ಸ್ಯಾಮ್‌ಸಂಗ್ ಎಕ್ಸಿನೋಸ್ 1380 ಚಿಪ್‌ಸೆಟ್ ಅನಾವರಣ! ವೇಗದ ಕಾರ್ಯಕ್ಷಮತೆ!
ಸ್ಮಾರ್ಟ್‌ಫೋನ್‌ಗಳ ಕಾರ್ಯದಕ್ಷತೆ ನಿರ್ಧರಿಸುವಲ್ಲಿ ಅವುಗಳ ಪ್ರೊಸೆಸರ್ ಸಾಮರ್ಥ್ಯ ಪ್ರಮುಖವಾಗಿದೆ. ಇದೇ ಕಾರಣಕ್ಕೆ ಟೆಕ್ ವಲಯದಲ್ಲಿ ಹಲವು ಚಿಪ್‌ಸೆಟ್ ತಯಾರಕ ಕಂಪೆನಿಗಳು ವಿವಿಧ ರೀತಿಯ ಚಿಪ್‌ಸೆಟ್‌ಗಳನ್ನು ಪರಿಚಯಿಸಿವೆ. ಇದೀಗ ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ಹೊಸ ಮಿಡ್‌ರೇಂಜ್ ಚಿಪ್‌ಸೆಟ್ ಎಕ್ಸಿನೋಸ್ 1380 ಅನ್ನು ಘೋಷಿಸಿದೆ.
ಹೌದು, ಸ್ಯಾಮ್‌ಸಂಗ್ ಕಂಪೆನಿ ಹೊಸ ಎಕ್ಸಿನೋಸ್ 1380 ಚಿಪ್‌ಸೆಟ್ ಅನ್ನು ಪರಿಚಯಿಸಿದೆ. ಇದು ನಾಲ್ಕು ARM ಕಾರ್ಟೆಕ್ಸ್-A78 CPU ಕೋರ್‌ಗಳೊಂದಿಗೆ 2.4GHz, ನಾಲ್ಕು ARM ಕಾರ್ಟೆಕ್ಸ್-A55 CPU ಕೋರ್‌ಗಳು ಮತ್ತು MaGliHz ಗಡಿಯಾರ ಹೊಂದಿರುವ 5nm ಚಿಪ್‌ಸೆಟ್ ಆಗಿದೆ. ಹಾಗಾದ್ರೆ ಇದರ ಕಾರ್ಯವೈಖರಿ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಎಕ್ಸಿನೋಸ್ 1380 ಪ್ರೊಸೆಸರ್ ಕಾರ್ಯವೈಖರಿ ಹೇಗಿದೆ?
ಸ್ಯಾಮ್‌ಸಂಗ್ ಎಕ್ಸಿನೋಸ್ 1380 ಪ್ರೊಸೆಸರ್ ಮಿಡ್‌ರೇಂಜ್ ಚಿಪ್‌ಸೆಟ್ ಆಗಿದೆ. ಇದು ಆಕ್ಟಾಕೋರ್ CPU ನಾಲ್ಕು ಉನ್ನತ-ಕಾರ್ಯಕ್ಷಮತೆಯ ಕೋರ್‌ಗಳನ್ನು ಒಳಗೊಂಡಿದೆ. ಇದು ವೇಗದ ಅಪ್ಲಿಕೇಶನ್ ಲೋಡಿಂಗ್ ಮತ್ತು ಮಲ್ಟಿ ಫಂಕ್ಷನ್ ಅನ್ನು ಆಕ್ಟಿವ್ ಮಾಡಲಿದೆ. ಇನ್ನು ಈ ನಾಲ್ಕು ಶಕ್ತಿ-ಸಮರ್ಥ ಕೋರ್‌ಗಳು ದೀರ್ಘಾವಧಿಯ ಬ್ಯಾಟರಿ ಅವಧಿಯನ್ನು ಚಾಲನೆ ಮಾಡುವುದಕ್ಕೆ ಅವಕಾಶ ನೀಡಲಿವೆ.
ಇನ್ನು ಈ ಚಿಪ್‌ಸೆಟ್ ಅನ್ನು ಹೊಸ ಅನುಭವಗಳನ್ನು ಅನ್ಲಾಕ್ ಮಾಡುವುದಕ್ಕೆ ಸೂಕ್ತವಾಗಿ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಈ ಚಿಪ್‌ಸೆಟ್ 5G ಮತ್ತು AI ಟೆಕ್ನಾಲಜಿಯೊಂದಿಗೆ ವರ್ಧಿಸಲಾಗಿದೆ. ಹಾಗೆಯೇ 950 MHz ನಲ್ಲಿ ಚಲಿಸುವ ಐದು ಕೋರ್‌ಗಳನ್ನು ಒಳಗೊಂಡಿರುವ Arm Mali-G68 GPU ಅನ್ನು ಹೊಂದಿದೆ. ಅಲ್ಲದೆ ಈ ಚಿಪ್‌ಸೆಟ್ ಪವರ್‌ಫುಲ್ ಕಾರ್ಯಕ್ಷಮತೆ ಮತ್ತು ಸ್ಥಿರ 3D ಗೇಮಿಂಗ್ ಅನುಭವವನ್ನು ನೀಡಲಿದೆ ಎಂದು ಸ್ಯಾಮ್‌ಸಂಗ್ ಕಂಪೆನಿ ಹೇಳಿಕೊಂಡಿದೆ.

ಸ್ಯಾಮ್‌ಸಂಗ್ ಎಕ್ಸಿನೋಸ್ 1380 ಚಿಪ್‌ಸೆಟ್ ಬಳಕೆದಾರರಿಗೆ ಹೊಸ ಗೇಮಿಂಗ್ ಅನುಭವವನ್ನು ನೀಡಲಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಅದರಂತೆ ಈ ಚಿಪ್‌ಸೆಟ್ AI ಎಂಜಿನ್‌ನೊಂದಿಗೆ ಹೊಸ ಮೊಬೈಲ್ ಅನುಭವಗಳನ್ನು ಆಕ್ಟಿವ್ ಮಾಡಲಿದೆ. ಹಾಗೆಯೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ AI ಸಾಮರ್ಥ್ಯಗಳೊಂದಿಗೆ, ವಾಯ್ಸ್ ಅಸಿಸ್ಟೆಂಟ್‌ಗೆ ಸಹಾಯ ಮಾಡಲು ಸುಧಾರಿತ ಭಾಷಾ ಗುರುತಿಸುವಿಕೆಯನ್ನು ಹೊಂದಿದೆ. ಅಲ್ಲದೆ ಪ್ರತಿ ವಸ್ತುವಿನ ಗುಣಮಟ್ಟವನ್ನು ಹೆಚ್ಚಿಸಲು ಚಿತ್ರದಲ್ಲಿ ಬಹು ವಸ್ತು ಗುರುತಿಸುವಿಕೆಯನ್ನು ಸಕ್ರಿಯಗೊಳಿಸಲಿದೆ ಎನ್ನಲಾಗಿದೆ.
ಇದರ ಜೊತೆಗೆ, ಸ್ಯಾಮ್‌ಸಂಗ್ ಎಕ್ಸಿನೋಸ್ 1380 ಚಿಪ್‌ಸೆಟ್ ಸುಧಾರಿತ ಟ್ರಿಪಲ್ ಇಮೇಜ್ ಸಿಗ್ನಲ್ ಪ್ರೊಸೆಸರ್ (ISP) ಅನ್ನು ಒಳಗೊಂಡಿದೆ. ಇದು ISP 200MP ವರೆಗಿನ ಇಮೇಜ್ ಸೆನ್ಸಾರ್ ಬೆಂಬಲವನ್ನು ಪಡೆದುಕೊಂಡಿದ್ದು, 64MP ವರೆಗೆ ಶೂನ್ಯ ಶಟರ್-ಲ್ಯಾಗ್ ಅನುಭವ ನೀಡಲಿದೆ ಎಂದು ಹೇಳಲಾಗಿದೆ.

ಇನ್ನು ಸ್ಯಾಮ್‌ಸಂಗ್ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಅಲ್ಟ್ರಾ ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ 6.8 ಇಂಚಿನ ಎಡ್ಜ್ QHD+ ಡೈನಾಮಿಕ್ ಅಮೋಲೆಡ್ 2X ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಡೈನಾಮಿಕ್ ರಿಫ್ರೆಶ್ ರೇಟ್ 1-120Hz ಬೆಂಬಲಿಸಲಿದೆ. ಅಲ್ಲದೆ ಗೇಮ್ ಮೋಡ್‌ನಲ್ಲಿ 240Hz ಟಚ್ ಸ್ಯಾಂಪ್ಲಿಂಗ್ ರೇಟಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಪ್ರೊಟೆಕ್ಷನ್ ಹಾಗೂ ವಿಷನ್ ಬೂಸ್ಟರ್ ಅನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ನ ಕಸ್ಟಮ್ ಆವೃತ್ತಿಯನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 One UI 5.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 1TB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.


Click it and Unblock the Notifications








