ಪ್ರೋಜೆಕ್ಟರ್ ಇಲ್ಲದೆ ಸಿನಿಮಾ ತೋರಿಸುವ ಸ್ಯಾಮ್‌ಸಂಗ್ - PVR : ಸಿಂಗಲ್ ಸ್ಕ್ರಿನ್ ನೋಡುವವರಿಲ್ಲ...!
ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಮತ್ತು ಅಭಿಮಾನಿಗಳನ್ನು ಹೊಂದಿರುವುದು ಎಂದರೆ ಕ್ರಿಕೆಟ್ ಮತ್ತು ಸಿನಿಮಾ. ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ನಗರಗಳಲ್ಲಿಯೂ ಮಲ್ಟಿಪ್ಲೆಕ್ಸ್‌ಗಳು ಹೆಚ್ಚಾಗುತ್ತಿದೆ. ಅಲ್ಲದೇ ಸಿನಿಮಾ ನೋಡುವ ಅನುಭವವನ್ನು ದಿನದಿಂದ ದಿನಕ್ಕೆ ಉತ್ತಮ ಪಡಿಸುತ್ತಿದೆ. ಇದೇ ಮಾದರಿಯಲ್ಲಿ ಹೊಸ ತಂತ್ರಜ್ಞಾನಗಳು ಕಾಣಿಸಿಕೊಳ್ಳುತ್ತಿದ್ದು, ಟೆಕ್ ದೈತ್ಯ ಸ್ಯಾಮ್‌ಸಂಗ್ ಭಾರತೀಯರ ಸಿನಿಮಾ ನೋಡುವ ಅನುಭವನ್ನು ಬದಲಾಯಿಸುವ ಸಲುವಾಗಿ ಹೊಸ ಮಾದರಿಯ ಸ್ಕ್ರಿನ್ ವೊಂದನ್ನು ಲಾಂಚ್ ಮಾಡಿದೆ.

ಇದುವರೆಗೂ ಮಲ್ಟಿಪ್ಲೆಕ್ಸ್ ಸೇರಿದಂತೆ ಸಾಮಾನ್ಯ ಚಿತ್ರಮಂದಿರಗಳಲ್ಲಿ ಪ್ರೋಜೆಟರ್‌ಗಳ ಸಹಾಯದಿಂದ ಸಿನಿಮಾವನ್ನು ಪ್ರದರ್ಶಿಸಲಾಗುತ್ತಿದೆ. ಆದರೆ ಇದನ್ನು ಬದಲಾಯಿಸಿ, ಅತ್ಯಂತ ಗುಣಮಟ್ಟದ ಸಿನಿಮಾವನ್ನು ಹೊಸ ಮಾದರಿಯಲ್ಲಿ ತೋರಿಸಲು LED ಸ್ಕ್ರಿನ್ ಅನ್ನು ಸ್ಯಾಮ್‌ಸಂಗ್ ಜಾಗತಿಕವಾಗಿ ಪರಿಚಯಿಸಿದೆ. ಟಿವಿಯಲ್ಲಿ ನೋಡಿದ ಮಾದರಿಯ ಗುಣಮಟ್ಟದ ಸಿನಿಮಾವನ್ನು ಸಿನಿಮಾ ಮಂದಿರದಲ್ಲಿಯೂ ನೋಡುವ ಅವಕಾಶವನ್ನು ಮಾಡಿಕೊಟ್ಟಿದೆ.

ಸ್ಯಾಮ್‌ಸಂಗ್ ಓನಿಕ್ಸ್ LED:
ಇಂದಿನ ದಿನದಲ್ಲಿ ಮನೆಯಲ್ಲಿಯೇ ಗುಣಮಟ್ಟದ TV ಬಂದಿರುವ ಹಿನ್ನಲೆಯಲ್ಲಿ ಥಿಯೇಟರ್‌ಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಈ ಹಿನ್ನಲೆಯಲ್ಲಿ ಸಿನಿ ರಸಿಕರಿಗೆ ಇನ್ನು ಹೆಚ್ಚಿನ ಪ್ರಮಾಣದ ಗುಣಮಟ್ಟದ ಸಿನಿಮಾ ಮತ್ತು ಸೌಂಡ್ ಅನ್ನು ನೀಡುವ ಸಲುವಾಗಿ ಸ್ಯಾಮ್‌ಸಂಗ್ ಓನಿಕ್ಸ್ LED ಸ್ಕ್ರಿನ್ ಅನ್ನು ಸಿನಿಮಾ ಮಂದಿರದಲ್ಲಿ ಅಳಡಿಸಲು ಮುಂದಾಗಿದೆ. ಇದೇ ಮೊದಲ ಬಾರಿಗೆ ರಾಜಧಾನಿ ದೆಹಲಿಯಲ್ಲಿ ಮೊದಲ ಸ್ಯಾಮ್‌ಸಂಗ್ ಓನಿಕ್ಸ್ LED ಸ್ಕ್ರಿನ್ PVR ನಲ್ಲಿ ಕಾಣಿಸಿಕೊಂಡಿದೆ.

ಮೊದಲ PVR:
ದೆಹಲಿರುವ PVR ಚಿತ್ರಮಂದಿರದಲ್ಲಿ ಮೊದಲ ಬಾರಿಗೆ ಸ್ಯಾಮ್‌ಸಂಗ್ ಓನಿಕ್ಸ್ LED ಸ್ಕ್ರಿನ್ ಅನ್ನು ಕಾಣಬಹುದಾಗಿದೆ. ಸ್ಯಾಮ್‌ಸಂಗ್ ತನ್ನ ಹೊಸ ತಂತ್ರಜ್ಞಾನದ ಓನಿಕ್ಸ್ LED ಸ್ಕ್ರಿನ್ ಅನ್ನು ಭಾರತದಲ್ಲಿ ಲಾಂಚ್ ಮಾಡುವ ಸಲುವಾಗಿ PVR ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಇದಕ್ಕಾಗಿ ಮೊದಲೆಯದಾಗಿ ದೆಹಲಿಯಲ್ಲಿ ಕಾರ್ಯ ಆರಂಭ ಮಾಡಿದೆ.

ಬೆಂಗಳೂರಿನಲ್ಲಿಯೂ:
ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಬೆಂಗಳೂರಿನಲ್ಲಿಯೂ ಸ್ಯಾಮ್‌ಸಂಗ್ ಓನಿಕ್ಸ್ LED ಸ್ಕ್ರಿನ್ ಹೊಂದಿರುವ PVR ಮಲ್ಟಿಪ್ಲೆಕ್ಸ್ ಗಳು ಶೀಘ್ರವೇ ಕಾರ್ಯರಂಭವನ್ನು ಮಾಡಲಿದೆ. ಇದರಿಂದಾಗಿ ಬೆಂಗಳೂರು ನಗರದ ನಾಗರೀಕರು ಹೊಸ ಮಾದರಿಯ ಸಿನಿಮಾವನ್ನು ಆನಂದಿಸಬಹುದಾಗಿದೆ.


ಪ್ರೋಜೆಕ್ಟರ್ ಇಲ್ಲ:
ಸ್ಯಾಮ್‌ಸಂಗ್ ಓನಿಕ್ಸ್ LED ಸ್ಕ್ರಿನ್ ಸಿನಿಮಾ ಮಂದಿರ ಕಾನ್ಸೆಂಪ್ಟ್ ಅನ್ನು ಬದಲಾಯಿಸಲಿದೆ, ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಸಿನಿಮಾ ಮಂದಿರದಲ್ಲಿ ಪ್ರೊಜೆಕ್ಟರ್ ಬೇಕಾಗಿಲ್ಲ. ಸ್ಯಾಮ್‌ಸಂಗ್ ಓನಿಕ್ಸ್ LED ಸ್ಕ್ರಿನ್ TV ಮಾದರಿಯಲ್ಲಿ ಕೆಲಸ ಮಾಡುತ್ತದೆ. ಅತ್ಯತ್ತಮ ಗುಣಮಟ್ಟದ ಸಿನಿಮಾವನ್ನು ಹಿಂದೆಂದೂ ನೋಡಿದ ಮಾದರಿಯಲ್ಲಿ ಆನಂದಿಸಬಹುದಾಗಿದೆ.

HDR ಡಿಸ್‌ಪ್ಲೇ:
ಸ್ಯಾಮ್‌ಸಂಗ್ ಓನಿಕ್ಸ್ LED ಸ್ಕ್ರಿನ್ ನಲ್ಲಿ ಪಿಕ್ಚರ್ ಕ್ವಾಲಿಟಿ ಅತ್ಯತ್ತಮವಾಗಿರಲಿದ್ದು, HDR ಮೋಡ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಸೌಂಡು ಎಲ್ಲವೂ ವಿಶಿಷ್ಟ ಮತ್ತು ವಿಭಿನ್ನವಾಗಿರಲಿದೆ. 3D ನೋಡುವ ಅನುಭವವು ಉತ್ತಮವಾಗಿರಲಿದೆ. ಅಲ್ಲದೇ ಓನಿಕ್ಸ್ ಸೌಂಡ್ ಫೀಚರ್ ಅದ್ಬುತವಾಗಿದೆ.


Click it and Unblock the Notifications








