ಸ್ಯಾಮ್‌ಸಂಗ್ ಗೇರ್ 2 ಅತ್ಯುತ್ತಮ ವೆರಿಯೇಬಲ್ ಹೇಗೆ?

By Shwetha
|

ದಕ್ಷಿಣ ಕೊರಿಯಾದ ಕಂಪೆನಿ ಸ್ಯಾಮ್‌ಸಂಗ್ ಮಾಡುವ ಪ್ರತಿಯೊಂದು ಲಾಂಚಿಂಗ್‌ನಲ್ಲೂ ಒಂದು ವಿವಿಧತೆ ಇರುತ್ತದೆ. ಈ ವಿವಿಧತೆಯೇ ಅದಕ್ಕೆ ಆಪಲ್‌ನಂತಹ ಅಗ್ರಮಾನ್ಯ ಕಂಪೆನಿಯೊಂದಿಗೆ ಉತ್ತಮ ರೀತಿಯ ಪೈಪೋಟಿಯನ್ನು ಒಡ್ಡಲು ಸಾಧ್ಯವಾಗಿರುವುದು.

ತನ್ನ ಹೊಸ ಹೊಸ ಅನ್ವೇಷಣೆಗಳು ಮತ್ತು ಹೊಸದನ್ನು ತನ್ನ ಗ್ರಾಹಕರಿಗೆ ಒದಗಿಸಬೇಕೆಂಬ ತುಡಿತದಿಂದಲೇ ಈ ದಿಗ್ಗಜ ಶ್ರೇಷ್ಟರಲ್ಲಿ ಅಸಾಮಾನ್ಯ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿರುವಂಥದ್ದು. ಈಗ ತನ್ನ ಹೆಜ್ಜೆಗಳನ್ನು ವೇರಿಯೇಬಲ್ ಕ್ಷೇತ್ರದಲ್ಲಿ ಕೂಡ ಮೂಡಿಸುತ್ತಿರುವ ಈ ಕಂಪೆನಿ ಇಲ್ಲೂ ತನ್ನ ಹೆಸರನ್ನು ಹಸಿರಾಗಿಸುವಲ್ಲಿ ಯಶಸ್ವಿ ಮೆಟ್ಟಿಲುಗಳನ್ನು ಏರುತ್ತಿದೆ. ಹೊಸದಾಗಿ ಮಾರುಕಟ್ಟೆಗೆ ತಂದಿರುವ ಸ್ಯಾಮ್‌ಸಂಗ್ ಗೇರ್ 2 ಸ್ಮಾರ್ಟ್‌ವಾಚ್ ಕೂಡ ಇದರ ಯಶಸ್ಸನ್ನು ಎತ್ತರಕ್ಕೆ ಏರಿಸುವಲ್ಲಿ ಅಸಾಮಾನ್ಯತೆಯನ್ನು ಮೆರೆದಿದೆ ಎಂದೇ ಹೇಳಬಹುದು.

ಗೇರ್ 2 ನಿಂದ ಸ್ಯಾಮ್‌ಸಂಗ್ ಹೆಸರು ಅಜರಾಮರ

ಸ್ಯಾಮ್‌ಸಂಗ್ ಗೇರ್ 2 ಉತ್ತಮ ವಿನ್ಯಾಸವನ್ನು ಹೊಂದಿದ್ದು, ಇದರ ದೇಹವನ್ನು ಬ್ರಶ್ ಮೆಟಲ್‌ನಿಂದ ತಯಾರಿಸಲಾಗಿದೆ. ಬೆಲ್ಟ್ ಅನ್ನು ಪ್ಲಾಸ್ಟಿಕ್ ಮೆಟೀರಿಯಲ್‌ನಿಂದ ತಯಾರಿಸಲಾಗಿದ್ದು ಇದು 1.63 ಅಮೋಲೆಡ್ ಡಿಸ್‌ಪ್ಲೇಯೊಂದಿಗೆ ಬಂದಿದೆ, ಇದು ಡ್ಯುಯೆಲ್ ಕೋರ್ 1GHz ಚಿಪ್ ಅನ್ನು ಹೊಂದಿದ್ದು, ಬ್ಯಾಟರಿ ಸಾಮರ್ಥ್ಯ 300mAh ಆಗಿದೆ. ಇದು ಧೂಳು ಮತ್ತು ನೀರು ಪ್ರತಿರೋಧಕ ಶಕ್ತಿಯನ್ನು ಹೊಂದಿದ್ದು ಹೆಸರಿಗೆ ತಕ್ಕಂತೆ ಸ್ಮಾರ್ಟ್ ಆಗಿದೆ.

ಇದರ ಬ್ಲೂಟೂತ್ ಸಾಮರ್ಥ್ಯ 4.0 ಆಗಿದ್ದು ಶೇಖರಣಾ ಶಕ್ತಿ 4ಜಿಬಿಯಾಗಿದೆ. ಇದನ್ನು 17 ಡಿವೈಸ್‌ಗಳೊಂದಿಗೆ ಸಂಯೋಜಿಸಬಹುದಾಗಿದ್ದು ಈ ಹ್ಯಾಂಡ್‌ಸೆಟ್‌ಗಳು ಸ್ಯಾಮ್‌ಸಂಗ್‌ನ ಫ್ಲ್ಯಾಗ್‌ಶಿಪ್ - ಕ್ಯಾಲಿಬರ್ ಅನ್ನು ಹೊಂದುವುದು ಕಡ್ಡಾಯವಾಗಿದೆ. ನೀವು ಬ್ಲೂಟೂತ್‌ಗೆ ಒಮ್ಮೆ ಸಂಪರ್ಕಪಡಿಸಿಕೊಂಡ ನಂತರ ಸ್ಯಾಮ್‌ಸಂಗ್‌ನ ಸ್ಟೋರ್‌ನಿಂದ ಗೇರ್ ಮ್ಯಾನೇಜರ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ಈ ಸ್ಮಾರ್ಟ್‌ ವಾಚ್ ಕ್ಯಾಮೆರಾವನ್ನು ಕೂಡ ಒಳಗೊಂಡಿದ್ದು ಇದು 2 ಮೆಗಾಪಿಕ್ಸೆಲ್ ಸಾಮರ್ಥ್ಯವನ್ನು ಹೊಂದಿದೆ. ವೀಡಿಯೋ ಶೂಟಿಂಗ್ ಅನ್ನು ಕೂಡ ನೀವು ಈ ವಾಚ್‌ನಲ್ಲಿ ಮಾಡಬಹುದಾಗಿದ್ದು ನಿಮ್ಮ ಮಣಿಗಂಟಿಗೆ ತಕ್ಕಂತೆ ಕೂರುತ್ತದೆ.

<center><iframe width="100%" height="360" src="//www.youtube.com/embed/Rh5mBbhIyys?feature=player_detailpage" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X