ಸ್ಯಾಮ್‌ಸಂಗ್‌ನಿಂದ ಕ್ವಾಡ್‌ಕೋರ್‌ ಎಲ್‌ಇಡಿ ಟಿವಿ

Written By:

ಹೊಸ ಸ್ಮಾರ್ಟ್‌ ಎಲ್‌ಇಡಿ ಮತ್ತು ಪ್ಲಾಸ್ಮಾ ಟಿವಿ ಸೇರಿದಂತೆ 20 ಮಾದರಿ ಟಿವಿಗಳನ್ನು ಸ್ಯಾಮ್‌ಸಂಗ್‌ ಮಾರುಕಟ್ಟೆಗೆ ಪರಿಚಯಿಸಿದೆ. ಸ್ಯಾಮ್‌ಸಂಗ್‌ನ ಹಾಲಿ ಸ್ಮಾರ್ಟ್‌ ಟಿವಿ ಸರಣಿ 32 ರಿಂದ 65 ಇಂಚುಗಳ ಪರದೆ ಗಾತ್ರದಲ್ಲಿ ಲಭ್ಯವಿದ್ದು, 37,900 ರಿಂದ 3,67,500 ರೂ.ಗಳಲ್ಲಿ ದೊರೆಯಲಿದೆ.

ಸ್ಯಾಮ್‌ಸಂಗ್‌ನಿಂದ ಕ್ವಾಡ್‌ಕೋರ್‌ ಎಲ್‌ಇಡಿ ಟಿವಿ

ಮೊದಲ ಬಾರಿಗೆ ಬಿಡುಗಡೆ ಮಾಡಲಾಗಿರುವ ಸ್ಯಾಮ್‌ಸಂಗ್‌ ಅಅಲ್ಟ್ರಾ ಹೈಡೆಫಿನೆಷನ್‌ ಟೆಕ್ನಾಲಜಿ ಜೊತೆಗೆ 'ಒನ್‌ ಕನೆಕ್ಟ್' ವಿಶೇಷತೆ ಹೊಂದಿದ್ದು ಇದರಿಂದ ಒಂದು ಕೇಬಲ್ ಬಳಸಿ ಟಿವಿ ವೀಕ್ಷಿಸಬಹುದಾಗಿದೆ.

ಹೊಸದಾಗಿ ಬಂದಿರುವ ಎಲ್‌ಇಡಿ ಟಿವಿ ಇಂಟರ್‌ನೆಟ್‌ ಜೊತೆಗೆ 750 ಜಾಗತೀಕ ಮತ್ತು ಭಾರತದ ಅಪ್ಲಿಕೇಶನ್‌ ಒಳಗೊಂಡಿದೆ. 43, 51, 64 ಇಂಚುಗಳ ಪರದೆ ಗಾತ್ರದಲ್ಲಿರುವ ಐದು ಹೊಸ ಬಗೆಯ ಪ್ಲಾಸ್ಮಾ ಟಿವಿಗಳನ್ನು 8ರ ಸರಣಿಯಲ್ಲಿ ಬಿಡುಗಡೆ ಮಾಡಿದ್ದು, ಇವುಗಳ ಬೆಲೆ 35,500ರಿಂದ 2,09,900 ಇದ್ದು ರಿಟೇಲ್‌ ಶಾಪ್‌ಗಳಲ್ಲಿ ಖರೀದಿಸಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot