ಭಾರತದಲ್ಲಿ ಸ್ಯಾಮ್‌ಸಂಗ್ ಸ್ಮಾರ್ಟ್ ಮಾನಿಟರ್ M5 ಮತ್ತು M7 ಬಿಡುಗಡೆ!
ಸ್ಮಾರ್ಟ್‌ಫೋನ್ ದೈತ್ಯ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಮಾತ್ರವಲ್ಲದೆ ಇತರೆ ವಲಯದಲ್ಲೂ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ ಹೊಸ ಸ್ಮಾರ್ಟ್ ಮಾನಿಟರ್ M5 ಮತ್ತು ಸ್ಮಾರ್ಟ್ ಮಾನಿಟರ್ M7 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ಸ್ಮಾರ್ಟ್ ಮಾನಿಟರ್ ಎಂ5 27 ಇಂಚಿನ ಡಿಸ್‌ಪ್ಲೇ ಹೊಂದಿದ್ದರೆ, ಸ್ಮಾರ್ಟ್ ಮಾನಿಟರ್ ಎಂ7 32 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನು ಸ್ಯಾಮ್‌ಸಂಗ್ ಸಂಸ್ಥೆ ತನ್ನ ಈ ಹೊಸ ಸ್ಮಾರ್ಟ್ ಮಾನಿಟರ್ ಅನ್ನು 'ಡು-ಇಟ್-ಆಲ್' ಸ್ಕ್ರೀನ್ ಎಂದು ಹೆಸರಿಸಿದೆ.

ಹೌದು, ಸ್ಯಾಮ್‌ಸಂಗ್ ಸಂಸ್ಥೆ ಹೊಸ ಮಾನಿಟರ್ M5 ಮತ್ತು ಸ್ಮಾರ್ಟ್ ಮಾನಿಟರ್ M7 ಅನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಮಾನಿಟರ್‌ಗಳು ಪಿಸಿ ಅಥವಾ ಲ್ಯಾಪ್‌ಟಾಪ್‌ನೊಂದಿಗೆ ಸಂಪರ್ಕಿಸದೆ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಆಪಲ್ ಟಿವಿ ಮತ್ತು ಇತರ ಒಟಿಟಿ ಅಪ್ಲಿಕೇಶನ್‌ಗಳನ್ನು ವೀಕ್ಷಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಜೊತೆಗೆ ಸ್ಯಾಮ್‌ಸಂಗ್ ಡಿಎಕ್ಸ್ ಕಾರ್ಯವನ್ನು ಸಹ ಬೆಂಬಲಿಸಲಿವೆ. ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಡೆಸ್ಕ್‌ಟಾಪ್ ತರಹದ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇನ್ನುಳಿದಂತೆ ಈ ಮಾನಿಟರ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಸ್ಮಾರ್ಟ್ ಮಾನಿಟರ್ M5 1,920x1,080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 27 ಇಂಚಿನ ಫುಲ್-ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಆದರೆ ಸ್ಯಾಮ್‌ಸಂಗ್ ಸ್ಮಾರ್ಟ್ ಮಾನಿಟರ್ M7 3,840x2,160 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 32 ಇಂಚಿನ 4K ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಎರಡೂ ಮಾನಿಟರ್ ಡಿಸ್‌ಪ್ಲೇ 16: 9 ರಚನೆಯ ಅನುಪಾತವನ್ನು ಹೊಂದಿದ್ದು, 250 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿವೆ. ಜೊತೆಗೆ 8 ಎಂಎಸ್ ರೆಸ್ಪಾನ್ಸ್ ಟೈ ಎಚ್‌ಡಿಆರ್ 10 ಬೆಂಬಲ, 3,000: 1 ಕಾಂಟ್ರಾಸ್ಟ್ ಅನುಪಾತ ಮತ್ತು 178-ಡಿಗ್ರಿ ನೋಡುವ ಕೋನಗಳನ್ನು ಹೊಂದಿರುವ ವಿಎ ಫಲಕವನ್ನು ಹೊಂದಿವೆ.

ಇನ್ನು ಸ್ಯಾಮ್‌ಸಂಗ್ ಹೊಸ ಮಾನಿಟರ್‌ಗಳು ಪಿಸಿ ಅಥವಾ ಲ್ಯಾಪ್‌ಟಾಪ್‌ನೊಂದಿಗೆ ಸಂಪರ್ಕಿಸದೆ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಆಪಲ್ ಟಿವಿ ಮತ್ತು ಇತರ ಒಟಿಟಿ ಅಪ್ಲಿಕೇಶನ್‌ಗಳನ್ನು ವೀಕ್ಷಿಸಲು ನಿಮಗೆ ಅವಕಾಶ ಮಾಡಿಕೊಡುತ್ತವೆ. ಜೊತೆಗೆ ಸ್ಯಾಮ್‌ಸಂಗ್ ಡಿಎಕ್ಸ್ ಕಾರ್ಯವನ್ನು ಸಹ ಬೆಂಬಲಿಸಲಿವೆ. ಅಲ್ಲದೆ ಈ ಮಾನಿಟರ್‌ಗಳನ್ನು ಸ್ಯಾಮ್‌ಸಂಗ್ ಸಂಸ್ಥೆ ‘ಡು-ಇಟ್-ಆಲ್' ಸ್ಕ್ರೀನ್ ಎಂದು ಹೆಸರಿಸಿದೆ. ಯುವ ಜನತೆಯೆ ಆಶಯಕ್ಕೆ ತಕ್ಕಂತೆ ಈ ಮಾನಿಟರ್‌ಗಳನ್ನ ವಿನ್ಯಾಸಗೊಳಿಸಲಾಗಿದೆ.

ಸದ್ಯ ಸ್ಯಾಮ್‌ಸಂಗ್ ಸ್ಮಾರ್ಟ್ ಮಾನಿಟರ್ M5 ಬೆಲೆ ರೂ. 28,000 ಆದರೆ ಸೀಮಿತ ಸಮಯಕ್ಕೆ 21,999 ರೂ. ಬೆಲೆಯಲ್ಲೂ ಸಹ ಲಭ್ಯವಾಗಲಿದೆ. ಇನ್ನು ಸ್ಯಾಮ್‌ಸಂಗ್ ಸ್ಮಾರ್ಟ್ ಮಾನಿಟರ್ M7 ಬೆಲೆ ರೂ. 57,000 ಆದರೆ ಪ್ರಸ್ತುತ ಇದನ್ನು 36,999 ರೂ. ಬೆಲೆಯಲ್ಲಿ ಖರೀದಿಸಬಹುದಾಗಿದೆ. ಈ ಎರಡೂ ಮಾನಿಟರ್‌ಗಳನ್ನು ಸ್ಯಾಮ್‌ಸಂಗ್ ಶಾಪ್, ಅಮೆಜಾನ್ ಮತ್ತು ಪ್ರಮುಖ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.


Click it and Unblock the Notifications








