ಬರಲಿದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಹೋಮ್‌ ಮಿನಿ ಸ್ಮಾರ್ಟ್‌ ಸ್ಪೀಕರ್‌ !

|

ಸ್ಮಾರ್ಟ್‌ಫೋನ್‌ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿ ಗ್ಯಾಲಕ್ಸಿ ಹೋಮ್‌ ಮಿನಿ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆ ಮಾಡುವುದಾಗಿ ಹೇಳಿದೆ. ಈಗಾಗ್ಲೆ ವಿಶೇಷ ಫೀಚರ್ಸ್‌ಗಳುಳ್ಳ ಹಲವಾರು ಸ್ಮಾರ್ಟ್‌ ಸ್ಪೀಕರ್‌ಗಳನ್ನ ಪರಿಚಯಿಸಿರೋ ಸ್ಯಾಮ್‌ಸಂಗ್‌ ಇದೀಗ ಹೊಸ ಮಾದರಿಯ ಫೀಚರ್ಸ್‌ಗಳನ್ನ ಗ್ಯಾಲಕ್ಸಿ ಹೋಮ್‌ ಮಿನಿ ಸ್ಮಾರ್ಟ್‌ ಸ್ಪೀಕರ್‌ನಲ್ಲಿ ಪರಿಚಯಿಸಲಿದೆ. ಸದ್ಯ ಸ್ಯಾಮ್‌ಸಂಗ್ ಸಿಇಒ ಹ್ಯುನ್-ಸುಕ್ ಕಿಮ್ 2020 ರಲ್ಲಿ ಕಂಪನಿಯು ತನ್ನ ಬಿಕ್ಸ್‌ಬಿ-ಚಾಲಿತ ಮಿನಿ ಸ್ಮಾರ್ಟ್ ಸ್ಪೀಕರ್ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

ಹೌದು

ಹೌದು, ಸ್ಯಾಮ್‌ಸಂಗ್‌ ಬಿಕ್ಸ್‌ಬಿ-ಚಾಲಿತ ಗ್ಯಾಲಕ್ಸಿ ಹೋಮ್ ಸ್ಮಾರ್ಟ್ ಸ್ಪೀಕರ್ ಬಿಡುಗಡೆ ಮಾಡುವುದಾಗಿ ಎರಡು ವರ್ಷಗಳ ಹಿಂದೆಯೆ ಹೇಳಿತ್ತ, ಆದರೆ ಇದು ಸಾಧ್ಯವಾಗಿರಲಿಲ್ಲ. ಇದೀಗ ದಕ್ಷಿಣ ಕೊರಿಯಾದಲ್ಲಿ ಸಾರ್ವಜನಿಕ ಬೀಟಾ ಪರೀಕ್ಷೆಯ ಮೂಲಕ ಗ್ಯಾಲಕ್ಸಿ ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆಯ ಬಗ್ಗೆ ಘೋಷಿಸಿದೆ. ಗ್ಯಾಲಕ್ಸಿ ಹೋಮ್ ಮಿನಿ ಸ್ಮಾರ್ಟ್‌ ಸ್ಪೀಕರ್‌ ಸ್ಯಾಮ್‌ಸಂಗ್‌ನ ಸ್ಮಾರ್ಟ್‌ ಟಿಂಗ್ಸ್ ಪ್ಲಾಟ್‌ಫಾರ್ಮ್ ಮೂಲಕ ಐಒಟಿ ಸಾಧನಗಳನ್ನು ನಿಯಂತ್ರಿಸಲು ಸ್ಯಾಮ್‌ಸಂಗ್‌ನ ಬಿಕ್ಸ್‌ಬಿ ಸಹಾಯವನ್ನು ಬಳಸುತ್ತದೆ.

ಅಲ್ಲದೆ

ಅಲ್ಲದೆ ಸ್ಯಾಮ್‌ಸಂಗ್‌ನ ಎಕೆಜಿ ಆಡಿಯೊ ಬ್ರಾಂಡ್‌ನಿಂದ ಧ್ವನಿ ತಂತ್ರಜ್ಞಾನವನ್ನು ಬಳಸಿಕೊಂಡು ಹೋಮ್ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತದೆ. ಆದರೆ ಸ್ಯಾಮ್‌ಸಂಗ್‌ನ ಗುರಿ ಆಪಲ್‌ನ ಸಿರಿ ಮತ್ತು ಅಲೆಕ್ಸಾದಂತಹ ಉತ್ಪನ್ನಗಳ ಪ್ರಮುಖ ಭಾಗವಾಗಿ ಮಾರ್ಪಟ್ಟಿರುವ ಸಂವಾದಾತ್ಮಕ ಸಹಾಯಕ ಅಂಶಗಳನ್ನು ಅನುಕರಿಸಲು ಮತ್ತು ಧ್ವನಿ ಆಜ್ಞೆಗಳನ್ನು ಉತ್ತಮವಾಗಿ ಕಾರ್ಯಗತಗೊಳಿಸುವ ಸಹಾಯಕನನ್ನು ರಚಿಸುವತ್ತ ಗಮನಹರಿಸುವುದು ಆಗಿರೊದ್ರಿಂದ ಈ ಸ್ಮಾರ್ಟ್‌ ಸ್ಪೀಕರ್‌ ಬಿಡುಗಡೆಯಾಗಲು ಸಾಧ್ಯವಾಗಿಲ್ಲ ಎನ್ನಲಾಗ್ತಿದೆ.

ಈಗಾಗ್ಲೆ

ಈಗಾಗ್ಲೆ ಅಮೆಜಾನ್‌ನ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ತಮ್ಮ ಅಸ್ತಿತ್ವವನ್ನು ಬೃಹತ್ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ, ಪ್ರತಿಯೊಂದೂ ಹೊಸ ಹಾರ್ಡ್‌ವೇರ್ ಪೀಳಿಗೆಯ ಸ್ಮಾರ್ಟ್ ಸ್ಪೀಕರ್‌ಗಳು ಮತ್ತು ಡಿಸ್‌ಪ್ಲೇಗಳನ್ನು ಹೊಂದಿದ್ದು, ಸ್ಯಾಮ್‌ಸಂಗ್ ಸ್ಪೀಕರ್ ಯಾವ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಕಮಾಲ್‌ ಮಾಡಲಿದೆ ಅನ್ನೊದು ಸ್ಮಾರ್ಟ್ ಪ್ರಾಡಕ್ಟ್‌ ಪ್ರೀಯರ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಎರಡು

ಆದರೆ ಎರಡು ವರ್ಷಗಳ ಹಿಂದೆ ಘೊಷಣೆಯಾಗಿದ್ದ, ಪ್ರಾಡಕ್ಟ್‌ ಇಲ್ಲಿಯವರೆಗೆ ಬಿಡುಗಡೆಯಾಗದಿರೋದು ಗ್ರಾಹಕರಲ್ಲಿ ಈ ಹೆಸರಿನ ಪ್ರಾಡಕ್ಟ್‌ ಅನ್ನ ಮರೆತು ಹೋಗುವಂತೆ ಮಾಡಿದೆ. ಅಲ್ಲದೆ ಇದೇ ಜಾಗದಲ್ಲಿ ಬೇರೆ ಕಂಪೆನಿಗಳ ಸ್ಮಾರ್ಟ್‌ ಸ್ಪೀಕರ್‌ಗಳು ಬಂದು ಭರ್ಜರಿಯಾಗಿಯೇ ಸೇಲ್‌ ಆಗ್ತಿವೆ. ಇದೆಲ್ಲವನ್ನ ಮೀರಿ ನಿಲ್ಲುವಂತಹ ಫೀಚರ್ಸ್‌ಗಳನ್ನ ಸ್ಯಾಮ್‌ಸಂಗ್‌ ಹೋಮ್‌ ಮಿನಿ ಸ್ಮಾರ್ಟ್‌ ಸ್ಪೀಕರ್‌ನಲ್ಲಿ ಕಾಣಬಹುದಾ ಅನ್ನೊದು ಯಕ್ಷ ಪ್ರಶ್ನೆಯಾಗಿದೆ.

ಗ್ಯಾಲಕ್ಸಿ

ಇನ್ನು ಗ್ಯಾಲಕ್ಸಿ ಹೋಮ್ ಬಿಕ್ಸ್‌ಬಿ ಸ್ಪೀಕರ್‌ಗಳನ್ನು ಬಿಡುಗಡೆ ಮಾಡಿದರೂ ಸಹ, ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ ಸ್ಪೀಕರ್‌ಗಳ ಮಧ್ಯೆ ಸ್ಯಾಂಮ್ ಸಂಗ್‌ ಸ್ಮಾರ್ಟ್‌ ಸ್ಪೀಕರ್‌ ಪೈಪೋಟಿ ನೀಡುವುದಕ್ಕೆ ಸಾಧ್ಯನಾ? ಇಲ್ಲ ಎರಡು ವರ್ಷಗಳಿಂದ ಬಿಡುಗಡೆ ಯಾಗದಿರುವ ಸ್ಮಾರ್ಟ್‌ ಸ್ಪೀಕರ್‌ ಈ ವರ್ಷವೂ ಬಿಡುಗಡೆಯಾಗದೇ ಉಳಿದು ಬಿಡುತ್ತಾ, ಅನ್ನೊದು ಟೆಕ್‌ ಮಾರುಕಟ್ಟೆಯಲ್ಲಿನ ಸುದ್ದಿಯಾಗಿದೆ.

Most Read Articles
Best Mobiles in India

English summary
Samsung’s Galaxy Home Mini may finally see the light of day, with Samsung CEO and head of its consumer electronics division Hyun-Suk Kim announcing at CES 2020 that the company would be releasing its smaller Bixby-powered smart speaker early this year, via Bloomberg.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more