈಲ್‌ ನ್ಯಾನೋ ಡ್ಯುಯಲ್ ಸಿಮ್ ಹೊಂದಿರಲಿದ್ದು, 7.6 ಇಂಚಿನ QXGA+ (1,856x2,160 ಪಿಕ್ಸೆಲ್‌ಗಳು) ಡೈನಾಮಿಕ್ AMOLED 2X ಒಳಗಿನ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಹೊಂದಿರಬಹುದು ಎಂದು ಹೇಳಲಾಗುತ್ತಿದೆ. ಇದು 968x 2,376 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಹೊರಗಿನ 6.3 ಇಂಚಿನ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಇದು 3.39GHz ಕ್ಲಾಕ್ ಸ್ಪೀಡ್ ಮತ್ತು 12GB LPDDR5X RAM ಜೊತೆಗೆ Galaxy ಗಾಗಿ Snapdragon 8 Gen 3 ರಲ್ಲಿ ರನ್ ಆಗಬಹುದು. ಇದು 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆಗಳಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.

Samsung Galaxy Z Fold 6 ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಬಹುದು ಎಂದು ಹೇಳಲಾಗುತ್ತಿದೆ, ಇದು 50MP ವೈಡ್ ಆಂಗಲ್ ಕ್ಯಾಮೆರಾ OIS, 12MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ 120 ಡಿಗ್ರಿ ಕ್ಷೇತ್ರ ವೀಕ್ಷಣೆ ಒಳಗೊಂಡಿದೆ. ಮತ್ತು 30x ಡಿಜಿಟಲ್ ಜೂಮ್‌ನೊಂದಿಗೆ 10MP ಟೆಲಿಫೋಟೋ ಕ್ಯಾಮರಾ. ಇದು ಕವರ್ ಡಿಸ್‌ಪ್ಲೇನಲ್ಲಿ 10MP ಕ್ಯಾಮೆರಾ ಮತ್ತು ಒಳಗಿನ ಡಿಸ್‌ಪ್ಲೇಯಲ್ಲಿ 4MP ಅಂಡರ್ ಡಿಸ್‌ಪ್ಲೇ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಹಿಂಬದಿಯ ಕ್ಯಾಮೆರಾ ಸೆಟಪ್ 30fps ನಲ್ಲಿ 8K ವೀಡಿಯೊ ಚಿತ್ರೀಕರಣವನ್ನು ಬೆಂಬಲಿಸುತ್ತದೆ ಎಂದು ಹೇಳಲಾಗುತ್ತಿದೆ.

ಈ ಸ್ಮಾರ್ಟ್‌ಫೋನ್ 4,400mAh ಬ್ಯಾಟರಿ ಪ್ಯಾಕ್ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಇದು USB ಟೈಪ್-C ಪೋರ್ಟ್, ಬ್ಲೂಟೂತ್ 5.3, ಮತ್ತು Wi-Fi 6 ಕನೆಕ್ಟಿವಿಟಿ ಹೊಂದಿರಲಿದೆ ಎಂದು ವರದಿಯಾಗಿದೆ.

Best Mobiles in India

English summary
Smartprix has shared a description page of the Samsung Galaxy Z Fold 6 mobile that reveals many of its features. According to the report, the book-style foldable mobile will be available in navy, pink and silver shadow shades.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+