ಮಲೇಶಿಯಾದಲ್ಲಿ ಬಂದಿದೆ ಸ್ಯಾಮ್ಸಂಗ್ ನ ಗ್ಯಾಲಕ್ಸಿ ಸ್ಟುಡಿಯೋ ಪಾಪ್-ಅಪ್ ಸ್ಟೋರ್ : ನೋಡಿ ಕೂಲ್ ಗ್ಯಾಜೆಟ್ಗಳು
ಖ್ಯಾತ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆದ ಸ್ಯಾಮ್ಸಂಗ್ ತನ್ನ ನೂತನ ಗ್ಯಾಲಕ್ಸಿ ಸ್ಟುಡಿಯೋ ಪಾಪ್-ಅಪ್ ಸ್ಟೋರ್ ಲಾಂಚ್ ಮಾಡಿದೆ. ಮಲೇಶಿಯಾದ ಕುವಾಲಾ ಲಾಂಪುರ್ ನ ಜಲನ್ ಬುಕಿಟ್ ಬಿಂಟಾಂಗ್ ನ ಸಮೀಪದಲ್ಲಿಯೇ ಈ ಅಂಗಡಿ ತೆರೆಯಲಾಗಿದ್ದು, ಇಲ್ಲಿ ಗ್ರಾಹಕರು ಸ್ಯಾಮ್ಸಂಗ್ ನ ನೂತನ ಉತ್ಪನ್ನಗಳ ಅನುಭವ ಪಡೆಯಬಹುದಾಗಿದೆ.

ಅಲ್ಲದೆ, ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 8 ಮೊದಲಾದವುಗಳ ಅನುಭವವನ್ನು ಜನರು ಇಲ್ಲಿ ಪಡೆಯಬಹುದಾಗಿದ್ದು, S ಪೆನ್, ಗೇರ್ ಫಿಟ್ 2 ಪ್ರೋ, ಗೇರ್ VR ವಿತ್ ಕಂಟ್ರೋಲರ್ ಮೊದಲಾದ ಸಾಧನಗಳು ಇಲ್ಲಿದೆ.ಈ ಸ್ಟೋರ್ ನ ಆಕರ್ಷಕ ಫೀಚರ್ ಎನೆಂದರೆ ಇಲ್ಲಿದೆ ಒಂದು ಸ್ಮಾರ್ಟ್ ಟೇಬಲ್, ಡಿಸ್ಪ್ಲೇ ಸಹಿತ. ಇಲ್ಲಿ ಗ್ಯಾಲಕ್ಸಿ ನೋಟ್ 8 ಅನ್ನು ವೈಫೈ ಮುಖೇನ ಕನೆಕ್ಟ್ ಮಾಡಬಹುದು. ಬಳಕೆದಾರರು ಈ ಟೇಬಲ್ ನ ಮೇಲೆ ನೋಟ್ 8 ಇರಿಸಿದರೆ ಸಾಕು, ನೋಟ್ 8 ನ ಎಲ್ಲಾ ಫೀಚರ್ಗಳು ಈ ಟೇಬಲ್ ಮೇಲೆ ಕಾಣ ಸಿಗುತ್ತದೆ!
ಇಷ್ಟೇ ಅಲ್ಲದೆ, ಈ ಸ್ಟೋರ್ ನಲ್ಲಿದೆ ಇನ್ನೂ ಅನೇಕ ಆಕರ್ಷಕ ಇಂಟರ್ಯಾಕ್ಟಿವ್ ಚಟುವಟಿಕೆಗಳು. ಈ ಮೂಲಕ ಬಳಕೆದಾರರು ಪ್ರತಿಯೊಂದು ಸಾಧನಗಳ ವಿಶೇಷತೆಗಳನ್ನು ತಿಳಿದುಕೊಳ್ಳಬಹುದಲ್ಲದೆ ತಮ್ಮ ದಿನ ನಿತ್ಯದ ಜೀವನದಲ್ಲಿ ಈ ಸಾಧನಗಳನ್ನು ಹೇಗೆ ಬಳಸುಬಹುದೆನ್ನುವುದನ್ನು ತಿಳಿದುಕೊಳ್ಳಬಹುದು. ಈ ಸ್ಟೋರ್ ನಲ್ಲಿರುವ ಗ್ಯಾಲಕ್ಸಿ ಫಿಟ್ ಸ್ಟೇಶನ್ ನಲ್ಲಿ ಗೇರ್ ಫಿಟ್2 ಪ್ರೋ ಧರಿಸಿ ವರ್ಚ್ಯುವಲ್ ಪರಿಸರದಲ್ಲಿ ಸೈಕ್ಲಿಂಗ್ ಮಾಡಬಹುದು.
ಇದರೊಂದಿಗೆ , ಸ್ಯಾಮ್ಸಂಗ್ ಗೇರ್ 360, DEX ಸ್ಟೇಶನ್ ಮತ್ತು ಗೇರ್ S3 ಕ್ಲಾಸಿಕ್ ಹಾಗೂ ಗೇರ್ S3 ಫ್ರಾಂಟಿಯರ್ ಮೊದಲಾದ ಸ್ಮಾರ್ಟ್ ವಾಚ್ಗಳು ಕೂಡ ಇಲ್ಲಿ ಡಿಸ್ಪ್ಲೇ ಗೆ ಇರಿಸಲಾಗಿದೆ. ಗ್ಯಾಲಕ್ಸಿ ಸ್ಟುಡಿಯೋದಲ್ಲಿ ಗ್ಯಾಲಕ್ಸಿ ನೋಟ್ 8 ಖರೀದಿಸಿದವರಿಗೆ ಉಚಿತ ಗೇರ್ VR ಅನ್ನು ಉಚಿತವಾಗಿ ನೀಡುತ್ತಿದ್ದಾರೆ.
ಜಲನ್ ಬುಕಿಟ್ ಬಿಂಟಾಂಗ್ ನ ಈ ಸ್ಯಾಮ್ಸಂಗ್ ಗ್ಯಾಲಕ್ಸಿ ಸ್ಟುಡಿಯೋ ಜನವರಿ 31, 2018 ರ ತನಕ ತೆರೆದಿರಲಿದೆ.


Click it and Unblock the Notifications








