ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಸೇಲ್: ಸ್ಯಾಮ್‌ಸಂಗ್ ಫೋನ್‌ಗಳಿಗೆ 40% ಡಿಸ್ಕೌಂಟ್!
ಹಬ್ಬದ ಸೀಸನ್ ಶುರುವಾಗ್ತಿದ್ದ ಹಾಗೇ ಬಹುತೇಕ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿವೆ. ಇ-ಕಾಮರ್ಸ್ ತಾಣಗಳು ಆನ್‌ಲೈನ್ ಗ್ರಾಹಕರಿಗೆಗಾಗಿ ಫೇಸ್ಟಿವಲ್ ಸೇಲ್ ಅನ್ನು ಆರಂಭಿಸಿವೆ. ಸದ್ಯ ಇದೀಗ ಸ್ಯಾಮ್‌ಸಂಗ್ ಇಂಡಿಯಾ ತನ್ನ ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಸೇಲ್ ಅನ್ನು ಇಂದಿನಿಂದ ಪ್ರಾರಂಭಿಸಿದೆ. ಇನ್ನು ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳು, ಆಕ್ಸಿಸರೀಸ್, ವೆರಿಯೆಬಲ್ಸ್, ಟಿವಿಗಳು ಮತ್ತು ಗೃಹೋಪಯೋಗಿ ವಸ್ತುಗಳಿಗೆ ರಿಯಾಯಿತಿಯನ್ನು ಘೋಷಿಸಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯ ಸ್ಯಾಮ್‌ಸಂಗ್ ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಸೇಲ್ ಇಂದಿನಿಂದ ಪ್ರಾರಂಭವಾಗಲಿದ್ದು, ಇದು ಅಕ್ಟೋಬರ್ 22 ರವರೆಗೆ ಮುಂದುವರಿಯಲಿದೆ. ಇನ್ನು ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ 40% ರಿಯಾಯಿತಿಯನ್ನು ಘೋಷಿಸಿದೆ. ಗೃಹೋಪಯೋಗಿ ವಸ್ತುಗಳು, ಅದರ ಉತ್ಪನ್ನ ವ್ಯಾಪ್ತಿಯಲ್ಲಿ ಶೇಕಡಾ 12.5% ರಷ್ಟು ಕ್ಯಾಶ್‌ಬ್ಯಾಕ್. ಅನ್ನು ನೀಡಲಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಏನೆಲ್ಲಾ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್ನು ಸ್ಯಾಮ್‌ಸಂಗ್ ಗ್ರ್ಯಾಂಡ್ ದೀಪಾವಳಿ ಫೆಸ್ಟ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + ಸೇರಿದಂತೆ ಪ್ರಮಯುಖ ಸ್ಮಾರ್ಟ್‌ಫೋನ್‌ಗಳು ಶೇಖಡ 40ರಷ್ಟು ಬೆಲೆ ಕಡಿತವನ್ನು ಪಡೆದುಕೊಳ್ಳಲಿವೆ. ಇದರಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + ಸ್ಮಾರ್ಟ್‌ಫೋನ್ ಬೆಲೆ 83,000 ರೂ ಆಗಿದ್ದು, ರಿಯಾಯಿತಿ ದರದಲ್ಲಿ ಕೇವಲ 49,999 ರೂ.ಗಳಿಗೆ ಲಬ್ಯವಾಗಲಿದೆ. ಇದರಲ್ಲಿ ಗ್ರಾಹಕರಿಗೆ 33,001ರೂ ಗಳು ರಿಯಾಯಿತಿ ಸಿಗಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 20 + ಜೊತೆಗೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ ಮೂಲಬೆಲೆ ರೂ. 1,16,000 ಆಗಿದ್ದರೆ ದೀಪಾವಳಿ ಸೇಲ್‌ನಲ್ಲಿ ಕೇವಲ 1,04,999 ರೂ.ಗಳಿಗೆ ಲಭ್ಯವಾಗಲಿದೆ.

ಇದಲ್ಲದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಸ್ಮಾರ್ಟ್‌ವಾಚ್ ಮೂಲ ಬೆಲೆ 29,990 ಆಗಿದ್ದು, ಇದು ರಿಯಾಯಿತಿ ದರದಲ್ಲಿ ಕೇವಲ 14,990 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಸ್ಯಾಮ್‌ಸಂಗ್ 4,999 ರೂ ಬೆಲೆಯ ತನ್ನ ವಾಯರ್‌ಲೆಸ್ ಚಾರ್ಜರ್ ಅನ್ನು ಕೇವಲ 1,999ರೂ.ಗಳಿಗೆ ನೀಡಲಿದೆ. ಅಲ್ಲದೆ ಸ್ಯಾಮ್‌ಸಂಗ್‌ನ 55 ಇಂಚಿನ 4K ಸ್ಮಾರ್ಟ್ ಟಿವಿ ದಿ ಫ್ರೇಮ್ ಸಹ ರಿಯಾಯಿತಿ ದರದಲ್ಲಿ 81,990 ರೂ ಗಳಿಗೆ ದೊರೆಯಲಿದೆ. ಇದರ ಮೂಲಬೆಲೆ1,29,900ರೂ ಆಗಿದೆ.

ಇನ್ನು ಜೆಬಿಎಲ್ ಫ್ಲಿಪ್ 5 ವಾಯರ್‌ಲೆಸ್ ಸ್ಪೀಕರ್ 6,999 ರೂ ಗಳಿಗೆ ದೊರೆಯಲಿದೆ. ಸ್ಯಾಮ್‌ಸಂಗ್‌ನ ಗ್ಯಾಜೆಟ್‌ಗಳು ಮತ್ತು ಉಪಕರಣಗಳ ಶ್ರೇಣಿಯ ನೇರ ರಿಯಾಯಿತಿಯ ಹೊರತಾಗಿ, ಕಂಪನಿಯು ಎಚ್‌ಡಿಎಫ್‌ಸಿ ಬ್ಯಾಂಕ್ ಖರೀದಿಯಲ್ಲಿ 10% ರಷ್ಟು ಕ್ಯಾಶ್‌ಬ್ಯಾಕ್ ಅನ್ನು ಸಹ ನೀಡುತ್ತಿದೆ. ಇದಲ್ಲದೆ ಸ್ಯಾಮ್‌ಸಂಗ್ ಗ್ರಾಹಕರು ಸ್ಯಾಮ್‌ಸಂಗ್ ಶಾಪ್ ಅಪ್ಲಿಕೇಶನ್ ಬಳಸಿ ಸ್ಯಾಮ್‌ಸಂಗ್ ಸಾಧನಗಳನ್ನು ಖರೀದಿಸಿದರೆ ಮೇಲೆ ತಿಳಿಸಿದ ರಿಯಾಯಿತಿಗಳ ಮೇಲೆ 3,000 ರೂ. ರಿಯಾಯಿತಿ ಮತ್ತು ಖರೀದಿದಾರರು ವಿನಿಮಯ ಕೊಡುಗೆಗಳನ್ನು ಸಹ ಪಡೆಯಬಹುದಾಗಿದೆ.


Click it and Unblock the Notifications








