ಟಾಪ್ ಎಂಡ್ ಸ್ಮಾರ್ಟ್ ಫೋನಿನಲ್ಲಿ ಅಳವಡಿಸುವ ಕ್ಯಾಮೆರಾ ಬಿಡುಗಡೆ ಮಾಡಿದ ಸ್ಯಾಮ್ ಸಂಗ್..!
ಕೋರಿಯಾ ಮೂಲದ ಟೆಕ್ ದೈತ್ಯ ಸ್ಯಾಮ್ ಸಂಗ್ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, 16MP ISOCELL ಪ್ಲಸ್ ಮತ್ತು ಪ್ಲೇ ಇಮೇಜ್ ಸೆಲ್ಯೂಷನ್ ವೊಂದನ್ನು ಅಭಿವೃದ್ಧಿಪಡಿಸಿದ್ದು, ಇದು ಸ್ಮಾರ್ಟ್ ಫೋನ್ ಇತಿಹಾಸದಲ್ಲಿಯೇ ಭಾರೀ ಸದ್ದು ಮಾಡಲಿದೆ. ಈ ಹೊಸ ಕ್ಯಾಮೆರಾವನ್ನು ಸ್ಮಾರ್ಟ್ ಫೋನ್ ಸೇರಿದಂತೆ ಇತರೆ ಡಿವೈಸ್ ಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದರೊಂದಿಗೆ ಮಾಡ್ಯೂಯಲ್ ಲೆವೆಲ್ ಸೆನ್ಸಾರ್ ಅನ್ನು ನೀಡಲಾಗಿದ್ದು, ಹೊಸ ಮಾದರಿಯದ್ದಾಗಿದೆ. ಮುಂದಿನ ಸ್ಯಾಮ್ ಸಂಗ್ ಡಿವೈಸ್ ಗಳಲ್ಲಿ ಇದೇ ಕ್ಯಾಮೆರಾ ಕಾಣಿಸಿಕೊಳ್ಳಲಿದ ಎನ್ನಲಾಗಿದೆ. ಇದನ್ನು ಅಭಿವೃದ್ಧಿಪಡಿಸಲು ಸ್ಯಾಮ್ ಸಂಗ್ ಸಾಕಷ್ಟು ಶ್ರಮವಹಿಸಿದೆ ಎನ್ನಲಾಗಿದೆ. ಇದರಿಂದಾಗಿ ಕ್ಯಾಮೆರಾ ವಿಭಾಗವು ಇನ್ನಷ್ಟು ಶಕ್ತವಾಗಲಿದೆ.
ಇದು ಸೆಲ್ಪೀ ಕ್ಯಾಮೆರಾಗಳಿಗೆ ಹೇಳಿ ಮಾಡಿಸಿದಂತೆ ಇದೆ ಎನ್ನಲಾಗಿದೆ. ಇದು ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ಶಕ್ತವಾಗಿದೆ. ಆಟೋಫೋಕಸ್ ಇದ್ದು, ಬಳಕೆದಾರರಿಗೆ ಉತ್ತಮ ಔಟ್ ಪುಟ್ ನೀಡಲಿದ. ಇದಲ್ಲದೇ ಸ್ಯಾಮ್ ಸಂಗ್ ತನ್ನ ಡಿವೈಸ್ ಗಳಲ್ಲಿ ಇದನ್ನು ಬಳಸಿಕೊಳ್ಳಲಿದೆ ಎನ್ನಲಾಗಿದೆ.
ಈ ಹೊಸ ಕ್ಯಾಮೆರಾ ಸೆಲ್ಯೂಷನ್ ಅನ್ನು ಇತರೆ ಕಂಪನಿಗಳಿಗೂ ನೀಡಲು ಸ್ಯಾಮ್ ಸಂಗ್ ಮುಂದಾಗಿದೆ. ಇದಲ್ಲದೇ ನೂತನವಾಗಿ ಲಾಂಚ್ ಆಗಲಿರುವ ತನ್ನ ಸ್ಮಾರ್ಟ್ ಫೋನ್ ಗಳಲ್ಲಿಯೂ ಅಳವಡಿಸಲಿದೆ ಎನ್ನಲಾಗಿದೆ. SM-N9500 ಮತ್ತು SM-N9508ನಲ್ಲಿ ನೀಡಲಿದೆ. ಇದು ಸ್ಮಾರ್ಟ್ ಪೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡಲಿದೆ.
ಈಗಾಗಲೇ ಈ ಹೊಸ ಮಾದರಿಯನ್ನು ಸ್ಯಾಮ್ ಸಂಗ್ ಅಭಿವೃದ್ಧಿ ಪಡಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಕ್ಯಾಮೆರಾ ಆದ್ಯತೆಯೂ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಟಾಪ್ ಎಂಡ್ ಕಂಪನಿಗಳಿಗೆ ಸೆಡ್ಡು ಹೊಡೆಯಲು ಇದು ಸಹಾಯವನ್ನು ಮಾಡಲಿದೆ.


Click it and Unblock the Notifications








