ಮಾರುಕಟ್ಟೆಗೆ ಬರಲಿದೆ ಗ್ಯಾಲೆಕ್ಸಿ ಆನ್ 7 ಪ್ರೈಮ್ ಸ್ಮಾರ್ಟ್ ಫೋನ್..!
ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು ಸಾಕಷ್ಟು ಖ್ಯಾತಿಯನ್ನು ಗಳಸಿಕೊಂಡಿದೆ. ಇದೇ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಆನ್ ಸರಣಿಯ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.

ಸ್ಯಾಮ್ ಸಂಗ್ ಭಾರತೀಯ ಮಾರುಕಟ್ಟೆಗೆ ಗ್ಯಾಲೆಕ್ಸಿ ಆನ್ 7 ಪ್ರೈಮ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇದು ಅಮೆಜಾನ್ .ಕಾಂ ನಲ್ಲಿ ಮಾತ್ರವೇ ಎಕ್ಸ್ ಕ್ಲೂಸಿವ್ ಆಗಿ ದೊರೆಯಲಿದೆ ಎನ್ನಲಾಗಿದೆ. ಈ ಸ್ಮಾರ್ಟ ಪೋನ್ 15000ದ ಅಸುಪಾಸಿನಲ್ಲಿ ದೊರೆಯಲಿದೆ.
ಈ ಸ್ಮಾರ್ಟ್ ಫೋಣ್ 3GB RAM ಮತ್ತು 32 GB ಇಂಟರ್ನಲ್ ಮೆಮೊರಿಯ ಒಂದು ಆವೃತ್ತಿ ಮತ್ತು 4GB RAM ಮತ್ತು 64 GB RAM ಆವೃತ್ತಿಯ ಮತ್ತೊಂದು ಫೋನ್ ಸಹ ಮಾರುಕಟ್ಟೆಯಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಫೋನ್ ಹಿಂಭಾಗ ಮತ್ತು ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಕಾಣಬಹುದಾಗಿದೆ.
5.5 FHD ಡಿಸ್ ಪ್ಲೇಯನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಕಾಣಬಹುದಾಗಿದೆ. ಇದಲ್ಲದೇ 8mm ಮೆಟಲ್ ಯೂನಿ ಬಾಡಿ ಡಿಸೈನ್ ಅನ್ನು ಈ ಫೋನ್ ಹೊಂದಿದೆ. ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗಳು ಇದರಿಂದ ಸಾಕಷ್ಟು ಸ್ಪರ್ಧೆಯನ್ನು ಎದುರಿಸಲಿದೆ ಎನ್ನಲಾಗಿದೆ.


Click it and Unblock the Notifications








