ಸ್ಯಾಮ್ ಸಂಗ್ ಬೆಂಗಳೂರು ಕೇಂದ್ರದಲ್ಲಿ 5G ತಂತ್ರಜ್ಞಾನದ ಸಂಶೋಧನೆ.!
ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ 5G ಸದ್ದು ಶುರುವಾಗಿದೆ. 4G ಆರ್ಭಟ ಜೋರಾಗಿರುವ ಸಂದರ್ಭದಲ್ಲಿಯೇ 5G ತಯಾರಿಯೂ ಜೋರಾಗಿ ನಡೆಯುತ್ತಿದೆ. ಇದಕ್ಕಾಗಿ ಟೆಲಿಕಾಂ ಕಂಪನಿಗಳು ಹಲವು ಮೊಬೈಲ್ ತಯಾರಕ ಕಂಪನಿಗಳೊಂದಿಗೆ ಸೇರಿಕೊಂಡಿದ್ದು, 5G ತಂತ್ರಜ್ಞಾನದ ಆವಿಷ್ಕಾರದಲ್ಲಿ ನಿರತವಾಗಿವೆ ಎನ್ನಲಾಗಿದೆ.

ಇದೇ ಮಾದರಿಯಲ್ಲಿ ಖ್ಯಾತ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಸ್ಯಾಮ್ ಸಂಗ್ ಸಹ 5G ತಂತ್ರಜ್ಞಾನದ ಆವಿಷ್ಕಾರದಲ್ಲಿ ನಿರತವಾಗಿದೆ. ಈಗಾಗಲೇ ಫಿಕ್ಸ್ ವೈರ್ ಲೈಸ್ 5G ಡಿವೈಸ್ ಗಳನ್ನು ಸ್ಯಾಮ್ ಸಂಗ್ ಪರೀಕ್ಷೆಯನ್ನು ನಡೆಸಿದೆ ಎನ್ನಲಾಗಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಇರುವ ಕೇಂದ್ರದಲ್ಲಿ 5G ಕುರಿತಂತೆ ಹೆಚ್ಚಿನ ಅಧ್ಯಾಯನವನ್ನು ನಡೆಸುತ್ತಿದೆ.
ಬೆಂಗಳೂರಿನಲ್ಲಿರುವ ಸ್ಯಾಮ್ ಸಂಗ್ R&D ಇನ್ಸ್ ಟ್ಯೂಟ್ ನಲ್ಲಿ ಈ ಹೊಸ ತಂತ್ರಜ್ಞಾನದ ಆವಿಷ್ಕಾರವು ನಡೆಯುತ್ತಿದೆ ಎನ್ನಲಾಗಿದ್ದು, ಸ್ಯಾಮ್ ಸಂಗ್ ಕಂಪನಿಗೆ ಬೇಕಾದ ವಿವಿಧ ತಂತ್ರಜ್ಞಾನಗಳನ್ನು ಸಂಶೋಧಿಸಲಾಗುತ್ತಿದೆ. ಸ್ಯಾಮ್ ಸಂಗ್ ಪೇ, ಸೇರಿದಂತೆ ಹಲವು ಆಯ್ಕೆಗಳು ಬೆಂಗಳೂರಿನಲ್ಲಿ ನಿರ್ಮಿತವಾಗಿದ್ದು ಎನ್ನಲಾಗಿದೆ.
ಭಾರತೀಯ ಮಾರುಕಟ್ಟೆ ಅಭಿವೃದ್ಧಿಯಾಗುತ್ತಿರುವ ವೇಗವನ್ನು ನೋಡಿದರೆ 2020ಯಲ್ಲಿ 5G ಪ್ರಾರಂಭವಾಗುವುದು ಖಚಿತ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಸ್ಯಾಮ್ ಸಂಗ್ R&D ತಂಡವು ಹೊಸ ತಂತ್ರಜ್ಞಾನವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಮುಂದಾಗಿದ ಎನ್ನಲಾಗಿದ್ದು, ಅದರಂತೆ ಕಾರ್ಯ ಚಟುವಟಿಕೆಯನ್ನು ನಡೆಸಲು ಚಿಂತನೆ ನಡೆಸಿದೆ.
ಸ್ಯಾಮ್ ಸಂಗ್ ರಿಲಯನ್ಸ್ ಜಿಯೋ ದೊಂದಿಗೆ 5G ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯ ಟ್ರೆಂಡ್ ಆಗಿರುವ ಜಿಯೋ ಈ ಹೊಸ 5G ತಂತ್ರಜ್ಞಾನದಲ್ಲಿಯೂ ಸಾಧನೆಯನ್ನು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.


Click it and Unblock the Notifications








