ಸ್ಯಾಮ್‌ಸಂಗ್ ಗ್ಯಾಲಕ್ಸಿ ಫೋನ್‌ಗಳಲ್ಲಿ ಹೊಸ ಫೀಚರ್ಸ್ ಸೇರ್ಪಡೆ! ಏನಿದರ ವಿಶೇಷ!
ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ ಕಂಪೆನಿ ತನ್ನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಮೈಂಟೆನನ್ಸ್ ಮೋಡ್ ಅನ್ನು ಪರಿಚಯಿಸಿದೆ. ಸದ್ಯ ಈ ಫೀಚರ್ಸ್ ಇದೀಗ ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಮೈಂಟೆನನ್ಸ್ ಮೋಡ್ (Maintenance mode) ಮೂಲಕ ನೀವು ನಿಮ್ಮ ಡಿವೈಸ್‌ನಲ್ಲಿ ನಿಮ್ಮ ಡೇಟಾ ಸೆಕ್ಯುರ್ ಮಾಡಬಹುದಾಗಿದೆ. ಅಂದರೆ ನಿಮ್ಮ ಡಿವೈಸ್ ಅನ್ನು ನೀವು ರಿಪೇರಿಗೆ ನೀಡುವಂತಹ ಸಮಯದಲ್ಲಿ ನಿಮ್ಮ ಡೇಟಾ ಬೇರೆಯವರ ಕೈಗೆ ಸೇರದಂತೆ ತಡೆಯಲು ಸಾಧ್ಯವಾಗಲಿದೆ.

ಹೌದು, ಸ್ಯಾಮ್‌ಸಂಗ್ ಕಂಪನಿ ತನ್ನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಮೈಂಟೆನನ್ಸ್ ಮೋಡ್ ಅನ್ನು ಪರಿಚಯಿಸಿದೆ. ಇದರಿಂದ ನಿಮ್ಮ ಫೋನ್ ರಿಪೇರಿ ಸಂದರ್ಭದಲ್ಲಿ ಖಾಸಗಿ ಡೇಟಾವನ್ನು ಬೇರೆಯವರು ಪ್ರವೇಶಿಸಲು ಸಾಧ್ಯವಾಗದಂತೆ ತಡೆಯಲಿದೆ. ಅಲ್ಲದೆ ಮೈಂಟೆನನ್ಸ್ ಮೋಡ್ ಅನ್ನು ನೀವು ಆಪ್ ಮಾಡಿದಾಗ ಮೈಂಟೆನನ್ಸ್ ಮೋಡ್ ಕ್ರಿಯೆಟ್ ಮಾಡಲಾದ ಯಾವುದೇ ಡೇಟಾವನ್ನು ರಿಮೂವ್ ಮಾಡಲಾಗ್ತದೆ. ಹಾಗಾದ್ರೆ ಸ್ಯಾಮ್‌ಸಂಗ್ ಕಂಪೆನಿ ಪರಿಚಯಿಸಿರುವ ಹೊಸ ಮೈಂಟೆನನ್ಸ್ ಮೋಡ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರ ತಮ್ಮ ಫೋನ್ ಅನ್ನು ರಿಪೇರಿಗೆ ನೀಡಿದಾಗ ನಿಮ್ಮ ಡೇಟಾ ದುರ್ಬಳಕೆಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಯಾಕೆಂದರೆ ನಿಮ್ಮ ಡೇಟಾ ದುರ್ಬಳಕೆಯಾಗದಂತೆ ತಡೆಯವುದಕ್ಕಾಗಿಯೇ ಸ್ಯಾಮ್‌ಸಂಗ್ ಕಂಪೆನಿ ಮೈಂಟೆನನ್ಸ್ ಮೋಡ್ ಅನ್ನು ಪರಿಚಯಿಸಿದೆ. ಇದರಿಂದ ನಿಮ್ಮ ಫೋನ್ ಅನ್ನು ರಿಪೇರಿಗಾಗಿ ಆನ್ ಮಾಡಿದಾಗ ಬೇರೆಯವರು ನಿಮ್ಮ ವೈಯಕ್ತಿಕ ಡೇಟಾಗೆ ಪ್ರವೇಶವಿಲ್ಲದೆ ಪ್ರಮುಖ ಕಾರ್ಯಗಳನ್ನು ನಿರ್ವಹಿಸಲು ಪರ್ಯಾಯ ಬಳಕೆದಾರ ಖಾತೆಗಳನ್ನು ಸೆಟ್ ಮಾಡಲು ಸಾಧ್ಯವಾಗಲಿದೆ.

ಅಂದರೆ ರಿಪೇರಿಗಾಗಿ ನೀವು ಮೈಂಟೆನನ್ಸ್ ಮೋಡ್‌ನಲ್ಲಿರುವಾಗ ಹೊಸ ಯೂಸರ್ ಅಕೌಂಟ್ ಕ್ರಿಯೆಟ್ ಮಾಡಬಹುದು. ನೀವು ನಿಮ್ಮ ಮೈಂಟೆನನ್ಸ್ ಮೋಡ್ ಅನ್ನು ಆಫ್ ಮಾಡಿದ ತಕ್ಷಣವೇ ಈ ಯೂಸರ್ ಅಕೌಂಟ್ ಆಟೋಮ್ಯಾಟಿಕ್ ರಿಮೂವ್ ಆಗಲಿದೆ. ನಿಮ್ಮ ಫೋನ್‌ನಲ್ಲಿ ಮೈಂಟೆನನ್ಸ್ ಮೋಡ್ ಆನ್ ಮಾಡಿದಾಗ ರಿಪೇರಿ ಮಾಡುವವರು ಫೋನ್‌ನಲ್ಲಿರುವ ಚಿತ್ರಗಳು, ಸಂದೇಶಗಳು, ಸಂಪರ್ಕಗಳು ಅಥವಾ ಯೂಸರ್ ಅಪ್ಲಿಕೇಶನ್‌ಗಳಿಗೆ ಪ್ರವೇಶಿಸುವುದನ್ನು ತಡೆಯಲಿದೆ.

ಮೈಂಟೆನನ್ಸ್ ಮೋಡ್ ಅನ್ನು ಆಕ್ಟಿವ್ ಮಾಡಲು ಸೆಟ್ಟಿಂಗ್ಸ್ > ಬ್ಯಾಟರಿ ಆಂಡ್ ಡಿವೈಸ್ ಕೇರ್ ಮೆನು > "ಮೈಂಟೆನನ್ಸ್ ಮೋಡ್" ಆಕ್ಟಿವ್ ಮಾಡಿ. ಇನ್ನು ಈ ಮೋಡ್ ಅನ್ನು ಸಕ್ರಿಯಗೊಳಿಸಿದ ನಂತರ ಸ್ಮಾರ್ಟ್‌ಫೋನ್ ಅನ್ನು ರಿಸ್ಟಾರ್ಟ್ ಮಾಡಬೇಕಾಗುತ್ತದೆ. ಸ್ಯಾಮ್‌ಸಂಗ್ ಕಂಪೆನಿ ಹೇಳಿರುವಂತೆ ಮಲ್ಟಿ-ಲೇಯರ್ಡ್ ಸೆಕ್ಯುರ್ ನೀಡುವ ಕಂಪನಿಯ ಡಿಫೆನ್ಸ್-ಗ್ರೇಡ್ ಸೆಕ್ಯುರಿಟಿ ಪ್ಲಾಟ್‌ಫಾರ್ಮ್ ನಾಕ್ಸ್ ಮೈಂಟೆನನ್ಸ್ ಮೋಡ್ ಗೆ ಪವರ್ ನೀಡಲಿದೆ.

ಇನ್ನು ಸ್ಯಾಮ್‌ಸಂಗ್ ಕಂಪೆನಿ ಇತ್ತೀಚಿಗೆ ತನ್ನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಕ್ಯಾಮೆರಾ ಅಸಿಸ್ಟೆಂಟ್ ಅಪ್ಲಿಕೇಶನ್ ಪರಿಚಯಿಸಿದೆ. ಇದು ಬಳಕೆದಾರರ ಅನುಭವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅಂದರೆ ವೈಯಕ್ತೀಕರಣ ಅಪ್ಲಿಕೇಶನ್‌ಗಳ ಕಂಪನಿಯ ಗುಡ್ ಲಾಕ್ ಸೂಟ್‌ನ ಒಂದು ಭಾಗವಾಗಿದೆ. ಇದರಿಂದ ನೀವು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾವನ್ನು ಬಳಸುವಾಗ ಅಪ್ಡೇಟೆಡ್ ಫೀಚರ್ಸ್‌ಗಳು ಲಭ್ಯವಾಗಲಿವೆ.

ಕ್ಯಾಮೆರಾ ಅಸಿಸ್ಟೆಂಟ್ ಅಪ್ಲಿಕೇಶನ್ ಬಳಕೆದಾರರಿಗೆ ಸುಧಾರಿತ ಫೀಚರ್ಸ್‌ಗಳನ್ನು ನೀಡಲಿದೆ. ಇದು ಆಟೋ ಮೋಡ್ ಮೂಲಕ ಬಳಕೆದಾರರ ಗ್ರಾಹಕೀಕರಣವನ್ನು ಸುಧಾರಿಸಲು ಸಹಾಯ ಮಾಡಲಿದೆ. ಪ್ರಸ್ತುತ ಈ ಅಪ್ಲಿಕೇಶನ್ ಭಾರತ, ದಕ್ಷಿಣ ಕೊರಿಯಾ ಮತ್ತು ಇತರ ಕೆಲವು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದನ್ನು ಗ್ಯಾಲಕ್ಸಿ ಸ್ಟೋರ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಆಟೋಮ್ಯಾಟಿಕ್ HDR ಅನ್ನು ನಿಷ್ಕ್ರಿಯಗೊಳಿಸುವ ಅಥವಾ ಸಕ್ರಿಯಗೊಳಿಸುವುದಕ್ಕೆ ಅವಕಾಶ ನೀಡಲಿದೆ.

ಈ ಅಪ್ಲಿಕೇಶನ್ ಗ್ಯಾಲಕ್ಸಿ ಫೋನ್ ಬಳಕೆದಾರರು ಮೃದುವಾದ ಫೋಟೋ ವಿನ್ಯಾಸವನ್ನು ನೋಡುವುದಕ್ಕೆ ಸಾಧ್ಯವಾಗಲಿದೆ. ಅಲ್ಲದೆ ನೀವು ಫೋಟೋ ಶೂಟ್ ಮಾಡುವ ಕಂಟೆಂಟ್ ದೂರವಿದ್ದರೆ ಸ್ವಯಂಚಾಲಿತ ಲೆನ್ಸ್ ಸ್ವಿಚಿಂಗ್ ಅನ್ನು ಸಹ ನಿರೀಕ್ಷಿಸಬಹುದು. ಇದಲ್ಲದೆ, ಹೊಸ ಕ್ಯಾಮರಾ ಅಸಿಸ್ಟೆಂಟ್ ಅಪ್ಲಿಕೇಶನ್ ಫೋಟೋ ಮೋಡ್ ಅನ್ನು ಬಳಸುವಾಗಲೂ ವೀಡಿಯೊಗಳನ್ನು ಶೂಟ್ ಮಾಡಲು ನಿಮಗೆ ಅನುಮತಿಸಲಿದೆ. ಕ್ಯಾಮೆರಾ ಅಸಿಸ್ಟಂಟ್ ಮೂಲಕ ವೀಡಿಯೊಗಳನ್ನು ರೆಕಾರ್ಡಿಂಗ್ ಪ್ರಾರಂಭಿಸಲು ಬಳಕೆದಾರರು ಶಟರ್ ಬಟನ್ ಅನ್ನು ಬಳಸಬಹುದಾಗಿದೆ.


Click it and Unblock the Notifications








