Home
ಸುದ್ದಿಜಾಲ

ಜನಪ್ರಿಯ ಬ್ರಾಂಡ್‌ಗಳಲ್ಲಿ ಸ್ಯಾಮ್‌ಸಂಗ್‌ ಫಸ್ಟ್‌..! ಜಿಯೋಗೂ ಸ್ಥಾನ..!

ಸ್ಯಾಮ್‌ಸಂಗ್‌ ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ವಿಷಯದ ಬೆನ್ನಲ್ಲೇ ಈಗ ಭಾರತದ ಜನಪ್ರಿಯ ಬ್ರಾಂಡ್‌ ಆಗಿ ಸ್ಯಾಮ್‌ಸಂಗ್‌ ಹೊರಹೊಮ್ಮಿದೆ. ವಿಶೇಷವೆಂದರೆ ಮೊದಲ ಎರಡು ಸ್ಥಾನಗಳನ್ನು ಸ್ಯಾಮ್‌ಸಂಗ್‌ ಮೊಬೈಲ್‌ ಮತ್ತು ಸ್ಯಾಮ್‌ಸಂಗ್‌ ಕಂಪನಿ ಪಡೆದುಕೊಂಡಿವೆ. ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಜಿಯೋ ಕೂಡ ಸ್ಥಾನ ಪಡೆದಿದೆ.

ಜನಪ್ರಿಯ ಬ್ರಾಂಡ್‌ಗಳಲ್ಲಿ ಸ್ಯಾಮ್‌ಸಂಗ್‌ ಫಸ್ಟ್‌..! ಜಿಯೋಗೂ ಸ್ಥಾನ..!

ಹೌದು, ಬ್ರಾಂಡ್‌ ಏಷ್ಯಾ ಸರ್ವೇಯ ವರದಿಯಂತೆ 2018ರ ಭಾರತದ ಜನಪ್ರಿಯ ಬ್ರಾಂಡ್‌ಗಳಲ್ಲಿ ಅಮೂಲಾಗ್ರ ಬದಲಾವಣೆಯಾಗಿದ್ದು, ಭಾರೀ ಸ್ಥಾನಪಲ್ಲಟಗಳಾಗಿವೆ. ಜಿಯೋ ಸ್ಯಾಮ್‌ಸಂಗ್‌ ಬಿಟ್ಟರೆ ಬೇರೆ ಯಾವ ಸ್ಮಾರ್ಟ್‌ಫೋನ್‌ ಅಥವಾ ಎಲೆಕ್ಟ್ರಾನಿಕ್‌ ಬ್ರಾಂಡ್‌ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿಲ್ಲ, ಟೆಲಿಕಾಂನಲ್ಲೂ ಕೂಡ ಜಿಯೋ ಹೊರತುಪಡಿಸಿದರೆ ಯಾವುದೇ ಬ್ರಾಂಡ್‌ ಬ್ರಾಂಡ್‌ ಏಷ್ಯಾ ಸರ್ವೇಯ ಜನಪ್ರಿಯ ಬ್ರಾಂಡ್‌ಗಳ ಪಟ್ಟಿಯೊಳಗೆ ಬಂದಿಲ್ಲ.

ಮೊದಲೆರಡು ಸ್ಥಾನ ಸ್ಯಾಮ್‌ಸಂಗ್‌ನದ್ದೇ

ಮೊದಲೆರಡು ಸ್ಥಾನ ಸ್ಯಾಮ್‌ಸಂಗ್‌ನದ್ದೇ

ಬ್ರಾಂಡ್‌ ಏಷ್ಯಾ ಸರ್ವೇಯ ವರದಿಯಂತೆ ಭಾರತದ ಜನಪ್ರಿಯ ಬ್ರಾಂಡ್‌ಗಳಲ್ಲಿ ಸ್ಯಾಮ್‌ಸಂಗ್‌ ಕಂಪನಿಯೇ ಮೊದಲೆರಡು ಸ್ಥಾನಗಳನ್ನು ಪಡೆದಿದೆ. ಮೊದಲ ಸ್ಥಾನವನ್ನು ಸ್ಯಾಮ್‌ಸಂಗ್‌ ಮೊಬೈಲ್‌ ಪಡೆದಿದ್ದರೆ, ಎರಡನೇ ಸ್ಥಾನವನ್ನು ಸ್ಯಾಮ್‌ಸಂಗ್‌ ಪಡೆದಿದೆ.

ಮೂರಕ್ಕೆ ವಾಟ್ಸ್‌ಆಪ್‌, ಆರಕ್ಕೆ ಫೇಸ್‌ಬುಕ್‌

ಮೂರಕ್ಕೆ ವಾಟ್ಸ್‌ಆಪ್‌, ಆರಕ್ಕೆ ಫೇಸ್‌ಬುಕ್‌

ಇನ್ನು ಫೇಸ್‌ಬುಕ್‌ ಒಡೆತನದಲ್ಲಿರುವ ಇನ್‌ಸ್ಟಾಂಟ್‌ ಮೆಸೇಂಜಿಂಗ್‌ ಆಪ್‌ ವಾಟ್ಸ್‌ಆಪ್‌ ಮೂರನೇ ಜನಪ್ರಿಯ ಬ್ರಾಂಡ್ ಆಗಿದ್ದರೆ, ಹಲವು ವಿವಾದಗಳಿಂದ ಕುಖ್ಯಾತಿಯಾಗಿದ್ದ ಫೇಸ್‌ಬುಕ್‌ 6ನೇ ಸ್ಥಾನಕ್ಕೆ ಸೀಮಿತಾವಾಗಿದೆ. ಎರಡು ಬ್ರಾಂಡ್‌ಗಳು ತಮ್ಮ ಎದುರಾಳಿಗಳಿಗೆ ದೊಡ್ಡ ಹೊಡೆತವನ್ನೇ ನೀಡುತ್ತಿವೆ.

ನಾಲ್ಕು, ಐದನೇ ಸ್ಥಾನ ಯಾರಿಗೆ ಗೊತ್ತಾ..?

ನಾಲ್ಕು, ಐದನೇ ಸ್ಥಾನ ಯಾರಿಗೆ ಗೊತ್ತಾ..?

ಬ್ರಾಂಡ್‌ ಏಷ್ಯಾ ಸರ್ವೇ 2018ರ ಪ್ರಕಾರ ಫೇಸ್‌ಬುಕ್‌ಗೂ ಹೆಚ್ಚಿನ ಜನಪ್ರಿಯತೆ ಹೊಂದಿರುವ ಬ್ರಾಂಡ್‌ಗಳು ಯಾವುವು ಎಂಬ ಪ್ರಶ್ನೆ ನಿಮಗೆ ಕಾಡುತ್ತಿರುತ್ತದೆ. ಹೌದು, ನಾಲ್ಕನೇ ಸ್ಥಾನವನ್ನು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಅಮುಲ್‌ ಹೊಂದಿದ್ದರೆ, ಐದನೇ ಸ್ಥಾನವನ್ನು ತಂಪು ಪಾನೀಯ ಕಂಪನಿ ಪೆಪ್ಸಿ ಹೊಂದಿದೆ.

ಎಂಟನೇ ಸ್ಥಾನದಲ್ಲಿ ಜಿಯೋ..!

ಎಂಟನೇ ಸ್ಥಾನದಲ್ಲಿ ಜಿಯೋ..!

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಬಹು ದೊಡ್ಡ ಕ್ರಾಂತಿಯನ್ನು ಎಬ್ಬಿಸಿರುವ ಮುಖೇಶ್‌ ಅಂಬಾನಿ ಒಡೆತನದ ರಿಲಾಯನ್ಸ್‌ ಜಿಯೋ 8ನೇ ಸ್ಥಾನವನ್ನು ಹೊಂದಿದ್ದು, ಭಾರತದ ಬೇರೆ ಯಾವ ಟೆಲಿಕಾಂ ಆಪರೇಟರ್‌ಗಳು ಸ್ಥಾನ ಪಡೆದಿಲ್ಲದಿರುವುದು ಜಿಯೋದ ಪ್ರಭಾವ ಏನೆಂಬುದು ಗೊತ್ತಾಗುತ್ತದೆ.

ಟಾಪ್‌ 10 ಯಾರು..?

ಟಾಪ್‌ 10 ಯಾರು..?

ಟಾಪ್‌ 7 ಸ್ಥಾನವನ್ನು ಜಗತ್ತಿನ ಪ್ರಮುಖ ಆಹಾರ ಕಂಪನಿಯಾಗಿರುವ ಕೋಕಾ-ಕೋಲಾ ಪಡೆದರೆ, ಟಾಪ್‌ 9ರಲ್ಲಿ ರಿಟೇಲ್‌ ಮಾರುಕಟ್ಟೆ ಬಿಗ್‌ ಬಜಾರ್‌ ಮತ್ತು ಟಾಪ್‌ 10ನೇ ಸ್ಥಾನವನ್ನು ಕೋಲ್ಗೇಟ್‌ ಪಡೆದಿದೆ.

ಹೇಗೆ ಸರ್ವೇ..?

ಹೇಗೆ ಸರ್ವೇ..?

ಬ್ರಾಂಡ್‌ ಏಷ್ಯಾ ಸರ್ವೇಯನ್ನು ಏಷ್ಯಾದ ಅನೇಕ ರಾಷ್ಟ್ರಗಳಲ್ಲಿ ನಡೆಸಲಾಗಿದ್ದು, ಭಾರತದಲ್ಲಿ ಈ ಸರ್ವೇಗೆ 6,780 ಜನರನ್ನು ಆಯ್ಕೆ ಮಾಡಲಾಗಿತ್ತು. ಈ ಸರ್ವೇ ಗ್ರಾಹಕ ಸ್ನೇಹಿ, ಅನುಕೂಲತೆ, ನಾವೀನ್ಯತೆ ಮತ್ತು ಕಂಪನಿಯ ಮಹತ್ವದ ಆಧಾರದ ಮೇಲೆ ನಡೆದಿದೆ.

Best Mobiles in India

English summary
Samsung Mobile Tops List of India's Most Popular Brands: Brand Asia Survey. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+