ಸ್ಯಾಮ್ಸಂಗ್ ‘ದಿ ಸೆರೋ’ ಸ್ಮಾರ್ಟ್‌ಟಿವಿ ಬಿಡುಗಡೆ!
ದಕ್ಷಿಣ ಕೋರಿಯಾದ ಸ್ಯಾಮ್‌ಸಂಗ್ ಕಂಪೆನಿ ತನ್ನ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲೂ ಸಹ ಸೈ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಸ್ಮಾರ್ಟ್‌ಟಿವಿಗಳನ್ನ ಪರಿಚಯಿಸಿರುವ ಸ್ಯಾಮ್‌ಸಂಗ್ ಕಂಪೆನಿ ಇದೀಗ ತನ್ನ ತಿರುಗುವ ಸ್ಮಾರ್ಟ್ ಟಿವಿ 'ದಿ ಸೆರೋ' ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿಯನ್ನು ಅಡ್ಡ ಮತ್ತು ಲಂಬ ದೃಷ್ಟಿಕೋನಗಳ ನಡುವೆ ತಿರುಗಿಸಬಹುದಾಗಿದೆ. ಸದ್ಯ ಇದು ಸ್ಯಾಮ್‌ಸಂಗ್‌ನ ಲೈಪ್‌ಸ್ಟೈಲ್ ಟಿವಿಗಳ ಹೊಸ ಮಾದರಿಯಾಗಿದೆ.

ಹೌದು, ಸ್ಯಾಮ್‌ಸಂಗ್ ಕಂಪೆನಿ ತನ್ನ ಹೊಸ ಸ್ಮಾರ್ಟ್ ಟಿವಿ ‘ದಿ ಸೆರೋ' ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸದ್ಯ ಸ್ಯಾಮ್‌ಸಂಗ್ ದಿ ಸೆರೊವನ್ನು ಪ್ರತ್ಯೇಕವಾಗಿ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದೆ. ಇನ್ನು ಈ ಸ್ಮಾರ್ಟ್‌ಟಿವಿ ಬೆಲೆ 1,24,990, ರೂ ಆಗಿದ್ದು, ಇದು ಕ್ಯಾಶ್‌ಬ್ಯಾಕ್ ಮತ್ತು ಇಎಂಐ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ. ಸದ್ಯ ಈ ಸ್ಮಾರ್ಟ್‌ಟಿವಿ ಮಾರಾಟದೊಂದಿಗೆ ರಿಲಯನ್ಸ್ ಡಿಜಿಟಲ್ Ajio ಮತ್ತು ರಿಲಯನ್ಸ್ ಟ್ರೆಂಡ್‌ಗಳಿಂದ ಗೀಪ್ಟ್ ವೋಚರ್ಗಳನ್ನು ದಿ ಸಿರೊದಲ್ಲಿ ನೀಡಲಾಗುತ್ತಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ವಿಶೇಷತೆಯೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್ಸಂಗ್ ಬಿಡುಗಡೆ ಆಗಿರುವ ''ದಿ ಸೆರೊ'' 43 ಇಂಚಿನ QLED 4k ಡಿಸ್‌ಪ್ಲೇಯನ್ನು ನಾವಿ ಬ್ಲೂ ಬೆಜೆಲ್ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಟಿವಿಯಲ್ಲಿ AI ಅನ್ನು ಬಳಸುವ ಮೂಲಕ ಸಬ್ಜೆಕ್ಟ್ ಅನ್ನು 4k ರೆಸಲ್ಯೂಶನ್‌ಗೆ ಹೆಚ್ಚಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಆಂಬಿಯೆಂಟ್ ಮೋಡ್ + ಅನ್ನು ಸಹ ಹೊಂದಿದೆ, ಇದನ್ನು ಮಾಹಿತಿಯನ್ನು ಪ್ರದರ್ಶಿಸಲು ಅಥವಾ ಟಿವಿಯನ್ನು ಅದರ ಸುತ್ತಮುತ್ತಲಿನೊಂದಿಗೆ ಸಂಯೋಜಿಸಲು ಕಸ್ಟಮೈಸ್ ಮಾಡಬಹುದಾಗಿದೆ. ಜೊತೆಗೆ ಮೊಬೈಲ್ ಪ್ರೆಂಡ್ಲಿ ಸ್ಮಾರ್ಟ್‌ಟಿವಿ ಇದಾಗಿದೆ.

ಇನ್ನು ತಿರುಗುವ ಟಿವಿಯಲ್ಲಿ 4.1ch 60W ಫ್ರಂಟ್ ಫೈರಿಂಗ್ ಸ್ಪೀಕರ್‌ಗಳಿವೆ. ಇದು ಅಡಾಪ್ಟಿವ್ ಪಿಕ್ಚರ್, ರೆಸ್ಪಾನ್ಸಿವ್ ಯುಐ, ಟ್ಯಾಪ್ ವ್ಯೂ ಟೆಕ್ನಾಲಜಿ, ಮತ್ತು ಆಕ್ಟಿವ್ ವಾಯ್ಸ್ ಆಂಪ್ಲಿಫಯರ್ (AVA) ನಂತಹ ಸ್ಮಾರ್ಟ್ ಫೀಚರ್ಸ್‌ಗಳನ್ನ ಒಳಗೊಂಡಿದೆ. ಇನ್ನು ಈ ಟಿವಿಯ ಹೆಸರನ್ನು ಕೊರಿಯನ್ ಪದ ‘ಸೆರೋ' ನಿಂದ ತೆಗೆದುಕೊಳ್ಳಲಾಗಿದೆ, ಇದರಲ್ಲಿ ಸೆರೋ ಅಂದರೆ ಲಂಬ ಎನ್ನುವ ಅರ್ಥವಾಗಿದೆ. ಅಲ್ಲದೆ ಈ ಸ್ಮಾರ್ಟ್ ಟಿವಿಯಲ್ಲಿ ಸ್ಮಾರ್ಟ್‌ಫೋನ್ ಅನುಭವವನ್ನು ಹೊಂದಲು ಬಯಸುವ ಕಿರಿಯ ಸಾಮಾಜಿಕ ಮಾಧ್ಯಮ ಪೀಳಿಗೆಗೆ ದಿ ಸಿರೊ ಸಜ್ಜಾಗಿದೆ ಎಂದು ಸ್ಯಾಮ್ಸಂಗ್ ಹೇಳಿಕೊಂಡಿದೆ.

ಇದಲ್ಲದೆ ದಿ ಸೆರೊ ಸ್ಮಾರ್ಟ್‌ಟಿವಿ ಸಾಮಾಜಿಕ ಮಾಧ್ಯಮ ವಿಷಯ, ಸ್ಟ್ರೀಮಿಂಗ್ ಸೇವೆಗಳು ಮತ್ತು ಗೇಮಿಂಗ್‌ಗಾಗಿ ಹೊಂದುವಂತೆ ಮಾಡಲಾಗಿದೆ. ಸದ್ಯ ಗ್ರಾಹಕರು ಈಗ ತಮ್ಮ ಟಿವಿಗಳನ್ನು ಹಿಂದೆಂದಿಗಿಂತಲೂ ವಿಭಿನ್ನ ರೀತಿಯಲ್ಲಿ ಬಳಸುತ್ತಿದ್ದಾರೆ, ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲ್ ಮಾಡುವುದು, ಇತ್ತೀಚಿನ ವೈರಲ್ ವೀಡಿಯೊಗಳನ್ನು ನೋಡುವುದು ಅಥವಾ ಅವರ ನೆಚ್ಚಿನ ಒಟಿಟಿ ಪ್ರದರ್ಶನಗಳನ್ನು ನೋಡುವುದು ಸೇರಿದಂತೆ, ಸೊಶೀಯಲ್ ಮೀಡಿಯಾ ಅನುಭವ ದಿ ಸೆರೊ ಸ್ಮಾರ್ಟ್‌ಟಿವಿಯಲ್ಲಿಯೂ ದೊರೆಯಲಿದೆ.

ಸದ್ಯ ಸ್ಯಾಮ್‌ಸಂಗ್ ದಿ ಸೆರೊವನ್ನು ಪ್ರತ್ಯೇಕವಾಗಿ ರಿಲಯನ್ಸ್ ಡಿಜಿಟಲ್ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದೆ. ಇದರ ಬೆಲೆ ರೂ 1,24,990, ಆಗಿದ್ದು, ಕ್ಯಾಶ್‌ಬ್ಯಾಕ್ ಮತ್ತು ಇಎಂಐ ಆಯ್ಕೆಗಳೊಂದಿಗೆ ಬರುತ್ತದೆ. ಜೊತೆಗೆ ಸ್ಯಾಮ್‌ಸಂಗ್ ದಿ ಸೆರೊವನ್ನು 10 ವರ್ಷಗಳ ಸ್ಕ್ರೀನ್ ಬರ್ನ್-ಇನ್ ಖಾತರಿ, ಒಂದು ವರ್ಷದ ಸಮಗ್ರ ಖಾತರಿಯನ್ನು ನೀಡುತ್ತಿದೆ.


Click it and Unblock the Notifications








