Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ ಹೊಸ ಸೆಕ್ಯುರಿಟಿ ಫೀಚರ್ಸ್‌ ಬಿಡುಗಡೆ! ಏನಿದರ ಉಪಯೋಗ!

ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಮ್‌ ಪ್ರಕರಣಗಳ ಪ್ರಮಾಣ ಹೆಚ್ಚಾಗುತ್ತಿದೆ. ಎಷ್ಟೇ ಎಚ್ಚರಿಕೆ ವಹಿಸಿದರೂ ಕೂಡ ಸೈಬರ್‌ ಕ್ರೈಮ್‌ಗೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗ್ತಿಲ್ಲ. ಈ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಹಾದಿಯಲ್ಲಿ ಇದೀಗ ಸ್ಯಾಮ್‌ಸಂಗ್‌ ಕಂಪೆನಿ ಕೂಡ ಹೊಸ ಹೆಜ್ಜೆಯನ್ನು ಇಟ್ಟಿದೆ. ತನ್ನ ಗ್ಯಾಲಕ್ಸಿ S23 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಸೈಬರ್‌ ಕ್ರೈಮ್‌ಗಳನ್ನು ತಡೆಗಟ್ಟುವುದಕ್ಕಾಗಿ ಹೊಸ ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌ ಅನ್ನು ಪರಿಚಯಿಸಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಸೆಕ್ಯುರಿಟಿ ಫೀಚರ್ಸ್‌ ಬಿಡುಗಡೆ! ಏನಿದರ ಉಪಯೋಗ!

ಹೌದು, ಸ್ಯಾಮ್‌ಸಂಗ್‌ ಕಂಪೆನಿ ಹೊಸದಾಗಿ ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌ ಅನ್ನು ಲಾಂಚ್‌ ಮಾಡಿದೆ. ಇದು ಸೈಬರ್‌ಟಾಕ್‌ಗಳಿಂದ ನಿಮ್ಮ ಡಿವೈಸ್‌ ಅನ್ನು ಸೆಕ್ಯುರ್‌ ಮಾಡಲಿದೆ ಎಂದು ಸ್ಯಾಮ್‌ಸಂಗ್‌ ಕಂಪೆನಿ ಹೇಳಿದೆ. ಝೀರೋ ಕ್ಲಿಕ್‌ ಶೋಷಣೆಗಳ ವಿರುದ್ದ ನಿಮ್ಮ ಸ್ಯಾಮ್‌ಸಂಗ್‌ ಫೋನ್‌ ರಕ್ಷಣೆ ಮಾಡುವಲ್ಲಿ ಇದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌ ವಿಶೇಷತೆ ಏನು ? ಇದರ ಕಾರ್ಯನಿರ್ವಹಣೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏನಿದು ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌?

ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌ ಹೆಸರೇ ಸೂಚಿಸುವಂತೆ ಮೆಸೇಜ್‌ ರೂಪದಲ್ಲಿ ನಿಮ್ಮ ಡಿವೈಸ್‌ಗೆ ಎಂಟ್ರಿ ನೀಡಲು ಬರುವ ಸೈಬರ್‌ ಕ್ರಿಮಿಗಳಿಂದ ರಕ್ಷಣೆ ನೀಡಲಿದೆ. ಅಲ್ಲದೆ ಸ್ಯಾಮ್‌ಸಂಗ್‌ ಡಿವೈಸ್‌ಗಳಲ್ಲಿ ಸೈಬರ್‌ ಟಾಕ್‌ಗಳಿಂದ ಸೆಕ್ಯುರ್‌ ಮಾಡಲಿದೆ. ಇದರಿಂದ ನಿಮ್ಮ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಸೈಬರ್‌ ಕ್ರೈಮ್‌ ನಡೆಯದಂತೆ ಎಚ್ಚರಿಕೆ ವಹಿಸಲಿದೆ. ಇದು ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಾಗಲಿದೆ ಎನ್ನಲಾಗಿದೆ. ಇದು ನೀವು ಯಾವುದೇ ದುರುದ್ದೇಶಪೂರಿತ ಕೋಡ್‌ ಅನ್ನು ಸ್ವೀಕರಿಸಿದರೆ ತಿಳಿಸಲಿದೆ. ಅಲ್ಲದೆ ಬೆದರಿಕೆಯಂತಹ ಮೆಸೇಜ್‌ಗಳನ್ನು ತಡೆಗಟ್ಟಲು ಈ ಮೆಸೇಜ್‌ ಗಾರ್ಡ್‌ ಸಹಾಯ ಮಾಡಲಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಸೆಕ್ಯುರಿಟಿ ಫೀಚರ್ಸ್‌ ಬಿಡುಗಡೆ! ಏನಿದರ ಉಪಯೋಗ!

ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌ ಕಾರ್ಯನಿರ್ವಹಣೆ ಹೇಗೆ?

ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌ ನಿಮ್ಮ ಡಿವೈಸ್‌ಗೆ ಒಂದು ಪ್ರಬಲ ಭದ್ರತೆಯನ್ನು ನೀಡಲಿದೆ. ಕೇವಲ ಚಿತ್ರ ಸಂದೇಶಗಳಲ್ಲಿಯೇ ಕಾಣುವ ದುರುದ್ದೇಶಪೂರಿತ ಉದ್ದೇಶವನ್ನು ಕಂಡುಹಿಡಿಯಲಿದೆ. ಶೋಷಿತ ಸಂಖ್ಯೆಗಳಿಂದ ಬರುವ ಸಂದೇಶಗಳ ವಿರುದ್ದ ಸುರಕ್ಷತೆ ನೀಡಲಿದೆ. ಚಿತ್ರ ಸಂದೇಶದಲ್ಲಿರುವ ಅದೃಶ್ಯ ಬೆದರಿಕೆಗಳಿಂದ ನಿಮ್ಮ ರಕ್ಷಣೆ ಮಾಡುವ ಮೂಲಕ ನಿಮ್ಮ ಡಿವೈಸ್‌ ಅನ್ನು ರಕ್ಷಣೆ ಮಾಡಲಿದೆ.

ಸ್ಯಾಮ್‌ಸಂಗ್ ಮೆಸೇಜ್ ಗಾರ್ಡ್ ಅತ್ಯಾಧುನಿಕ ಸ್ಯಾಂಡ್‌ಬಾಕ್ಸ್ ಆಗಿದೆ. ಇದು ಇಮೇಜ್ ಫೈಲ್‌ಗಳು ಬಂದಾಗ ಅವುಗಳನ್ನು ಪ್ರತ್ಯೇಕಿಸುತ್ತದೆ. ಅಲ್ಲದೆ ಈ ಇಮೇಜ್‌ ಫೈಲ್‌ಗಳಲ್ಲಿ ದುರುದ್ದೇಶಪೂರಿತ ಎನಿಸುವ ಇಮೇಜ್‌ ಫೈಲ್‌ಗಳನ್ನು ದೂರವಿಡಲಿದೆ. ದುರುದ್ದೇಶಪೂರಿತ ಕೋಡ್‌ ನಿಮ್ಮ ಡಿವೈಸ್‌ ಅನ್ನು ಪ್ರವೇಶಿದಂತೆ ತಡೆಹಿಡಿಯಲಿದೆ. ಜೊತೆಗೆ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಸಂವಹನ ನಡೆಸುತ್ತದೆ. ಅಲ್ಲದೆ ಫೈಲ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುವ ಕೆಲಸವನ್ನು ಮೆಸೇಜ್‌ ಗಾರ್ಡ್‌ ನಡೆಸಲಿದೆ ಎಂದು ವರದಿಯಾಗಿದೆ.

ಸ್ಯಾಮ್‌ಸಂಗ್‌ನಿಂದ ಹೊಸ ಸೆಕ್ಯುರಿಟಿ ಫೀಚರ್ಸ್‌ ಬಿಡುಗಡೆ! ಏನಿದರ ಉಪಯೋಗ!

ಲಭ್ಯತೆ ಯಾವಾಗ?

ಸ್ಯಾಮ್‌ಸಂಗ್‌ ಮೆಸೇಜ್‌ ಗಾರ್ಡ್‌ ಪ್ರಸ್ತುತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಾಗಲಿದೆ. ಆದರೆ ಇದನ್ನು ಮುಂದಿನ ದಿನಗಳಲ್ಲಿ ಎಲ್ಲಾ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳು ಹಾಗೂ ಟ್ಯಾಬ್ಲೆಟ್‌ಗಳಲ್ಲಿ ಕೂಡ ಹೊರತರುವ ಸಾಧ್ಯತೆಯಿದೆ. ಇದರಲ್ಲಿರುವ ಸೆಕ್ಯುರಿಟಿ ಸೆಲ್ಯೂಶನ್‌ ಪ್ರಸ್ತುತ ಗೂಗಲ್‌ನಿಂದ ಸ್ಯಾಮ್‌ಸಂಗ್‌ ಸಂದೇಶಗಳು ಮತ್ತು ಸಂದೇಶಗಳೊಂದಿಗೆ ಕಾರ್ಯನಿರ್ವಹಿಸಲಿದೆ.

ಇನ್ನು ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ 6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡೈನಾಮಿಕ್‌ ಅಮೋಲೆಡ್‌ 2X ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 12 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ 3,900mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 25W ವೈರ್ಡ್ ಚಾರ್ಜಿಂಗ್ ಮತ್ತು 15W ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

Best Mobiles in India

English summary
Samsung is aware of the latest type of cyberattack known as zero-click exploits, which can occur when an image is received.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+