ಬೆಂಗಳೂರಿಗರೇ ಸೌರಶಕ್ತಿಯಲ್ಲೇ ಮೊಬೈಲ್ ಚಾರ್ಜ್ ಮಾಡಿ
ಇಲೆಕ್ಟ್ರಾನಿಕ್ ದಿಗ್ಗಜ ಸ್ಯಾಮ್‌ಸಂಗ್ ಸೋಲಾರ್ ಶಕ್ತಿಯುಳ್ಳ ಉಚಿತ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸುವ ಇಚ್ಛೆ ವ್ಯಕ್ತಪಡಿಸಿದೆ.
ಓದಿರಿ: ತಂಗಿಗೆ ಅಣ್ಣನ ಪ್ರೀತಿಯ ಕೊಡುಗೆ: ರೂ 4,999 ರೊಳಗಿನ ಫೋನ್‌ಗಳು
ಆಯ್ಕೆಮಾಡಿದ ಸ್ಯಾಮ್‌ಸಂಗ್ ಕೆಫೆಗಳಲ್ಲಿ ಈ ಸೋಲಾರ್ ಚಾರ್ಜಿಂಗ್ ಮೊಬೈಲ್ ಸ್ಟೇಶನ್‌ಗಳನ್ನು ಕಂಪೆನಿ ಬೆಂಗಳೂರಿನ ಜನತೆಗೆ ಒದಗಿಸಲಿದೆ. ಇಂದಿನ ಲೇಖನದಲ್ಲಿ ಇದರ ವಿಶೇಷತೆ ಏನು ಎಂಬುದನ್ನು ನೋಡೋಣ.

ಸೌರಶಕ್ತಿ ಮೊಬೈಲ್ ಚಾರ್ಜರ್
ಸೋಲಾರ್ ಆಧಾರಿತ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದಾಗಿದೆ.

ಸೌರಶಕ್ತಿ ಮೊಬೈಲ್ ಚಾರ್ಜರ್
ನಗರಗಳಲ್ಲಿರುವ ಸ್ಯಾಮ್‌ಸಂಗ್ ಕೆಫೆಗಳಲ್ಲಿ ಈ ವ್ಯವಸ್ಥೆಯನ್ನು ಬಳಸಿಕೊಂಡು ಮೊಬೈಲ್‌ಗೆ ಉಚಿತ ಚಾರ್ಜಿಂಗ್ ಅನ್ನು ಮಾಡಿಕೊಳ್ಳಬಹುದಾಗಿದೆ.

ಸೌರಶಕ್ತಿ ಮೊಬೈಲ್ ಚಾರ್ಜರ್
ಯಾವುದೇ ಶುಲ್ಕವನ್ನು ಇದಕ್ಕಾಗಿ ವಿಧಿಸಬೇಕಾಗಿಲ್ಲ ಮತ್ತು ಉತ್ಪನ್ನ ಪ್ರದರ್ಶನಗಳು ಹಾಗೂ ಪರಿವರ್ತನೆಗಾಗಿ ಬಳಸಿಕೊಳ್ಳಬಹುದಾದ ಸ್ಟೋರ್‌ಗಳಲ್ಲಿ ಈ ವ್ಯವಸ್ಥೆ ಇರುತ್ತದೆ.

ಸೌರಶಕ್ತಿ ಮೊಬೈಲ್ ಚಾರ್ಜರ್
ಉಚಿತ ಸೋಲಾರ್ ಆಧಾರಿತ ವ್ಯವಸ್ಥೆ ಇದಾಗಿದೆ ಎಂದು ಕಂಪೆನಿ ತಿಳಿಸಿದ್ದು ಭಾರತದಲ್ಲಿ ಇಂತಹ ಪ್ರಯೋಗ ಇದೇ ಮೊದಲ ಬಾರಿಗೆ ಮಾಡಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.

ಸೌರಶಕ್ತಿ ಮೊಬೈಲ್ ಚಾರ್ಜರ್
ಸೋಲಾರ್ ಶಕ್ತಿಯ 300KW ದಿನಕ್ಕೆ 20 ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಬಲ್ಲುದು.

ಸೌರಶಕ್ತಿ ಮೊಬೈಲ್ ಚಾರ್ಜರ್
ಸಿಎಮ್‌ಎಚ್ ರೋಡ್, ಇಂದಿರಾನಗರ್, ಟೋಟಲ್ ಮಾಲ್, ಸರ್ಜಾಪುರ ರೋಡ್, ಶಂಕರನಗರ, ಮಲ್ಲೇಶ್ವರಮ್ ಮತ್ತು ವಿಜಯನಗರದಲ್ಲಿ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಸೌರಶಕ್ತಿ ಮೊಬೈಲ್ ಚಾರ್ಜರ್
ಗ್ಯಾಲಕ್ಸಿ ಎಸ್6 ಎಡ್ಜ್ + ನ ಲಾಂಚ್ ಅನ್ನು ಕಂಪೆನಿ ನಗರದಲ್ಲಿ ಈ ಸಂದರ್ಭದಲ್ಲಿ ಮಾಡಿದೆ.

ಸೌರಶಕ್ತಿ ಮೊಬೈಲ್ ಚಾರ್ಜರ್
ಗೋಲ್ಡ್ ಪ್ಲಾಟಿನಮ್ ಮತ್ತು ಸಿಲ್ವರ್ ಟೈಟಾನಿಯಮ್ ಬಣ್ಣದಲ್ಲಿ ಗ್ಯಾಲಕ್ಸಿ ಎಸ್6 ಎಡ್ಜ್ + ಫೋನ್ ಲಭ್ಯವಾಗುತ್ತಿದ್ದು ಬೆಲೆ ರೂ 57,900 ಆಗಿದೆ.

ಸೌರಶಕ್ತಿ ಮೊಬೈಲ್ ಚಾರ್ಜರ್
ಭಾರತೀಯ ಗ್ರಾಹಕರ ಬಯಕೆಗಳನ್ನು ಈಡೇರಿಸುವಂತೆಯೇ ಈ ಫೋನ್ ಅನ್ನು ಸಿದ್ಧಪಡಿಸಲಾಗಿದ್ದು ನೋಯಿಡಾದಲ್ಲಿ ಫೋನ್ ತಯಾರಾಗಿದೆ

ಸೌರಶಕ್ತಿ ಮೊಬೈಲ್ ಚಾರ್ಜರ್
ಲೈವ್ ವೀಡಿಯೊ ಬ್ರಾಡ್‌ಕಾಸ್ಟ್, ಪೀಪಲ್ ಎಡ್ಜ್, ಈಸಿ ಶೇರ್, ಕ್ಯಾಮೆರಾ ಮತ್ತು ಮೈಪ್ರೊಫೈಲ್ ಮೊದಲಾದ ಪ್ರಮುಖ ಫೀಚರ್‌ಗಳಲ್ಲಿ ಅಭಿವೃದ್ಧಿಯನ್ನು ಮಾಡಲಾಗಿದೆ.


Click it and Unblock the Notifications








