Samsung: 2,990 ರೂ. EMI, 20% ಕ್ಯಾಶ್‌ಬ್ಯಾಕ್: Samsungನ ದೊಡ್ಡ ಟಿವಿಗಳ ಮೇಲೆ ಬಂಪರ್ ಆಫರ್!
ನೀವು ಸ್ಯಾಮ್‌ಸಂಗ್ (Samsung) ಟಿವಿ ಪ್ರಿಯರಾಗಿದ್ರೆ ನಿಮಗೊಂದು ಬಂಪರ್ ಆಫರ್ ಇದೆ. 2990 ರೂ.ನಿಂದ ಇಎಂಐ ಸೌಲಭ್ಯ ಮತ್ತು 20% ವರೆಗಿನ ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. ಈ ಆಫರ್‌ಗಳು Samsung.com, ಪ್ರಮುಖ ರಿಟೇಲ್ ಅಂಗಡಿಗಳು ಮತ್ತು ಹಲವು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ. ದೇಶವ್ಯಾಪಿ ಇರುವ ಗ್ರಾಹಕರು ಈ ಆಫರ್‌ನ ಪ್ರಯೋಜನ ಪಡೆಯಬಹುದು. ಈ ರಿಯಾಯಿತಿಗಳು ಜೂನ್ 1, 2024 ರಿಂದ ಆರಂಭವಾಗಿದ್ದು, ಇದೇ ಜೂನ್ 30ಕ್ಕೆ ಕೊನೆಗೊಳ್ಳಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಹಿನ್ನೆಲೆ ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಅಲ್ಟ್ರಾ ಪ್ರೀಮಿಯಂ, ಗ್ರಾಹಕರಿಗೆ ಈ ವಿಶೇಷ ಆಫರ್ ಘೋಷಿಸಿದೆ. ಕ್ರಿಕೆಟ್ ಪ್ರಿಯರು ದೊಡ್ಡ ಟಿವಿಗಳಲ್ಲಿ ಕ್ರೀಡಾಂಗಣದ ಅನುಭವ ಪಡೆಯಲು 'ಬಿಗ್ ಟಿವಿ ಡೇಸ್' ಮಾರಾಟ ಆರಂಭಿಸಲಾಗಿದೆ. ಸ್ಯಾಮ್‌ಸಂಗ್ ಅಲ್ಟ್ರಾ ಪ್ರೀಮಿಯಂ ನಿಯೋ ಕ್ಯೂಎಲ್‌ಇಡಿ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿಗಳು ಸೇರಿದಂತೆ ತನ್ನ ದೊಡ್ಡ ಟಿವಿಗಳ ಮೇಲೆ ಅತ್ಯಾಕರ್ಷಕ ಆಫರ್‌ಗಳನ್ನು ಘೋಷಿಸಿದೆ.

2,990 ರೂ. ಇಎಂಐ, 20% ಕ್ಯಾಶ್‌ಬ್ಯಾಕ್
'ಬಿಗ್ ಟಿವಿ ಡೇಸ್' ಆಫರ್ ಟೈಮ್‌ನಲ್ಲಿ ಸ್ಯಾಮ್‌ಸಂಗ್ ಟಿವಿಗಳನ್ನು ಖರೀದಿಸುವ ಗ್ರಾಹಕರು, ತಾವು ಖರೀದಿಸಿದ ಟಿವಿಯನ್ನು ಅವಲಂಬಿಸಿ 89,990 ರೂ.ನ ಸೆರಿಫ್ ಟಿವಿ ಅಥವಾ 79,990 ರೂ.ನ ಸೌಂಡ್‌ಬಾರ್ ಅನ್ನು ಉಚಿತವಾಗಿ ಪಡೆಯುತ್ತಾರೆ. ಗ್ರಾಹಕರು 2,990 ರೂ.ನಿಂದ ಆರಂಭವಾಗುವ ಸುಲಭ ಇಎಂಐ ಸೌಲಭ್ಯವನ್ನು ಪಡೆಯಬಹುದು. ಇದಲ್ಲದೇ, ಶೇ.20 ರಷ್ಟು ಕ್ಯಾಶ್‌ಬ್ಯಾಕ್ ಕೂಡ ಪಡೆಯಬಹುದು. ಈ ಆಫರ್‌ಗಳು 98″/85″/83″/77″/75″ ಗಾತ್ರಗಳ ಟಿವಿಗಳ ಮೇಲೆ ಲಭ್ಯವಿದೆ.
Neo QLED 8K: ಸ್ಯಾಮ್‌ಸಂಗ್‌ನ ನಿಯೋ ಕ್ಯೂಎಲ್ಇಡಿ 8ಕೆ ಟಿವಿ ಎನ್‌ಕ್ಯೂ8 ಎಐ ಜೆನ್2 ಪ್ರೊಸೆಸರ್ ಮತ್ತು 256 ಎಐ ನ್ಯೂರಲ್ ನೆಟ್‌ವರ್ಕ್‌ಗಳಿಂದ ಕಾರ್ಯ ನಿರ್ವಹಿಸುತ್ತದೆ. ಇದು ಎಐ-ಆಧರಿತ ಅನುಭವವನ್ನು ಒದಗಿಸುತ್ತದೆ ಮತ್ತು ಸ್ಪಷ್ಟವಾಗಿರುವ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಈ ಟಿವಿಗಳು ಮೋಷನ್ ಆಕ್ಸಲೇಟರ್ ಟರ್ಬೋ ಪ್ರೋ ಫೀಚರ್ ಹೊಂದಿವೆ. ಹೆಚ್ಚು ಸ್ಪೀಡ್‌ನ ಗೇಮಿಂಗ್ ಆಡುವ ಸಂದರ್ಭದಲ್ಲಿ ದೃಶ್ಯಗಳನ್ನು ಸ್ಥಿರವಾಗಿ ಕಾಣಿಸುತ್ತದೆ ಮತ್ತು ಅತ್ಯಾಕರ್ಷಕಕ ವೇಗವನ್ನು ಒದಗಿಸುತ್ತದೆ.
Neo QLED 4K: ನಿಯೋ ಕ್ಯೂಎಲ್ಇಡಿ 4ಕೆ ಉತ್ಪನ್ನ ಶ್ರೇಣಿಯು ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಯಾವುದೇ ವಿಷಯವನ್ನು ಅದ್ಭುತವಾದ 4ಕೆ ದೃಶ್ಯಾವಳಿಯಲ್ಲಿ ತೋರಿಸುತ್ತದೆ ಮತ್ತು ಪ್ರತೀ ದೃಶ್ಯಕ್ಕೂ ಜೀವ ತುಂಬುತ್ತದೆ. ಕ್ವಾಂಟಮ್ ಮ್ಯಾಟ್ರಿಕ್ಸ್ ತಂತ್ರಜ್ಞಾನದಿಂದ ಮತ್ತಷ್ಟು ಶಕ್ತಿ ತುಂಬಲ್ಪಟ್ಟಿದ್ದು, ಸಂಕೀರಣ ದೃಶ್ಯಗಳಲ್ಲಿಯೂ ಅತ್ಯುತ್ತಮ ದೃಶ್ಯ ವೈಭವವನ್ನು ಒದಗಿಸುತ್ತದೆ. ಆಡಿಯೋ ಅನುಭವ ಉನ್ನತೀಕರಿಸಲು ಡಾಲ್ಬಿ ಅಟ್ಮೋಸ್ ವ್ಯವಸ್ಥೆ ಇದೆ.
UHD TV: ಸ್ಯಾಮ್‌ಸಂಗ್‌ನ ಯುಎಚ್‌ಡಿ ಟಿವಿ ವಿಶಿಷ್ಟವಾದ ಕ್ರಿಸ್ಟಲ್ ಕಲರ್ ತಂತ್ರಜ್ಞಾನ ಹೊಂದಿದೆ. ಪ್ರಮುಖವಾಗಿ ಇದು ಬಣ್ಣಗಳಿಗೆ ಜೀವ ತುಂಬುತ್ತದೆ. ಮೋಷನ್ ಆಕ್ಸಲೇಟರ್ ಫೀಚರ್ ವೇಗವಾಗಿ ಚಲಿಸುವ ದೃಶ್ಯಗಳನ್ನು ಸುಗಮವಾಗಿ ಮತ್ತು ಸ್ಪಷ್ಟವಾಗಿ ಕಾಣಿಸುತ್ತದೆ. ಪ್ರತಿ ಛಾಯೆಯಲ್ಲೂ ಸೂಕ್ಷ್ಮ ವಿವರಗಳನ್ನು ಕಾಣಿಸುತ್ತದೆ. ಪ್ರತಿ ಗೇಮ್, ಸಿನಿಮಾ ಅಥವಾ ಟಿವಿ ಶೋಗಳನ್ನು ಹೆಚ್ಚು ಸೊಗಸಾಗಿ ಕಾಣಿಸುತ್ತದೆ ಮತ್ತು ಆನಂದಿಸುವಂತೆ ಮಾಡುತ್ತದೆ.
QLED TV: ಸ್ಯಾಮ್‌ಸಂಗ್‌ನ ಕ್ಯೂಎಲ್ಇಡಿ ಟಿವಿ ಕ್ವಾಂಟಮ್ ಡಾಟ್ ತಂತ್ರಜ್ಞಾನದೊಂದಿಗೆ ಅತ್ಯದ್ಭುತ ದೃಶ್ಯ ಗುಣಮಟ್ಟವನ್ನು ಒದಗಿಸುತ್ತದೆ. 100% ಬಣ್ಣ ಸ್ಪಷ್ಟತೆ ಹೊಂದಿರುವುದರಿಂದ ಈ ಟಿವಿ, ಎಷ್ಟೇ ಬ್ರೈಟ್‌ನೆಸ್ ಇದ್ದರೂ, ಜಾಸ್ತಿ ಮಾಡಿದರೂ, ಕಡಿಮೆ ಇದ್ದರೂ ಸೂಕ್ತವಾದ ಬಣ್ಣಗಳನ್ನೇ ಕಾಣಿಸುತ್ತವೆ. ಇದರ ಅಲ್ಟ್ರಾ-ಸ್ಲಿಮ್ ವಿನ್ಯಾಸವು ಯಾವುದೇ ರೀತಿ ಮನೆಯೊಳಗೆ ಸುಂದರವಾಗಿ ಕಾಣಿಸುತ್ತದೆ. ನೀವು ವಾಸಿಸುವ ಸ್ಥಳದ ಸೊಬಗನ್ನು ಹೆಚ್ಚಿಸುತ್ತದೆ.
OLED TV: ಓಎಲ್ಇಡಿ ಟಿವಿ NQ4 AI Gen2 ಪ್ರೊಸೆಸರ್‌ನಿಂದ ಕಾರ್ಯ ನಿರ್ವಹಿಸುತ್ತದೆ. ಪ್ರಪಂಚದ ಮೊದಲ ಗ್ಲೇರ್-ಫ್ರೀ ಓಎಲ್ಇಡಿ ಟಿವಿ ಯಾವುದೇ ರೀತಿಯ ಬೆಳಕು ಇದ್ದರೂ ಗಾಢ ಕಪ್ಪು ಮತ್ತು ಸ್ಪಷ್ಟ ದೃಶ್ಯಗಳನ್ನು ಪ್ರಸಾರ ಮಾಡುವಾಗ ಯಾವುದೇ ರೀತಿಯ ಅನಗತ್ಯ ರಿಫ್ಲೆಕ್ಷನ್‌ಗಳು ಕಾಣಿಸುವುದಿಲ್ಲ. ಈ ಟಿವಿಗಳೂ ಅದೇ ಅಸಾಧಾರಣ ಎನ್‌ಕ್ಯೂ4 ಎಐ ಜೆನ್2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುತ್ತದೆ.
ಒಟ್ಟಾರೆ, ಸ್ಯಾಮ್‌ಸಂಗ್ ಅಲ್ಟ್ರಾ ಪ್ರೀಮಿಯಂನ ಟಿವಿಗಳು ಎಲ್ಲಾ ಸಂದರ್ಭಗಳಲ್ಲೂ 8ಕೆ ಅನುಭವ ನೀಡುವ ವಿಡಿಯೋ ಮತ್ತು ಆಡಿಯೋ ಒದಗಿಸುತ್ತವೆ. ಓಟಿಟಿ ನೋಡುವಾಗ, ನಿಮ್ಮ ಮೆಚ್ಚಿನ ವಿಡಿಯೋ ಗೇಮ್‌ಗಳನ್ನು ಆಡುವಾಗ ಅಥವಾ ನೇರಪ್ರಸಾರದ ಕ್ರೀಡೆಗಳನ್ನು ವೀಕ್ಷಿಸುವಾಗ ಅದ್ಭುತ ದೃಶ್ಯ ವೈಭವವನ್ನು ಒದಗಿಸುತ್ತವೆ. ನೀವು ಸ್ಯಾಮ್‌ಸಂಗ್ ಟಿವಿ ಪ್ರಿಯರಾಗಿದ್ರೆ, ಈ ಆಫರ್‌ಗಳನ್ನು Samsung.com, ಪ್ರಮುಖ ರಿಟೇಲ್ ಅಂಗಡಿಗಳು ಮತ್ತು ಹಲವಾರು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಬಹುದು.


Click it and Unblock the Notifications








