Home
ಸುದ್ದಿಜಾಲ

ನಿಮ್ಮ ಬೆಂಗಳೂರಿನಲ್ಲಿ ವಿಶ್ವದ ದೊಡ್ಡ ಮೊಬೈಲ್‌ ಅನುಭವ ಕೇಂದ್ರ

ಐಟಿ ಲೋಕದಲ್ಲಿ ಕನ್ನಡ ನಾಡಿಗೆ ಮತ್ತೊಂದು ಗರಿ ಸಂದಿದೆ. ಇತ್ತೀಚೆಗೆ ತಾನೇ ಕೋಲಾರದಲ್ಲಿ ಆಪಲ್‌ ಉತ್ಪಾದನಾ ಘಟಕ ಪ್ರಾರಂಭವಾಗಿತ್ತು. ವಿಶ್ವದ ಅತಿ ದೊಡ್ಡ ಮೊಬೈಲ್‌ ಉತ್ಪಾದನಾ ಘಟಕವನ್ನು ದೆಹಲಿಯ ನೋಯ್ಡಾದಲ್ಲಿ ಪ್ರಾರಂಭಿಸಿದ್ದ ಸ್ಯಾಮ್‌ಸಂಗ್‌ ಬೆಂಗಳೂರಿನಲ್ಲಿ ವಿಶ್ವದ ಅತಿ ದೊಡ್ಡ ಮೊಬೈಲ್‌ ಎಕ್ಸ್‌ಪಿರಿಯನ್ಸ್‌ ಸೆಂಟರ್‌ ಪ್ರಾರಂಭಿಸಿ ಮತ್ತೊಂದು ಬಾರಿ ಬೆಂಗಳೂರನ್ನು ಐಟಿ ಜಗತ್ತಿನ ಭೂಪಟದಲ್ಲಿ ಮೆರೆಯುವಂತೆ ಮಾಡಿದೆ.

ನಿಮ್ಮ ಬೆಂಗಳೂರಿನಲ್ಲಿ ವಿಶ್ವದ ದೊಡ್ಡ ಮೊಬೈಲ್‌ ಅನುಭವ ಕೇಂದ್ರ

ಹೌದು, ಮಂಗಳವಾರ ದಕ್ಷಿಣ ಕೊರಿಯಾದ ಟೆಕ್ ಕಂಪನಿ ಸ್ಯಾಮ್‌ಸಂಗ್‌ ಬೆಂಗಳೂರಿನಲ್ಲಿ ವಿಶ್ವದ ಅತಿ ದೊಡ್ಡ ಮೊಬೈಲ್‌ ಎಕ್ಸ್‌ಪಿರಿಯನ್ಸ್‌ ಸೆಂಟರ್‌ ಪ್ರಾರಂಭಿಸಿದೆ. ಭಾರತದಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸ್ಯಾಮ್‌ಸಂಗ್ ನೋಯ್ಡಾದಲ್ಲಿ ವಿಶ್ವದಲ್ಲಿ ಅತಿದೊಡ್ಡ ಉತ್ಪಾದನಾ ಘಟಕ ಪ್ರಾರಂಭಿಸಿದ ಎರಡು ತಿಂಗಳ ಬೆನ್ನಲ್ಲೆ ಬೆಂಗಳೂರಿನ ಬ್ರಿಗೇಡ್ ರಸ್ತೆಯಲ್ಲಿನ ಒಪೆರಾ ಹೌಸ್‌ ಥಿಯೇಟರ್‌ನ್ನು ಸ್ಯಾಮ್‌ಸಂಗ್‌ ಒಪೆರಾ ಹೌಸ್‌ ಆಗಿ ಪರಿವರ್ತಿಸಿ ಗ್ರಾಹಕರಿಗೆ ಉತ್ತಮ ಅನುಭವ ನೀಡಲು ಸ್ಯಾಮ್‌ಸಂಗ್‌ ಮುಂದಾಗಿದೆ.

ಭಾರತಕ್ಕಾಗಿ ಸ್ಯಾಮ್‌ಸಂಗ್‌

ಭಾರತಕ್ಕಾಗಿ ಸ್ಯಾಮ್‌ಸಂಗ್‌

ಹೀಗಾಗಲೇ ಗೂಗಲ್ ಭಾರತಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರಂತೆ ಸ್ಯಾಮ್‌ಸಂಗ್‌ ಕೂಡ ಭಾರತಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮೇಕ್ ಫಾರ್ ಇಂಡಿಯಾ ಯೋಜನೆಯಡಿ ಬೆಂಗಳೂರಿನಲ್ಲಿ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ ಪ್ರಾರಂಭಿಸಿದ್ದು, ಬೆಂಗಳೂರಿನ ದೊಡ್ಡ ಸಮುದಾಯದ ಭಾಗವಾಗಲು ಸ್ಯಾಮ್‌ಸಂಗ್‌ ಇಷ್ಟಪಡುತ್ತಿದೆ ಎಂದು ಸ್ಯಾಮ್‌ಸಂಗ್‌ ಇಂಡಿಯಾದ ಮೊಬೈಲ್ ಉದ್ಯಮದ ಹಿರಿಯ ಉಪಾಧ್ಯಕ್ಷ ಮೋಹನ್‌ ದೀಪ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಇನ್ನು ಹೆಚ್ಚಿನ ಅನುಭವ ಕೇಂದ್ರಗಳು

ಭಾರತದಲ್ಲಿ ಇನ್ನು ಹೆಚ್ಚಿನ ಅನುಭವ ಕೇಂದ್ರಗಳು

ಭಾರತದಲ್ಲಿ ಇಂತಹ ಹೆಚ್ಚಿನ ಅನುಭವ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದ್ದೇವೆ. ಆ ಕೇಂದ್ರಗಳೊಂದಿಗೆ ಭಾರತದಲ್ಲಿ ಕಾಲಕಾಲಕ್ಕೆ ಎಲ್ಲಾ ದೊಡ್ಡ ನಗರಗಳನ್ನು ನಾವು ಆವರಿಸಲಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ. ಆದರೆ, ಭಾರತದಲ್ಲಿ ಯಾವಾಗ ಆ ಕೇಂದ್ರಗಳು ಪ್ರಾರಂಭವಾಗುತ್ತವೆ ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ.

ವರ್ಚುವಲ್ ರಿಯಾಲಿಟಿ

ವರ್ಚುವಲ್ ರಿಯಾಲಿಟಿ

ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ ಅನುಭವ ಕೇಂದ್ರವು ಭಾರತದಲ್ಲಿ ಮೊದಲ ಬಾರಿಗೆ ವರ್ಚುವಲ್ ರಿಯಾಲಿಟಿ(ವಿಆರ್), ಕೃತಕ ಬುದ್ಧಿಮತ್ತೆ (ಎಐ)ಮತ್ತು ಇಂಟರ್‌ನೆಟ್‌ ಆಫ್ ಥಿಂಗ್ಸ್‌ ಅನುಭವಗಳನ್ನು ಹೊಂದಿದೆ. ಹಾಗೂ 4D ಸ್ವೇ ಚೇರ್ ಅಥವಾ ವಿಪ್ಲ್ಯಾಶ್ ಪಲ್ಸರ್‌ನಂತಹ ವಿಆರ್ ಅನುಭವಗಳನ್ನು ನೀಡುತ್ತದೆ. 4D ಚೇರ್ 360 ಡಿಗ್ರಿಯ 3 ಡೈಮೆನ್ಸನ್‌ ಚಲನೆಗಳನ್ನು ಸ್ಯಾಮ್‌ಸಂಗ್‌ ಅನುಭವ ಕೇಂದ್ರ ಗ್ರಾಹಕರಿಗೆ ನೀಡುತ್ತದೆ.

ಏನೇನಿದೆ..?

ಏನೇನಿದೆ..?

ಸ್ಯಾಮ್‌ಸಂಗ್‌ನ ಒಪೆರಾ ಹೌಸ್‌ನಲ್ಲಿ ಕ್ಯೂ ಎಲ್‌ಸಿಡಿ ಟಿವಿ, ಸ್ಮಾರ್ಟ್ ಟಿವಿಗಳು, ದಿ ಫ್ರೇಮ್ ಮತ್ತು ಫ್ಯಾಮಿಲಿ ಹಬ್ ರೆಫ್ರಿಜರೇಟರ್‌ಗಳಂತಹ ಪ್ರಮುಖ ಗ್ರಾಹಕ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಜತೆಗೆ ಅನುಭವ ಕೇಂದ್ರದಲ್ಲಿ ಸ್ಮಾರ್ಟ್‌ಫೋನ್‌ಗಳು ಹಾಗೂ ವಿಯರೆಬಲ್‌ ಡಿವೈಸ್‌ಗಳನ್ನು ಪ್ರದರ್ಶಿಸಲಾಗುತ್ತದೆ.

ಅಡುಗೆ ಮನೆಯೂ ಇದೆ

ಅಡುಗೆ ಮನೆಯೂ ಇದೆ

ಸ್ಯಾಮ್‌ಸಂಗ್‌ನ ಅನುಭವ ಕೇಂದ್ರದಲ್ಲಿ ಹೋಮ್‌ ಅಪ್ಲಾಯನ್ಸ್‌ ವಲಯವನ್ನು ಸಹ ಹೊಂದಿದೆ. ಈ ವಲಯ ಕಿಚನ್‌ ಸೆಟ್-ಅಪ್ ಕೂಡ ಹೊಂದಿದೆ. ಇಲ್ಲಿ, ಸ್ಯಾಮ್‌ಸಂಗ್‌ ಸ್ಮಾರ್ಟ್‌ ಒವನ್‌ಗಳನ್ನು ಬಳಸಿಕೊಂಡು ಶೆಪ್‌ ಅಡುಗೆ ಮಾಡಿ ನೇರವಾಗಿ ಪ್ರದರ್ಶನಕ್ಕಿಡುತ್ತಾರೆ.

ಅಕ್ಸೆಸರಿಸ್‌ ಮೇಳ

ಅಕ್ಸೆಸರಿಸ್‌ ಮೇಳ

ಸ್ಯಾಮ್‌ಸಂಗ್‌ನ ಒಪೇರಾ ಹೌಸ್‌ನಲ್ಲಿ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಬ್ಯಾಕ್‌ಕೇಸ್, ಕವರ್ ಮತ್ತು ಪವರ್ ಬ್ಯಾಂಕ್‌ಗಳಂತಹ ಅಕ್ಸೆಸರಿಸ್‌ಗಳನ್ನು ಪ್ರದರ್ಶನಕ್ಕಿಡಲಾಗಿದೆ. ಇಲ್ಲಿ ನಿಮಗೆ ಬೇಕಾದ ಅಕ್ಸೆಸರಿಸ್‌ಗಳನ್ನು ಖರೀದಿಸಬಹುದು.

ಕಸ್ಟಮೈಸ್‌ ಅಕ್ಸೆಸರಿಸ್‌

ಕಸ್ಟಮೈಸ್‌ ಅಕ್ಸೆಸರಿಸ್‌

ಅಕ್ಸೆಸರಿಸ್‌ಗಳನ್ನು ಗ್ರಾಹಕರು ತಮಗೆ ಬೇಕಾದಂತೆ ಕಸ್ಟಮೈಸ್‌ ಮಾಡಿ ವಿನ್ಯಾಸ ರೂಪಿಸಿಕೊಳ್ಳುವ ಆಯ್ಕೆಯನ್ನು ಸ್ಯಾಮ್‌ಸಂಗ್‌ ನೀಡಿದೆ. ಸ್ಕ್ರೀನ್ ಸುರಕ್ಷತೆ ಹಾಗೂ 360 ಡಿಗ್ರಿ ಸ್ಮಾರ್ಟ್‌ಫೋನ್ ಬಾಡಿ ರಕ್ಷಣೆಗಾಗಿ ಸೈನ್ಯದ ಸಾಮರ್ಥ್ಯ ಹೊಂದಿರುವ ಚರ್ಮದ ಕೇಸ್‌ಗಳನ್ನು ಗ್ರಾಹಕರಿಗೆ ನೀಡಲಾಗುವುದು. ಗ್ರಾಹಕರು ಆಯ್ಕೆ ಮಾಡುವ ಕವರ್‌ನಲ್ಲಿ ಗ್ರಾಹಕರಿಗೆ ಬೇಕಾದ ವಿನ್ಯಾಸ ಅಥವಾ ವಿಷಯವನ್ನು ಲೇಸರ್ ಕೆತ್ತನೆ ಮೂಲಕ ಪ್ರಸ್ತುತಪಡಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

ಮತ್ತೇನಿದೆ..?

ಮತ್ತೇನಿದೆ..?

ಬ್ರಿಗೇಡ್‌ ರೋಡ್‌ನಲ್ಲಿ ತಲೆಯೆತ್ತಿರುವ ಸ್ಯಾಮ್‌ಸಂಗ್‌ ಒಪೆರಾ ಹೌಸ್‌ನಲ್ಲಿ ಹರ್ಮನ್ ಕಾರ್ಡಾನ್, ಜೆಬಿಎಲ್ ಮತ್ತು ಸ್ಯಾಮ್‌ಸಂಗ್ ಕಂಪನಿಯ ಆಡಿಯೋ ಉತ್ಪನ್ನಗಳು ಸಹ ದೊರೆಯುತ್ತವೆ. ಒಟ್ಟಾರೆ, ಸ್ಯಾಮ್‌ಸಂಗ್‌ ಅನುಭವ ಕೇಂದ್ರ ಬೆಂಗಳೂರಿನಲ್ಲಿ ಹೊಸ ಸಾಧ್ಯತೆಯನ್ನು ತೆರೆದಿದೆ.

ನೋಯ್ಡಾದಲ್ಲಿದೆ ದೊಡ್ಡ ಉತ್ಪಾದನಾ ಘಟಕ

ನೋಯ್ಡಾದಲ್ಲಿದೆ ದೊಡ್ಡ ಉತ್ಪಾದನಾ ಘಟಕ

ಕಳೆದ ವರ್ಷದ ಜೂನ್‌ನಲ್ಲಿ ದಕ್ಷಿಣ ಕೊರಿಯಾದ ಟೆಕ್ ಪ್ರಮುಖ ಸ್ಯಾಮ್‌ಸಂಗ್‌ ನೋಯ್ಡಾ ಉತ್ಪಾದನಾ ಘಟಕವನ್ನು ವಿಸ್ತರಿಸಲು 4,915 ಕೋಟಿ ರೂ. ಹೂಡಿಕೆ ಮಾಡಿತ್ತು, ಒಂದು ವರ್ಷದ ನಂತರ ಹೊಸ ಸೌಲಭ್ಯಗಳೊಂದಿಗದೆ ಎರಡು ಪಟ್ಟು ಉತ್ಪಾದನೆಯನ್ನು ಸ್ಯಾಮ್‌ಸಂಗ್‌ನ ನೋಯ್ಡಾ ಘಟಕ ಮಾಡುತ್ತಿದೆ. ಸ್ಯಾಮ್‌ಸಂಗ್‌ ಸದ್ಯ ಭಾರತದಲ್ಲಿ 67 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದ್ದು, ನೋಯ್ಡಾ ಘಟಕ ಕಾರ್ಯಾರಂಭದ ನಂತರ ಸುಮಾರು 120 ಮಿಲಿಯನ್ ಮೊಬೈಲ್ ಫೋನ್‌ಗಳ ತಯಾರಿಕೆಯನ್ನು ನಿರೀಕ್ಷಿಸಲಾಗಿದೆ.

ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ನಂ.1

ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ನಂ.1

2018ರ ಮೊದಲಾರ್ಧದಲ್ಲಿ ಶೇ. 48 ಮಾರುಕಟ್ಟೆ ಪಾಲನ್ನು ಹೊಂದಿರುವ ಸ್ಯಾಮ್‌ಸಂಗ್‌ ಪ್ರೀಮಿಯಂ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದೆ ಎಂದು ಸೈಬರ್‌ ಮೀಡಿಯಾ ರಿಸರ್ಚ್ (ಸಿಎಂಆರ್) ವರದಿ ಮಾಡಿದೆ.

Best Mobiles in India

English summary
Samsung Opens 'Largest Mobile Experience Centre in the World', in Bengaluru. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+