ಇನ್ನು ಹಾಡು ಆಲಿಸಿ ಸ್ಯಾಮ್‌ಸಂಗ್‌ನ ಹೆಡ್‌ಪೋನ್‌ಗಳಲ್ಲಿ

Written By:

ಹೌದು ಮಾರುಕಟ್ಟೆಯಲ್ಲಿ ತನ್ನ ಉತ್ತಮ ಉತ್ಪನ್ನ ಶ್ರೇಣಿಗಳ ಉತ್ಪನ್ನಗಳಿಂದ ಗಮನಸೆಳೆಯುತ್ತಿರುವ ದಕ್ಷಿಣ ಕೊರಿಯಾದ ಕಂಪೆನಿ ಸ್ಯಾಮ್‌ಸಂಗ್ ಇದೀಗ ಅತ್ಯುನ್ನತ ಗುಣಮಟ್ಟದ ಹೆಡ್‌ಫೋನ್‌ಗಳನ್ನು ಬಿಡುಗಡೆಗೊಳಿಸಲಿದೆ.

ಇನ್ನೇನು ಕೆಲವೇ ವಾರಗಳಲ್ಲಿ ಬಳಕೆದಾರರ ಕೈ ಸೇರಲಿರುವ ಈ ಹೆಡ್‌ಫೋನ್ ಕೆಲವೊಂದು ವಿಶಿಷ್ಟತೆಗಳ ಮೂಲಕ ಗಮನ ಸೆಳೆಯುವಂತಿದೆ. ವೈರ್‌ಲೆಸ್ ಬ್ಲೂಟೂತ್ ಸ್ಪೀಕರ್ ಎಂದು ಕರೆಯಲಾದ ಲೆವೆಲ್ ಅನ್ನು ಈ ಹೆಡ್‌ಫೋನ್‌ಗಳಲ್ಲಿ ಕಂಪೆನಿ ಅಭಿವೃದ್ಧಿಗೊಳಿಸಿದ್ದು ಇದೊಂದು ಅತ್ಯಧುನಿಕ ತಂತ್ರಜ್ಞಾನವಾಗಿದೆ ಎಂದು ಕಂಪೆನಿ ಹೇಳಿದೆ. ಬ್ಲೂಟೂತ್ ಮೂಲಕ ವೈರ್‌ಲೆಸ್‌ ನಂತೆ ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಸಬಹುದಾಗಿದ್ದು ಟಚ್ ನಿಯಂತ್ರಣಗಳ ಮೂಲಕ ಹಾಡಿನ ಧ್ವನಿ ನಿಯಂತ್ರಣ ಮೊದಲಾದ ಕಾರ್ಯಗಳನ್ನು ನಡೆಸಬಹುದಾಗಿದೆ.

ಇನ್ನು ಹಾಡು ಆಲಿಸಿ ಸ್ಯಾಮ್‌ಸಂಗ್‌ನ ಹೆಡ್‌ಪೋನ್‌ಗಳಲ್ಲಿ

ಉತ್ತಮ ಗುಣಮಟ್ಟದ ಸ್ಪೀಕರ್ ವ್ಯವಸ್ಥೆಯನ್ನು ಈ ಹ್ಯಾಂಡ್‌ಫೋನ್ ಹೊಂದಿದ್ದು ವಿಶೇಷವಾದ ಈ ಸ್ಪೀಕರ್ ಸೆಟ್‌ಗೆ ಧನ್ಯವಾದಗಳನ್ನು ನಾವು ಅರ್ಪಿಸಬೇಕು. ಕೊನೆಯದಾಗಿ ಇದರಲ್ಲಿ ಲೆವೆಲ್ ಬಾಕ್ಸ್ ವ್ಯವಸ್ಥೆಯಿದ್ದು ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನೊಂದಿಗೆ ಬ್ಲೂಟೂತ್ ಬಳಸಿಕೊಂಡು ಪೇರಿಂಗ್ ಮಾಡಬಹುದಾಗಿದೆ. ನಿಮ್ಮ ಫೋನ್ ಅನ್ನು ಅದಕ್ಕೆ ವಿರುದ್ಧವಾಗಿ ಟ್ಯಾಪ್ ಮಾಡುವ ಮೂಲಕ ಲೆವೆಲ್ ಬಾಕ್ಸ್ ಅನ್ನು ನಿಮಗೆ ಹೊಂದಿಸಬಹುದಾಗಿದೆ.

ಇದರ ಬೆಲೆ ಅಷ್ಟೇನೂ ದುಬಾರಿಯಾಗಿಲ್ಲ ಮತ್ತು ಗುಣಮಟ್ಟದ ಉತ್ಪನ್ನ ಇದಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಹಾಡುಗಳನ್ನು ಆಲಿಸುತ್ತಾ ವೀಡಿಯೋಗಳನ್ನು ಕಣ್ತುಂಬಿಕೊಳ್ಳುವ ಅನುಕೂಲತೆ ನಿಮಗಿದರಲ್ಲಿ ದೊರೆಯಲಿದೆ. ಇದರ ಬೆಲೆಯನ್ನು ಇನ್ನೂ ಕಂಪೆನಿ ನಿಗದಿಪಡಿಸಿಲ್ಲ ಮತ್ತು ಬಿಡುಗಡೆ ದಿನವನ್ನೂ ಹೇಳಿಲ್ಲ. ಆದರೆ ಹೆಡ್‌ಫೋನ್‌ನಲ್ಲಿ ಉತ್ತಮ ಗುಣಮಟ್ಟದ ನವೀನ ಮಾದರಿಯ ತಂತ್ರಜ್ಞಾನಗಳನ್ನು ಬಳಸಿದ್ದು ಖಂಡಿತ ಇದು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎಂಬುದು ಸ್ಯಾಮ್‌ಸಂಗ್ ಆಶಯವಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot