Home
ಸುದ್ದಿಜಾಲ

ಸ್ಯಾಮ್‌ಸಂಗ್‌ನಿಂದ ಬರಲಿದೆ ಹೊಸ ಫೋಲ್ಡಬಲ್‌ ಲ್ಯಾಪ್‌ಟಾಪ್‌! ಹೇಗಿರಲಿದೆ ವಿನ್ಯಾಸ!

ಮೊಬೈಲ್‌ ಮಾರುಕಟ್ಟೆಯಲ್ಲಿ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳ ಸ್ಯಾಮ್‌ಸಂಗ್‌ ಇದೀಗ ಸ್ಲಿಮ್‌ ಫೋಲ್ಡಬಲ್‌ ಲ್ಯಾಪ್‌ಟಾಪ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಆ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ವಿಶಿಷ್ಟವಾದ ವಾಟರ್‌ಡ್ರಾಪ್ ಹಿಂಜ್ ಕಾರ್ಯವಿಧಾನವನ್ನು ಹೊಂದಿರುವ ಲ್ಯಾಪ್‌ಟಾಪ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ.

ಹೌದು, ಟೆಕ್‌ ವಲಯಕ್ಕೆ ಹಲವು ಹೊಸತನ್ನು ಪರಿಚಯಿಸಿರುವ ಸ್ಯಾಮ್‌ಸಂಗ್‌ ಹೊಸ ಫೋಲ್ಡಬಲ್‌ ಲ್ಯಾಪ್‌ಟಾಪ್‌ ಪರಿಚಯಿಸುವ ತಯಾರ ನಡೆಸಿದೆ. ಈ ಲ್ಯಾಪ್‌ಟಾಪ್‌ ಮುಂದಿನ ವರ್ಷದ ಉತ್ತರಾರ್ಧದಲ್ಲಿ ಬಿಡುಗಡೆ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಸ್ಯಾಮ್‌ಸಂಗ್ ಫ್ಲೆಕ್ಸ್ ಹಿಂಜ್ ವಾಟರ್‌ಡ್ರಾಪ್ ವಿನ್ಯಾಸವನ್ನು ಈ ಹಿಂದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫ್ಲಿಪ್ 5 ನಲ್ಲಿ ಪರಿಚಯಿಸಲಾಗಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಲ್ಯಾಪ್‌ಟಾಪ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನಿಂದ ಬರಲಿದೆ ಹೊಸ ಫೋಲ್ಡಬಲ್‌ ಲ್ಯಾಪ್‌ಟಾಪ್‌! ಹೇಗಿರಲಿದೆ ವಿನ್ಯಾಸ!

ಹೇಗಿರಲಿದೆ ಸ್ಯಾಮ್‌ಸಂಗ್‌ ಫೋಲ್ಡಬಲ್‌ ಲ್ಯಾಪ್‌ಟಾಪ್‌
ಸ್ಯಾಮ್‌ಸಂಗ್‌ ಕಂಪೆನಿ ಪರಿಚಯಿಸಲು ಉದ್ದೇಶಿಸಿರುವ ಫೋಲ್ಡಬಲ್‌ ಲ್ಯಾಪ್‌ಟಾಪ್‌ ಫ್ಲೆಕ್ಸ್ ಹಿಂಜ್ ವಿನ್ಯಾಸವನ್ನು ಹೊಂದಿರಲಿದೆ. ಅಂದರೆ ವಾಟರ್‌ಡ್ರಾಪ್ ಹಿಂಜ್ ಫೋಲ್ಡ್‌ಮಾಡಿದಾಗ ಅಕ್ಷವನ್ನು ಚಲಿಸಲು ಅನುಮತಿಸುತ್ತದೆ. ಇದರ ಪರಿಣಾಮವಾಗಿ ಸ್ಕ್ರೀನ್‌ಗಳ ನಡುವೆ ಟೈಟ್‌ ಫಿಟ್ ಮತ್ತು ಮಡಿಕೆಯಲ್ಲಿ ಕ್ರೀಸ್‌ಗಳು ಕಡಿಮೆಯಾಗಲಿದೆ ಎನ್ನಲಾಗಿದೆ. ಇದಲ್ಲದೆ ಈ ಹೊಸ ಹಿಂಜ್ ಲ್ಯಾಪ್‌ಟಾಪ್ ಅನ್ನು ತೆಳ್ಳನೆಯ ವಿನ್ಯಾಸದಲ್ಲಿ ಪರಿಚಯಿಸುವ ನಿರೀಕ್ಷೆಯಿದೆ.

ಇನ್ನು ಸ್ಮಾರ್ಟ್‌ಫೋನ್‌ಗಳಿಗಿಂತ ಫೋಲ್ಡಬಲ್‌ ಲ್ಯಾಪ್‌ಟಾಪ್‌ಗಳ ಬಳಕೆ ವಿಭಿನ್ನವಾಗಿರಲಿದೆ. ಈ ಲ್ಯಾಪ್‌ಟಾಪ್‌ಗಳು ತೆಳುವಾಗಿರಲಿದ್ದು, U- ಆಕಾರದ ಹಿಂಜ್ ಹೆಚ್ಚು ಪ್ರಾಯೋಗಿಕ ಪರ್ಯಾಯವನ್ನು ನೀಡಲಿದೆ ಎನ್ನಲಾಗಿದೆ. ಆದರೆ ಲ್ಯಾಪ್‌ಟಾಪ್‌ನಲ್ಲಿನ ವಾಟರ್‌ಡ್ರಾಪ್ ಹಿಂಜ್‌ನ ಪ್ರಯೋಜನಗಳು ಬಳಕೆದಾರರಿಗೆ ತಿಳಿದಿರುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಫೋಲ್ಡಬಲ್‌ ಲ್ಯಾಪ್‌ಟಾಪ್‌ ಎಂಟ್ರಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ LG ಕಂಪೆನಿ ಗ್ರಾಮ್ ಫೋಲ್ಡ್ ಎಂಬ ಫೋಲ್ಡಬಲ್ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಆದರೆ ಇಡೀ IT ಉದ್ಯಮವು ಸ್ಯಾಮ್‌ಸಂಗ್‌ ಫೋಲ್ಡಬಲ್‌ ಲ್ಯಾಪ್‌ಟಾಪ್‌ ಹೇಗಿರಲಿದೆ, ಆದರ ಕಾರ್ಯತಂತ್ರ ಹೇಗಿರಲಿದೆ ಎನ್ನುವ ಲೆಕ್ಕಾಚಾರದಲ್ಲಿದೆ. ಲ್ಯಾಪ್‌ಟಾಪ್‌ ವಲಯದಲ್ಲಿ ಸ್ಯಾಮ್‌ಸಂಗ್‌ನ ಫೋಲ್ಡಬಲ್‌ ಲ್ಯಾಪ್‌ಟಾಪ್‌ ಹೊಸ ಅಲೆಯನ್ನು ಸೃಷ್ಟಿಸುವ ಸಾದ್ಯತೆಯಿದೆ. ಇದರಿಂದ ಗಣನೀಯ ವ್ಯತ್ಯಾಸ ಸೃಷ್ಟಿಯಾಗುವ ನಿರೀಕ್ಷೆ ಕೂಡ ಇದೆ.

ಇನ್ನು ಈ ಲ್ಯಾಪ್‌ಟಾಪ್‌ನ OLED ಪ್ಯಾನೆಲ್‌ಗಳನ್ನು BOE ಟೆಕ್ನಾಲಜಿ ಗ್ರೂಪ್ ಪೂರೈಸಲಿದೆ ಎಂದು ನಿರೀಕ್ಷಿಸಲಾಗಿದೆ. ಇದರ ನಡುವೆ ಆಪಲ್ ಕಂಪೆನಿ ಕೂಡ 2026 ರಲ್ಲಿ ಫೋಲ್ಡಬಲ್‌ ಮ್ಯಾಕ್‌ಬುಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವಂದತಿಗಳಿವೆ.

ಇದರ ನಡುವೆ ಸ್ಯಾಮ್‌ಸಂಗ್‌ ಕಂಪೆನಿ ಹೊಸ ಗ್ಯಾಲಕ್ಸಿ ರಿಂಗ್‌ ಪರಿಚಯಿಸುವುದರ ಬಗ್ಗೆ ಕೂಡ ಸಾಕಷ್ಟು ವದಂತಿಗಳು ಹರಿದಾಡಿವೆ. ಅದರಂತೆ ಸ್ಯಾಮ್‌ಸಂಗ್‌ ಸ್ಮಾರ್ಟ್‌ ರಿಂಗ್‌ ಇದೇ ವರ್ಷದ ಅಂತಿಮ ದಿನಗಳಲ್ಲಿ ಬರಲಿದೆ ಎಂದು ಒಂದು ಕಡೆಯಾದರೆ, ಜನವರಿ 2024 ರ ಆರಂಭದ ದಿನಗಳಲ್ಲಿ ಬರಲಿದೆ ಎಂದು ಹೇಳಲಾಗಿದೆ. ಇದರ ನಡುವೆ ಗ್ಯಾಲಕ್ಸಿ ರಿಂಗ್ ಅನ್ನು 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದವರೆಗೆ ಪರಿಚಯಿಸುವುದಿಲ್ಲ ಎಂಬ ಸುದ್ದಿ ಇದೀಗ ಟೆಕ್‌ ವಲಯದಲ್ಲಿ ಹರಿದಾಡಲು ಶುರುಮಾಡಿದೆ.

ಸ್ಯಾಮ್‌ಸಂಗ್‌ ಕಂಪೆನಿ ಗ್ಯಾಲಕ್ಸಿ ಸ್ಮಾರ್ಟ್‌ ರಿಂಗ್‌ನ ಒಂದು ಮಾದರಿಯನ್ನು ಮಾತ್ರ ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದೆ. ಇದು ನಾಲ್ಕು ಗಾತ್ರಗಳಲ್ಲಿ ಬರುವ ನಿರೀಕ್ಷೆಯಿದ್ದು, ಬಿಡುಗಡೆ ಮಾಡಲು ಸ್ವಲ್ಪ ಸಮಯ ತೆಗೆದುಕೊಂಡರೂ ಸ್ಯಾಮ್‌ಸಂಗ್ ಶೀಘ್ರದಲ್ಲೇ ಲಾಂಚ್‌ ಡೇಟ್‌ ಘೋಷಿಸುವ ಸಾಧ್ಯತೆಯಿದೆ. ಇತ್ತೀಚಿನ ವರದಿಯ ಪ್ರಕಾರ, ಸ್ಯಾಮ್‌ಸಂಗ್‌ ಕಂಪೆನಿ ಹೊಸ ಗ್ಯಾಲಕ್ಸಿ Z ಫೋಲ್ಡ್‌ 6 ಜೊತೆಗೆ ಗ್ಯಾಲಕ್ಸಿ ರಿಂಗ್ ಬಿಡುಗಡೆ ಮಾಡಲು ಪ್ಲ್ಯಾನ್‌ ಮಾಡಿದೆ. ಅದರಂತೆ ಇದು ಆಗಸ್ಟ್, ಸೆಪ್ಟೆಂಬರ್, ಅಥವಾ ಅಕ್ಟೋಬರ್ 2024 ರಲ್ಲಿ ಆಗಮಿಸುವ ನಿರೀಕ್ಷೆಯಿದೆ. ಒಂದು ವೇಳೆ ಈ ಸಮಯದಲ್ಲಿ ಸ್ಮಾರ್ಟ್‌ ರಿಂಗ್‌ ಪರಿಚಯಿಸುವುದು ಸಾಧ್ಯವಾಗದಿದ್ದರೆ ಇದನ್ನು 2025 ರ ಆರಂಭದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ ಎಂದು ವರದಿಯಾಗಿದೆ.

Best Mobiles in India

English summary
Samsung is developing a slim foldable laptop with waterdrop hinge: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+