ಕ್ಯೂ ಸರಣಿಯಲ್ಲಿ ಎರಡು ಹೊಸ ಸೌಂಡ್‌ಬಾರ್ ಬಿಡುಗಡೆ ಮಾಡಿದ ಸ್ಯಾಮ್‌ಸಂಗ್!
ಸ್ಮಾರ್ಟ್‌ಫೋನ್ ದಿಗ್ಗಜ ಎನಿಸಿಕೊಂಡಿರುವ ಸ್ಯಾಮ್‌ಸಂಗ್ ಕಂಪೆನಿ ಆಡಿಯೋ ಆಕ್ಸಿಸರೀಸ್‌ಗಳ ಮೂಲಕವೂ ಗುರುತಿಸಿಕೊಂಡಿದೆ. ಅಷ್ಟೆ ಅಲ್ಲ ಉತ್ತಮ ಗುಣಮಟ್ಟದ ಸೌಂಡ್‌ಬಾರ್‌ಗಳಿಗೆ ಹೆಸರುವಾಸಿಯಾಗಿದೆ. ಈಗಾಗಲೇ ಹಲವು ವೈವಿಧ್ಯಮಯ ಸೌಂಡ್‌ಬಾರ್‌ಗಳನ್ನ ಪರಿಚಯಿಸಿ ಬಳಕೆದಾರರಿಂದ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಸ್ಯಾಮ್‌ಸಂಗ್ ಕಂಪೆನಿ ತನ್ನ ಕ್ಯೂ ಸರಣಿಯಲ್ಲಿ ಮತ್ತೆ ಎರಡು ಹೊಸ ಸೌಂಡ್‌ಬಾರ್‌ಗಳನ್ನ ಬಿಡುಗಡೆ ಮಾಡಿದೆ. ಈ ಎರಡು ಸೌಂಡ್‌ಬಾರ್‌ಗಳು ಡಾಲ್ಬಿ ಅಟ್ಮೋಸ್ ಬೆಂಬಲವನ್ನು ಒಳಗೊಂಡಿವೆ.

ಹೌದು, ಸ್ಯಾಮ್‌ಸಂಗ್ ಕಂಪೆನಿ ತನ್ನ ಕ್ಯೂ ಸರಣಿಯಲ್ಲಿ HW-Q950T ಮತ್ತು HW-Q900T ಎಂಬ ಎರಡು ಹೊಸ ಸೌಂಡ್‌ಬಾರ್‌ಗಳನ್ನ ಬಿಡುಗಡೆ ಮಾಡಿದೆ. ಸದ್ಯ ಕಂಪನಿಯು ಪ್ರೀಮಿಯಂ ವಿಭಾಗದಲ್ಲಿ ಬಿಡುಗಡೆ ಮಾಡಿರುವ ಈ ಎರಡು ಸೌಂಡ್‌ಬಾರ್‌ಗಳು ಡಾಲ್ಬಿ ಅಟ್ಮೋಸ್ ಅನ್ನು ಬೆಂಬಲಿಸಲಿದ್ದು, eARC ಯನ್ನು ಸಹ ಬೆಂಬಲಿಸಲಿದ್ದು, ಹೊಸ ಮಾದರಿಯ ವಿನ್ಯಾಸವನ್ನ ಹೊಂದಿವೆ. ಅಲ್ಲದೆ ಇವುಗಳಲ್ಲಿ ಉತ್ಕೃಷ್ಟ ಆಡಿಯೊ ಅನುಭವಕ್ಕಾಗಿ ಸ್ಯಾಮ್‌ಸಂಗ್‌ನ 2020 ಕ್ಯೂಎಲ್‌ಇಡಿ ಟಿವಿ ಮಾದರಿಗಳ ಜೊತೆಗೆ ಈ ಸೌಂಡ್‌ಬಾರ್‌ಗಳನ್ನು ಬಳಸಬಹುದಾಗಿದೆ. ಇನ್ನು ಈ ಸೌಂಡ್‌ಬಾರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ HW-Q950T ಸೌಂಡ್‌ಬಾರ್
ಸ್ಯಾಮ್‌ಸಂಗ್ HW-Q950T ಸೌಂಡ್‌ಬಾರ್‌ನಲ್ಲಿ 9.1.4-ಚಾನೆಲ್ ಸೆಟಪ್ ಅನ್ನು ನೀಡಲಾಗಿದ್ದು, ಈ ಸೌಂಡ್‌ಬಾರ್‌ನಲ್ಲಿ 20 ಸ್ಪೀಕರ್‌ಗಳೊಂದಿಗೆ 546W ಪ್ರೊಡಕ್ಷನ್ ಅನ್ನು ನೀಡಲಿದೆ. ಇದಲ್ಲದೆ ಈ ಸೌಂಡ್‌ಬಾರ್‌ನಲ್ಲಿ ಎರಡು ವಾಯರ್‌ಲೆಸ್ ರಿಯರ್ ಅಪ್-ಫೈರಿಂಗ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಇದಲ್ಲದೆ ಡಾಲ್ಬಿ ಆಟ್ಮೋಸ್ ಅನ್ನು ಬೆಂಬಲಿಸಲಿದ್ದು, ಡಾಲ್ಬಿ ಡಿಜಿಟಲ್ ಪ್ಲಸ್ ಅನ್ನು ಸಹ ಬೆಂಬಲಿಸಲಿದೆ. ಜೊತೆಗೆ ಡಾಲ್ಬಿ ಟ್ರೂ ಎಚ್‌ಡಿ, ಡಿಟಿಎಸ್ ಅನ್ನು ಸಹ ಬೆಂಬಲಿಸಲಿದೆ.

ಸ್ಯಾಮ್ಸಂಗ್ HW-Q900T
ಇನ್ನು HW-Q900T ಸೌಂಡ್‌ಬಾರ್ 7.1.2-ಚಾನೆಲ್ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 16 ಸ್ಪೀಕರ್‌ಗಳನ್ನ ನೀಡಲಾಗಿದ್ದು, ಇದರಿಂದ 406W ಆಡಿಯೋ ಪ್ರೊಡಕ್ಷನ್ ಸಿಗಲಿದೆ. ಅಲ್ಲದೆ ಇದು ವಾಯರ್‌ಲೆಸ್ ರಿಯರ್ ಸ್ಪೀಕರ್‌ಗಳನ್ನು ಹೊಂದಿಲ್ಲ. ಆದರೆ ಡಾಲ್ಬಿ ಅಟ್ಮೋಸ್ ಬೆಂಬಲ, ಡಾಲ್ಬಿ ಡಿಜಿಟಲ್ ಪ್ಲಸ್, ಡಾಲ್ಬಿ ಟ್ರೂ ಎಚ್‌ಡಿ, ಡಿಟಿಎಸ್, ಡಿಟಿಎಸ್ ಬೆಂಬಲದಿಂದ ಎಕ್ಸ್, ಮತ್ತು eARC ಅನ್ನು ಸಹ ಬೆಂಬಲಿಸಲಿದೆ. ಜೊತೆಗೆ ಕ್ಯೂ-ಸಿಂಫನಿ ಸಹಾಯದಿಂದ ಟಿವಿಯ ಸ್ಪೀಕರ್‌ಗಳು ಮತ್ತು ಸೌಂಡ್‌ಬಾರ್ ಎರಡರಿಂದಲೂ ಆಡಿಯೊ ಫೈರಿಂಗ್ ಮಾಡಬಹುದು ಎಂದು ಸ್ಯಾಮ್‌ಸಂಗ್ ಹೇಳಿದೆ. ಇದಲ್ಲದೆ ಎಚ್‌ಡಿಆರ್ 10 + ಗೆ ಬೆಂಬಲಿಸಲಿದ್ದು, ಈ ಸೌಂಡ್‌ಬಾರ್‌ಗಳು 4K ವಿಡಿಯೋ ಪಾಸ್‌ಥ್ರೂ ಅನ್ನು ಸಹ ಬೆಂಬಲಿಸಲಿದೆ.

ಇತರೆ
ಇನ್ನು ಈ ಎರಡು ಸೌಂಡ್‌ಬಾರ್‌ಗಳು ಎರಡು ಎಚ್‌ಡಿಎಂಐ, ಒಂದು ಎಚ್‌ಡಿಎಂಐ port ಟ್ ಪೋರ್ಟ್, ಆಪ್ಟಿಕಲ್ ಇನ್ ಪೋರ್ಟ್, ಬ್ಲೂಟೂತ್, ವೈ-ಫೈ ಅನ್ನು ಬೆಂಬಲಿಸಲಿವೆ. ಅಲ್ಲದೆ ಸ್ಯಾಮ್ಸಂಗ್ ಸ್ಮಾರ್ಟ್ ಥಿಂಗ್ಸ್ ಅಪ್ಲಿಕೇಶನ್ ಬೆಂಬಲ ಮತ್ತು ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಅನ್ನು ಸಹ ಒಳಗೊಂಡಿವೆ. ಅಮೆಜಾನ್ ಮ್ಯೂಸಿಕ್, ಸ್ಪಾಟಿಫೈ, ಐಹಿಯರ್ಟ್ ರೇಡಿಯೋ ಮತ್ತು ಟ್ಯೂನ್ಇನ್ ನಂತಹ ಸೇವೆಗಳಿಂದ ಬಳಕೆದಾರರು ತಮ್ಮ ನೆಚ್ಚಿನ ಮ್ಯೂಸಿಕ್ ಅನ್ನು ಕೇಳುವ ಆಯ್ಕೆಯನ್ನು ಸಹ ಇದರಲ್ಲಿ ನೀಡಿವೆ. ಜೊತೆಗೆ ಟ್ಯಾಪ್ ಸೌಂಡ್ ಫೀಚರ್ಸ್ ಅನ್ನು ಸಹ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ HW-Q950T ಸೌಂಡ್‌ಬಾರ್ $1,797.99 (ಸುಮಾರು 1.35 ಲಕ್ಷ ರೂ.)ಬೆಲೆಯನ್ನ ಹೊಂದಿದ್ದು, ಸ್ಯಾಮ್‌ಸಂಗ್ HW-Q900T ಅನ್ನು AUD 1,499 (ಸುಮಾರು 78,000 ರೂ.) ಬೆಲೆಯನ್ನ ಹೊಂದಿದೆ.


Click it and Unblock the Notifications








