ಸ್ಯಾಮ್‌ಸಂಗ್ ವ್ಯೂಫಿನಿಟಿ S6 ಮಾನಿಟರ್ ಸರಣಿ ಅನಾವರಣ; ಇದರ ವಿನ್ಯಾಸವೇ ಫುಲ್ ಡಿಫ್ರೆಂಟ್
ಇಂದಿನ ದಿನಗಳಲ್ಲಿ ಮಾನಿಟರ್‌ಗಳಿಗೆ ಭಾರಿ ಬೇಡಿಕೆಯಿದೆ. ಬೇಡಿಕೆಗೆ ತಕ್ಕಂತೆ ಜನಪ್ರಿಯ ಬ್ರ್ಯಾಂಡ್‌ಗಳು ಕೂಡ ವಿಶೇಷ ಸ್ಮಾರ್ಟ್ ಮಾನಿಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾ ಬಂದಿವೆ. ಇದೀಗ ಸ್ಯಾಮ್‌ಸಂಗ್ ಕಂಪೆನಿ ಹೊಸ ವ್ಯೂಫಿನಿಟಿ S6 ಮಾನಿಟರ್‌ಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ವ್ಯೂಫಿನಿಟಿ S65UC ಮತ್ತು ವ್ಯೂಫಿನಿಟಿ S65VC ಎಂದು ಹೆಸರಿಸಲಾಗಿದೆ.
ಹೌದು, ಸ್ಯಾಮ್‌ಸಂಗ್ ವ್ಯೂಫಿನಿಟಿ S6 ಸರಣಿಯ ಮಾನಿಟರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಮಾನಿಟರ್‌ಗಳನ್ನು ವೃತ್ತಿಪರರನ್ನು ಗುರಿಯಾಗಿರಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ ಇವುಗಳ ವಿಷಯ ಬಳಕೆ ಮತ್ತು ಕ್ಯಾಶುಯಲ್ ಗೇಮಿಂಗ್‌ಗೆ ಸಹ ಅತ್ಯುತ್ತಮವಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್ ಮಾನಿಟರ್‌ಗಳ ವಿಶೇಷರೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ವ್ಯೂಫಿನಿಟಿ S6 ಸರಣಿ ಫೀಚರ್ಸ್
ಸ್ಯಾಮ್‌ಸಂಗ್ ವ್ಯೂಫಿನಿಟಿ S6 ಸರಣಿಯಲ್ಲಿ ವ್ಯೂಫಿನಿಟಿ S65UC ಮತ್ತು ವ್ಯೂಫಿನಿಟಿ S65VC ಹೆಸರಿನ ಎರಡು ಮಾನಿಟರ್‌ಗಳನ್ನು ಪರಿಚಯಿಸಲಾಗಿದೆ. ಈ ಎರಡೂ ಮಾನಿಟರ್‌ಗಳು ಕೂಡ 1,000r ತ್ರಿಜ್ಯದ ವಕ್ರತೆಯ 34 ಇಂಚಿನ VA ಕರ್ವ್ಡ್ ಸ್ಕ್ರೀನ್ ಹೊಂದಿವೆ. ಈ ಎರಡು ಕೂಡ 3,440 x 1,440 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಜೊತೆಗೆ 21:9 ರ ಇಮೇಜ್ ಸ್ವರೂಪವನ್ನು ನೀಡುತ್ತವೆ. ಇದಲ್ಲದೆ ಸ್ಮಾರ್ಟ್ ಮಾನಿಟರ್‌ಗಳು 100Hz ಗರಿಷ್ಠ ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿವೆ.
ಇನ್ನು ಸ್ಯಾಮ್‌ಸಂಗ್ ವ್ಯೂಫಿನಿಟಿ S6 ಸರಣಿ ಮಾನಿಟರ್ ಗ್ರಾಫಿಕ್ಸ್ ಮತ್ತು ಸ್ಲೋ ಮೋಷನ್ ಅನ್ನು ನೀಡಲಿದೆ. ಇನ್ನು ಆಡಿಯೋ ವಿಷಯದಲ್ಲಿ, ಪ್ರತಿ ಮಾನಿಟರ್ ಇನ್‌ಬಿಲ್ಟ್ 5W ಸ್ಪೀಕರ್‌ಗಳನ್ನು ಪಡೆದುಕೊಂಡಿದೆ. ಇದಲ್ಲದೆ ಡಿಸ್‌ಪ್ಲೇ 1.07 ಶತಕೋಟಿ ಕಲರ್‌ಗಳನ್ನು ಬೆಂಬಲಿಸಲಿವೆ. ಇದರೊಂದಿಗೆ ಜೀವಮಾನ ಮತ್ತು ನಿಖರವಾದ ಕಲರ್ ರಿ ಪ್ರೊಡಕ್ಷನ್ ಅನ್ನು ಖಾತ್ರಿಪಡಿಸುತ್ತದೆ. ಜೊತೆಗೆ ಮಾನಿಟರ್‌ಗಳು AMD ಫ್ರೀಸಿಂಕ್ ಬೆಂಬಲವನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಈ ಮಾನಿಟರ್‌ನಲ್ಲಿ ಬಳಕೆದಾರರು ಐ ಸೇವರ್ ಮೋಡ್ ಮತ್ತು ಫ್ಲಿಕರ್-ಫ್ರೀ ಟೆಕ್ನಾಲಜಿಯನ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದು ವಿಸ್ತೃತ ಬಳಕೆಯ ಸಮಯದಲ್ಲಿ ಕಣ್ಣಿನ ಆಯಾಸವನ್ನು ಕಡಿಮೆ ಮಾಡಲಿದೆ. ಜೊತೆಗೆ ಮಾನಿಟರ್‌ಗಳು ಪಿಕ್ಚರ್-ಇನ್-ಪಿಕ್ಚರ್ ಮತ್ತು ಪಿಕ್ಚರ್-ಬೈ-ಪಿಕ್ಚರ್ ಕಾರ್ಯನಿರ್ವಹಣೆಯನ್ನು ಸಹ ಬೆಂಬಲಿಸುತ್ತವೆ ಎಂದು ಹೇಳಲಾಗಿದೆ. ಇದರೊಂದಿಗೆ ಸ್ಮಾರ್ಟ್ ಮಾನಿಟರ್‌ನಲ್ಲಿ ಬಳಕೆದಾರರು ಮಲ್ಟಿ ಪಂಕ್ಷನ್ ಅನ್ನು ಪರಿಣಾಮ ಕಾರಿಯಾಗಿ ನಿರ್ವಹಿಸುವುದಕ್ಕೆ ಅವಕಾಶ ನೀಡಲಿದೆ.
ಇದಲ್ಲದೆ ಮಾನಿಟರ್‌ನಲ್ಲಿ ಇಮೇಜ್‌ಸೈಜ್, ಆಫ್ ಟೈಮರ್ ಪ್ಲಸ್, HDR10 ಬೆಂಬಲ, ಆಟೋ ಸೋರ್ಸ್ ಸ್ವಿಚ್+, ಅಡಾಪ್ಟಿವ್ ಪಿಕ್ಚರ್ ಮತ್ತು KVM ಸ್ವಿಚ್ ಸಾಮರ್ಥ್ಯಗಳು, ವಿವಿಧ ಬಳಕೆದಾರರ ಅಗತ್ಯತೆಗಳನ್ನು ಸಹ ಪೂರೈಸುವ ಸಾಮರ್ಥ್ಯ ನೀಡಲಾಗಿದೆ. ಇನ್ನು ಡಿಸ್ಪ್ಲೇಪೋರ್ಟ್ 1x 1.2 EA, HDMI 1x ಮತ್ತು ಹೆಡ್‌ಫೋನ್ ಪೋರ್ಟ್‌ಗಳನ್ನು ಒಳಗೊಂಡಿರುವ ಕನೆಕ್ಟಿವಿಟಿ ಆಯ್ಕೆಗಳನ್ನು ನೀಡಲಾಗಿದೆ. ಈ ಎರಡೂ ಮಾನಿಟರ್‌ಗಳು ಕೂಡ ಮಲ್ಟಿ USB ಪೋರ್ಟ್‌ಗಳನ್ನು ಹೊಂದಿವೆ.
ಇನ್ನು ಎರಡೂ ಮಾನಿಟರ್‌ಗಳು ಟಿಲ್ಟ್, ಎತ್ತರ ಮತ್ತು ಸ್ವಿವೆಲ್ ಕಾರ್ಯಗಳನ್ನು ಒಳಗೊಂಡಿವೆ. ಇದಲ್ಲದೆ VESA ವಾಲ್ ಮೌಂಟ್ ಹೊಂದಾಣಿಕೆಯನ್ನು ಸಹ ನೀಡಲಾಗಿದೆ. ಇದರಿಂದ ಬಳಕೆದಾರರು ಇದನ್ನು ಸೆಟ್ಟಿಂಗ್ ಸ್ಟ್ಯಾಂಡ್ ಅಥವಾ ವಾಲ್‌ಮೇಲೆ ಸೆಟ್ ಮಾಡಬಹುದಾಗಿದೆ.
ಬೆಲೆ ಮತ್ತು ಲಭ್ಯತೆ
ಸ್ಯಾಮ್‌ಸಂಗ್ ವ್ಯೂಫಿನಿಟಿ S6 ಸರಣಿ ಮಾನಿಟರ್‌ಗಳ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ. ಆದರೆ ಇದೇ ತಿಂಗಳ ಅಂತ್ಯದ ವೇಳೆಗೆ ಜರ್ಮನಿಯಲ್ಲಿ ಇದು ಅನಾವರಣಗೊಳ್ಳಲಿದೆ. ನಂತರದ ದಿನಗಳಲ್ಲಿ ಭಾರತದ ಮಾರುಕಟ್ಟೆಗೂ ಕೂಡ ಎಂಟ್ರಿ ನೀಡಲಿದೆ ಎಂದು ಹೇಳಲಾಗಿದೆ.


Click it and Unblock the Notifications








