SM-R382 ಸ್ಯಾಮ್‌ಸಂಗ್ ಮಾರುಕಟ್ಟೆಯಲ್ಲಿ ಜಾದೂ ಮಾಡಬಲ್ಲುದೇ?

Written By:

ಸ್ಯಾಮ್‌ಸಂಗ್ ತನ್ನ ಮೊದಲ ವೇರಿಯೇಬಲ್ ಡಿವೈಸ್ ಆದ ಗೇರ್ ಫಿಟ್ ಸೇರಿದಂತೆ ತನ್ನ 2 ನೇ ಕನರೇಶನ್ ವೇರಿಯೇಬಲ್ ಅನ್ನು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆಮಾಡಿದೆ. ದಕ್ಷಿಣ ಕೊರಿಯಾದ ಈ ಸ್ಮಾರ್ಟ್‌ಫೋನ್ ದಿಗ್ಗಜ ತನ್ನ ಹೆಚ್ಚು ಹೆಸರುವಾಸಿಯಾದ ಗ್ಯಾಲಕ್ಸಿ ಎಫ್ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದ್ದು ಇದಕ್ಕೆ ಜೊತೆಯಾಗಿ ತನ್ನ ಇತ್ತೀಚಿನ ಫ್ಲ್ಯಾಗ್‌ಶಿಪ್ ಟ್ಯಾಬ್ಲೆಟ್ ಡಿವೈಸ್ ಗ್ಯಾಲಕ್ಸಿ ಟ್ಯಾಬ್ ಎಸ್ ಅನ್ನು ಘೋಷಿಸಿದೆ.

ಇನ್ನು ವೇರಿಯೇಬಲ್ ವಿಷಯದಲ್ಲಂತೂ ಕಂಪೆನಿ ತನ್ನ ಹೆಸರನ್ನು ಬಿಟ್ಟುಕೊಡದೇ ಹೆಚ್ಚಿನ ಸಂಖ್ಯೆಯ ವೇರಿಯೇಬಲ್ ಡಿವೈಸ್ ಎಫ್‌ಸಿಸಿ ಡೇಟಾಬೇಸ್‌ನಲ್ಲಿ ಕಂಡುಬಂದಿದೆ. ಸೈಟ್‌ಗಳಲ್ಲಿ ಇದು ಕಂಡು ಬಂದಿದೆ ಎಂದಾದಲ್ಲಿ ಇದು ಕೂಡಲೇ ಲಾಂಚ್ ಆಗಲಿದೆ ಎಂಬುದು ಖಾತ್ರಿಯಾಗಿದೆ.

ಸ್ಯಾಮ್‌ಸಂಗ್ SM-R382 ಸ್ಮಾರ್ಟ್‌ವಾಚ್‌ನ ವೈಶಿಷ್ಟ್ಯವೇನು

ಈ ಡಿವೈಸ್‌ನ ಮಾಡೆಲ್ ಸಂಖ್ಯೆ SM-R382 ನೊಂದಿಗೆ ಬಂದಿದ್ದು, ಇದು ಆನ್‌ಲೈನ್‌ನಲ್ಲಿ ಕಂಡುಬಂದಿದ್ದು ಇದು ಮೊದಲ ಬಾರಿಯೇನಲ್ಲ. ಈ ಮೊದಲೂ ಇದು ಜಾತಾಣದಲ್ಲಿ ಇದು ಹೆಸರನ್ನು ಮೂಡಿಸಿದೆ, ಆದರೆ ಇದು ಯಾವ ಬಗೆಯ ಡಿವೈಸ್ ಎಂಬುದು ಖಾತ್ರಿಗೊಂಡಿರಲಿಲ್ಲ. ಈಗ SM-R382 ಒಂದು ವೇರಿಯೇಬಲ್ ಎಂಬುದು ತಿಳಿದುಬಂದಿದ್ ಸ್ಮಾರ್ಟ್‌ವಾಚ್ ಆಗಿದೆ. ಆದರೆ ಇದು ಸಿಮ್ ಆಧಾರಿತ ಗೇರ್ 2 ನ ಮಾದರಿಯೇ ಅಥವಾ ಆಂಡ್ರಾಯ್ಡ್ ಆಧಾರಿತ ಗ್ಯಾಲಕ್ಸಿ ವೇರ್ ಎಂಬುದನ್ನು ಸ್ಯಾಮ್‌ಸಂಗ್ ಮಾತ್ರವೇ ದೃಢಪಡಿಸಬೇಕಾಗಿದೆ.

ವರದಿಯ ಪ್ರಕಾರ, ಗೇರ್ 2 ಎತ್ತರದಲ್ಲಿ SM-R382 ಇದು 10ಎಮ್‌ಎಮ್ ಸಣ್ಣದಾಗಿದ್ದು, ಇದು ಹಾರ್ಡ್ ಹೋಮ್ ಬಟನ್ ಅಥವಾ ಕ್ಯಾಮೆರಾವನ್ನು ಹೊಂದಿಲ್ಲದಿರಬಹುದು. ಬ್ಲೂಟೂತ್ ದೃಢೀಕರಣದ ಮೂಲಕ ಇದು ಈಗಾಗಲೇ ಹಾದುಹೋಗಬಹುದಾಗಿದ್ದು ಇದು ಕೇವಲ ವೈ-ಫೈ ಮತ್ತು ಬ್ಲೂಟೂತ್ ಸಂಪರ್ಕವನ್ನು ವೈಶಿಷ್ಟ್ಯಗೊಳಿಸುತ್ತದೆ.

ಇಲ್ಲಿಯವರೆಗೆ, ಕಂಪೆನಿಯು ಡಿವೈಸ್‌ನ ಬೆಲೆ ಮತ್ತು ಲಭ್ಯತೆಯನ್ನು ನಮೂದಿಸಿಲ್ಲ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot