Home
ಸುದ್ದಿಜಾಲ

ಭಾರತದಲ್ಲಿ ಈ ವರ್ಷ ನಂಬರ್‌ ಒನ್‌ ಸ್ಥಾನ ಪಡೆದುಕೊಂಡ ಮೊಬೈಲ್‌ ಬ್ರ್ಯಾಂಡ್‌ ಯಾವುದು ಗೊತ್ತಾ?

ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಇದೇ ಕಾರಣಕ್ಕೆ ಹಲವು ಜನಪ್ರಿಯ ಬ್ರ್ಯಾಂಡ್‌ಗಳು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಪರಿಚಯಿಸುತ್ತಾ ಬಂದಿವೆ. ಜೊತೆಗೆ ಆಕರ್ಷಕ ಫೋನ್‌ಗಳ ಮೂಲಕ ಗ್ರಾಹಕರ ಮನಗೆದ್ದಿವೆ. ಇದಲ್ಲದೆ ಭಾರತದ ಮೊಬೈಲ್‌ ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕಾಗಿ ಕೂಡ ಪೈಪೋಟಿ ನಡೆಸುತ್ತಾ ಬಂದಿವೆ.

ಹೌದು, ಜನಪ್ರಿಯ ಬ್ರ್ಯಾಂಡ್‌ಗಳಾದ ಶಿಯೋಮಿ, ಸ್ಯಾಮ್‌ಸಂಗ್‌ ಫೋನ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಈ ಎರಡೂ ಬ್ರ್ಯಾಂಡ್‌ಗಳ ನಡುವೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಸ್ಯಾಮ್‌ಸಂಗ್‌ ಈ ವರ್ಷವನ್ನು ಸಹ ಅಗ್ರಸ್ಥಾನದೊಂದಿಗೆ ಕೊನೆಗೊಳಿಸಲಿದೆ ಎಂದು ಕೌಂಟರ್‌ಪಾಯಿಂಟ್‌ ವರದಿ ಹೇಳಿದೆ. ಹಾಗಾದ್ರೆ ಕೌಂಟರ್‌ಪಾಯಿಂಟ್‌ ವರದಿ ಹೇಳಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ ಈ ವರ್ಷ ನಂಬರ್‌ ಒನ್‌ ಸ್ಥಾನ ಪಡೆದುಕೊಂಡ ಮೊಬೈಲ್‌ ಬ್ರ್ಯಾಂಡ್‌ ಯಾವುದು

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. 2023ರಲ್ಲಿಯೂ ಮುಂದುವರೆದಿದ್ದು, ಈ ವರ್ಷವನ್ನು ಕೂಡ ಅಗ್ರಸ್ಥಾನದೊಂದಿಗೆ ಕೊನೆಗೊಳಿಸುವ ಹಾದಿಯಲ್ಲಿ ಸ್ಯಾಮ್‌ಸಂಗ್‌ ನಡೆದಿದೆ. ಸದ್ಯ ಕೌಂಟರ್‌ಪಾಯಿಂಟ್ ರಿಸರ್ಚ್‌ನ ತ್ರೈಮಾಸಿಕ ಮಾರುಕಟ್ಟೆ ಮಾನಿಟರ್ ವರದಿ ಬಹಿರಂಗವಾಗಿದೆ. ಇದರಲ್ಲಿ ಸ್ಯಾಮ್‌ಸಂಗ್ 2023 ರಲ್ಲಿ ಭಾರತದ ಟಾಪ್ ಸ್ಮಾರ್ಟ್‌ಫೋನ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದು, ಶೀಯೋಮಿಯನ್ನು ಹಿಂದಿಕ್ಕಿದೆ.

ಭಾರತ ಮಾತ್ರವಲ್ಲ ಮಲೇಷ್ಯಾದಲ್ಲಿ ಸಹ ಸ್ಯಾಮ್‌ಸಂಗ್‌ ಕಮಾಲ್‌
ದಕ್ಷಿಣ ಕೊರಿಯಾದ ಟೆಕ್‌ ದೈತ್ಯ ಸ್ಯಾಮ್‌ಸಂಗ್‌ ಶಿಯೋಮಿ ಬ್ರ್ಯಾಂಡ್‌ಗೆ ಭರ್ಜರಿ ಪೈಪೋಟಿ ನೀಡಿದೆ. ಈಗಾಗಲೇ ಭಾರತದಲ್ಲಿ ಸೈಡ್‌ಲೈನ್‌ ಮಾಡಿರುವ ಸ್ಯಾಮ್‌ಸಂಗ್‌ ಮಲೇಷ್ಯಾದಲ್ಲಿ ಕೂಡ ಉನ್ನತ ಸ್ಥಾನವನ್ನು ಪಡೆಯಲು ಸಿದ್ಧವಾಗಿದೆ.

ಭಾರತದಲ್ಲಿ ಈ ವರ್ಷ ನಂಬರ್‌ ಒನ್‌ ಸ್ಥಾನ ಪಡೆದುಕೊಂಡ ಮೊಬೈಲ್‌ ಬ್ರ್ಯಾಂಡ್‌ ಯಾವುದು

ಭಾರತದಲ್ಲಿ ಅಗ್ರಸ್ಥಾನ ಪಡೆಯಲು ಕಾರಣಗಳೇನು?
ಭಾರತದಲ್ಲಿ ಸ್ಯಾಮ್‌ಸಂಗ್‌ ಅಗ್ರಸ್ಥಾನ ಪಡೆದುಕೊಳ್ಳುವುದಕ್ಕೆ ಹಲವು ಕಾರಣಗಳಿವೆ. ಅದರಲ್ಲೂ ಬಳಕೆದಾರರು ಬಯಸುವ ಪ್ರತಿ ವಿತರಣಾ ಚಾನಲ್‌ಗೆ ನಿರ್ದಿಷ್ಟವಾದ ಸ್ಮಾರ್ಟ್‌ಫೋನ್ ಸರಣಿಯನ್ನು ಸ್ಯಾಮ್‌ಸಂಗ್‌ ಹೊಂದಿದೆ. ಅಂದರೆ ಫ್ಲಿಪ್‌ಕಾರ್ಟ್‌ನಲ್ಲಿ F ಸರಣಿ ಫೋನ್‌ಗಳನ್ನು, ಅಮೆಜಾನ್‌ನಲ್ಲಿ M ಸರಣಿಯ ಫೋನ್‌ಗಳನ್ನು ಸೇಲ್‌ ಮಾಡುತ್ತಾ ಬಂದಿದೆ. ಜೊತೆಗೆ ಸ್ಯಾಮ್‌ಸಂಗ್‌ನ ಪ್ರೀಮಿಯಂ ಗ್ಯಾಲಕ್ಸಿ S ಮತ್ತು Z ಸರಣಿಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿವೆ. ಇದು ಸ್ಯಾಮ್‌ಸಂಗ್ ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಸಹಾಯ ಮಾಡಿದೆ.

ಜಾಗತಿಕವಾಗಿ ಸ್ಯಾಮ್‌ಸಂಗ್‌ನ ಮಾರುಕಟ್ಟೆ ಪಾಲು ವಿಕಸನಗೊಳ್ಳುತ್ತಿದೆ
ಭಾರತದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಸ್ಯಾಮ್‌ಸಂಗ್‌ ಜಾಗತಿಕವಾಗಿ ಕೇವಲ 42 ದೇಶಗಳಲ್ಲಿ ಮಾತ್ರ ತನ್ನ ನಾಯಕತ್ವವನ್ನು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿದೆ. ಇದರ ನಡುವೆ ಫಿಲಿಪೈನ್ಸ್, ಅಲ್ಜೀರಿಯಾ ಮತ್ತು ಕುವೈತ್ ಸೇರಿದಂತೆ ಆರು ರಾಷ್ಟ್ರಗಳಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಳ್ಳುತ್ತದೆ ಎಂದು ಕೌಂಟರ್‌ ಪಾಯಿಂಟ್ ವರದಿ ಹೇಳಿದೆ. ಅದರಲ್ಲೂ ಫಿಲಿಪೈನ್ಸ್ ನಲ್ಲಿ ರಿಯಲ್‌ಮಿ ಬ್ರ್ಯಾಂಡ್‌ ಫೋನ್‌ಗಳು ಭಾರಿ ಪೈಪೋಟಿ ನೀಡುತ್ತಿವೆ.

ಭಾರತದಲ್ಲಿ ಈ ವರ್ಷ ನಂಬರ್‌ ಒನ್‌ ಸ್ಥಾನ ಪಡೆದುಕೊಂಡ ಮೊಬೈಲ್‌ ಬ್ರ್ಯಾಂಡ್‌ ಯಾವುದು

ಆಪಲ್ ಮತ್ತು ಟೆಕ್ನೋ ರೈಸ್
ಇದಲ್ಲದೆ ಕುವೈತ್‌ನಲ್ಲಿ ಸ್ಯಾಮ್‌ಸಂಗ್ ಅನ್ನು ಆಪಲ್‌ ಕಂಪೆನಿ ಹಿಂದಿಕ್ಕುವ ಸಾಧ್ಯತೆಯಿದೆ. ಪ್ರೀಮಿಯಂ ವಿಭಾಗದಲ್ಲಿ ಐಫೋನ್ 14 ಪ್ರೊ ಸರಣಿಯ ಕಾರ್ಯಕ್ಷಮತೆ ಸ್ಯಾಮ್‌ಸಂಗ್‌ ಫೋನ್‌ಗಿಂತ ಉತ್ತಮವಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನು ಅಲ್ಜೀರಿಯಾದಲ್ಲಿ TECNO ಸಂಸ್ಥೆಯ ಸ್ಪರ್ಧಾತ್ಮಕ ಬೆಲೆ ತಂತ್ರಗಳು ಸ್ಯಾಮ್‌ಸಂಗ್‌ ಅನ್ನು ಹಿಂದಿಕ್ಕುವಂತೆ ಮಾಡಿದೆ.

ಇದೆಲ್ಲದರ ನಡುವೆಯೂ ಸ್ಯಾಮ್‌ಸಂಗ್‌ಗೆ, 2023ರಲ್ಲಿ ಸಾಕಷ್ಟು ಯಶಸ್ಸು ದೊರೆತಿದೆ. ವಿಶೇಷವಾಗಿ ಭಾರತದಂತಹ ಮಾರುಕಟ್ಟೆಗಳಲ್ಲಿ ಭರ್ಜರಿ ಯಶಸ್ಸು ದೊರೆತಿದೆ ಎಂದು ವರದಿಯಾಗಿದೆ. ಆದರೆ ರಿಯಲ್‌ಮಿ ಕಂಪೆನಿಯ ಹೊಸತನದ ಫೋನ್‌ಗಳು, ಶಿಯೋಮಿಯ ಪ್ರಬಲ ಪೈಪೋಟಿ ಮುಂದಿನ ದಿನಗಳಲ್ಲಿ ಸ್ಯಾಮ್‌ಸಂಗ್‌ನಿಂದ ಅಗ್ರಸ್ಥಾನ ಕಸಿದುಕೊಳ್ಳುವ ಸೂಚನೆಯನ್ನು ನೀಡಿವೆ. ಈ ನಿಟ್ಟಿನಲ್ಲಿ ಸ್ಯಾಮ್‌ಸಂಗ್‌ ಯಾವ ರೀತಿಯ ಹೆಜ್ಜೆಯನ್ನು ಇಡಲಿದೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
Samsung V/s Xiaomi: Samsung set to overtake Xiaomi as the top smartphone Player in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+