ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ರಿಂಗ್: ಫೀಚರ್ಸ್ ನಿರೀಕ್ಷೆ ಏನು?
ಇತ್ತೀಚಿಗೆ ಟೆಕ್ ವಲಯದಲ್ಲಿ ಸ್ಮಾರ್ಟ್ ರಿಂಗ್‌ಗಳ ಪ್ರಾಬಲ್ಯ ಜೋರಾಗಿದೆ. ವಿಭಿನ್ನ ಶೈಲಿಯ ಸ್ಮಾರ್ಟ್ ರಿಂಗ್‌ಗಳು ಇಂದು ಟೆಕ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಇದೀಗ ಸ್ಯಾಮ್‌ಸಂಗ್ ಕಂಪೆನಿ ಕೂಡ ಶೀಘ್ರದಲ್ಲೇ ತನ್ನ ಮೊದಲ ಸ್ಮಾರ್ಟ್‌ರಿಂಗ್ ಅನ್ನು ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ಈ ಸ್ಮಾರ್ಟ್‌ಫೋನ್ ಆರೋಗ್ಯ ಕೇಂದ್ರಿತ ಫೀಚರ್ಸ್‌ಗಳನ್ನು ಹೊಂದಿದೆ.
ಹೌದು, ಸ್ಯಾಮ್‌ಸಂಗ್ ಕಂಪೆನಿಯು ಮೊದಲ ಸ್ಮಾರ್ಟ್ ರಿಂಗ್ ಅನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2024 ನಲ್ಲಿ ಪರಿಚಯಿಸಲಿದೆ. ಇನ್ನು ಈ ಗ್ಯಾಲಕ್ಸಿ ರಿಂಗ್ ಕೃತಕ ಬುದ್ಧಿಮತ್ತೆಯ ಮೂಲಕ ಹೆಚ್ಚು ವೈಯಕ್ತೀಕರಿಸಿದ ಮತ್ತು ತಡೆರಹಿತ ಅನುಭವಗಳನ್ನು ನೀಡಲಿದೆ ಎನ್ನಲಾಗಿದೆ. ಇದು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ವಾಚ್ ಸರಣಿಯೊಂದಿಗೆ ಜೋಡಿಸುವುದಕ್ಕೆ ಕೂಡ ಅವಕಾಶವಿದೆ. ಹಾಗಾದ್ರೆ ಈ ಸ್ಮಾರ್ಟ್ ರಿಂಗ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗ್ಯಾಲಕ್ಸಿ ರಿಂಗ್ ವಿಶೇಷವಾದ ಹೆಲ್ತ್ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ. ಇದು ಕೈಗಡಿಯಾರಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ಗಳಂತಹ ಡಿವೈಸ್‌ಗಳಿಗೆ ಹೋಲಿಸಿದರೆ ರಿಂಗ್ ಫಾರ್ಮ್ ಫ್ಯಾಕ್ಟರ್ ಆರೋಗ್ಯದ ಮೇಲ್ವಿಚಾರಣೆಗೆ ಅತ್ಯಾಕರ್ಷಕ ಸಾಧ್ಯತೆಗಳನ್ನು ಒದಗಿಸುತ್ತದೆ. ಹೃದಯ ಬಡಿತ, ಉಸಿರಾಟ ಮತ್ತು ಇತರ ಪ್ರಮುಖ ಚಿಹ್ನೆಗಳನ್ನು ಪತ್ತೆಹಚ್ಚಲು ಡಿವೈಸ್‌ನ ರಕ್ತದ ಹರಿವನ್ನು ಅಳೆಯುವ ನಿರೀಕ್ಷೆಯಿದೆ.
ಇದಲ್ಲದೆ ಈ ಸ್ಮಾರ್ಟ್ ರಿಂಗ್ Apple Watch ಮತ್ತು Galaxy Watch ಮಾದರಿಗಳಂತೆ ಅನಿಯಮಿತ ಹೃದಯದ ಲಯವನ್ನು ಪತ್ತೆಹಚ್ಚಲು ECG ಕಾರ್ಯವನ್ನು ಪ್ಯಾಕ್ ಮಾಡಲಿದೆ. ಅದರಲ್ಲೂ ವಿಶೇಷವಾಗಿ ಗ್ಲೂಕೋಸ್ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿರಲಿದೆ. ಇದು ಮಧುಮೇಹಿಗಳಿಗೆ ಸಾಕಷ್ಟು ಅನುಕೂಲಕರವಾಗಲಿದೆ. ಹೆಚ್ಚುತ್ತಿರುವ ಮದುಮೇಹಿಗಳ ಸಂಖ್ಯೆಯೇ ಸ್ಯಾಮ್‌ಸಂಗ್‌ನ ಈ ನಿರ್ಧಾರಕ್ಕೆ ಮುಖ್ಯ ಕಾರಣವಾಗಿದೆ.

ಇನ್ನು ಸ್ಯಾಮ್‌ಸಂಗ್ ಹೆಲ್ತ್ ಟ್ರ್ಯಾಕಿಂಗ್‌ನ ಹೊರತಾಗಿ, ಗ್ಯಾಲಕ್ಸಿ ರಿಂಗ್ ಡಿವೈಸ್ ಕಂಟ್ರೋಲ್ ಮತ್ತು ಸಂಪರ್ಕವಿಲ್ಲದ ಪಾವತಿಗಳನ್ನು ಸಕ್ರಿಯಗೊಳಿಸಬಹುದು ಎಂದು ಹೇಳಲಾಗಿದೆ. ಇದರಿಂದ ಬಳಕೆದಾರರು ತಮ್ಮ ಫೋನ್ ಮತ್ತು ವಾಲೆಟ್ ಅನ್ನು ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ. ಸ್ಯಾಮ್‌ಸಂಗ್‌ನ ಏಕೀಕೃತ ಸಾಫ್ಟ್‌ವೇರ್ ಪರಿಸರ ವ್ಯವಸ್ಥೆಯು ಸ್ಮಾರ್ಟ್ ರಿಂಗ್‌ನಲ್ಲಿ ಅತ್ಯುತ್ತಮವಾದ ಕಾರ್ಯದಕ್ಷತೆಯನ್ನು ಕಾಣಹುದಾಗಿದೆ.
ಸ್ಯಾಮ್‌ಸಂಗ್ ಕಂಪೆನಿ ಇತ್ತೀಚಿಗೆ ಹೊಸದಾಗಿ ಗ್ಯಾಲಕ್ಸಿ ಬುಕ್ 4 360 ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್ 15.6 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇಂಟೆಲ್ ಕೊರ್ ಅಲ್ಟ್ರಾ 7 ಅಥವಾ ಇಂಟೆಲ್ ಕೋರ್ ಅಲ್ಟ್ರಾ 5 ಪ್ರೊಸೆಸರ್ ವೇಗವನ್ನು ಹೊಂದಿದೆ. ಇಂಟೆಲ್ ಐರಿಸ್ Xe ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ. ಹಾಗೆಯೇ 16GB ಮತ್ತು 512GB / 1TB PCIe ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್ ವೂಫರ್ ಮ್ಯಾಕ್ಸ್ 5Wx2, ಟ್ವೀಟರ್ 2Wx2 ಮೈಕ್ರೋಫೋನ್ ಮತ್ತು ಸ್ಪೀಕರ್‌ಗಳನ್ನು ಹೊಂದಿದೆ. ಜೊತೆಗೆ 68Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 65W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಬುಕ್ 4 ಪ್ರೊ ಲ್ಯಾಪ್‌ಟಾಪ್ 14 ಇಂಚಿನ ಮತ್ತು 16 ಇಂಚಿನ ಟಚ್ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದೆ. ಇದು 2880 x 1800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಬರಲಿದೆ. ಡಿಸ್‌ಪ್ಲೇಯು 400 ನಿಟ್ಸ್ ಬ್ರೈಟ್‌ನೆಸ್ ಲೆವೆಲ್ ಅನ್ನು ಒಳಗೊಂಡಿರಲಿದೆ. ಇದಲ್ಲದೆ ಡಿಸ್‌ಪ್ಲೇಯು 48Hz ನಿಂದ 120Hz VRR, ಮತ್ತು 120% DCI-P3 ಹೊಂದಿದೆ. ಜೊತೆಗೆ ಇಂಟೆಲ್ ಕೋರ್ ಅಲ್ಟ್ರಾ 7 / ಇಂಟೆಲ್ ಕೋರ್ ಅಲ್ಟ್ರಾ 5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಇಂಟೆಲ್ ಆರ್ಕ್ ಗ್ರಾಫಿಕ್ಸ್ ಕಾರ್ಡ್ ಅನ್ನು ಒಳಗೊಂಡಿದೆ. ಹಾಗೆಯೇ 16GB/32GB LPDDR5X ಮತ್ತು 512GB / 1TB PCIe SSD ಜೊತೆಗೆ ವಿಸ್ತರಣೆ ಸ್ಲಾಟ್ ಹೊಂದಿದೆ. 2MP ಫುಲ್ HD ವೆಬ್‌ಕ್ಯಾಮ್ ಒಳಗೊಂಡಿದೆ. ಜೊತೆಗೆ 76Wh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿ 14 ಇಂಚಿನ ಲ್ಯಾಪ್‌ಟಾಪ್ ಆಯ್ಕೆಯು 63Wh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.


Click it and Unblock the Notifications








