ಅಗ್ಗದ ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಮತ್ತು A02s ಸ್ಮಾರ್ಟ್‌ಫೋನ್ ಲಾಂಚ್!
ದಕ್ಷಿಣ ಕೊರಿಯಾದ ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ಈಗಾಗಲೇ A ಸರಣಿಯಲ್ಲಿ ಹಲವು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಇದರ ಮುಂದುವರೆದ ಸರಣಿಯಲ್ಲಿ ಇದೀಗ A ಸರಣಿಯಲ್ಲಿ ಗ್ಯಾಲಕ್ಸಿ A12 ಮತ್ತು ಗ್ಯಾಲಕ್ಸಿ A02s ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಹೊಸ ಸ್ಮಾರ್ಟ್‌ಫೋನ್‌ಗಳು ಬಜೆಟ್ ಬೆಲೆಯ ಪ್ರೈಸ್‌ಟ್ಯಾಗ್ ಅನ್ನು ಹೊಂದಿವೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿವೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಬಜೆಟ್ ಸ್ನೇಹಿ ಬೆಲೆಯಲ್ಲಿ ಹೊಸದಾಗಿ ಗ್ಯಾಲಕ್ಸಿ A12 ಮತ್ತು A02s ಸ್ಮಾರ್ಟ್‌ಫೋನ್‌ಗಳನ್ನ ಯೂರೋಪ್‌ನಲ್ಲಿ ಬಿಡುಗಡೆ ಮಾಡಿದೆ. ಇನ್ನು ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್ 3GB +32GB, 4GB+64GB, 6GB+128GB ಆಂತರಿಕ ಸ್ಟೋರೇಜ್‌ನ ಮೂರು ವೇರಿಯೆಂಟ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಲ್ಲದೆ ಗ್ಯಾಲಕ್ಸಿ A02s ಸ್ಮಾರ್ಟ್‌ಫೋನ್ 3GB+32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇನ್ನುಳಿದಂತೆ ಈ ಎರಡು ಸ್ಮಾರ್ಟ್‌ಫೋನ್‌ಗಳು ಒಳಗೊಂಡಿರುವ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ವಿನ್ಯಾಸ
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಮತ್ತು ಗ್ಯಾಲಕ್ಸಿ A02s ಎರಡು ಸ್ಮಾರ್ಟ್‌ಫೋನ್‌ಗಳು 720 x 1500 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 6.5-ಇಂಚಿನ ಎಚ್‌ಡಿ + ಇನ್ಫಿನಿಟಿ ವಿ ಡಿಸ್‌ಪ್ಲೇಯನ್ನು ಹೊಂದಿವೆ. ಇನ್ನು ಈ ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ವಿನ್ಯಾಸವನ್ನು ಪಡೆದುಕೊಂಡಿವೆ.

ಪ್ರೊಸೆಸರ್ ಬಲ
ಈ ಎರಡು ಸ್ಮಾರ್ಟ್‌ಫೋನ್‌ಗಳು ಆಕ್ಟಾ ಕೋರ್ ಪ್ರೊಸೆಸರ್ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಇನ್ನು ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್ 3GB +32GB, 4GB+64GB, 6GB+128GB ಆಂತರಿಕ ಸ್ಟೋರೇಜ್‌ನ ಮೂರು ವೇರಿಯೆಂಟ್ ಆಯ್ಕೆ ಹೊಂದಿದೆ. ಹಾಗೇಯೇ ಗ್ಯಾಲಕ್ಸಿ A02s ಸ್ಮಾರ್ಟ್‌ಫೋನ್ 3GB+32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಮೈಕ್ರೋ ಎಸ್‌ಡಿ ಕಾರ್ಡ್ ಬಳಸಿ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿಶೇಷತೆ
ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಇದೆ. ಇನ್ನು ಗ್ಯಾಲಕ್ಸಿ 02s ಸ್ಮಾರ್ಟ್‌ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದು 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ
ಇನ್ನು ಈ ಎರಡು ಸ್ಮಾರ್ಟ್‌ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಹೊಂದಿದ್ದು, 15W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಬ್ಲೂಟೂತ್, ವೈಫೈ, ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ A12 ಸ್ಮಾರ್ಟ್‌ಫೋನ್ ಯುರೋ 179 (ಅಂದಾಜು 15,800 ರೂ) ಬೆಲೆಯನ್ನು ಹೊಂದಿದೆ. ಇದು ಕಪ್ಪು, ನೀಲಿ, ಬಿಳಿ ಮತ್ತು ಕೆಂಪು ಬಣ್ಣಗಳ ನಾಲ್ಕು ಬಣ್ಣ ಆಯ್ಕೆಗಳನ್ನು ಹೊಂದಿದೆ. ಈ ಫೋನ್ 2021 ರ ಜನವರಿಯಲ್ಲಿ ಯುರೋಪ್‌ನಲ್ಲಿ ಮಾರಾಟವಾಗಲಿದೆ. ಇನ್ನು ಗ್ಯಾಲಕ್ಸಿ A02s ಯುರೋ 150 (ಅಂದಾಜು 13,300 ರೂ) ಬೆಲೆ ಹೊಂದಿದ್ದು, ಕೆಂಪು, ಕಪ್ಪು ಮತ್ತು ಬಿಳಿ ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








