Samsung: ಫ್ರೀ.. ಫ್ರೀ.. ಫ್ರೀ..! ಈ ಸ್ಪರ್ಧೆಯಲ್ಲಿ ಭಾಗವಹಿಸಿ.. ಉಚಿತವಾಗಿ ಸ್ಮಾರ್ಟ್‌ವಾಚ್ ಗೆಲ್ಲಿ! ಎಲ್ಲಿ? ಹೇಗೆ?
ಉಚಿತವಾಗಿ ಸ್ಮಾರ್ಟ್‌ವಾಚ್ ಬೇಕಿದ್ರೆ, ಈ ಸ್ಪರ್ಧೆಯಲ್ಲಿ ಭಾಗವಹಿಸಿ! ಸ್ಯಾಮ್‌ಸಂಗ್‌ನಿಂದ ಉಚಿತವಾಗಿ ಸ್ಮಾಸ್ಮಾರ್ಟ್‌ವಾಚ್ ಸಿಗುತ್ತದೆ. ಹೌದು, ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ತನ್ನ ಗ್ರಾಹಕರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾವನ್ನು (Samsung Galaxy Watch Ultra) ಉಚಿತವಾಗಿ ನೀಡುತ್ತಿದೆ. ಸ್ಯಾಮ್‌ಸಂಗ್ ಕಂಪನಿಯು ತನ್ನ ವಾಕ್-ಎ-ಥಾನ್ ಇಂಡಿಯಾ (Walk-a-thon India) ಚಾಲೆಂಜ್‌ನ ಎರಡನೇ ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. 30 ದಿನಗಳ ಅಭಿಯಾನದ ಭಾಗವಾಗಿ, ಸ್ಯಾಮ್‌ಸಂಗ್ ಹೆಲ್ತ್ ಅಪ್ಲಿಕೇಶನ್ ಬಳಸುವವರಿಗೆ ಬಂಪರ್ ಆಫರ್ ಘೋಷಿಸಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ವಾಕ್-ಎ-ಥಾನ್ ಇಂಡಿಯಾ ಚಾಲೆಂಜ್ ಸ್ಪರ್ಧೆಯಲ್ಲಿ ಭಾಗವಹಿಸುವವರು ಸೀಮಿತ ಸಮಯದೊಳಗೆ ಕೆಲವು ಹಂತಗಳನ್ನು ಪೂರ್ಣಗೊಳಿಸಬೇಕು. ಜೊತೆಗೆ ತನ್ನ ಸಹ ಬಳಕೆದಾರರೊಂದಿಗೆ ಸ್ಪರ್ಧಿಸಬೇಕು. ನೀವು ಈ ಸವಾಲನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ನಿಮಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ಜೊತೆಗೆ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ನೀವು ಉಚಿತವಾಗಿ ಸ್ಮಾರ್ಟ್‌ವಾಚ್ ಪಡೆಯಲು ಬಯಸಿದರೆ, ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಯಾಮ್‌ಸಂಗ್‌ನ ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಆಸಕ್ತರು (ಬಳಕೆದಾರರು) ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಈಗಾಗಲೇ ಏಪ್ರಿಲ್ 21 ರಿಂದ ಪ್ರಾರಂಭ ಹಲವರು ಸವಾಲನ್ನು ಪ್ರಾರಂಭಿಸಿದ್ಧಾರೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ. ನೀವು ಮೇ 20 ರವರೆಗೆ (2025) ಒಂದು ತಿಂಗಳ ಕಾಲ ಈ ಸವಾಲು ಎದುರಿಸಬೇಕು. ಸ್ಯಾಮ್‌ಸಂಗ್ ಹೆಲ್ತ್ ಆಪ್ ಬಳಸಿ ತಮ್ಮ ದೈನಂದಿನ ಹೆಜ್ಜೆಗಳ ಎಣಿಕೆಯನ್ನು ಟ್ರ್ಯಾಕ್ ಮಾಡಬೇಕಾಗುತ್ತದೆ. ಈ ತಿಂಗಳಲ್ಲಿ 2 ಲಕ್ಷ ಹೆಜ್ಜೆಗಳನ್ನು ಪೂರ್ಣಗೊಳಿಸಿದ ಎಲ್ಲರೂ ಬಹುಮಾನ ನೀಡಲಾಗುವುದು ಎಂದು ಕಂಪನಿ ಹೇಳಿದೆ.
ಮೂವರು ಅದೃಷ್ಟಶಾಲಿ ವಿಜೇತರಿಗೆ ವಾಚ್ ಫ್ರೀ!
ಸ್ಯಾಮ್‌ಸಂಗ್ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರಲ್ಲಿ ಮೂವರು ಅದೃಷ್ಟಶಾಲಿ ವಿಜೇತರು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ವಾಚ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಅಲ್ಲದೆ, 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹೆಜ್ಜೆಗಳನ್ನು ಪೂರ್ಣಗೊಳಿಸುವ ಪ್ರತಿಯೊಬ್ಬರೂ ಈ ಗ್ಯಾಲಕ್ಸಿ ವಾಚ್ ಅಲ್ಟ್ರಾ ಖರೀದಿ ಮೇಲೆ ಶೇ.25 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಹೀಗೆ ಮಾಡಿ!
ಹಂತ 1: ನಿಮ್ಮ ಸ್ಯಾಮ್‌ಸಂಗ್ ಗ್ಯಾಲಕ್ಸಿ (Samsung Galaxy) ಫೋನಿನಲ್ಲಿ ಸ್ಯಾಮ್‌ಸಂಗ್ ಹೆಲ್ತ್ (Samsung Health) ಆಫ್ ಓಪನ್ ಮಾಡಿ. ಮತ್ತು Together ವಿಭಾಗಕ್ಕೆ ಹೋಗಬೇಕು.
ಹಂತ 2: ವಾಕ್-ಎ-ಥಾನ್ ಇಂಡಿಯಾ ಚಾಲೆಂಜ್ ಅನ್ನು ಆಯ್ಕೆ ಮಾಡಿ.
ಹಂತ 3: ಆಪ್‌ನಲ್ಲಿ ಉಲ್ಲೇಖಿಸಲಾದ ನಿಯಮಗಳನ್ನು ಅನುಸರಿಸಿ. ನೀವು 30 ದಿನಗಳ ಅವಧಿಯಲ್ಲಿ ಒಟ್ಟು 2 ಲಕ್ಷ ಹೆಜ್ಜೆಗಳನ್ನು ನಡೆಯಬೇಕಾಗುತ್ತದೆ.
ಹಂತ 4: ಲಕ್ಕಿ ಡ್ರಾದಲ್ಲಿ ಭಾಗವಹಿಸಲು, ನೀವು ಪೂರ್ಣಗೊಂಡ ಸ್ಕ್ರೀನ್‌ಶಾಟ್ ಸ್ಯಾಮ್‌ಸಂಗ್ ಸದಸ್ಯರ ಆಪ್‌ನಲ್ಲಿ #WalkathonIndia ಹ್ಯಾಶ್‌ಟ್ಯಾಗ್‌ನೊಂದಿಗೆ ಪೋಸ್ಟ್ ಮಾಡಬೇಕು.
ಹಂತ 5: ಈ ಸವಾಲನ್ನು ಪೂರ್ಣಗೊಳಿಸಿದ ಬಳಿಕ ಆಯ್ಕೆಯಾದ ಮೂವರಿಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ಗಡಿಯಾರವನ್ನು ಉಚಿತವಾಗಿ ನೀಡಲಾಗುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ವೈಶಿಷ್ಟ್ಯಗಳು
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ ಅಲ್ಟ್ರಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಇದು ಟೈಟಾನಿಯಂ ದರ್ಜೆಯ ಚೌಕಟ್ಟಿನೊಂದಿಗೆ ಬರುತ್ತದೆ. ಈ ವಾಚ್ 1.5 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 480 × 480 ಪಿಕ್ಸೆಲ್‌ಗಳ ರೆಸಲ್ಯೂಶನ್, 3000 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 7 ನಂತೆಯೇ ಪ್ರೊಸೆಸರ್, ಸ್ಟೋರೇಜ್ ಮತ್ತು ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಈ ವಾಚ್ 590mAh ಬ್ಯಾಟರಿಯೊಂದಿಗೆ ಬರುತ್ತದೆ. ಮತ್ತು WPC ಆಧಾರಿತ ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ವರ್ಕೌಟ್‌ಗಳನ್ನು ಟ್ರ್ಯಾಕ್ ಮಾಡಲು ಬಹು ಕ್ರೀಡಾ ಟೈಲ್, ಸೈಕ್ಲಿಂಗ್ ಕೇಂದ್ರಿತ FTP ಮೆಟ್ರಿಕ್, ವರ್ಕೌಟ್‌ಗಳಿಗಾಗಿ ತ್ವರಿತ ಬಟನ್, ರಾತ್ರಿ ಮೋಡ್ ಮತ್ತು ತುರ್ತು ಸೈರನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಒಟ್ಟಾರೆ, ಪ್ರಸ್ತುತ ಬಹುತೇಕರು ಸ್ಮಾರ್ಟ್ ಗ್ಯಾಜೆಟ್‌ಗಳನ್ನು ಹೆಚ್ಚು ಬಳಸುತ್ತಿದ್ದಾರೆ. ವಿಶೇಷವಾಗಿ ಸ್ಮಾರ್ಟ್ ವಾಚ್‌ಗಳು ವಿಶಿಷ್ಟವಾದ ಅಭಿಮಾನಿ ಬಳಗವನ್ನು ಹೊಂದಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಕಂಪನಿಗಳು ಹೊಸ ಮಾದರಿಯ ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಆದರೆ, ಸ್ಯಾಮ್‌ಸಂಗ್ ಸ್ವಲ್ಪ ವಿಭಿನ್ನವಾಗಿದೆ. ತನ್ನ ಉತ್ಪನ್ನಗಳ ಮಾರಾಟವನ್ನು ಹೆಚ್ಚಿಸಲು ಹೊಸ ಸ್ಪರ್ಧೆ ಆರಂಭಿಸಿದೆ. ಈ ಸ್ಪರ್ಧೆಯಲ್ಲಿ ವಿಜೇತರಿಗೆ ಉಚಿತ ಸ್ಮಾರ್ಟ್ ವಾಚ್ ನೀಡುತ್ತಿದೆ.


Click it and Unblock the Notifications








