Home
ಸುದ್ದಿಜಾಲ

Samsung: ದೈತ್ಯ ಫೋನಿನ ಸೇಲ್ ಶುರು! 200MP ಕ್ಯಾಮೆರಾ.. ಬೆಲೆ, ಡಿಸ್ಕೌಂಟ್ ಎಷ್ಟು?

ಸ್ಯಾಮ್‌ಸಂಗ್‌ (Samsung) ಇತ್ತೀಚೆಗೆ ತನ್ನ ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 (Samsung Galaxy Z Fold 6 Special Edition) ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಫೋಲ್ಡಬಲ್ ಫೋನ್ ಇಂದಿನಿಂದ (ಅಕ್ಟೋಬರ್ 25) ಮೊದಲ ಮಾರಾಟ ಪ್ರಾರಂಭಿಸಿದೆ. ಇದು ಕೇವಲ 16GB RAM + 512GB ಸ್ಟೋರೇಜ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ನೀವು, ಈ ಫೋನನ್ನು ಕಪ್ಪು ಬಣ್ಣದಲ್ಲಿ ಖರೀದಿಸಬಹುದು. ಬನ್ನಿ, ಇದರ ಬೆಲೆ, ಆಫರ್‌ಗಳು ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

ಕಂಪನಿಯು ವರ್ಷದ ಆರಂಭದಲ್ಲಿ ಸ್ಟ್ಯಾಂಡರ್ಡ್ ಗ್ಯಾಲಕ್ಸಿ Z ಬೋಲ್ಟ್ 6 ಅನ್ನು ಪರಿಚಯಿಸಿತ್ತು. ಇದೀಗ, ಬಿಡುಗಡೆಯಾಗಿರುವ ಹೊಸ ಫೋಲ್ಡಬಲ್ ಫೋನ್ ಅದಕ್ಕಿಂತ ತೆಳ್ಳಗೆ ಮತ್ತು ಹಗುರವಾಗಿದೆ. ಈ ಫೋನ್‌ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ ಹೊಂದಿದೆ. ಇದರಲ್ಲಿ 8 ಇಂಚಿನ ಪ್ರಾಥಮಿಕ ಡಿಸ್ಪ್ಲೇ ಮತ್ತು 6.5 ಇಂಚಿನ ಕವರ್ ಡಿಸ್ಪ್ಲೇ ಇದೆ. ಈ ಮೊಬೈಲ್ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 4400mAh ಬ್ಯಾಟರಿ, 25W ವೈರ್ಡ್ ಚಾರ್ಜಿಂಗ್ ಒಳಗೊಂಡಿದೆ.

Samsung: ದೈತ್ಯ ಫೋನಿನ ಸೇಲ್ ಶುರು! 200MP ಕ್ಯಾಮೆರಾ.. ಡಿಸ್ಕೌಂಟ್ ಎಷ್ಟು?

ಹೊಸ ಫೋಲ್ಡಬಲ್ ಫೋನಿನ ಬೆಲೆ

ಕಂಪನಿಯು ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯನ್ನು ಕೇವಲ 16GB RAM + 512GB ಆಂತರಿಕ ಸ್ಟೋರೇಜ್ ರೂಪಾಂತರದಲ್ಲಿ ಮಾರಾಟ ಮಾಡಲಿದೆ. ಇದರ ಬೆಲೆ 1,70,000 ರೂ. ಆಗಿದೆ. ಇಂದಿನಿಂದ (ಅ.25) ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ನ ವೆಬ್‌ಸೈಟ್ ಮತ್ತು ಟಿ ಡೈರೆಕ್ಟ್ ಶಾಪ್, ಕೆಡಿ ಮತ್ತು ಇಯು ಪ್ಲಸ್‌ ಸೇರಿದಂತೆ ಇತರೆ ಆನ್‌ಲೈನ್ ಚಾನೆಲ್‌ಗಳ ಮೂಲಕ ಖರೀದಿಗೆ ಲಭ್ಯವಿದೆ.

ಮೊದಲ ದಿನವೇ ಭರ್ಜರಿ ಆಫರ್‌ಗಳು

ಕಂಪನಿಯು ಈ ದೈತ್ಯ ಫೋನ್‌ ಖರೀದಿ ಮೆಲೆ ಹಲವು ಆಫರ್‌ಗಳನ್ನು ಘೋಷಿಸಿದೆ. ಈ ಫೋನ್ ಖರೀದಿಸುವ ಗ್ರಾಹಕರಿಗೆ ಗ್ಯಾಲಕ್ಸಿ ರಿಂಗ್ (Galaxy Ring), ಗ್ಯಾಲಕ್ಸಿ ವಾಚ್ ಅಲ್ಟ್ರಾ (Galaxy Watch Ultra), ಗ್ಯಾಲಕ್ಸಿ ಬಡ್ಸ್‌ 3 ಪ್ರೊ (Galaxy Buds 3 Pro) ಮತ್ತು ಗ್ಯಾಲಕ್ಸಿ ಟ್ಯಾಬ್ S10 ಅಲ್ಟ್ರಾ (Galaxy Tab S10 Ultra) ಇನ್ನಿತರ ಸ್ಯಾಮ್‌ಸಂಗ್ ಉತ್ಪನ್ನಗಳ ಮೇಲೆ ರಿಯಾಯಿತಿ ಕೂಪನ್‌ ನೀಡಲಾಗುತ್ತದೆ.

ಹೊಸ ಫೋಲ್ಡಬಲ್ ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹೊಸ ಫೋಲ್ಡಬಲ್ ಫೋನ್ 8 ಇಂಚಿನ ಪ್ರಾಥಮಿಕ ಡಿಸ್ಪ್ಲೇ ಮತ್ತು 6.5 ಇಂಚಿನ ಕವರ್ ಡಿಸ್ಪ್ಲೇಯನ್ನು ಹೊಂದಿದೆ. ಇದು, ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಬೋಲ್ಟ್ 6 ವಿಶೇಷ ಆವೃತ್ತಿಯು 1.5 ಎಂಎಂ ತೆಳ್ಳಗೆ ಮತ್ತು 3 ಗ್ರಾಂ ಹಗುರವಾಗಿದೆ.

ಪ್ರೊಸೆಸರ್‌ ಸಾಮರ್ಥ್ಯ

ಈ ದೈತ್ಯ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜೆನ್ 3 ಪ್ರೊಸೆಸರ್‌ನೊಂದಿಗೆ ಕೆಲದ ನಿರ್ವಹಿಸುತ್ತದೆ. ಇದು 16GB RAM ಮತ್ತು 512GB ಸ್ಟೋರೇಜ್‌ ಆಯ್ಕೆ ಹೊಂದಿದೆ. ಇದು ಗ್ಯಾಲಕ್ಸಿ ಎಐ (Galaxy AI) ವೈಶಿಷ್ಟ್ಯಗಳನ್ನು ಬೆಂಬಲಿಸುತ್ತದೆ.

ಕ್ಯಾಮೆರಾ ಸೆಟಪ್

ನೂತನ ಸ್ಯಾಮ್‌ಸಂಗ್‌ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ 200 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ, 12 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 10 ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಹೊಂದಿದೆ. ಸೆಲ್ಫಿ ಪ್ರಿಯರಿಗಾಗಿ, ಕವರ್ ಡಿಸ್ಪ್ಲೇನಲ್ಲಿ 10 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಆಂತರಿಕ ಡಿಸ್ಪ್ಲೇನಲ್ಲಿ 4 ಮೆಗಾಪಿಕ್ಸೆಲ್ ಅಂಡರ್ ಡಿಸ್ಪ್ಲೇ ಕ್ಯಾಮೆರಾ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಕಂಪನಿಯು ಈ ಫೋಲ್ಡಬಲ್ ಪೋನನ್ನು 4400mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಇದು 25W ವೈರ್ಡ್, 15W ವೈರ್‌ಲೆಸ್ ಮತ್ತು 4.5W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

Best Mobiles in India

English summary
Samsung Galaxy Z Fold 6 Special Edition Sale Starts Today: know price, Specifications and discount.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+