ವಿಶ್ವದಲ್ಲಿಯೇ ಹೆಚ್ಚು ಸಾಮರ್ಥ್ಯದ 'ಎಸ್‌ಎಸ್‌ಡಿ' ರಿಲೀಸ್!..ತಲೆತಿರುಗುವಂತಿದೆ ಸ್ಟೋರೇಜ್ ಕೆಪಾಸಿಟಿ!!
2015 ರಲ್ಲಿ 16 ಟಿಬಿ ಸಾಮರ್ಥ್ಯದ ಪ್ರಪಂಚದ ಅತಿಚಿಕ್ಕ ''ಎಸ್‌ಎಸ್‌ಡಿ''ಯನ್ನು ಘೋಷಿಸಿದ್ದ ಸ್ಯಾಮ್‌ಸಂಗ್ ಇದೀಗ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.!!
ದಕ್ಷಿಣ ಕೋರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ 30.72 TB ಸಾಮರ್ಥ್ಯದ ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ)ಅನ್ನು ತಯಾರಿಸಿ ವಿಶ್ವದಾಖಲೆಯನ್ನು ನಿರ್ಮಿಸಿದೆ. 2015 ರಲ್ಲಿ 16 ಟಿಬಿ ಸಾಮರ್ಥ್ಯದ ಪ್ರಪಂಚದ ಅತಿಚಿಕ್ಕ ''ಎಸ್‌ಎಸ್‌ಡಿ''ಯನ್ನು ಘೋಷಿಸಿದ್ದ ಸ್ಯಾಮ್‌ಸಂಗ್ ಇದೀಗ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.!!

ಗಾತ್ರದಲ್ಲಿ ತುಂಬ ಚಿಕ್ಕದು, ಹಗುರ ಮತ್ತು ಅತ್ಯಂತ ವೇಗವಾಗಿ ಕಾರ್ಯ ನಿರ್ವಹಿಸುವ ಅತಿ ನೂತನ ಸ್ಯಾಮ್‌ಸಂಗ್ ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ)ಗೆ PM1643 ಎಂದು ಹೆಸರಿಡಲಾಗಿದೆ. ನೂತನ ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್ ಕೆಪಾಸಿಟಿ ತಲೆತಿರುಗುವಂತಿದೆ. ಹಾಗಾದರೆ ಈ ಫ್ಲಾಶ್‌ಡ್ರೈವ್‌ನ ಇನ್ನಿತರ ವಿಶೇಷತೆಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.!!

500 ದಿನಗಳ ತಡೆರಹಿತ ವೀಡಿಯೊ!!
ಸ್ಯಾಮ್‌ಸಂಗ್ ತಯಾರಿಸಿರುವ ನೂತನ 30.72 TB ಸಾಮರ್ಥ್ಯದ ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ)ನಲ್ಲಿ 500 ದಿನಗಳ ತಡೆರಹಿತ ವೀಡಿಯೊವನ್ನು ದಾಖಲಿಸಬಹುದು ಎಂದು ಹೇಳಲಾಗಿದೆ. ಇದು ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸ್ಟೋರೇಜ್ ಸಾಮರ್ಥ್ಯದ ಹೊಂದಿರುವ ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ) ಆಗಿದೆ.!!

ಅತಿ ಚಿಕ್ಕ ಮತ್ತು ಹೆಚ್ಚು ಸಾಮರ್ಥ್ಯ!!
2.5 ಇಂಚಿನ PM1643 ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ) ವಿಶ್ವದ ಅತಿ ಚಿಕ್ಕದಾದ ದೊಡ್ಡ ಸಾಮರ್ಥ್ಯದ ಶೇಖರಣಾ ಘಟಕವಾಗಿದೆ. ಕೆಲವು ವರ್ಷಗಳ ಹಿಂದೆ ಸೀಗೇಟ್ ಹೆಚ್ಚಿನ ಶಕ್ತಿಯ SSD ತಯಾರಿಸಿದ್ದರೂ ಕೂಡ ಅದು 3.5-ಇಂಚಿನ ದಪ್ಪ ಹೊಂದಿದೆ ಮತ್ತು ಕೇವಲ ಪ್ರದರ್ಶನಕ್ಕಾಗಿ ಮಾತ್ರ ತಯಾರಿಸಲಾಗಿದೆ.!!

ತಂತ್ರಜ್ಞಾನ ಯಾವುದು?
ವಿಶ್ವದಲ್ಲಿಯೇ ಅತ್ಯಂತ ಹೆಚ್ಚು ಸ್ಟೋರೇಜ್ ಸಾಮರ್ಥ್ಯದ ಎಸ್‌ಎಸ್‌ಡಿ ತಯಾರಿಕೆಯಲ್ಲಿ ಸ್ಯಾಮ್‌ಸಂಗ್ ಯಾವ ತಂತ್ರಜ್ಞಾನ ಬಳಸಿದೆ ಎಂಬುದು ಕುತೋಹಲ ಮೂಡಿಸಿದೆ. ವರದಿಗಳ ಪ್ರಕಾರ 3D NAND (V-NAND) ತಂತ್ರಜ್ಞಾನವನ್ನು ಸ್ಯಾಮ್‌ಸಂಗ್ ಬಳಸಿದಿ. ಹಾಗಾಗಿ, ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ತರಲಾಗಿದೆ ಎಂದು ಹೇಳಲಾಗಿದೆ.!!

1TB NANDನ 32 ಸ್ಟಿಕ್ಸ್?
ತಂತ್ರಜ್ಞಾನ ದೈತ್ಯ ಸ್ಯಾಮ್ಸಂಗ್ ಉತ್ಪಾದಿಸಿರುವ PM1643 ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್(ಎಸ್‌ಎಸ್‌ಡಿ) 1TB NANDನ 32 ಸ್ಟಿಕ್ಸ್ ಮತ್ತು 16 ಲೇಯರ್‌ಗಳಲ್ಲಿ 64GB V-NAND ಚಿಪ್‌ಗಳನ್ನು ಒಳಗೊಂಡಿದೆ ಎನ್ನಲಾಗಿದೆ. ಆದರೆ, ಈ ವರೆಗೂ ಸ್ಯಾಮ್‌ಸಂಗ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ.!!

ವೇಗಕ್ಕೆ ಸಾಟಿಯಿಲ್ಲ.!!
2.5 ಇಂಚಿನ PM1643 ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್ 2,100 MB/s ಓದುವ ವೇಗವನ್ನು ಹೊಂದಿದ್ದರೆ, 1,700 MB/s ಬರೆಯುವ ವೇಗವನ್ನು ಸಾಧಿಸಿದೆ. ಇದು ಗ್ರಾಹಕರ ದರ್ಜೆಯ ಸಾಮಾನ್ಯ ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್ಗಳಲ್ಲಿ ಇರುವ ಸಾಮರ್ಥ್ಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎನ್ನಬಹುದು.!!


ಬೆಲೆ ಮತ್ತು ಇತರೆ!!
ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್ನ ಸಂಪೂರ್ಣ ರೆಕಾರ್ಡಿಂಗ್‌ಗಾಗಿ ಸ್ಯಾಮ್ಸಂಗ್ ಐದು ವರ್ಷ ಖಾತರಿ ನೀಡಿದೆ. ಆದೆ, ವಿಶ್ವದ ಅತಿದೊಡ್ಡ ಫ್ಲ್ಯಾಶ್ ಬೇಸ್ಡ್ ಸ್ಟೋರೇಜ್ ಸ್ಯಾಮ್‌ಸಂಗ್ PM1643 ಬೆಲೆಯನ್ನು ಮತ್ತು ಮಾರಾಟದ ಬಗ್ಗೆ ಯಾವುದೇ ಮಾಹಿತಿಯನ್ನು ಸ್ಯಾಮ್‌ಸಂಗ್ ಈ ವರೆಗೂ ಬಿಡುಗಡೆ ಮಾಡಿಲ್ಲ.!!


Click it and Unblock the Notifications








