Home
ಸುದ್ದಿಜಾಲ

ಗೇಮಿಂಗ್‌ ಪ್ರಿಯರಿಗಾಗಿ ಹೊಸ ಮಾನಿಟರ್‌ ಪರಿಚಯಿಸಿದ ಸ್ಯಾಮ್‌ಸಂಗ್‌! ಬೆಲೆ ಎಷ್ಟಿದೆ ಗೊತ್ತಾ?

ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಹೊಸ ಮಾನಿಟರ್‌ ಬಿಡುಗಡೆ ಮಾಡಿದೆ. ಇದನ್ನು ಸ್ಯಾಮ್‌ಸಂಗ್‌ ಒಡಿಸ್ಸಿ G9 ಮಾನಿಟರ್ ಎಂದು ಹೆಸರಿಸಲಾಗಿದೆ. ಈ ಮಾನಿಟರ್‌ ಅನ್ನು ಗೇಮಿಂಗ್‌ ಪ್ರಿಯರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದರ ಸ್ಲಿಮ್ ವಿನ್ಯಾಸ ಮತ್ತು ಲೋಹದ ಚೌಕಟ್ಟು ಗೇಮರ್‌ಗಳಿಗೆ ಸೂಕ್ತವಾಗಿದೆ.

ಹೌದು, ಸ್ಯಾಮ್‌ಸಂಗ್‌ ಒಡಿಸ್ಸಿ G9 ಮಾನಿಟರ್‌ ಭಾರತದಲ್ಲಿ ಲಾಂಚ್‌ ಆಗಿದೆ. ಈ ಹೊಸ ಮಾನಿಟರ್‌ ನಿಯೋ ಕ್ವಾಂಟಮ್ ಪ್ರೊಸೆಸರ್ ಪ್ರೊ ಅನ್ನು ಒಳಗೊಂಡಿದೆ. ಇದಲ್ಲದೆ ಮಾನಿಟರ್‌ ಡ್ಯುಯಲ್‌ 5W ಬಿಲ್ಟ್-ಇನ್ ಸ್ಪೀಕರ್‌ಗಳನ್ನು ಸಹ ನೀಡಲಾಗಿದೆ. ಇನ್ನುಳಿದಂತೆ ಈ ಹೊಸ ಮಾನಿಟರ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೇಮಿಂಗ್‌ ಪ್ರಿಯರಿಗಾಗಿ ಹೊಸ ಮಾನಿಟರ್‌ ಪರಿಚಯಿಸಿದ ಸ್ಯಾಮ್‌ಸಂಗ್‌!

ಸ್ಯಾಮ್‌ಸಂಗ್‌ ಒಡಿಸ್ಸಿ G9 ಮಾನಿಟರ್ ಫೀಚರ್ಸ್‌ ವಿವರ
ಸ್ಯಾಮ್‌ಸಂಗ್‌ ಒಡಿಸ್ಸಿ G9 ಮಾನಿಟರ್‌ 49 ಇಂಚಿನ OLED ಡಿಸ್‌ಪ್ಲೇ ಹೊಂದಿದೆ. ಇನ್ನು ಡಿಸ್‌ಪ್ಲೇ 5,120 x 1,440 ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಕರ್ವ್ಡ್‌ ಮಾನಿಟರ್ ಆಗಿದ್ದು, 180R ಡಿಗ್ರಿ ವಕ್ರತೆಯನ್ನು ಹೊಂದಿದೆ. ಈ ಮಾನಿಟರ್‌ ಸ್ಕ್ರೀನ್‌ ಡ್ಯುಯಲ್ ಕ್ವಾಡ್ ಹೈ ಡೆಫಿನಿಷನ್ (DQHD) ರೆಸಲ್ಯೂಶನ್ ಅನ್ನು ಒಳಗೊಂಡಿದೆ. 32:9 ರಚನೆಯ ಅನುಪಾತವನ್ನು ಪಡೆದುಕೊಂಡಿದೆ. ಇದು 240Hz ರಿಫ್ರೆಶ್ ರೇಟ್‌ ಮತ್ತು 0.03ms ಕ್ಷಿಪ್ರ ರೆಸ್ಪಾನ್ಸ್‌ ರೇಟ್‌ ಅನ್ನು ಹೊಂದಿದೆ.

ಈ ಮಾನಿಟರ್‌ VESA ಡಿಸ್‌ಪ್ಲೇ HDR400 ಮತ್ತು AMD ಫ್ರೀಸಿಂಕ್ ಅನ್ನು ಸಹ ಹೊಂದಿದೆ. ಈ ಮಾನಿಟರ್‌ ಹಿಂಭಾಗದ ಪ್ಯಾನೆಲ್‌ನಲ್ಲಿ ಕೋರ್‌ಸಿಂಕ್ ಮತ್ತು ಕೋರ್ ಲೈಟಿಂಗ್ + ಟೆಕ್ನಾಲಜಿಯನ್ನು ಒಳಗೊಂಡಿದೆ. ಇದು ಆನ್-ಸ್ಕ್ರೀನ್ ಕಂಟೆಂಟ್‌ನೊಂದಿಗೆ ಕಲರ್‌ಗಳನ್ನು ಸಿಂಕ್ ಮಾಡಲಿದೆ. ಜೊತೆಗೆ VESA-ಮೌಂಟೆಡ್ ಸ್ಟ್ಯಾಂಡ್ ಅನ್ನು ಓರೆಯಾಗಿಸಬಹುದಾಗಿದೆ. ಅಲ್ಲದೆ ಬಳಕೆದಾರರು ಎತ್ತರದ ಆಯ್ಕೆಗಳಲ್ಲಿ ಸೆಟ್‌ ಮಾಡಿಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌ ಒಡಿಸ್ಸಿ G9 ಮಾನಿಟರ್‌ ಡ್ಯುಯಲ್ 5W ಬಿಲ್ಟ್-ಇನ್ ಸ್ಪೀಕರ್‌ಗಳನ್ನು ಹೊಂದಿದೆ. ಇದು ನಿಯೋ ಕ್ವಾಂಟಮ್ ಪ್ರೊಸೆಸರ್ ಪ್ರೊ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಮಾನಿಟರ್‌ನಲ್ಲಿ ಅಪ್ಲಿಕೇಶನ್‌ಗಳು, IoT ಹಬ್, ವಾಯ್ಸ್‌ ಅಸಿಸ್ಟೆಂಟ್‌ ಮತ್ತು ಗೇಮ್‌ಹಬ್‌ನೊಂದಿಗೆ ಸ್ಮಾರ್ಟ್ ಟಿವಿ ಎಕ್ಸ್‌ಪಿರಿಯನ್ಸ್‌ ಅನ್ನು ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡಿಸ್‌ಪ್ಲೇಪೋರ್ಟ್, ಸಿಂಗಲ್‌ HDMI 2.1, ಮೈಕ್ರೋ HDMI 2.1 ಮತ್ತು USB ಹಬ್ ಅನ್ನು ಒಳಗೊಂಡಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಲಿದೆ.

ಗೇಮಿಂಗ್‌ ಪ್ರಿಯರಿಗಾಗಿ ಹೊಸ ಮಾನಿಟರ್‌ ಪರಿಚಯಿಸಿದ ಸ್ಯಾಮ್‌ಸಂಗ್‌!

ಸ್ಯಾಮ್‌ಸಂಗ್‌ ಒಡಿಸ್ಸಿ G9 ಮಾನಿಟರ್ ಭಾರತದಲ್ಲಿ 1,99,990 ರೂ. ಬೆಲೆಯನ್ನು ಹೊಂದಿದೆ. ಇದು ಸ್ಯಾಮ್‌ಸಂಗ್ ಶಾಪ್, ಅಮೆಜಾನ್ ಮತ್ತು ದೇಶಾದ್ಯಂತದ ಪ್ರಮುಖ ರಿಟೇಲ್‌ ಸ್ಟೋರ್‌ಗಳ ಮೂಲಕ ಖರೀದಿಸಬಹುದಾಗಿದೆ.

ಇನ್ನು ಇತ್ತೀಚಿನ ಸುದ್ದಿಗಳಲ್ಲಿ ಸ್ಯಾಮ್‌ಸಂಗ್‌ ಕಂಪೆನಿ ತನ್ನ ಬಹುನಿರೀಕ್ಷಿತ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M34 5G ಸ್ಮಾರ್ಟ್‌ಫೋನ್‌ ಅನ್ನು ಜುಲೈ 7ಕ್ಕೆ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್‌ HD + ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲಿಸಲಿದೆ ಎಂದು ವರದಿಯಾಗಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 1080SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು ಸ್ಮಾರ್ಟ್‌ಫೋನ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿರಲಿದೆ ಎಂದು ಅಂದಾಜಿಸಲಾಗಿದೆ.

Best Mobiles in India

English summary
Samsung Odyssey G9 Gaming Monitor Launched In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+