ಸ್ಯಾಮ್‌ಸಂಗ್ ಗ್ರ್ಯಾಂಡ್ ದೀಪಾವಳಿ ಫೆಸ್ಟ್:..ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ!
ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗಿದೆ. ದೀಪಗಳ ಹಬ್ಬ ದೀಪಾವಳಿ ಸಂಭ್ರಮಕ್ಕೆ ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಇನ್ನು ಭಾರತದಲ್ಲಿ ದೀಪಾವಳಿ ಹಬ್ಬ ಸಾಕಷ್ಟು ಜನಪ್ರಿಯ ಹಬ್ಬವಾಗಿದ್ದು, ಮನೆ ಮಂದಿಯೆಲ್ಲಾ ಸೇರಿ ಆಚರಿಸುವ ಹಬ್ಬವಾಗಿದೆ. ಈ ಹಬ್ಬದ ಸಂಭ್ರಮವನ್ನ ಇನ್ನಷ್ಟು ಇಮ್ಮಡಿಗೊಳಿಸಲು ಸ್ಮಾರ್ಟ್‌ಫೋನ್ ತಯಾರಕರು ಮತ್ತು ಆನ್‌ಲೈನ್ ರಿಟೇಲ್ ವೆಬ್‌ಸೈಟ್‌ಗಳು ಈಗಾಗಲೇ ಜನಸಾಮಾನ್ಯರಿಗೆ ಲಾಭದಾಯಕ ವ್ಯವಹಾರಗಳು ಮತ್ತು ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿವೆ. ಇದೀಗ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆ ಕೂಡ ತನ್ನ ಫೋನ್‌ಗಳ ಮೇಲೆ ರಿಯಾಯಿತಿಯನ್ನು ಘೋಷಿಸಿದೆ.

ಹೌದು, ದಕ್ಷಿಣ ಕೊರಿಯದ ಟೆಕ್ ದೈತ್ಯ ಸ್ಯಾಮ್‌ಸಂಗ್ ಸಂಸ್ಥೆ ತನ್ನ ಉತ್ಪನ್ನಗಳ ಮೇಲೆ ಹಲವಾರು ಡೀಲ್ ಮತ್ತು ರಿಯಾಯಿತಿಗಳನ್ನು ನೀಡುತ್ತಿದೆ. ಇದಕ್ಕಾಗಿ ಸ್ಯಾಮ್‌ಸಂಗ್ ಕಂಪನಿಯು ಗ್ರ್ಯಾಂಡ್ ದೀಪಾವಳಿ ಫೆಸ್ಟ್ 2020 ಅನ್ನು ಆಯೋಜಿಸುತ್ತಿದೆ. ಇದರಲ್ಲಿ ನೀವು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳನ್ನು ರಿಯಾಯಿತಿಯೊಂದಿಗೆ ಪಡೆಯಬಹುದಾಗಿದೆ. ಅಲ್ಲದೆ ಮಾರಾಟದ ಸಮಯದಲ್ಲಿ, ಕಂಪನಿಯು ಬಜೆಟ್ ಮತ್ತು ಪ್ರೀಮಿಯಂ ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ನೀಡಲಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ನ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F41
ಸ್ಯಾಮ್‌ಸಂಗ್ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಸೇಲ್‌ನಲ್ಲಿ 28% ರಿಯಾಯಿತಿಯ ಭರ್ಜರಿ ಆಫರ್‌ನಲ್ಲಿ ದೊರಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.4-ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಯು ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಎಕ್ಸಿನೋಸ್ 9611 10nm ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಮೂಲಕ ಕಾರ್ಯನಿರ್ವಹಿಸಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M51
ಸ್ಯಾಮ್‌ಸಂಗ್ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್ ಕೂಡ ದೀಪಾವಳಿ ಸೇಲ್‌ನಲ್ಲಿ ಭರ್ಜರಿ ಆಫರ್ ಪಡೆದುಕೊಂಡಿದ್ದು, ಮೂಲಬೆಲೆಯಲ್ಲಿ 19% ರಿಯಾಯಿತಿಯಲ್ಲಿ ಖರೀದಿಸಲು ಅವಕಾಶ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 2400 x 1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 6.7 ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಒ ಸೂಪರ್ ಅಮೋಲೆಡ್ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 7000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31s
ಸ್ಯಾಮ್‌ಸಂಗ್ ಗ್ಯಾಲಕ್ಸಿ M31s ಸ್ಮಾರ್ಟ್‌ಫೋನ್ 20% ರಿಯಾಯಿತಿಯನ್ನು ಹೊಂದಿದ್ದು, ಗ್ರ್ಯಾಂಡ್ ದಿಪಾವಳಿ ಸೇಲ್‌ನಲ್ಲಿ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.4 ಇಂಚಿನ ಫುಲ್ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಎಕ್ಸಿನೋಸ್ 9611 ಪ್ರೊಸೆಸರ್ ಅನ್ನು ಹೊಂದಿದ್ದು, ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M31 ಪ್ರೈಮ್ ಆವೃತ್ತಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ M31 ಪ್ರೈಮ್ ಆವೃತ್ತಿ ಸ್ಮಾರ್ಟ್‌ಫೋನ್ ದೀಪಾವಳಿ ಸೇಲ್‌ನಲ್ಲಿ 13% ರಿಯಾಯಿತಿ ದರದಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೊನ್ ಅನ್ನು ಸ್ಯಾಮ್‌ಸಂಗ್ ಆನ್‌ಲೈನ್ ಸ್ಟೋರ್‌ನಲ್ಲಿ ಆಫರ್‌ಗಳು ಲಭ್ಯವಾಗಲಿದೆ. ಇದು 6.4-ಇಂಚಿನ ಫುಲ್ ಹೆಚ್‌ಡಿ + ಇನ್ಫಿನಿಟಿ-ಯು ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ-ಕೋರ್ ಎಕ್ಸಿನೋಸ್ 9611 10nm ಪ್ರೊಸೆಸರ್ ಅನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 +
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + ಸ್ಮಾರ್ಟ್‌ಫೋನ್ ದೀಪಾವಳಿ ವಿಶೇಷ ಮಾರಾಟದ ಸೇಲ್‌ನಲ್ಲಿ ಭಾರಿ ಡಿಸ್ಕೌಂಟ್‌ನಲ್ಲಿ ಲಬ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್ ಮೂಲ ಬೆಲೆ 83,000 ರೂ ಆಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ರೂ 54,999 ಕ್ಕೆ ಖರೀದಿಸಬಹುದಾಗಿದೆ. ಇದಲ್ಲದೆ ಎಕ್ಸ್ಚೇಂಜ್ ಆಫರ್‌ನಲ್ಲಿ 14,600 ರೂ. ನಿಮದ ಪ್ರಾರಂಭವಾಗಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+
ಇನ್ನು ದೀಪಾವಳಿ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಫೋನ್ ಕೂಡ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಸದ್ಯ ಈ ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಕೇವಲ 59,999 ರೂ. ಗಳಿಗೆ ಲಭ್ಯವಿದೆ. ಅಲ್ಲದೆ ನೀವು ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 6.8-ಇಂಚಿನ ಬೃಹತ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಮತ್ತು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ.

ಗ್ಯಾಲಕ್ಸಿ S20FE ಸ್ಮಾರ್ಟ್‌ಫೋನ್
ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ S20 ಸರಣಿಯ ಸ್ಮಾರ್ಟ್‌ಫೋನ್‌ಳಿಗೆ ದೀಪಾವಳಿ ಸೇಲ್‌ನಲ್ಲಿ ಭಾರಿ ರಿಯಾಯಿತಿಯನ್ನು ನೀಡಿದೆ. ಇದರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S20FE ಸ್ಮಾರ್ಟ್‌ಫೋನ್ ಕೂಡ ಸೇರಿದ್ದು, ಇದರ ಮೂಲಬೆಲೆ 49,999 ರೂ ಆಗಿದೆ. ಆದರೆ ದೀಪಾವಳಿ ಸೇಲ್‌ನಲ್ಲಿ ಇದು ಕೇವಲ 44,999 ರೂ ಗಳಿಗೆ ಲಭ್ಯವಾಗಲಿದೆ. ಸ್ಯಾಮ್‌ಸಂಗ್ ಶಾಪ್ ಅಪ್ಲಿಕೇಶನಲ್ಲಿ ಖರೀದಿಸಿದರೆ ಹೆಚ್ಚುವರಿ ₹ 3000.00 ರಿಯಾಯಿತಿ ಸಹ ಪಡೆಯಬಹುದಾಗಿದೆ. ಇದು 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಆಕ್ಟಾ ಕೋರ್ ಎಕ್ಸಿನೋಸ್ 990 SoC ಪ್ರೊಸೆಸರ್ ಅನ್ನು ಒಳಗೊಂಡಿದೆ.

ಗ್ಯಾಲಕ್ಸಿ m11
ಇನ್ನು ಸ್ಯಾಮ್‌ಸಂಗ್ ಗ್ಯಾಲಕ್ಸಿ 11 ಸ್ಮಾರ್ಟ್‌ಫೋನ್ ಖರೀದಿಸಲು ಇಚ್ಚೀಸುವ ಗ್ರಾಹಕರಿಗೆ ಈ ದೀಪಾವಳಿ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. 12,999 ರೂ ಬೆಲೆಯ ಈ ಸ್ಮಾರ್ಟ್‌ಫೋನ್ ಇದೀಗ ಕೇವಲ 9,999 ರೂ,ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅನ್ನು ಎಸ್‌ಬಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಖರೀದಿಸಿದರೆ 10% ಕ್ಯಾಶ್‌ಬ್ಯಾಕ್ ಮತ್ತು ಸ್ಯಾಮ್‌ಸಂಗ್ ಶಾಪ್ ಅಪ್ಲಿಕೇಶನ್‌ನಲ್ಲಿ ಖರೀದಿಸಿದರೆ ಹೆಚ್ಚುವರಿ. 7,00 ರೂ ರಿಯಾಯಿತಿಯನ್ನು ಪಡೆಯಬಹುದಾಗಿದೆ.


Click it and Unblock the Notifications








