Home
ಸುದ್ದಿಜಾಲ

ವಿಶ್ವದ ಬೃಹತ್‌ ಮೊಬೈಲ್ ಉತ್ಪಾದನಾ ಘಟಕ ಭಾರತದಲ್ಲೇ ನಿರ್ಮಾಣವಾಗಿದ್ದು ಏಕೆ?!

By Bhaskar N J

ದಕ್ಷಿಣ ಕೊರಿಯಾದ ತಂತ್ರಜ್ಞಾನ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿಯು ವಿಶ್ವದಲ್ಲಿಯೇ ಅತಿ ದೊಡ್ಡ ಮೊಬೈಲ್‌ ಉತ್ಪಾದನಾ ಘಟಕವನ್ನು ಭಾರತದಲ್ಲಿ ತೆರೆದಿದಿದ್ದು ಈಗ ವೈರಲ್ ಆಗಿದೆ. ವಿಶ್ವದಾಧ್ಯಂತ ಮಾರುಕಟ್ಟೆಯನ್ನು ಹೊಂದಿರುವ ಸ್ಯಾಮ್‌ಸಂಗ್‌ ಕಂಪೆನಿ ಭಾರತದಲ್ಲಿ ಜಗತ್ತಿನಲ್ಲಿಯೇ ಬೃಹತ್‌ ಮೊಬೈಲ್‌ ಉತ್ಪಾದನಾ ಘಟಕ ನಿರ್ಮಿಸಿ ವಿಶ್ವಕ್ಕೆ ಆಶ್ಚರ್ಯಗೊಳಿಸಿದೆ.

ಹೌದು, ವಿಶ್ವದ ದಿಗ್ಗಜ ಟೆಕ್ ಕಂಪೆನಿಯೊಂದು ಬೃಹತ್‌ ಮೊಬೈಲ್‌ ಉತ್ಪಾದನಾ ಘಟಕ ನಿರ್ಮಿಸಲು ಭಾರತವನ್ನೇ ಆಯ್ದುಕೊಂಡಿದ್ದು ಏಕೆ?, ಭಾರತದಲ್ಲಿ ಸ್ಯಾಮ್‌ಸಂಗ್‌ ಹೊಂದಿರುವ ದೂರದೃಷ್ಟಿ ಯಾವುವು?, ಭಾರತದಲ್ಲಿ ಬೃಹತ್‌ ಮೊಬೈಲ್‌ ಉತ್ಪಾದನಾ ಘಟಕ ತೆರೆದಿರುವುದರಿಂದ ಏನೆಲ್ಲಾ ಬದಲಾವಣೆಗಳು ಆಗಬಹುದು ಎಂದು ಎಲ್ಲರಿಗೂ ಪ್ರಶ್ನೆಗಳು ಮೂಡುತ್ತಿವೆ.

ವಿಶ್ವದ ಬೃಹತ್‌ ಮೊಬೈಲ್ ಉತ್ಪಾದನಾ ಘಟಕ ಭಾರತದಲ್ಲೇ ನಿರ್ಮಾಣವಾಗಿದ್ದು ಏಕೆ?!

ಹಾಗಾಗಿ, ಇಂದಿನ ಲೇಖನದಲ್ಲಿ ದಕ್ಷಿಣ ಕೊರಿಯಾದ ತಂತ್ರಜ್ಞಾನ ದಿಗ್ಗಜ ಸ್ಯಾಮ್‌ಸಂಗ್‌ ಕಂಪೆನಿಯು ಜಗತ್ತಿನಲ್ಲಿಯೇ ಬೃಹತ್‌ ಮೊಬೈಲ್‌ ಉತ್ಪಾದನಾ ಘಟಕ ಭಾರತವನ್ನೇ ಆಯ್ದುಕೊಂಡಿದ್ದು ಏಕೆ? ಭಾರತವೇಕೆ ವಿಶ್ವದ ಪ್ರಮುಖ ಮೊಬೈಲ್‌ ಉತ್ಪಾದನಾ ತಾಣವಾಗಿ ಹೊರಹೊಮ್ಮುತ್ತಿದೆ? ಎಂಬುದನ್ನು ಸೂಕ್ತ ಕಾರಣಗಳನ್ನು ನಾವು ನಿಮಗೆ ನೀಡುತ್ತಿದ್ದೇವೆ.

ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ!

ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆ!

ಮೊದಲನೆಯದಾಗಿ ಭಾರತದಲ್ಲಿ ದಿನೇದಿನೆ ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಎಂಬ ಹೆಗ್ಗಳಿಕೆಯನ್ನು ಭಾರತ ಪಡೆದಿದೆ. ಚೀನಾದ ನಂತರ ಭಾರತವೇ ಅತಿ ದೊಡ್ಡ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಎಂಬ ಸತ್ಯ ಸ್ಯಾಮ್‌ಸಂಗ್ ಕಂಪೆನಿಗೆ ತಿಳಿದಿದೆ.

ಭಾರತದ ಮಾರುಕಟ್ಟೆಯೇ ಬೇಕಿದೆ.!

ಭಾರತದ ಮಾರುಕಟ್ಟೆಯೇ ಬೇಕಿದೆ.!

ಭಾರತದಲ್ಲಿ ಈಗಾಗಲೇ 34 ಕೋಟಿಯಷ್ಟು ಸ್ಮಾರ್ಟ್‌ಫೋನ್‌ ಬಳಕೆದಾರರಾರಿದ್ದು, 2022ರ ವೇಳೆಗೆ ಭಾರತದ ಸ್ಮಾರ್ಟ್‌ಫೋನ್‌ ಗ್ರಾಹಕರ ಸಂಖ್ಯೆ 50 ಕೋಟಿ ಮೀರಿ ದಾಟುವ ನಿರೀಕ್ಷೆಯನ್ನು ಮೊಬೈಲ್ ಮಾರುಕಟ್ಟೆ ಹೊಂದಿದೆ. ಚೀನಾದಲ್ಲಿ ಈಗಾಗಲೇ ಬೆಳವಣಿಗೆ ಕುಂಟಿತವನ್ನು ನಿರೀಕ್ಷಿಸಿರುವುದರಿಂದ, ಭಾರತದ ಮಾರುಕಟ್ಟೆಯು ಮೊಬೈಲ್ ಕಂಪೆನಿಗಳ ಹಾಟ್‌ ಫೇವರೇಟ್.

ಮೇಕ್ ಇನ್‌ ಇಂಡಿಯಾ

ಮೇಕ್ ಇನ್‌ ಇಂಡಿಯಾ

ಯಾವುದೇ ಕಂಪನಿಗಳಿಗೆ ಭಾರತದಲ್ಲಿ ತಮ್ಮ ಉತ್ಪಾದನಾ ಸಾಮರ್ಥ್ಯ‌ ವಿಸ್ತರಣೆಗೆ ಇಲ್ಲಿನ ಮಾರುಕಟ್ಟೆ ಮತ್ತು ಭವಿಷ್ಯದ ಅವಕಾಶಗಳು ಪ್ರೇರಣೆಯಾಗಲು ಮೇಕ್ ಇನ್‌ ಇಂಡಿಯಾ ಅಭಿಯಾನ ಕಾರಣವಾಗಿದೆ. ಭಾರತದಲ್ಲಿ ಉತ್ಪಾದನೆ ಮಾಡಲು ಕೇಂದ್ರ ಸರಕಾರ ಸಹಾಯ ಮತ್ತು ಉತ್ತೇಜನ ನೀಡುತ್ತಿರುವುದರಿಂದ ಭಾರತದಲ್ಲಿ ಉತ್ಪಾದನಾ ಘಟಕಗಳು ಹೆಚ್ಚುತ್ತಿವೆ.

ಆಮದು ಶುಲ್ಕ ಹೆಚ್ಚಳ!

ಆಮದು ಶುಲ್ಕ ಹೆಚ್ಚಳ!

ಇತ್ತೀಚಿನ ವರ್ಷದ ತನಕ ಭಾರತಕ್ಕೆ ಶೇ.90ರಷ್ಟು ಮೊಬೈಲ್‌ ಬಿಡಿ ಭಾಗಗಳು ಆಮದಾಗುತ್ತಿದ್ದವು ಹಾಗೂ ಇಲ್ಲಿ ಜೋಡಣೆಯಾಗುತ್ತಿತ್ತು.ಇದಕ್ಕಾಗಿ ಸರಕಾರ ಮೊಬೈಲ್‌ ಬಿಡಿ ಭಾಗಗಳ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಿತ್ತು. ಭಾರತದಲ್ಲಿಯೇ ಉತ್ಪಾದನೆ ಮಾಡಿದರೆ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಕಡಿಮೆಯಾಗುವಂತಹ ಪರಿಸ್ಥಿತಿಯನ್ನು ಭಾರತ ಸರ್ಕಾರ ಸೃಷ್ಟಿಸಿತ್ತು.

ಹೇರಳ ಮಾನವ ಸಂಪನ್ಮೂಲ!

ಹೇರಳ ಮಾನವ ಸಂಪನ್ಮೂಲ!

ಭಾರತದಲ್ಲಿ ಹೇರಳವಾದ ಮಾನವ ಸಂಪನ್ಮೂಲ ಇರುವುದನ್ನು ಸ್ಯಾಮ್‌ಸಂಗ್ ಗಮನಿಸಿದೆ. ವಿಶ್ವದ ಶ್ರೇಷ್ಟ ತಂತ್ರಜ್ಞರನ್ನು ಹುಟ್ಟುಹಾಕುವ ಭಾರತದಲ್ಲಿ ಮಾನವ ಸಂಪನ್ಮೂಲಕ್ಕೆ ಕೊರತೆಯಾಗದಿರುವುದನ್ನು ಸ್ಯಾಮ್‌ಸಂಗ್ ಕಂಡುಕೊಂಡಿದೆ. ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿ ಮಾನವ ಸಂಪನ್ಮೂಲಕ್ಕೆ ಅತ್ಯಂತ ಕಡಿಮೆ ವೆಚ್ಚವಾಗಲಿದೆ.

ಎಫ್‌ಡಿಐ ಉದಾರೀಕರಣ!

ಎಫ್‌ಡಿಐ ಉದಾರೀಕರಣ!

ಭಾರತ ಇತ್ತೀಚಿನ ವರ್ಷಗಳಲ್ಲಿ ಮೊಬೈಲ್‌ ಉತ್ಪಾದನಾ ವಲಯಕ್ಕೆ ವಿದೇಶಿ ನೇರ ಬಂಡವಾಳ ಹೂಡಿಕೆಯ ನೀತಿಗಳನ್ನು ಸಡಿಲಗೊಳಿಸಿದೆ. ಇದರಿಂದ ಕಂಪನಿಗಳಿಗೆ ಸಗಟು ಮತ್ತು ರಿಟೇಲ್ ವಿಭಾಗದಲ್ಲಿ ಸರಕಾರದ ಅನುಮತಿ ಪಡೆದು ವ್ಯವಹರಿಸುವ ತೊಂದರೆ ಪರಿಹಾರವಾಗಿದೆ. ಇದರಿಂದ ಸ್ಯಾಮ್‌ಸಂಗ್ ಭಾರತವನ್ನು ತನ್ನ ಎರಡನೇ ಮನೆ ಮಾಡಿಕೊಳ್ಳಲು ಮುಂದಾಗಿದೆ.

Best Mobiles in India

English summary
In India, there are approximately 40 crores smartphone users and 32 crores are currently subscribers of broadband connect.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+