Home
ಸುದ್ದಿಜಾಲ

ಒಂದೇ ತಿಂಗಳಲ್ಲಿ ಮಿಲಿಯನ್ ದಾಟಿದ ಸ್ಯಾಮ್‌ಸಂಗ್ ಪೇ ಗ್ರಾಹಕರ ಸಂಖ್ಯೆ...!

By Tejaswini P G

ದೇಶದಲ್ಲಿ ಡಿಜಿಟಲ್ ಪಾವತಿ ಜನರ ಗಮನ ಸೆಳೆಯುತ್ತಿದ್ದು, ಸ್ಯಾಮ್ಸಂಗ್ ನ ಮೊಬೈಲ್ ಪಾವತಿ ಸೇವೆ ಸ್ಯಾಮ್ಸಂಗ್ ಪೇ 1 ತಿಂಗಳೊಳಗೆ 1 ಮಿಲಿಯನ್ ಗೂ ಅಧಿಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಒಂದೇ ತಿಂಗಳಲ್ಲಿ ಮಿಲಿಯನ್ ದಾಟಿದ ಸ್ಯಾಮ್‌ಸಂಗ್ ಪೇ ಗ್ರಾಹಕರ ಸಂಖ್ಯೆ...!

ಈ ಸುದ್ದಿಯನ್ನು ತಿಳಿಸುತ್ತಾ, ಸ್ಯಾಮ್ಸಂಗ್ ಇಂಡಿಯಾ ದ ಕಮರ್ಶಿಯಲೈಸೇಶನ್ ಗ್ರೂಪ್(ಪ್ರಾಡಕ್ಟ್ ಪ್ಲ್ಯಾನಿಂಗ್) ನ ಡೈರೆಕ್ಟರ್ ಆಗಿರುವ ಸಂಜಯ್ ರಾಜ್ದಾನ್ ಅವರು " ಸೆಪ್ಟಂಬರ್ 12 ರಂದು ನಾವು 1.5 ಮಿಲಿಯನ್ ಸ್ಯಾಮ್ಸಂಗ್ ಪೇ ಬಳಕೆದಾರರನ್ನು ಗಳಿಸಿರುವ ಕುರಿತು ತಿಳಿಸಿದ್ದೆವು. ಕಳೆದ ಒಂದೂವರೆ ತಿಂಗಳಲ್ಲಿ ಮತ್ತೆ 1 ಮಿಲಿಯನ್ ಬಳಕೆದಾರರನ್ನು ನಾವು ಗಳಿಸಿರುವುದು ನಮಗೆ ಸಂತೋಷ ತಂದಿದೆ. ಈ ಬೆಳವಣಿಗೆ ನಿಜವಾಗಿಯೂ ಮಹತ್ತರವಾದುದು" ಎಂದು ಹೇಳಿದ್ದಾರೆ.

ಸೌತ್ ಕೋರಿಯಾದ ಖ್ಯಾತ ಕಂಪೆನಿಯಾದ ಸ್ಯಾಮ್ಸಂಗ್ ಭಾರತದಲ್ಲಿ ಸ್ಯಾಮ್ಸಂಗ್ ಪೇ ಸೇವೆಯನ್ನು ಮಾರ್ಚ್ 2017ರಲ್ಲಿ ಲಾಂಚ್ ಮಾಡಿತ್ತು.ಈಗ ಸ್ಯಾಮ್ಸಂಗ್ ಪೇ ಬಳಸುತ್ತಿರುವ 20 ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ಸೌತ್ ಕೋರಿಯಾ ಮತ್ತು ರಷ್ಯಾ ದೇಶಗಳು ಭಾರತದ ಮುಂದಿದೆ.

ಸ್ಯಾಮ್ಸಂಗ್ ಪೇ ಸಪೋರ್ಟ್ ಮಾಡುವ ಸ್ಮಾರ್ಟ್ಫೋನ್ಗಳು

ಸ್ಯಾಮ್ಸಂಗ್ ಪೇ ಸಪೋರ್ಟ್ ಮಾಡುವ ಸ್ಮಾರ್ಟ್ಫೋನ್ಗಳು

ಬಿಡುಗಡೆಯ ಸಂದರ್ಭದಲ್ಲಿ ಸ್ಯಾಮ್ಸಂಗ್ ಪೇ 10 ಮಾಡೆಲ್ಗಳಲ್ಲಿ ಲಭ್ಯವಿತ್ತು. ಲಾಂಚ್ ನಿಂದ ಇಂದಿನವರೆಗೆ ಸ್ಯಾಮ್ಸಂಗ್ ಪೇ ತನ್ನ ಬಳಗವನ್ನು ವಿಸ್ತರಿಸಿದ್ದು, ಈಗ 26 ಮಾಡೆಲ್ಗಳಲ್ಲಿ ಲಭ್ಯವಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8, ಗ್ಯಾಲಕ್ಸಿ S8, ಗ್ಯಾಲಕ್ಸಿ S8 ಪ್ಲಸ್,ಗ್ಯಾಲಕ್ಸಿ S7 ಎಡ್ಜ್,ಗ್ಯಾಲಕ್ಸಿ J7 ಮ್ಯಾಕ್ಸ್ , ಗ್ಯಾಲಕ್ಸಿ J7 ಪ್ರೋ ಮೊದಲಾದ ಮೊಬೈಲ್ಗಳಲ್ಲಿ ಸ್ಯಾಮ್ಸಂಗ್ ಪೇ ಸೌಲಭ್ಯ ಲಭ್ಯವಿದ್ದು, ಬಳಕೆದಾರರು ಅದರ ಮೇಲೆ ಟ್ಯಾಪ್ ಮಾಡಿ ಈಗಾಗಲೇ ಅವರ ಮೊಬೈಲ್ಗಳಲ್ಲಿ ಸಂಗ್ರಹವಾಗಿರುವ ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ವಾಲೆಟ್ಗಳನ್ನು ಬಳಸಿ ಸುಲಭವಾಗಿ ಹಣ ಪಾವತಿಸಬಹುದು.

ಸ್ಯಾಮ್ಸಂಗ್ ಪೇ ಎಷ್ಟು ಉಪಯುಕ್ತ?

ಸ್ಯಾಮ್ಸಂಗ್ ಪೇ ಎಷ್ಟು ಉಪಯುಕ್ತ?

ಸ್ಯಾಮ್ಸಂಗ್ ಈಗಾಗಲೇ 17 ಪಾರ್ಟ್ನರ್ಗಳನ್ನು ಹೊಂದಿದ್ದು, ಈ ಪೈಕಿ 10 ಬ್ಯಾಂಕ್ಗಳು ಕೂಡ ಇದೆ. ಸ್ಯಾಮ್ಸಂಗ್ ಇನ್ನೂ ಕೆಲವು ಬ್ಯಾಂಕ್ಗಳೊಂದಿಗೆ ಸಹಯೋಗ ಬೆಳೆಸಲು ಮಾತುಕತೆಯಲ್ಲಿ ತೊಡಗಿದೆ.

ಭಾರತದಲ್ಲಿ ಸ್ಯಾಮ್ಸಂಗ್ ಪೇ ವ್ಯವಹಾರವನ್ನು ನೋಡಿಕೊಳ್ಳುತ್ತಿರುವ ರಾಜ್ದಾನ್ ಅವರು ಭಾರತದಲ್ಲಿರುವ ಬ್ಯಾಂಕ್ ನಿಂದ ಬ್ಯಾಂಕ್ ಗೆ ಹಣ ವರ್ಗಾಯಿಸುವ ಮಾಡೆಲ್ ಅನ್ನು ತಮ್ಮ ದೇಶಗಳಲ್ಲಿಯೂ ಜಾರಿಗೊಳಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.

ಸ್ಯಾಮ್ಸಂಗ್ ಪೇ ಬಳಸುವುದು ಹೇಗೆ?

ಸ್ಯಾಮ್ಸಂಗ್ ಪೇ ಬಳಸುವುದು ಹೇಗೆ?

ನಿಮ್ಮ ಮೊಬೈಲ್ನಲ್ಲಿ ಸ್ಯಾಮ್ಸಂಗ್ ಪೇ ಆಪ್ ಪ್ರಿ-ಇನ್ಸ್ಟಾಲ್ ಆಗಿ ಬರದೇ ಇದ್ದಲ್ಲಿ ಮೊದಲಿಗೆ ಆ ಆಪ್ ಅನ್ನು ಇನ್ಸ್ಟಾಲ್ ಮಾಡಿ. ಸಾಮನ್ಯವಾಗಿ ಸ್ಯಾಮ್ಸಂಗ್ ಪೇ ಅನುವು ಮಾಡುವ ಮೊಬೈಲ್ಗಳಲ್ಲಿ ಮೊದಲೇ ಈ ಆಪ್ ನ ಶಾರ್ಟ್ಕಟ್ ಲಭ್ಯವಿರುತ್ತದೆ.ಈ ಮೂಲಕ ಬಳಕೆದಾರರು ಸುಲಭವಾಗಿ ಆಪ್ ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಬಹುದು.

ಇನ್ಸ್ಟಾಲ್ ಮಾಡಿದ ನಂತರ ಬಳಕೆದಾರರು ತಮ್ಮ ಸ್ಯಾಮ್ಸಂಗ್ ಖಾತೆಯ ಮಾಹಿತಿಯನ್ನು ಬಳಸಿ ಸೈನ್-ಇನ್ ಆಗುವ ಮೂಲಕ ಸ್ಯಾಮ್ಸಂಗ್ ಪೇ ಸೆಟಪ್ ಮಾಡಬೇಕು.ಬಳಕೆದಾರರು ತಮ್ಮ ಬೆರಳಚ್ಚನ್ನು ವೆರಿಫಿಕೇಶನ್ ವಿಧಾನವಾಗಿ ಬಳಸಬೇಕಲ್ಲದೆ, ಪ್ಯಾಟರ್ನ್,ಪಿನ್ ಅಥವಾ ಪಾಸ್ವರ್ಡ್ ಲಾಕ್ ಅನ್ನೂ ಬಳಸಬಹುದು. ನಂತರ ತಮ್ಮ ಪಾವತಿಗೆ ಬಳಸುವ ಕಾರ್ಡ್ ನ ಮಾಹಿತಿಯನ್ನು ತುಂಬುವ ಮೂಲಕ ಬಳಕೆದಾರರು ಸ್ಯಾಮ್ಸಂಗ್ ಪೇ ಅನ್ನು ಬಳಸಬಹುದು.

ಮೊಬೈಲ್ ಬಳಸಿ ಹಣ ಪಾವತಿಸುವ ವಿಧಾನ

ಮೊಬೈಲ್ ಬಳಸಿ ಹಣ ಪಾವತಿಸುವ ವಿಧಾನ

ನಿಮ್ಮ ಮೊಬೈಲ್ ಬಳಸಿ ಹಣ ಪಾವತಿಸಲು ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ

ನಿಮ್ಮ ಮೊಬೈಲ್ ನ ಹೋಮ್ ಸ್ಕ್ರೀನ್, ಆಪ್ಸ್ ಮೆನು ಅಥವಾ ಲಾಕ್ ಸ್ಕ್ರೀನ್ ನಿಂದ ಸ್ಯಾಮ್ಸಂಗ್ ಪೇ ಆಪ್ ಅನ್ನು ತೆರೆಯಬಹುದು

1. ನಿಮ್ಮ ಫೇವರೆಟ್ ಕಾರ್ಡ್ ಅನ್ನು ಆಯ್ಕೆ ಮಾಡಲು ನಿಮ್ಮ ಸ್ಕ್ರೀನಿನ ಕೆಳಭಾಗದಿಂದ ಮೇಲ್ಮುಖವಾಗಿ ಸ್ವೈಪ್ ಮಾಡಿ

2. ನೀವು ಬಯಸಿದ ಕಾರ್ಡ್ ಅನ್ನು ಸ್ವೈಪ್ ಮಾಡಿ

3. ನಿಮ್ಮ ಗುರುತನ್ನು ಖಚಿತಪಡಿಸಲು ನಿಮ್ಮ ಬೆರಳನ್ನು ಹೋಮ್ ಬಟನ್ ನ ಮೇಲಿರಿಸಿ. ಸ್ಯಾಮ್ಸಂಗ್ ಪೇ ಪಿನ್ ಬಳಸಲು, ಪಿನ್ ಅನ್ನು ಮುಟ್ಟಿ. ನಂತರ 4-ಸಂಖ್ಯೆಯ ಪಿನ್ ಅನ್ನು ನಮೂದಿಸಿ

4. ಹಣ ಪಾವತಿಸಲು ನಿಮ್ಮ ಮೊಬೈಲ್ ನ ಹಿಂಬದಿಯನ್ನು ಕಾರ್ಡ್ ಅಥವಾ ಪೇಯ್ಮೆಂಟ್ ಟರ್ಮಿನಲ್ ನ NFC ರೀಡರ್ ಮೇಲಿರಿಸಿ.

5. ಅಗತ್ಯ ಬಿದ್ದಲ್ಲಿ ನಿಮ್ಮ ಟ್ರ್ಯಾನ್ಸ್ಯಾಕ್ಶನ್ ಅನ್ನು ಪೇಯ್ಮೆಂಟ್ ಟರ್ಮಿನಲ್ ನಲ್ಲಿ ಪೂರ್ತಿಗೊಳಿಸಿ. ಉದಾಹರಣೆಗೆ ನೀವು ಡೆಬಿಟ್ ಕಾರ್ಡ್ ಬಳಸುತ್ತಿದ್ದರೆ ನೀವು ಅದರ ಪಿನ್ ಅನ್ನು ನಮೂದಿಸಬೇಕು.ಕೆಲವು ಮರ್ಚೆಂಟ್/ಟರ್ಮಿನಲ್ ಗಳು ನೀವು ಪಾವತಿಸಬೇಕಾದ ಮೊತ್ತ ಸರಿಯಾಗಿದೆಯೇ ಎಂದು ಖಚಿತಪಡಿಸುವಂತೆ ಹೇಳಬಹುದು , ಇನ್ನು ಕೆಲವು ನೀವು ಸಹಿ ಹಾಕುವಂತೆ ತಿಳಿಸಬಹುದು.

Best Mobiles in India

English summary
Samsung Pay is available for Galaxy Note 8, Galaxy S8, Galaxy S8 Plus, Galaxy S7 Edge, Galaxy J7 Max and Galaxy J7 Pro users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+