Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನಿಂದ ಹೊಸ ಸ್ಮಾರ್ಟ್‌ಟಿವಿ ಅನಾವರಣ! ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ!

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳು ಭಾರತದ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ವಿಭಿನ್ನ ಗಾತ್ರದ ಸ್ಮಾರ್ಟ್‌ಟಿವಿಗಳ ಮೂಲಕ ಎಲ್ಲಾ ರೀತಿಯ ಗ್ರಾಹಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಮಾರುಕಟ್ಟೆಯಲ್ಲಿ ಹೊಸ samsung OLED ಟಿವಿ ಮಾದರಿಗಳನ್ನು ಬಿಡುಗಡೆ ಮಾಡಿದೆ.

ಹೌದು, ಸ್ಯಾಮ್‌ಸಂಗ್‌ ಭಾರತದಲ್ಲಿ ಹೊಸ OLED ಟಿವಿ ಮಾದರಿಗಳನ್ನು ಬಿಡುಗಡೆ ಮಾಡಿದೆ. ಈ ಶ್ರೇಣಿಯು S95C ಮತ್ತು S90C ಸರಣಿಯ ಟಿವಿಗಳನ್ನು ಒಳಗೊಂಡಿದ್ದು, 77 ಇಂಚಿನ, 65 ಇಂಚಿನ ಮತ್ತು 55 ಇಂಚಿನ ಆಯ್ಕೆಗಳಲ್ಲಿ ಲಭ್ಯವಾಗಲಿವೆ. ಜೊತೆಗೆ ಸ್ಮಾರ್ಟ್‌ಟಿವಿಗಳು AI-ಸಕ್ರಿಯಗೊಳಿಸಲಾದ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್ 4K ನಿಂದ ಕಾರ್ಯನಿರ್ವಹಿಸಲಿವೆ. ಇನ್ನುಳಿದಂತೆ ಸ್ಮಾರ್ಟ್‌ಟಿವಿಗಳು ಯಾವೆಲ್ಲಾ ವಿಶೇಷತೆ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನಿಂದ ಹೊಸ ಸ್ಮಾರ್ಟ್‌ಟಿವಿ ಅನಾವರಣ! ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ

ಸ್ಯಾಮ್‌ಸಂಗ್‌ OLED ಟಿವಿ ಸರಣಿಯ ವಿಶೇಷತೆ ವಿವರ: ಸ್ಯಾಮ್‌ಸಂಗ್‌ OLED TV ಶ್ರೇಣಿಯು S95C ಮತ್ತು S90C ಸರಣಿಯ ಟಿವಿಗಳನ್ನು ಹೊಂದಿದೆ. ಈ ಸರಣಿಯ ಟಿವಿಗಳು AI ಆಕ್ಟಿವ್‌ ಮಾಡಲಾಗಿರುವ ನ್ಯೂರಲ್ ಕ್ವಾಂಟಮ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದ sub-4K ವಿಷಯವನ್ನು near-4K ಗುಣಮಟ್ಟಕ್ಕೆ ಹೆಚ್ಚಿಸುತ್ತದೆ. ಜೊತೆಗೆ ಡಿಸ್‌ಪ್ಲೇ ವ್ಯಾಪಕ ಶ್ರೇಣಿಯ ಬಣ್ಣಗಳನ್ನು ತಲುಪಿಸಲು PANTONE ನಿಂದ ಪ್ರಮಾಣೀಕರಿಸಲ್ಪಟ್ಟಿದೆ.

ಇದು 2,030 ಪ್ಯಾಂಟೋನ್ ಬಣ್ಣಗಳನ್ನು ಮತ್ತು 110 ಸ್ಕಿನ್ ಟೋನ್ ಕಲರ್‌ಗಳನ್ನು ಒದಗಿಲಸಿದೆ ಎಂದು ಹೇಳಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಗಳು EyeComfort ಮೋಡ್ ಅನ್ನು ಒಳಗೊಂಡಿದ್ದು, ನಿಮ್ಮ ಸುತ್ತಮುತ್ತಲಿನ ಬೆಳಕನ್ನು ಅವಲಂಬಿಸಿ ಸ್ಕ್ರೀನ್‌ ಬ್ರೈಟ್‌ನೆಟ್‌ ಮತ್ತು ಟೋನ್ ಅನ್ನು ಆಟೋಮ್ಯಾಟಿಕ್‌ ಸೆಟ್‌ ಮಾಡಲಿದೆ. ಇದರೊಂದಿಗೆ ಸ್ಮಾರ್ಟ್‌ಟಿವಿಗಳು ಕಿರಿದಾದ ಬೆಜೆಲ್‌ ಹೊಂದಿರುವ ಇನ್ಫಿನಿಟಿ ಒನ್ ವಿನ್ಯಾಸವನ್ನು ಬಳಸುತ್ತವೆ. ಅಲ್ಲದೆ ಲಗತ್ತಿಸಬಹುದಾದ ಒನ್ ಕನೆಕ್ಟ್ ಬಾಕ್ಸ್ ಅನ್ನು ಸಹ ಪಡೆದುಕೊಂಡಿವೆ.

ಸ್ಮಾರ್ಟ್‌ಟಿವಿಗಳು ವಾಯರ್‌ಲೆಸ್ ಡಾಲ್ಬಿ ಅಟ್ಮಾಸ್ ಆಡಿಯೊ ಮತ್ತು OTS+ ಅನ್ನು ಸಹ ಬೆಂಬಲಿಸುತ್ತವೆ. ಒಂದೇ ಸಮಯದಲ್ಲಿ ಸೌಂಡ್‌ಬಾರ್ ಮತ್ತು ಟಿವಿ ಸ್ಪೀಕರ್‌ಗಳಿಂದ ಸೌಂಡ್‌ ಅನ್ನು ಪ್ಲೇ ಮಾಡುವುದಕ್ಕೆ ಅನುಮತಿಸುವ ಕ್ಯೂ-ಸಿಂಫನಿ ಫೀಚರ್ಸ್‌ ಅನ್ನು ಒಳಗೊಂಡಿದೆ. ಈ ಹೊಸ ಮಾದರಿಗಳ ರಿಮೋಟ್ ಕೂಡ ಸಾಕಷ್ಟು ವಿಶೇಷತೆಯಿಂದ ಕೂಡಿದ್ದು, ಸೋಲಾರ್‌ ಚಾರ್ಜಿಂಗ್‌ ಸಿಸ್ಟಂ ಅನ್ನು ಹೊಂದಿದೆ. ಇದರಿಂದ ಇನ್‌ಸೈಟ್‌ ಲೈಟ್‌ ಇಲ್ಲವೇ ಮನೆಯಲ್ಲಿರುವ ವಿವಧ ಡಿವೈಸ್‌ಗಳಿಂದ ಉತ್ಪತ್ತಿಯಾಗುವ ವಿದ್ಯುತ್ಕಾಂತೀಯ ತರಂಗಗಳಿಂದ ಚಾರ್ಜ್ ಮಾಡಬಹುದು.

ಸ್ಯಾಮ್‌ಸಂಗ್‌ನಿಂದ ಹೊಸ ಸ್ಮಾರ್ಟ್‌ಟಿವಿ ಅನಾವರಣ! ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ

ಇನ್ನು ಸ್ಯಾಮ್‌‌ಸಂಗ್ OLED ಟಿವಿಗಳು ಗೇಮಿಂಗ್‌ಗಾಗಿ Motion Xcelerator Turbo Pro ಟೆಕ್ನಾಲಜಿಯನ್ನು ಒಳಗೊಂಡಿವೆ. ಜೊತೆಗೆ ಗೇಮ್ ಬಾರ್, ಮಿನಿ ಮ್ಯಾಪ್ ಜೂಮ್ ಮತ್ತು ವರ್ಚುವಲ್ ಏಮ್ ಪಾಯಿಂಟ್‌ನಂತಹ ವಿವಿಧ ಗೇಮಿಂಗ್ ಫೀಚರ್ಸ್‌ಗಳನ್ನು ಕೂಡ ಹೊಂದಿದೆ. ಇದಲ್ಲದೆ ಹೊಸ ಮಾದರಿಯ ಸ್ಮಾರ್ಟ್‌ಟಿವಿಗಳು ಕಾಮ್ ಆನ್‌ಬೋರ್ಡಿಂಗ್ ಫೀಚರ್ಸ್‌ನೊಂದಿಗೆ ಇನ್‌ಬಿಲ್ಟ್‌ IoT ಹಬ್ ಮತ್ತು ಸುತ್ತಮುತ್ತಲಿನ ಎಲ್ಲಾ ಸ್ಮಾರ್ಟ್ ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು, ನಿಯಂತ್ರಿಸಲು IoT-ಸಕ್ರಿಯಗೊಳಿಸಿದ ಸೆನ್ಸಾರ್‌ಗಳನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ: ಸ್ಯಾಮ್‌ಸಂಗ್‌ OLED TV ಸರಣಿಯ ಸ್ಮಾರ್ಟ್‌ಟಿವಿ 1,69,990ರೂ. ಬೆಲೆ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ಎರಡು ವರ್ಷಗಳ ವಾರಂಟಿಯೊಂದಿಗೆ ಬರುತ್ತವೆ. ಸ್ಯಾಮ್‌ಸಂಗ್ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಮಾಡಿದ ಖರೀದಿಗಳ ಮೇಲೆ ಶೇಕಡಾ 20 ರಷ್ಟು ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಇದರೊಂದಿಗೆ ಸುಲಭ EMI ಆಯ್ಕೆಗಳು ಕೂಡ ನೀಡುತ್ತಿದ್ದು, ಇವುಗಳು 2,990ರೂ.ನಿಂದ ಪ್ರಾರಂಭವಾಗುತ್ತವೆ. ಇವುಗಳ ಕಲರ್‌ ಆಯ್ಕೆಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Best Mobiles in India

English summary
Samsung OLED TV range runs on the company's Neural Quantum Processor with 4K Upscaling.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+