Home
ಸುದ್ದಿಜಾಲ

ಇಂದಿನಿಂದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ 2 ನಲ್ಲಿ ಲಭ್ಯವಾಗಲಿದೆ ಗ್ಯಾಲಕ್ಸಿ AI ಫೀಚರ್ಸ್‌!

ಸ್ಯಾಮ್‌ಸಂಗ್‌ ಕಂಪೆನಿ ತನ್ನ ಗ್ಯಾಲಕ್ಸಿ S24 ಸರಣಿಯ ಮೂಲಕ ಗ್ಯಾಲಕ್ಸಿ AI ಫೀಚರ್ಸ್‌ಗಳನ್ನು ಪರಿಚಯಿಸಿತ್ತು. ಇದೀಗ ಗ್ಯಾಲಕ್ಸಿ AI ಫೀಚರ್ಸ್‌ಗಳನ್ನು OTA ಅಪ್‌ಡೇಟ್ ಮೂಲಕ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಬಡ್ಸ್‌ ಪ್ರೊ 2, ಗ್ಯಾಲಕ್ಸಿ ಬಡ್ಸ್‌ 2, ಮತ್ತು ಗ್ಯಾಲಕ್ಸಿ ಬಡ್ಸ್‌ FE ನಲ್ಲಿ ಪ್ರಾರಂಭಿಸಲಾಗಿದೆ. ಇದರಿಂದ ಬಳಕೆದಾರರು ತಮ್ಮ ಇಯರ್‌ಬಡ್ಸ್‌ಗಳಲ್ಲಿ ನೇರವಾಗಿ ವ್ಯಾಖ್ಯಾನ ಮತ್ತು ಲೈವ್ ಅನುವಾದದಂತಹ ಫೀಚರ್ಸ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ.

ಹೌದು, ಸ್ಯಾಮ್‌ಸಂಗ್‌ (Samsung) ಕಂಪೆನಿ ಗ್ಯಾಲಕ್ಸಿ AI ಫೀಚರ್ಸ್‌ಗಳನ್ನು ರೂಲ್‌ಔಟ್‌ ಮಾಡಿದೆ. ಇದು ಗ್ಯಾಲಕ್ಸಿ S24 ಸರಣಿಯ ಸ್ಮಾರ್ಟ್‌ಫೋನ್ ಹೊಂದಿರುವ ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತವೆ. ಇದರಿಂದ ಬಳಕೆದಾರರು ತಮ್ಮ ಇಯರ್‌ಬಡ್‌ಗಳ ಒಳಗೆ ನೇರವಾಗಿ ಮಾತನಾಡಬಹುದು. ಅಲ್ಲದೆ Galaxy AI ಬೆಂಬಲಿಸುವ ಯಾವುದೇ ಭಾಷೆಯಲ್ಲಿ ತಡೆರಹಿತ ದ್ವಿಮುಖ ಸಂವಹನವನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಹಾಗಾದ್ರೆ ಏನಿದು ಗ್ಯಾಲಕ್ಸಿ AI ಫೀಚರ್ಸ್‌ ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂದಿನಿಂದ ಗ್ಯಾಲಕ್ಸಿ ಬಡ್ಸ್‌ 2ನಲ್ಲಿ ಲಭ್ಯವಾಗಲಿದೆ ಗ್ಯಾಲಕ್ಸಿ AI ಫೀಚರ್ಸ್‌

ಇಂದಿನಿಂದ ಗ್ಯಾಲಕ್ಸಿ AI ಫೀಚರ್ಸ್‌ಗಳು ಸ್ಯಾಮ್‌ಸಂಗ್‌ ಡಿವೈಸ್‌ಗಳಲ್ಲಿ ಪ್ರಾರಂಭವಾಗಲಿದೆ. ಇದರಿಂದ ಬಳಕೆದಾರರು ಇಯರ್‌ಬಡ್ಸ್‌ಗಳಲ್ಲಿ ನೇರವಾಗಿ ವ್ಯಾಖ್ಯಾನ ಮತ್ತು ಲೈವ್ ಅನುವಾದದಂತಹ ಫೀಚರ್ಸ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ. ಜೊತೆಗೆ ಯಾವುದೆ ಬಾಷೆಯಲ್ಲಿ ದ್ವಿಮುಖ ಸಂವಹನವನ್ನು ನಡೆಸುವುದಕ್ಕೆ ಅವಕಾಶ ಲಭ್ಯವಾಗಲಿದೆ.

ಇದಲ್ಲದೆ ಸ್ಯಾಮ್‌ಸಂಗ್ ಇಂಟರ್‌ಪ್ರೆಟರ್ ಫೀಚರ್ಸ್‌ ಅನ್ನು ಕೂಡ ಪರಿಚಯಿಸಿದೆ. ಇದರ ಮೂಲಕ ಇಬ್ಬರು ಬಳಕೆದಾರರು ತಡೆರಹಿತ ಸಂವಹನ ನಡೆಸಬಹುದು. ಇದರಲ್ಲಿ ಒಬ್ಬರು ಗ್ಯಾಲಕ್ಸಿ ಬಡ್ಸ್‌ ಮತ್ತು ಮತ್ತೊಬ್ಬರು ಗ್ಯಾಲಕ್ಸಿ ಎಸ್ 24 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಇನ್ನೊಬ್ಬರಿಗೆ ವ್ಯಕ್ತಿಗೆ ಫೋನ್ ಹಸ್ತಾಂತರಿಸದೆಯೇ ಭಾಷಾಂತರದೊಂದಿಗೆ ಪರಸ್ಪರ ಸಂವಹನ ನಡೆಸಲು ಸಾಧ್ಯವಾಗುತ್ತದೆ.

ಇಂದಿನಿಂದ ಗ್ಯಾಲಕ್ಸಿ ಬಡ್ಸ್‌ 2ನಲ್ಲಿ ಲಭ್ಯವಾಗಲಿದೆ ಗ್ಯಾಲಕ್ಸಿ AI ಫೀಚರ್ಸ್‌

ಏನಿದು ಗ್ಯಾಲಕ್ಸಿ AI?
ಇದು ಸಂವಹನ ಸಾಮರ್ಥ್ಯವನ್ನು ಇನ್ನಷ್ಟು ಸುಲಭಗೊಳಿಸಲಿದೆ. ರಿಯಲ್‌ ಟೈಂ ವಾಯ್ಸ್‌ ಮತ್ತು ಟೆಕ್ಟ್ಸ್‌ ಅನುವಾದವನ್ನು ಎರಡೂ ಕಡೆಯಿಂದಲೂ ಮಾಡುವ ಸಾಮರ್ಥ್ಯವಿದೆ. ಥರ್ಡ್‌ ಪಾರ್ಟಿ ಆಪ್‌ಗಳ ಅಗತ್ಯವಿಲ್ಲದೇ ಭಾಷಾ ಅಡೆತಡೆಗಳನ್ನು ಒಡೆಯುವ ಕೆಲಸ ಮಾಡಲಿದೆ. ಈ ಮೂಲಕ ತಮಗೆ ಯಾವ ಭಾಷೆ ಬರುತ್ತದೋ ಅದೇ ಭಾಷೆಯನ್ನು ಬಳಕೆ ಮಾಡಿಕೊಂಡು ಇತರೆ ವ್ಯಕ್ತಿಗಳ ಜೊತೆಗೆ ಸುಲಭವಾಗಿ ಸಂವಹನ ನಡೆಸಬಹುದಾಗಿದೆ.

ಇಯರ್‌ಬಡ್ಸ್‌ಗಳ ಬೆಲೆ ಎಷ್ಟು?
ಸ್ಯಾಮ್‌ಸಂಗ್ ಕಂಪೆನಿ ತನ್ನ ವಾಯರ್‌ಲೆಸ್ ಇಯರ್‌ಬಡ್ಸ್‌ಗಳ ಎಲ್ಲಾ ಮೂರು ಮಾದರಿಗಳ ಮೇಲೂ ರಿಯಾಯಿತಿಗಳು ಮತ್ತು ಅಪ್‌ಗ್ರೇಡ್ ಕೊಡುಗೆಗಳನ್ನು ನೀಡುತ್ತಿದೆ. ಅದರಂತೆ ಗ್ಯಾಲಕ್ಸಿ ಬಡ್ಸ್‌ FE 9,999ರೂ. ಬೆಲೆಯನ್ನು ಹೊಂದಿದ್ದು, 3,000ರೂ ಹೆಚ್ಚುವರಿ ಕ್ಯಾಶ್‌ಬ್ಯಾಕ್‌ನೊಂದಿಗೆ ಲಭ್ಯವಿದೆ. ಇನ್ನು ಗ್ಯಾಲಕ್ಸಿ ಬಡ್ಸ್‌ 2 ಬೆಲೆ 11,999ರೂ ಅಗಿದ್ದು, 5,000ರೂ ಕ್ಯಾಶ್‌ಬ್ಯಾಕ್‌ ನೊಂದಿಗೆ ದೊರೆಯಲಿದೆ. ಗ್ಯಾಲಕ್ಸಿ ಬಡ್ಸ್‌ 2 ಪ್ರೊ 6,000ರೂ ಆಫರ್‌ಗಳೊಂದಿಗೆ 17,999 ರೂ ಬೆಲೆಯಲ್ಲಿ ದೊರೆಯಲಿದೆ.

ಇಂದಿನಿಂದ ಗ್ಯಾಲಕ್ಸಿ ಬಡ್ಸ್‌ 2ನಲ್ಲಿ ಲಭ್ಯವಾಗಲಿದೆ ಗ್ಯಾಲಕ್ಸಿ AI ಫೀಚರ್ಸ್‌

ಗ್ಯಾಲಕ್ಸಿ ಬಡ್ಸ್‌ 2 ಪ್ರೊ ಅನ್ನು ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗುತ್ತಿದೆ. ಇನ್ನು ಈ ಇಯರ್‌ಬಡ್ಸ್‌ 24-ಬಿಟ್ ಹೈಫೈ ಆಡಿಯೊ ಮತ್ತು ಎಎನ್‌ಸಿ (ಸಕ್ರಿಯ ಶಬ್ದ ರದ್ದತಿ) ಅನ್ನು ಒಳಗೊಂಡಿವೆ. ಈ ಹಿಂದಿನ ಜನ್ ಗ್ಯಾಲಕ್ಸಿ S23 ಸರಣಿ ಮತ್ತು ಇತರ ಸಾಧನಗಳಿಗೆ ಕಂಪನಿಯು Galaxy AI ವೈಶಿಷ್ಟ್ಯಗಳನ್ನು ತರಲಿದೆ ಎಂದು Samsung ದೃಢಪಡಿಸಿದೆ. ಜೊತೆಗೆ ಭವಿಷ್ಯದ ನವೀಕರಣಗಳಲ್ಲಿ ಲೈವ್ ಅನುವಾದ ವೈಶಿಷ್ಟ್ಯಗಳನ್ನು ಸಹ ಸೇರಿಸಲಾಗುತ್ತದೆ. ಆದಾಗ್ಯೂ, ಹಳೆಯ ಫೋನ್‌ಗಳು Galaxy Buds ಜೊತೆಗೆ ಅನುವಾದಕ್ಕೆ ಹೊಂದಿಕೆಯಾಗುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಕಂಪನಿಯು ದೃಢಪಡಿಸಿಲ್ಲ.

Best Mobiles in India

English summary
Samsung Rolls Out Galaxy AI Features To Galaxy Buds 2 Pro, Buds 2, and More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+