Home
ಸುದ್ದಿಜಾಲ

24,900 ರುಪಾಯಿ ಹೊಸ ಸ್ಮಾರ್ಟ್ ಟಿವಿಯನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ ಸ್ಯಾಮ್ ಸಂಗ್

By Gizbot Bureau

32 ಇಂಚಿನ ಸ್ಕ್ರೀನ್ ಸೈಜ್ ನಿಂದ ಹಿಡಿದು 82 ಇಂಚಿನ ಸ್ಕ್ರೀನ್ ಸೈಜ್ ವರೆಗೆ ಸ್ಯಾಮ್ ಸಂಗ್ ನ ಟಿವಿಯ ರೇಂಜ್ ಇದೀಗ ವಿಸ್ತಾರವಾಗಿದ್ದು 8 ಪ್ರಮುಖ ಮಾಡೆಲ್ ಗಳನ್ನು ಸಂಸ್ಥೆ ಬಿಡುಗಡೆಗೊಳಿಸಿದೆ. ಈ ಸ್ಮಾರ್ಟ್ ಟಿವಿಗಳ ಆರಂಭಿಕ ಬೆಲೆ ರುಪಾಯಿ 24,900 ಆಗಿದೆ ಮತ್ತು 15 ಲಕ್ಷದ ವರೆಗೂ ಕೂಡ ಇದೆ. ಯುವಿ, ಶಿಯೋಮಿ, ಟಿಸಿಎಲ್ ಮತ್ತು ಇತರೆ ಸಂಸ್ಥೆಗಳಿಗೆ ಇದು ನಡುಕ ಉಂಟು ಮಾಡಿದೆ.

ಕ್ಯಾಂಪೇನಿನ ಅಡಿಯಲ್ಲಿ ನಿರ್ಮಾಣ:

ಕ್ಯಾಂಪೇನಿನ ಅಡಿಯಲ್ಲಿ ನಿರ್ಮಾಣ:

ಸ್ಯಾಮ್ ಸಂಗ್ ಹೇಳುವ ಪ್ರಕಾರ ಈ ಟಿವಿಗಳು ಸಾಕಷ್ಟು ಲಾಭವನ್ನು ನೀಡಲಿದೆ. ಪರ್ಸನಲ್ ಕಂಪ್ಯೂಟರ್, ಮ್ಯೂಸಿಕ್ ಸಿಸ್ಟಮ್, ಹೋಮ್ ಕ್ಲೌಡ್, ಲೈವ್ ಕಾಸ್ಟ್ ಮತ್ತು ಟು-ವೇ ಶೇರಿಂಗ್ ಸೇರಿದಂತೆ ಹಲವು ಲಾಭಗಳಿಗೆ ಇದು ಅನುಕೂಲ ಮಾಡಿಕೊಡುತ್ತದೆ. ಕಂಪೆನಿಯ "ಅನ್ಬಾಕ್ಸ್ ಮ್ಯಾಜಿಕ್ ಎವರಿ ಡೇ" ಕ್ಯಾಂಪೇನಿನ ಅಡಿಯಲ್ಲಿ ಕಂಪೆನಿಯು ಇವುಗಳನ್ನು ಬಿಡುಗಡೆಗೊಳಿಸಿದೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಈ ಲಾಭಗಳೆಲ್ಲವೂ ಸಿಗಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.

ಖರೀದಿಗೆ ಲಭ್ಯ:

ಖರೀದಿಗೆ ಲಭ್ಯ:

ಸ್ಯಾಮ್ ಸಂಗ್ ನ ಸ್ಮಾರ್ಟ್ ಪ್ಲಾಝಾಗಳಲ್ಲಿ ಮತ್ತು ಪ್ರಮುಖ ಎಲೆಕ್ಟ್ರಾನಿಕ್ ಸ್ಟೋರ್ ಗಳಲ್ಲಿ ಈಗಾಗಲೇ ಖರೀದಿಗೆ ಈ ಸ್ಮಾರ್ಟ್ ಟಿವಿಗಳು ಲಭ್ಯವಿದೆ.

ಮನೆಯಿಂದ ವರ್ಕ್ ಪಿಸಿ ಆಕ್ಸಿಸ್:

32 ಇಂಚಿನ ಮಾಡೆಲ್ ನಲ್ಲಿ ಹೆಚ್ ಡಿ ರೆಸಲ್ಯೂಷನ್ ಇದೆ, 82 ಇಂಚಿನ ನದ್ದಲ್ಲಿ 4ಕೆ ಪನಲ್ ಆನ್ ಬೋರ್ಡ್ ನಲ್ಲಿ ಸಿಗುತ್ತದೆ. ಬಳಕೆದಾರರು ತಮ್ಮ ಟಿವಿಯನ್ನು ಕಂಪ್ಯೂಟರ್ ಆಗಿ ಕೂಡ ಬದಲಿಸಿಕೊಳ್ಳಲು ಅವಕಾಶವಿದ್ದು ಸಣ್ಣಪುಟ್ಟ ಡಾಕ್ಯುಮೆಂಟ್ ಕಲೆಸಗಳಿಗೆ ಮತ್ತು ಕೆಲಸವನ್ನು ಮನೆಯಿಂದಲೇ ಮಾಡುವುದಕ್ಕೆ ಇದು ಅವಕಾಶ ನೀಡುತ್ತದೆ. ಲ್ಯಾಪ್ ಟಾಪ್ ಸ್ಕ್ರೀನ್ ನ್ನು ಟಿವಿ ಡಿಸ್ಪ್ಲೇಯಲ್ಲೇ ನೋಡುವುದಕ್ಕೆ ಸಾಧ್ಯವಾಗುತ್ತದೆ. ಟಿವಿ ಮೂಲಕ ನಿಮ್ಮ ವರ್ಕ್ ಪಿಸಿಯನ್ನು ಮನೆಯಿಂದಲೇ ನೋಡುವುದಕ್ಕೆ ಸಾಧ್ಯವಾಗುತ್ತದೆ.

ವರ್ಚುವಲ್ ಮ್ಯೂಸಿಕ್ ಸಿಸ್ಟಮ್:

ವರ್ಚುವಲ್ ಮ್ಯೂಸಿಕ್ ಸಿಸ್ಟಮ್:

ಸ್ಯಾಮ್ ಸಂಗ್ ತಿಳಿಸುವ ಪ್ರಕಾರ ಟಿವಿಯನ್ನು ನೀವು ವರ್ಚುವಲ್ ಮ್ಯೂಸಿಕ್ ಸಿಸ್ಟಮ್ ಆಗಿ ಕೂಡ ಬದಲಿಸಿಕೊಳ್ಳುವುದಕ್ಕೆ ಅವಕಾಶವಿದೆ. ಎಕ್ಸ್ಟರ್ನಲ್ ಸ್ಪೀಕರ್ ಬಳಸಿ ಆಡಿಯೋ/ವೀಡಿಯೋ ಅನುಭವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಕೂಡ ಇದು ಅವಕಾಶ ನೀಡುತ್ತದೆ.

ಸುಲಭದ ಸಿನ್ಕ್ರನೈಜೇಷನ್:

ಡಾಟಾವನ್ನು ಕ್ಲೌಡ್ ನಿಂದ ಆಕ್ಸಿಸ್ ಮಾಡುವುದಕ್ಕೂ ಕೂಡ ಟಿವಿಯಲ್ಲಿ ಅವಕಾಶವಿದೆ ಎಂದು ಸ್ಯಾಮ್ ಸಂಗ್ ತಿಳಿಸಿದೆ. ಯುಎಸ್ ಬಿ ಡ್ರೈವ್ ಮೂಲಕ ನಿಮ್ಮ ಸ್ಮಾರ್ಟ್ ಫೋನ್ ನ್ನು ಕೂಡ ಕನೆಕ್ಟ್ ಮಾಡಿಕೊಳ್ಳಬಹುದು ಮತ್ತು ಚಿತ್ರಗಳನ್ನು, ವೀಡಿಯೋಗಳನ್ನು ದೊಡ್ಡ್ ಸ್ಕ್ರೀನಿನಲ್ಲಿ ನೋಡುವುದಕ್ಕೆ ಸಾಧ್ಯವಿದೆ.ಒಮ್ಮೆ ಟಿವಿ ಮತ್ತು ಹ್ಯಾಂಡ್ ಸೆಟ್ ಎರಡೂ ಕೂಡ ಸಿನ್ಕ್ರನೈಜ್ ಆದರೆ ಮುಂದಿನ ಬಾರಿ ಸ್ವಯಂಚಾಲಿತವಾಗಿ ಎರಡೂ ಕನೆಕ್ಟ್ ಆಗುತ್ತವೆ.

ರಿಮೋಟ್ ಏರಿಯಾ ಕನೆಕ್ಷನ್:

ರಿಮೋಟ್ ಏರಿಯಾ ಕನೆಕ್ಷನ್:

ಸ್ಯಾಮ್ ಸಂಗ್ ಸ್ಟ್ರಿಮಿಂಗ್ ನ್ನು ಮತ್ತಷ್ಟು ಸುಲಭಗೊಳಿಸಿದ್ದು ಲೈವ್ ಕಾಸ್ಟ್ ಫೀಚರ್ ನ್ನು ಅಳವಡಿಸಿದೆ. ಇದರ ಮೂಲಕ ರಿಮೋಟ್ ಏರಿಯಾದಲ್ಲೂ ಕೂಡ ಅಂತರ್ಜಾಲ ಬಳಸಿ ಟಿವಿಯ ಲೈವ್ ಸ್ಟ್ರೀಮ್ ನಡೆಸಬಹುದು.

ಇತರೆ ಫೀಚರ್:

ಇತರೆ ಫೀಚರ್:

ಸ್ಯಾಮ್ ಸಂಗ್ ಸ್ಮಾರ್ಟ್ ಹಬ್ ಮತ್ತು ಟುವೇ ಶೇರಿಂಗ್ ಕೂಡ ಈ ಟಿವಿಗಳಲ್ಲಿ ಲಭ್ಯವಿದೆ. ಇವೆರಡೂ ಕೂಡ ಶೇರಿಂಗ್ ನ್ನು ಮತ್ತಷ್ಟು ಸರಳಗೊಳಿಸಿವೆ ಮತ್ತು ಲೈವ್ ಟಿವಿ ಆಕ್ಸಿಸ್, ಆಪ್ಸ್ ಮತ್ತು ಇತರೆ ಕಟೆಂಟ್ ಗಳಿಗೆ ವಿಭಿನ್ನ ಸೋರ್ಸ್ ಗಳಿಂದ ಆಕ್ಸಿಸ್ ಇದರಲ್ಲಿ ಸರಳವಾಗಿದೆ.

Best Mobiles in India

English summary
Samsung launches new smart TVs in India at a starting price of Rs 24,900
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+