ಇದೇ 9ಕ್ಕೆ ಬಿಡುಗಡೆಗೆ ಸಜ್ಜಾಗಿದೆ ಸ್ಯಾಮ್‌ಸಂಗ್ ನೋಟ್ 9

By GizBot Bureau
|

ಸ್ಯಾಮ್ ಸಂಗ್ ಸಂಸ್ಥೆ ತನ್ನ ಗ್ಯಾಲಕ್ಸಿ ನೋಟ್ 9 ಅಗಸ್ಟ್ 9ನೇ ತಾರೀಕು ನ್ಯೂಯಾರ್ಕ್ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲು ಸರ್ವಸನ್ನದ್ಧವಾಗಿದೆ. ಬಿಡುಗಡೆಗೂ ಮುನ್ನವೇ ಸ್ಯಾಮ್ ಸಂಗ್ ನ ಅಧಿಕೃತವಾದ ನ್ಯೂಝಿಲ್ಯಾಂಡ್ ನ ಯುಟ್ಯೂಬ್ ಚಾನೆಲ್ ಒಂದರಲ್ಲಿ ಇದರ ಟೀಸರ್ ಬಿಡುಗಡೆಗೊಳಿಸಲಾಗಿದ್ದು, ಸ್ಯಾಮ್ ಸಂಗ್ ನೋಟ್ 9 ಹೇಗಿದೆ ಎಂಬುದರ ಪರಿಚಯ ಲಭ್ಯವಾಗುತ್ತಿದೆ. ಸದ್ಯ ಲಭ್ಯವಾಗುತ್ತಿರುವ ವೀಡಿಯೋ ಪ್ರಕಾರ ಹೇಳುವುದಾದರೆ ಗ್ಯಾಲಕ್ಸಿ ನೋಟ್ 8 ನ ಕೆಲವು ಯಶಸ್ವಿ ವೈಶಿಷ್ಟ್ಯತೆಗಳು ಈ ಫೋನ್ ನಲ್ಲೂ ಇರುವ ಲಕ್ಷಣಗಳು ಕಾಣಿಸುತ್ತಿದೆ.

ಈ ವೀಡಿಯೋ ಅನ್ವಯ, ಗ್ಯಾಲಕ್ಸಿ ನೋಟ್ 9 ನ ಪ್ರಮುಖ ಹೈಲೆಟ್ ಎಂದರೆ ಅದು ಎಸ್-ಪೆನ್. ಇದನ್ನು ಈಗಾಗಲೇ ಸ್ಯಾಮ್ ಸಂಗ್ ಸಂಸ್ಥೆಯೇ ದೃಢಪಡಿಸಿದೆ. ಇದು ನೀಲಿ ವರ್ಷಣದ ಆವೃತ್ತಿಯನ್ನು ತೋರಿಸುತ್ತಿದ್ದು, ಇದರಲ್ಲಿ ಹಳದಿ ವರ್ಣದ ಸ್ಟೈಲಸ್ ಕೂಡ ಇದೆ. ಗ್ಯಾಲಕ್ಸಿ ನೋಟ್ 8 ಗಿಂತ ಹೆಚ್ಚೇನು ಭಿನ್ನವಾಗಿ ಇದು ಕಾಣಿಸುತ್ತಿಲ್ಲ.

ಇದೇ 9ಕ್ಕೆ ಬಿಡುಗಡೆಗೆ ಸಜ್ಜಾಗಿದೆ ಸ್ಯಾಮ್‌ಸಂಗ್ ನೋಟ್ 9

ಒಂದು ದಿನ ಪೂರ್ತಿ ಬಳಕೆ ಮಾಡುವಷ್ಟು ಸಾಮರ್ಥ್ಯದ ಬ್ಯಾಟರಿ ಇದರಲ್ಲಿ ಇರಲಿದೆ ಎಂದು ಹೇಳಿದೆ ಮತ್ತು 1 ಟಿಬಿವರಗೆ ಮೆಮೊರಿಯನ್ನು ಹಿಗ್ಗಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕೆಲವು ಗೊಂದಲಗಳಿವೆ. ಒಂದಂತೂ ಸತ್ಯ ಹೈ ಎಂಡ್ ವೇರಿಯಂಟ್ ಖಂಡಿತ 512 ಜಿಬಿ ವರೆಗಿನ ಆನ್ ಬೋರ್ಡ್ ಸ್ಟೋರೇಜ್ ವ್ಯವಸ್ಥೆಯನ್ನು ಖಂಡಿತ ಹೊಂದಿರುತ್ತದೆ.

ಬ್ಯಾಟರಿ ಲೈಫ್ ಅಧಿಕಗೊಳಿಸುವ ನಿಟ್ಟಿನಲ್ಲಿ ನೋಟ್ 9 ನಲ್ಲಿ 4,000mAh ಬ್ಯಾಟರಿ ವ್ಯವಸ್ಥೆ ಇರಲಿದೆ ಮತ್ತು ವೇಗವಾದ ಚಾರ್ಜಿಂಗ್ ಮತ್ತು ವಯರ್ ಲೆಸ್ ಚಾರ್ಜಿಂಗ್ ಇರಲಿದೆ ಎಂಬ ಗಾಳಿಸುದ್ದಿಯೂ ಹರಿದಾಡುತ್ತಿದೆ.ಈಗಾಗಲೇ ಸ್ಯಾಮ್ ಸಂಗ್ ಡುಯಲ್ ವಯರ್ ಲೆಸ್ ಚಾರ್ಜಿಂಗ್ ಬಗ್ಗೆ ಸಾಕಷ್ಟು ಕೆಲಸ ಮಾಡುತ್ತಿದೆ. ಹಾಗಾಗಿ ಅದನ್ನೇ ಗ್ಯಾಲಕ್ಸಿ ನೋಟ್ 9 ಜೊತೆಗೆ ಬಿಡುಗಡೆಗೊಳಿಸಲಿದೆಯಾ ತಿಳಿದಿಲ್ಲ.

ಗ್ಯಾಲಕ್ಸಿ ನೋಟ್ 9 ನ ಚಿತ್ರಗಳನ್ನು ಗಮನಿಸಿದಾಗ ಇದು ಡುಯಲ್ ಕ್ಯಾಮರಾ ಮಾಡ್ಯೂಲ್ ನ್ನು ಮೊಬೈಲ್ ನ ಹಿಂಭಾಗದಲ್ಲಿ ರಿಡಿಸೈನ್ ಮಾಡಲಾಗಿದೆ ಎಂದು ಅನ್ನಿಸುತ್ತದೆ. ಅದರ ಕೆಳಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಕೂಡ ಅಳವಡಿಸಲಾಗಿರುತ್ತದೆ . ಈಗ ಸದ್ಯ ವೀಡಿಯೋದಲ್ಲೂ ಕೂಡ ಅದೇ ಚಿತ್ರಣವನ್ನು ತೋರಿಸಲಾಗುತ್ತಿದೆ.

ಇದೇ 9ಕ್ಕೆ ಬಿಡುಗಡೆಗೆ ಸಜ್ಜಾಗಿದೆ ಸ್ಯಾಮ್‌ಸಂಗ್ ನೋಟ್ 9

ಗ್ಯಾಲಕ್ಸಿ ಎಸ್ 9 ಮತ್ತು ಗ್ಯಾಲಕ್ಸಿ ಎಸ್ 9 ಪ್ಲಸ್ ನಲ್ಲಿ ಇರುವಂತ ಹಾರ್ಡ್ ವೇರ್ ವ್ಯವಸ್ಥೆ ಇದರಲ್ಲೂ ಇರಲಿದೆ ಎಂದು ತಿಳಿದುಬಂದಿದೆ. ಅದೇ ರೀತಿಯ ಡುಯಲ್ ಕ್ಯಾಮರಾ ಇರಲಿದೆಯಾ ಎಂಬ ಬಗ್ಗೆ ಇನ್ನೂ ಖಾತ್ರಿ ಇಲ್ಲ.

ಸದ್ಯ, ಈ ಫೋನ್ ಎಷ್ಟು ಬೆಲೆಗೆ ಲಭ್ಯವಾಗಬಹುದು ಎಂಬ ಬಗ್ಗೆಯೂ ಸುಳಿವು ಸಿಕ್ಕಿದೆ. ಮಲೇಶಿಯಾದ ವೆಬ್ ಸೈಟ್ ಒಂದರಲ್ಲಿ ಇದರ ಎರಡು ವೇರಿಯಂಟ್ ಗಳ ಬಗ್ಗೆ ಪ್ರಕಟಣೆ ನೀಡಲಾಗಿದೆ.ಒಂದು 128 ಜಿಬಿ ಸ್ಟೋರೇಜ್ ಮತ್ತು ಇನ್ನೊಂದು 512 ಜಿಬಿ ಸ್ಟೋರೇಜ್ ಆಗಿದೆ. 128ಜಿಬಿ ಸ್ಟೊರೇಜ್ ವ್ಯವಸ್ಥೆ ಇರುವ ಫೋನ್ ನ ಬೆಲೆ RM4299 ಆಗಿದ್ದು ಅದನ್ನು ಭಾರತೀಯ ರುಪಾಯಿಗೆ ಹೇಳುವುದಾದರೆ ಹೆಚ್ಚು ಕಡಿಮೆ Rs 72,000 ಆಗಲಿದೆ. ಇದು ಭಾರತದಲ್ಲಿ ಗ್ಯಾಲಕ್ಸಿ ನೋಟ್ 9 ರ ಆರಂಭಿಕ ಬೆಲೆಯೂ ಆಗಿರುವ ಸಾಧ್ಯತೆ ಇದೆ.

ಇನ್ನು 512ಜಿಬಿ ವೇರಿಯಂಟ್ ನ ಬೆಲೆಯನ್ನು RM5099 ಎಂದು ಹೇಳಲಾಗಿದೆ. ಅಂದರೆ ಭಾರತೀಯ ರುಪಾಯಿಯಲ್ಲಿ ಅದು ಅಂದಾಜು Rs 86,000 ಆಗುತ್ತದೆ. ಇದೇ ಬೆಲೆಯಲ್ಲಿ ಭಾರತದಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ ಅಥವಾ 1000 ರುಪಾಯಿ ಇಳಿಕೆಯಾಗಿರಲೂ ಬಹುದು. ಕಾದುನೋಡಬೇಕು.

Best Mobiles in India

English summary
Samsung Note 9 official picture and price leaked again, launch set for August 9. To know more this visit kannada.gizot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X