Subscribe to Gizbot

ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಕನ್ನಡಕ

Posted By:

ಗೂಗಲ್‌ನ ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ ಹೊಸ ಕನ್ನಡಕವನ್ನು‌ ತಯಾರಿಸಲು ಮುಂದಾಗುತ್ತಿದೆ.ಈ ಸಂಬಂಧ ಹೊಸ ಸ್ಪೋರ್ಟ್ಸ ಗ್ಲಾಸ್‌ ತಯಾರಿಸಲು ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಮುಂದಾಗಿದ್ದು ಕನ್ನಡಕದ ವಿನ್ಯಾಸವನ್ನು ಕೋರಿಯಾದ ಪೇಟೆಂಟ್‌ ಆಫೀಸ್‌ಗೆ ಸಲ್ಲಿಸಿದೆ.

ಸ್ಮಾರ್ಟ್‌‌ಫೋನ್‌‌ ಸಂಪರ್ಕ‌ವಿರುವ ಈ ಗ್ಲಾಸ್‌‌ ಹ್ಯಾಂಡ್‌ಸೆಟ್‌ನಲ್ಲಿರುವ ಮಾಹಿತಿಗಳನ್ನು ‌ಸ್ಕ್ರೀನ್‌ನಲ್ಲಿ ತೋರಿಸುವುದರ ಜೊತೆಗೆ ಈ ಗ್ಲಾಸ್‌‌ನ ಫ್ರೇಮ್‌ನಲ್ಲಿ ಇಯರ್‌‌ಫೋನ್‌‌ ಇದ್ದು ಕೆಲಸ ಮಾಡುವಾಗಲೇ ಸಂಗೀತಾ ಕೇಳಬಹುದು.ಅಷ್ಟೇ ಅಲ್ಲದೇ ಫೋನ್‌ ಕಾಲ್‌ಗಳನ್ನು ಈ ಗ್ಲಾಸ್‌ ಮೂಲಕ ನಿಯಂತ್ರಣ ಮಾಡುವಂತೆ ಇದನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಸ್ಯಾಮ್‌ಸಂಗ್‌ ತನ್ನ ಮೆಮೋದಲ್ಲಿ ತಿಳಿಸಿದೆ.

ಈ ವಿಶೇಷತೆಯ ಜೊತೆಗೆ ಗೂಗಲ್‌ ಗ್ಲಾಸ್‌ನಲ್ಲಿರುವಂತೆ ಟಚ್‌ ಕಂಟ್ರೋಲ್‌ ಮತ್ತು ಕ್ಯಾಮೆರಾ ಸಹ ಇರಲಿದೆ ಎನ್ನುವ ಸುದ್ದಿಗಳು ಸಹ ಹರಿದಾಡುತ್ತಿದೆ. ಆದರೆ ಸ್ಯಾಮ್‌ಸಂಗ್‌ ಈ ಹೊಸ ಕನ್ನಡಕದ ವಿಶೇಷತೆ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಯಾವ ಮಾಧ್ಯಮಕ್ಕೂ ಪ್ರತಿಕ್ರಿಯೆ ನೀಡಿಲ್ಲ.

ಗೂಗಲ್‌‌ ತನ್ನ ಮೊದಲ ಗ್ಲಾಸ್‌ನ್ನು ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡುವ ಮೊದಲು, ಅಮೆರಿಕದ 10 ಸಾವಿರ ಜನರು ಈ ಗ್ಲಾಸ್‌ನ್ನು ಧರಿಸಿದ್ದರು.ಬಳಿಕ ಇವರ ಅಭಿಪ್ರಾಯವನ್ನು ಪಡೆದು ಜೂನ್‌ ತಿಂಗಳಿನಲ್ಲಿ ಮಾಧ್ಯಮಗಳ ಮುಂದೆ ಇದು ಹೇಗೆ ಕಾರ್ಯ‌ನಿರ್ವ‌ಹಿಸುತ್ತದೆ ಎನ್ನುವುದರ ಬಗ್ಗೆ ಗೂಗಲ್‌ ವಿವರ ನೀಡಿತ್ತು.ಗೂಗಲ್‌ ಕನ್ನಡಕಲ್ಲಿ ಸ್ಮಾರ್ಟ್‌ಫೋನ್‌ ಇಲ್ಲದೇ ವಾಯ್ಸ್‌ ಕಮಾಂಡ್‌ ಮೂಲಕ, ಫೋಟೋ ತೆಗೆಯುವುದರ ಜೊತೆಗೆ, ವಿಡಿಯೋ ರೆಕಾರ್ಡಿಂಗ್‌, ಇಂಟರ್‌ನೆಟ್‌ ಮಾಹಿತಿಯನ್ನು ಹುಡುಕಬಹುದಾಗಿದೆ. 2014ರಲ್ಲಿ ಈ ಗ್ಲಾಸ್‌ನ್ನು ಗೂಗಲ್‌ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಕನ್ನಡಕ

ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಕನ್ನಡಕ

ಸ್ಯಾಮ್‌ಸಂಗ್‌ ದಕ್ಷಿಣ ಕೋರಿಯಾದ ಪೇಟೆಂಟ್ ರಿಜಿಸ್ಟರ್ ಕಾರ್ಯಾಲಯದಲ್ಲಿ ಸಲ್ಲಿಸಿದ ಗ್ಲಾಸ್‌ನ ವಿನ್ಯಾಸ

ಗೂಗಲ್‌ ಗ್ಲಾಸ್‌

ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಕನ್ನಡಕ

ಗೂಗಲ್‌ ಗ್ಲಾಸ್‌ ನಲ್ಲಿ ವಾಯ್ಸ್‌ ಕಮಾಂಡ್‌ ಆಯ್ಕೆಯ ಮೂಲಕ ಸುಲಭವಾಗಿ ಇಂಟರ್‌ನೆಟ್‌ ಸರ್ಚ್ ಮಾಡಬಹುದು. ಗ್ಲಾಸಿನಲ್ಲಿರುವ ಸಣ್ಣ ಸ್ಕ್ರೀನ್‌ನಲ್ಲಿ ನೀವು ಮಾಹಿತಿಗಳನ್ನು ನೋಡಬಹುದಾಗಿದೆ.ಗ್ಲಾಸ್‌ನ ಬಲಗಡೆಯ ಜಾಗದಲ್ಲಿ ಆಂಡ್ರಾಯ್ಡ್ ಐಸಿಎಸ್‌ ಓಎಸ್‌ ಅಳವಡಿಸಲಾಗಿದೆ.

ಗೂಗಲ್‌ ಗ್ಲಾಸ್‌

ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಕನ್ನಡಕ

2010ರಿಂದ ಈ ಗೂಗಲ್‌ ಕಂಪೆನಿ ಈ ಕನ್ನಡಕ ತಯಾರಿಕೆಯ ಯೋಜನೆ ಆರಂಭಿಸಿತು.ಗೂಗಲ್‌ ಗ್ಲಾಸ್‌ ಕಪ್ಪು,ಬೂದು,ನೀಲಿ,ಕೆಂಪು,ಬಿಳಿ ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿದೆ.

ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಕನ್ನಡಕ

ಗೂಗಲ್‌ ಗ್ಲಾಸ್‌ ವಿಡಿಯೋ ವೀಕ್ಷಿಸಿ

ಗೂಗಲ್‌ ಗ್ಲಾಸ್‌ಗೆ ಪ್ರತಿಯಾಗಿ ಸ್ಯಾಮ್‌ಸಂಗ್‌ನಿಂದ ಹೊಸ ಕನ್ನಡಕ

ಗೂಗಲ್‌ ಗ್ಲಾಸ್‌ ವಿಡಿಯೋ ವೀಕ್ಷಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot