Home
ಸುದ್ದಿಜಾಲ

ಗ್ಯಾಲಕ್ಸಿ Z ಫೋಲ್ಡ್ 7: ವಿಶ್ವದ ಅತಿ ತೆಳುವಾದ ಮಡಚಬಹುದಾದ ಫೋನ್?

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ತಯಾರಕರು ತೆಳುವಾದ ವಿನ್ಯಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮಡಚಬಹುದಾದ ಫೋನ್‌ಗಳ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಇರುವ ಹಿನ್ನೆಲೆಯಲ್ಲಿ, ಸ್ಯಾಮ್‌ಸಂಗ್ ತನ್ನ ಮುಂಬರುವ ಗ್ಯಾಲಕ್ಸಿ Z ಫೋಲ್ಡ್ 7 ಅನ್ನು ಅತ್ಯಂತ ತೆಳುವಾದ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ಸೋರಿಕೆಯ ಮಾಹಿತಿಯ ಪ್ರಕಾರ, ಈ ಫೋನ್ ಮಡಿಸಿದಾಗ ಕೇವಲ 8.9mm ದಪ್ಪವನ್ನು ಹೊಂದಿರಲಿದ್ದು, ಬಿಡುಗಡೆಯಾದರೆ ವಿಶ್ವದ ಅತಿ ತೆಳುವಾದ ಮಡಚಬಹುದಾದ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಬಹುದು.

ಹೌದು, ಪ್ರಸಿದ್ಧ ಟಿಪ್‌ಸ್ಟರ್ ಐಸ್ ಯೂನಿವರ್ಸ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸ್ಯಾಮ್‌ಸಂಗ್‌ನ ಮುಂದಿನ ಪ್ರಮುಖ ಸಾಧನಗಳು ತೆಳು ಮತ್ತು ಹಗುರವಾದ ವಿನ್ಯಾಸಕ್ಕೆ ಆದ್ಯತೆ ನೀಡಲಿವೆ. ಅದರಂತೆ, ಗ್ಯಾಲಕ್ಸಿ Z ಫೋಲ್ಡ್ 7 ಬಿಚ್ಚಿದಾಗ ಕೇವಲ 3.9mm ಮತ್ತು ಮಡಿಸಿದಾಗ 8.9mm ದಪ್ಪವನ್ನು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ. ಹೋಲಿಕೆಗಾಗಿ ನೋಡುವುದಾದರೆ, ಸದ್ಯ ಮಾರುಕಟ್ಟೆಯಲ್ಲಿರುವ ಗ್ಯಾಲಕ್ಸಿ Z ಫೋಲ್ಡ್ 6 ಮಡಿಸಿದಾಗ 12.2mm ಮತ್ತು ಬಿಚ್ಚಿದಾಗ 5.6mm ದಪ್ಪವನ್ನು ಹೊಂದಿದೆಇನ್ನು "ವಿಶ್ವದ ಅತಿ ತೆಳುವಾದ ಮಡಚಬಹುದಾದ ಫೋನ್" ಎಂದು ಹೇಳಲಾದ ಒಪ್ಪೋ ಫೈಂಡ್ N3 ಮಡಿಸಿದಾಗ 8.93mm ಮತ್ತು ಬಿಚ್ಚಿದಾಗ 4.21mm ದಪ್ಪವನ್ನು ಹೊಂದಿದೆ. ಈ ಅಂಕಿಅಂಶಗಳನ್ನು ಗಮನಿಸಿದರೆ, ಗ್ಯಾಲಕ್ಸಿ Z ಫೋಲ್ಡ್ 7 ನಿಜಕ್ಕೂ ಅತಿ ತೆಳುವಾದ ವಿನ್ಯಾಸವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಬಹುದು.

ಗ್ಯಾಲಕ್ಸಿ Z ಫೋಲ್ಡ್ 7: ವಿಶ್ವದ ಅತಿ ತೆಳುವಾದ ಮಡಚಬಹುದಾದ ಫೋನ್?

ಆದರೆ, ಈ ತೆಳುವಾದ ವಿನ್ಯಾಸಕ್ಕಾಗಿ ಸ್ಯಾಮ್‌ಸಂಗ್ ಕೆಲವು ರಾಜಿಗಳನ್ನು ಮಾಡಿಕೊಳ್ಳಬೇಕಾಗಬಹುದು. ಟಿಪ್‌ಸ್ಟರ್‌ನ ಪ್ರಕಾರ, ಗ್ಯಾಲಕ್ಸಿ Z ಫೋಲ್ಡ್ 7 ಬಹುಶಃ ಗ್ಯಾಲಕ್ಸಿ Z ಫೋಲ್ಡ್ 6 ನಲ್ಲಿರುವ 4,400mAh ಬ್ಯಾಟರಿಯನ್ನೇ ಮುಂದುವರಿಸಿಕೊಂಡು ಬರಲಿದೆ. ಒಂದು ವೇಳೆ ಇದು ನಿಜವಾದಲ್ಲಿ, ತೆಳುವಾದ ವಿನ್ಯಾಸಕ್ಕಾಗಿ ಬ್ಯಾಟರಿ ಸಾಮರ್ಥ್ಯದಲ್ಲಿ ಯಾವುದೇ ಹೆಚ್ಚಳವನ್ನು ನಿರೀಕ್ಷಿಸುವಂತಿಲ್ಲ. ಆದಾಗ್ಯೂ, ಸ್ಯಾಮ್‌ಸಂಗ್ ಈ ಸಾಧನಕ್ಕಾಗಿ ಹೊಸ ಬ್ಯಾಟರಿ ಮತ್ತು ಚಾರ್ಜಿಂಗ್ ತಂತ್ರಜ್ಞಾನಗಳನ್ನು ಪರಿಚಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.ಇದಲ್ಲದೆ, ಮುಂಬರುವ ಗ್ಯಾಲಕ್ಸಿ Z ಫ್ಲಿಪ್ 7 4,300mAh ಬ್ಯಾಟರಿಯನ್ನು ಹೊಂದಿರಬಹುದು ಎಂದು ಸೋರಿಕೆಯ ಮಾಹಿತಿಗಳು ತಿಳಿಸುತ್ತವೆ. ಇದು ಗ್ಯಾಲಕ್ಸಿ Z ಫ್ಲಿಪ್ 6 ನ 4,000mAh ಬ್ಯಾಟರಿಗೆ ಹೋಲಿಸಿದರೆ ಸ್ವಲ್ಪ ಮಟ್ಟಿನ ಹೆಚ್ಚಳವಾಗಿದೆ. ಮತ್ತೊಂದೆಡೆ, ಗ್ಯಾಲಕ್ಸಿ S26 ನ ಮೂಲ ಮಾದರಿಯು ಸಹ ತೆಳುವಾದ ವಿನ್ಯಾಸವನ್ನು ಕಾಪಾಡಿಕೊಳ್ಳಲಿದೆ ಎಂದು ಟಿಪ್‌ಸ್ಟರ್ ಮಾಹಿತಿ ನೀಡಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಗ್ಯಾಲಕ್ಸಿ S25 7.2mm ದಪ್ಪವನ್ನು ಹೊಂದಿದೆ ಎಂಬುದು ಗಮನಾರ್ಹ.

ನಿರೀಕ್ಷೆಯಂತೆ, ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z ಫೋಲ್ಡ್ 7 ಮತ್ತು ಗ್ಯಾಲಕ್ಸಿ Z ಫ್ಲಿಪ್ 7 ಜುಲೈ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಗ್ಯಾಲಕ್ಸಿ Z ಫೋಲ್ಡ್ 7 12GB RAM ನೊಂದಿಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಆದರೆ, ಗ್ಯಾಲಕ್ಸಿ Z ಫ್ಲಿಪ್ 7 ಸ್ಯಾಮ್‌ಸಂಗ್‌ನ ಸ್ವಂತ ಎಕ್ಸಿನೋಸ್ 2500 ಚಿಪ್‌ಸೆಟ್‌ನಿಂದ ಚಾಲಿತವಾಗಬಹುದು ಎಂದು ಹೇಳಲಾಗುತ್ತಿದೆ. ಈ ಎರಡೂ ಫೋನ್‌ಗಳು 25W ವೈರ್ಡ್ ಚಾರ್ಜಿಂಗ್ ವೇಗವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, ಸ್ಯಾಮ್‌ಸಂಗ್ ತನ್ನ ಮುಂಬರುವ ಮಡಚಬಹುದಾದ ಫೋನ್‌ಗಳೊಂದಿಗೆ ತೆಳುವಾದ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ. ಗ್ಯಾಲಕ್ಸಿ Z ಫೋಲ್ಡ್ 7 ಬಿಡುಗಡೆಯಾದ ನಂತರ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸುತ್ತದೆಯೇ ಎಂದು ಕಾದು ನೋಡಬೇಕಿದೆ. ಈ ಕುರಿತಾದ ಮತ್ತಷ್ಟು ಮಾಹಿತಿಗಾಗಿ ನೀವು ಕನ್ನಡ ಗಿಜ್‌ಬಾಟ್‌ನಲ್ಲಿ ಲೈವ್ ಆಗಿರಿ.

Best Mobiles in India

English summary
The leaks indicate that the Galaxy Z Flip 7 will feature a 4,300mAh battery, representing an improvement over the 4,000mAh battery found in the Galaxy Z Flip 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+