ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮುಂಚೂಣಿ ಏಕೆ?
ಭಾರತದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರೇನೋ ಹೆಚ್ಚಾಗಿದ್ದಾರೆ. ಆದರೆ ಇಂದು ಮೊಬೈಲ್ ಮಾರುಕಟ್ಟೆಗೆ ವಾರಕ್ಕೊಂದು ಹೊಸ ಫೋನ್‌ಗಳೂ ಧುಮುಕುತ್ತಿದ್ದು, ಯಾವ ಮೊಬೈಲ್ ಕೊಂಡರೆ ಉತ್ತಮ ಎಂಬುದೇ ತಿಳಿಯುತ್ತಿಲ್ಲ. ಇಂತಹ ಸಂದರ್ಭದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮೊಬೈಲ್ ಬ್ರ್ಯಾಂಡ್ ಯಾವುದು ಎಂಬುದನ್ನು ತಿಳಿಯಲು ಅಧ್ಯಯನ ಒಂದು ನೆಡೆದಿದೆ. ಸ್ಯಾಮ್‌ಸಂಗ್ ಭಾರತದ ಮುಂಚೂಣಿಯಲ್ಲಿರುವ ಬ್ರ್ಯಾಂಡ್ ಎಂದು ಸಹ ಹೇಳಿದೆ. ಅದು ಹೇಗೆ, ಏಕೆ ಎಂಬಿತ್ಯಾದಿ ಉತ್ತರಗಳನ್ನು ಈ ಲೇಖನದಿಂದ ತಿಳಿಯಿರಿ.
ಓದಿರಿ: ಹೊಸ ವರ್ಷಕ್ಕಾಗಿ ಬಜೆಟ್ ಬೆಲೆಯಲ್ಲಿ ಹೊಚ್ಚಹೊಸ ಫೋನ್ಸ್

ಸ್ಯಾಮ್‌ಸಂಗ್
ಸೌತ್ ಕೋರಿಯನ್ ಟೆಕ್ ಕಂಪನಿಯಾದ ಸ್ಯಾಮ್‌ಸಂಗ್ ಮೊಬೈಲ್, ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹ್ಯಾಂಡ್‌ಸೆಟ್ ಬ್ರ್ಯಾಂಡ್ ಎಂದು ಅಧ್ಯಯನ ಒಂದು ಹೇಳಿದೆ. ಇದರ ಮಾರುಕಟ್ಟೆ ಶೇರು ಶೇಕಡ 36 ಇದೆ.

ಮೊಬೊಮಾರ್ಕೆಟ್ ಅಪ್ಲಿಕೇಶನ್
ಆಂಡ್ರಾಯ್ಡ್ ಮೇನೇಜರ್ ಆಪ್ ಮೊಬೊಮಾರ್ಕೆಟ್ ನಿಂದ ಕೈಗೊಳ್ಳಲಾಗಿದ್ದ ಗುಣಾತ್ಮಕ ಸರ್ವೇ ಸ್ಯಾಮ್‌ಸಂಗ್ ಮೊದಲ ಸ್ಥಾನದಲ್ಲಿದ್ದು, ಮೈಕ್ರೋಮ್ಯಾಕ್ಸ್ ಶೇಕಡ 22.5 ಶೇರು ಹೊಂದಿದ್ದು, ಇದು ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದೆ.

ಮೊಬೊಮಾರ್ಕೆಟ್ ಆಪ್ಲಿಕೇಶನ್
ಆಪ್, ಆಂಡ್ರಾಯ್ಡ್ ಆಪ್ ಸ್ಟೋರ್ ಆಗಿದ್ದು, ಇದನ್ನು ಚೀನಾದ ವೆಬ್ ಸರ್ವೀಸ್ ಕಂಪನಿ 'ಬೈಡ್' ಅಭಿವೃದ್ದಿಗೊಳಿಸಿದೆ. ಆಪ್ ಪ್ರಪಂಚದಾದ್ಯಂತ 130 ಲಕ್ಷ ಬಳಕೆದಾರರನ್ನು ಹೊಂದಿದೆ.

ಅಧ್ಯಯನದ ಉದ್ದೇಶ
ಪ್ರಸ್ತುತದಲ್ಲಿ ಅಪ್ಲಿಕೇಶನ್‌ಗಳ ಸ್ಥಿತಿ ಮತ್ತು ಮೊಬೈಲ್ ಮಾರ್ಕೆಟಿಂಗ್ ಸ್ಥಿತಿ ಭಾರತದಲ್ಲಿ ಹೇಗಿದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಯುವ ದೃಷ್ಟಿಯಿಂದ ಈ ಅಧ್ಯಯನ ನೆಡೆಸಲಾಗಿದೆ ಎನ್ನಲಾಗಿದೆ. ಹಾಗೂ ಭಾರತದ ಮೊಬೈಲ್ ಬಳಕೆದಾರರ ವರ್ತನೆಯನ್ನು ತಿಳಿಯಲು ಸಹ ಈ ಅಧ್ಯಯನ ಕೈಗೊಳ್ಳಲಾಗಿತ್ತು ಎಂದು ಮೊಬೊಮಾರ್ಕೆಟಿಂಗ್ ಹೇಳಿದೆ.

ಹೊಸ ಬ್ರ್ಯಾಂಡ್‌ಗಳಿಗೆ ಅವಕಾಶ ಕಡಿಮೆ
ಸ್ಯಾಮ್‌ಸಂಗ್ ಮತ್ತು ಮೈಕ್ರೋಮ್ಯಾಕ್ಸ್ ಎರಡು ಸಹ ಶೇಕಡ 60 ಶೇರ್ ಅನ್ನು ಭಾರತದಲ್ಲಿ ಹೊಂದಿದ್ದು, ಹೊಸ ಬ್ರ್ಯಾಂಡ್‌ಗಳಿಗೆ ಅಸಾಧಾರಣ ನಿರ್ಭಂಧವಿರುವ ಸಾಧ್ಯತೆಯನ್ನು ಅಧ್ಯಯನ ಹೇಳಿದೆ.

ಸ್ಮಾರ್ಟ್‌ಫೋನ್ ಅಭಿವೃದ್ದಿ ಉಪಯೋಗ
ಭಾರತದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ಅಭಿವೃದ್ದಿಯಿಂದ ಆನ್‌ಲೈನ್ ಚಿಲ್ಲರೆ ವ್ಯಾಪರಕ್ಕೆ ಮತ್ತು ಇ-ಟೈಲ್ ವ್ಯವಹಾರಕ್ಕೆ ಸಹಾಯಕವಾಗಿರುವ ಬಗ್ಗೆ ಅಧ್ಯಯನ ಫಲಿತಾಂಶದಲ್ಲಿ ಹೇಳಿದೆ.

ಗೇಮಿಂಗ್ ಆಪ್‌ಗಳೇ ಹೆಚ್ಚು
ಸಾಮಾಜಿಕ ಜಾಲತಾಣ, ವಿಡಿಯೋ, ಸಿಸ್ಟಮ್ ಟೂಲ್ ಆಪ್‌ಗಳಿಗಿಂತ ಅಧಿಕವಾಗಿ ಗೇಮಿಂಗ್ ಆಪ್ಲಿಕೇಶನ್‌ಗಳೇ ಹೆಚ್ಚು ಮುಂಚೂಣಿಯಲ್ಲಿರುವ ಬಗ್ಗೆ ಹೇಳಲಾಗಿದೆ.


Click it and Unblock the Notifications








