Home
ಸುದ್ದಿಜಾಲ

ಭಾರತದಲ್ಲಿ ಸ್ಯಾಮ್‌ಸಂಗ್‌ ವಿಷನ್ 4K UHD ಸ್ಮಾರ್ಟ್‌ಟಿವಿ ಅನಾವರಣ; ಬೆಲೆ ಎಷ್ಟು?

ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಕಂಪೆನಿಯ ಟಿವಿಗಳಿಗೆ ಭಾರಿ ಕ್ರೇಜ್‌ ಇದೆ. ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ಟಿವಿಗಳ ಮೂಲಕ ಟೆಕ್‌ ವಲಯದಲ್ಲಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ಭಾರತದಲ್ಲಿ ಹೊಸ ಸ್ಯಾಮ್‌ಸಂಗ್‌ ಕ್ರಿಸ್ಟಲ್‌ ವಿಷನ್ 4K UHDಟಿವಿಗಳನ್ನು ಬಿಡುಗಡೆ ಮಾಡಿದೆ.

ಹೌದು, ಸ್ಯಾಮ್‌ಸಂಗ್‌ ವಿಷನ್ 4K UHD ಟಿವಿಯನ್ನು ಭಾರತದಲ್ಲಿ ಪರಿಚಯಿಸಲಾಗಿದೆ. ಈ ಸ್ಮಾರ್ಟ್‌ಟಿವಿಗಳು ವೀಡಿಯೊ ಕಾಲಿಂಗ್‌ ಸಪೋರ್ಟ್‌, ಮಲ್ಟಿ ವಾಯ್ಸ್‌ ಅಸಿಸ್ಟೆಂಟ್‌ ಸಾಮರ್ಥ್ಯಗಳು, ಇಂಟಿಗ್ರೇಟೆಡ್‌ ಐಒಟಿ ಹಬ್‌ ಅನ್ನು ಕೂಡ ಒಳಗೊಂಡಿದೆ. ಇದಲ್ಲದೆ ಹಲವು ಆಕರ್ಷಕ ಗೇಮಿಂಗ್‌ ಫೀಚರ್ಸ್‌ಗಳನ್ನು ಒದಗಿಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಟಿವಿ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಸ್ಯಾಮ್‌ಸಂಗ್‌ ವಿಷನ್ 4K UHD ಸ್ಮಾರ್ಟ್‌ಟಿವಿ ಅನಾವರಣ; ಬೆಲೆ ಎಷ್ಟು?

ಸ್ಯಾಮ್‌ಸಂಗ್‌ ವಿಷನ್ 4K UHD ಸ್ಮಾರ್ಟ್‌ಟಿವಿ ಫೀಚರ್ಸ್‌
ಸ್ಯಾಮ್‌ಸಂಗ್‌ ವಿಷನ್ 4K UHD ಸ್ಮಾರ್ಟ್‌ಟಿವಿ 43-ಇಂಚಿನ, 55-ಇಂಚಿನ ಮತ್ತು 65-ಇಂಚಿನ ಆಯ್ಕೆಗಳಲ್ಲಿ ಬರಲಿದೆ. ಇನ್ನು ಈ ಸ್ಮಾರ್ಟ್‌ಟಿವಿ ವೀಡಿಯೊ ಕಾಲಿಂಗ್‌ ಸಪೋರ್ಟ್‌ ಹೊಂದಿದ್ದು, ಗೂಗಲ್‌ ಮೀಟ್‌ನಂತಹ ಅಪ್ಲಿಕೇಶನ್‌ಗಳಿಗೆ ಬೆಂಬಲಿಸಲಿದೆ. ಇದರಿಂದ ನೀವು ಸ್ಮಾರ್ಟ್‌ಟಿವಿ ಮೂಲಕವೇ ವೀಡಿಯೊ ಕರೆಯನ್ನು ಮಾಡುವುದಕ್ಕೆ ಸಾದ್ಯವಾಗಲಿದೆ. ಆದರೆ ಇದಕ್ಕಾಗಿ ನೀವು ಪ್ರತ್ಯೇಕ ವೆಬ್‌ ಕ್ಯಾಮೆರಾವನ್ನು ಖರೀದಿಸಬೇಕಾಗುತ್ತದೆ.

ಇನ್ನು ಸ್ಮಾರ್ಟ್‌ಟಿವಿ ಹಲವು ಒಟಿಟಿ ಅಪ್ಲಿಕೇಶನ್‌ಗಳನ್ನು ಬೆಂಬಲಿಸಲಿದೆ. ಅದರಂತೆ ಸ್ಮಾರ್ಟ್‌ಟಿವಿಯಲ್ಲಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್, ಯುಟ್ಯೂಬ್‌ನಂತಹ ಅಪ್ಲಿಕೇಶನ್‌ಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ TV OS ಬದಲಿಗೆ ಸ್ಯಾಮ್‌ಸಂಗ್‌ನ ಟೈಜನ್‌ ಆಪರೇಟಿಂಗ್ ಸಿಸ್ಟಮ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಸ್ಮಾರ್ಟ್‌ಟಿವಿಯು ಮಲ್ಟಿ ವಾಯ್ಸ್‌ ಅಸಿಸ್ಟೆಂಟ್‌ಗಳನ್ನು ಬೆಂಬಲಿಸಲಿದೆ. ಇದರಿಂದ ನೀವು ವಾಯ್ಸ್‌ ಕಮಾಂಡ್‌ಗಳ ಮೂಲಕವೇ ಟಿವಿಯಲ್ಲಿ ಕಂಟೆಂಟ್‌ ಅನ್ನು ಸರ್ಚ್‌ ಮಾಡಬಹುದಾಗಿದೆ.

ಇದಲ್ಲದೆ ಸ್ಮಾರ್ಟ್‌ಟಿವಿಯು ಸ್ಪೀಡ್‌ ಫ್ರೇಮ್ ಟ್ರಾನ್ಸಿಷನ್ಸ್ ನಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ. ಜೊತೆಗೆ ಲೋ ಲೇಟೆನ್ಸಿಗಾಗಿ ಆಟೋ ಗೇಮ್ ಮೋಡ್ ಮತ್ತು ಮೋಷನ್ ಎಕ್ಸ್‌ಸೆಲೇಟರ್ ನಂತಹ ಫಿಚರ್ಸ್‌ಗಳನ್ನು ಹೊಂದಿದೆ. ಇದಲ್ಲದೆ ಸ್ಮಾರ್ಟ್ ಥಿಂಗ್ಸ್ ಫೀಚರ್ಸ್‌ ಬೆಂಬಲವನ್ನು ಹೊಂದಿದೆ. ಇನ್ನು ನಿಮ್ಮ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಕಂಟ್ರೋಲ್‌ ಮಾಡುವುದಕ್ಕೆ ಅನುಮತಿಸಲಿದೆ. ಇನ್ನು ಸ್ಮಾರ್ಟ್‌ಟಿವಿ 20W ಸೌಂಡ್ ಔಟ್‌ಪುಟ್ ನೀಡುತ್ತದೆ. ಇದರಿಂದ ಸ್ಮಾರ್ಟ್‌ಟಿವಿ ಪ್ರಿಯರಿಗೆ ಅತ್ಯುತ್ತಮ ಸೌಂಡ್‌ ಸಿಸ್ಟಂ ಅನುಭವ ದೊರೆಯಲಿದೆ.

ಈ ಸ್ಮಾರ್ಟ್‌ಟಿವಿಯ ರಿಮೋಟ್‌ ಸೋಲರ್ ಮೂಲಕ ಕಾರ್ಯನಿರ್ವಹಿಸಲಿದೆ. ಒಬ್ಬರು ಬಿಸಾಡಬಹುದಾದ ಬ್ಯಾಟರಿಗಳನ್ನು ಬಳಸುವ ಅಗತ್ಯವಿಲ್ಲ. ಏಕೆಂದರೆ ಕೋಶಗಳಿಗೆ ಪವರ್‌ ನೀಡಲು ರಿಮೋಟ್ ಹಿಂಭಾಗದಲ್ಲಿ ಸೋಲಾರ್‌ ಪ್ಯಾನಲ್‌ನೊಂದಿಗೆ ಬರುತ್ತದೆ. ಇದಲ್ಲದೆ ಸ್ಮಾರ್ಟ್‌ಟಿವಿಗೆ ಬೇಕಾದರ ವೆಬ್ ಕ್ಯಾಮೆರಾದ ಬೆಲೆ 500 ರೂ.ಗಳಿಂದ ಪ್ರಾರಂಭವಾಗಲಿದ್ದು, 9,000ರೂ. ತನಕ ಖರೀದಿಸಬಹುದಾಗಿದೆ. ಇದರಲ್ಲಿ ನಿಮ್ಮ ಬಜೆಟ್ ಮತ್ತು ಫೀಚರ್ಸ್‌ಗಳನ್ನು ಗಮನದಲ್ಲಿಟ್ಟುಕೊಂಡು ಯಾವುದನ್ನಾದರೂ ಖರೀದಿಸಬಹುದಾಗಿದೆ.

ಸ್ಯಾಮ್‌ಸಂಗ್‌ ವಿಷನ್ 4K UHD ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಸ್ಯಾಮ್‌ಸಂಗ್‌ ವಿಷನ್ 4K UHD ಸ್ಮಾರ್ಟ್‌ಟಿವಿಯಲ್ಲಿ 43 ಇಂಚಿನ ಆಯ್ಕೆಯು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 31,490ರೂ.ಬೆಲೆಗೆ ಬರಲಿದೆ. ಆದರೆ 55 ಇಂಚಿನ 4K ಸ್ಮಾರ್ಟ್ ಟಿವಿ ರೂಪಾಂತರದ ಬೆಲೆ 46,990ರೂ. ಆಗಿದೆ. ಇದರ 65 ಇಂಚಿನ ಮಾದರಿಯನ್ನು 71,990 ರೂ. ಬೆಲೆಗೆ ಖರೀದಿಸಬಹುದಾಗಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿಯು ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀಡಂ ಸೇಲ್ ಪ್ರಯುಕ್ತ ರಿಯಾಯಿತಿಯಲ್ಲಿ ಕೂಡ ಲಭ್ಯವಾಗಲಿದೆ. ಇದಲ್ಲದೆ ನೀವು ಬ್ಯಾಂಕ್ ಕಾರ್ಡ್‌ಗಳಲ್ಲಿ ಕೆಲವು ರಿಯಾಯಿತಿ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Samsung launches 4K TVs with solar remote; Price details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+