ಭರ್ಜರಿ ಸಿಹಿಸುದ್ದಿ: ಭಾರತದಲ್ಲಿ ಕೇವಲ 9,499 ರೂ.ಗೆ Galaxy M06 5G ಫೋನ್ ಬಿಡುಗಡೆ!
ದೇಶದಲ್ಲಿ ಮೊಬೈಲ್ ಪ್ರಿಯರು ಬಹುದಿನಗಳಿಂದ ಎದುರುನೋಡುತ್ತಿದ್ದ Samsung ಕಂಪೆನಿಯ ಬಹುನಿರೀಕ್ಷಿತ Samsung Galaxy M06 5G ಮತ್ತು Samsung Galaxy M16 5G ಎರಡು ಸ್ಮಾರ್ಟ್‌ಫೋನ್‌ಗಳು ದೇಶದಲ್ಲಿಂದು ಭರ್ಜರಿಯಾಗಿ ಬಿಡುಗಡೆಗೊಂಡಿವೆ. ಇವುಗಳಲ್ಲಿ ಬೇಸಿಕ್ Samsung Galaxy M06 5G ಸ್ಮಾರ್ಟ್‌ಫೋನ್ ಕೇವಲ 9,499 ರೂ.ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುವ ಮೂಲಕ ದೇಶದ 5G ಮಾರುಕಟ್ಟೆಯಲ್ಲಿಮತ್ತೊಮ್ಮೆ ಸಂಚಲನ ಮೂಡಿಸಲು ತಯಾರಾಗಿ ಬಂದಿದೆ. ಹಾಗಾದರೆ, ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿರುವ ವಿನೂತನ Samsung Galaxy M06 5G ಸ್ಮಾರ್ಟ್‌ಫೋನ್ ಹೇಗಿದೆ?, ಏನೆಲ್ಲಾ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಖರೀದಿಗೆ ಲಭ್ಯ ಯಾವಾಗ ಎಂಬ ಎಲ್ಲಾ ವಿವರಗಳನ್ನು ನೋಡೋಣ ಬನ್ನಿ.
Samsung Galaxy M06 5G ಸ್ಮಾರ್ಟ್‌ಫೋನಿನ ವೈಶಿಷ್ಟ್ಯಗಳು ಹೇಗಿವೆ?
ದೇಶದಲ್ಲಿಂದು ಬಿಡುಗಡೆಯಾಗಿರುವ ಹೊಸ Samsung Galaxy M06 5G ಸ್ಮಾರ್ಟ್‌ಫೋನ್ 6.7-ಇಂಚಿನಷ್ಟು ದೊಡ್ಡದಾದ LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು HD+ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದ್ದು, 90Hz ರಿಫ್ರೆಶ್ ರೇಟ್ ಮತ್ತು 800 nits ಗರಿಷ್ಠ ಹೊಳಪಿನಂತಹ ಪ್ರಮುಖ ಡಿಸ್‌ಪ್ಲೇ ವೈಶಿಷ್ಟ್ಯಗಳಲ್ಲಿ ಬಂದಿದೆ. ಕಾರ್ಯನಿರ್ವಹಣೆ ವಿಭಾಗದಲ್ಲಿ, Samsung Galaxy M06 5G ಸ್ಮಾರ್ಟ್‌ಫೋನನ್ನು MediaTek Dimensity 6300 SoC ಯೊಂದಿಗೆ ಪ್ಯಾಕ್ ಮಾಡಲಾಗಿದೆ. ಇದು 4GB RAM + 128GB ಸ್ಟೋರೇಜ್ನೊಂದಿಗೆ ಮೈಕ್ರೋ SD ಕಾರ್ಡ್ ಸ್ಲಾಟ್ ಬೆಂಬಲ ಪಡೆದಿದೆ ಹಾಗೂ Android 15-ಆಧಾರಿತ One UI 7.0 ನೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಕಂಪೆನಿ ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, Samsung Galaxy M06 5G ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಡೆಪ್ತ್ ಸೆನ್ಸಾರ್‌ಗಳನ್ನು ಹೊಂದಿದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ 8MP ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ ಈ ಫೋನ್ 25W ಚಾರ್ಜಿಂಗ್ ವೇಗವನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಹೊಂದಿದೆ. ಸಂಪರ್ಕ ಆಯ್ಕೆಗಳಲ್ಲಿ 5G, ಡ್ಯುಯಲ್-ಬ್ಯಾಂಡ್ ವೈ-ಫೈ ಎಸಿ, ಬ್ಲೂಟೂತ್ 5.3, ಜಿಪಿಎಸ್ ಮತ್ತು 3.5mm ಆಡಿಯೊ ಜ್ಯಾಕ್ನಂತಹ ವೈಶಿಷ್ಟ್ಯಗಳು ಸೇರಿವೆ. ಜೊತೆಗೆ 191 ಗ್ರಾಂ ತೂಕವನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕೂಡ ಹೊಂದಿರುವುದನ್ನು ಕಂಪೆನಿ ಖಚಿತಪಡಿಸಿದೆ.
Samsung Galaxy M06 5G ಸ್ಮಾರ್ಟ್‌ಫೋನಿನ ಲಭ್ಯ ಯಾವಾಗ?
ಮೊದಲೇ ಹೇಳಿದಂತೆ, Samsung Galaxy M06 5G ಸ್ಮಾರ್ಟ್‌ಫೋನ್ ದೇಶದಲ್ಲಿ ಕೇವಲ 9,499 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. 4GB RAM + 128GB ಸ್ಟೋರೇಜ್ ರೂಪಾಂತರದ ಸಾಧನವು ಕೇವಲ INR 9,499 ರೂ.ಗಳಿಂದ ಪ್ರಾರಂಭವಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಆದರೆ, ಇದು ಪರಿಚಯಾತ್ಮಕ ಬೆಲೆ ಮಾತ್ರ ಎಂದು Samsung ಕಂಪೆನಿ ಹೇಳಿದೆ. ಗ್ರಾಹಕರು Samsung ಕಂಪೆನಿ ಅಧಿಕೃತ ಆನ್‌ಲೈನ್ ಸ್ಟೋರ್ ಮತ್ತು ಅಪ್ಲಿಕೇಶನ್ ಮತ್ತು Amazon ಇಂಡಿಯಾ ಮೂಲಕ Samsung Galaxy M06 5G ಸ್ಮಾರ್ಟ್‌ಫೋನನ್ನು ಇದೇ ಮಾರ್ಚ್ 7, 2025 ರಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಸಬಹುದು ಎಂದು ಕಂಪೆನಿಯು ಮಾಹಿತಿ ಒದಗಿಸಿದೆ.


Click it and Unblock the Notifications








