Subscribe to Gizbot

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸೋಲಿಗೆ ಸಾನಿಯಾ ಟ್ವಿಟ್!..ಅಭಿಮಾನಿಗಳ ಆಕ್ರೋಶ!!

Written By:

ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯ ಸೋಲು ಕಂಡಿತ್ತು. ಅಂದೇ ಭಾರತ ಹಾಕಿ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿದ್ದು ಎಲ್ಲರಿಗೂ ಗೊತ್ತು. ಆದರೆ, ಈ ಬಗ್ಗೆ ಭಾರತೀಯ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮಾಡಿರುವ ಒಂದು ಟ್ವಿಟ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.!!

ಹೌದು, ಪಾಕಿಸ್ತಾನ ಟ್ರೋಫಿ ಎತ್ತಿ ಹಿಡಿಯುತ್ತಿದ್ದರೆ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಯಾವುದೇ ವಿವಾದ ಸೃಷ್ಟಿಯಾಗದಂತಹ ಟ್ವಿಟ್ ಮಾಡಿದ್ದಾರೆ.! ಆದರೂ, ಸಾನಿಯಾ ಟ್ವೀಟ್‌ಗೆ ಭಾರತೀಯರು ವಿರೋಧ ವ್ಯಕ್ತಪಡಿಸಿದ್ದಾರೆ.!! "ಕ್ರಿಕೆಟ್ನಲ್ಲಿ ಸೋತಿದ್ದೇವೆ ಆದರೆ ಹಾಕಿಯಲ್ಲಿ ಗೆಲುವು ನಮ್ಮದಾಯ್ತು. ಭಾರತದ ಹಾಕಿ ತಂಡಕ್ಕೆ ಅಭಿನಂದನೆ. ಗೆಲುವಿಗಾಗಿ ಪಾಕಿಸ್ತಾನ ತಂಡಕ್ಕೆ ಶುಭಕೋರುತ್ತೇನೆ ಎಂದು ಸಾನಿಯಾ ಟ್ವಿಟ್ ಮಾಡಿದ್ದಾರೆ".

ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸೋಲಿಗೆ ಸಾನಿಯಾ ಟ್ವಿಟ್!..ಅಭಿಮಾನಿಗಳ ಆಕ್ರೋಶ!!

ಸಾನಿಯಾ ಮಿರ್ಜಾ ಟ್ವಿಟ್ ಮಾಡ್ತಾ ಇದ್ದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾನಿಯಾ ವಿರುದ್ಧ ಕಿಡಿಕಾರಿದ್ದಾರೆ. 22,234 ಜನ ಸಾನಿಯಾ ಟ್ವಿಟ್ ಲೈಕ್ ಮಾಡಿದ್ದರೆ. 3 ಸಾವಿರಕ್ಕೂ ಹೆಚ್ಚು ಮಂದಿ ರೀಟ್ವಿಟ್ ಮಾಡಿದ್ದಾರೆ. ಎಲ್ಲಾ ರಿಟ್ವಿಟ್‌ಗಳಲ್ಲಿಯೂ ಸಾನಿಯಾ ಬಗ್ಗೆ ಅಸಮಧಾನ ಹೊರಹಾಕಿರುವುದುದೇ ಹೆಚ್ಚಾಗಿವೆ.!!

ವಾಸ್ತವವಾಗಿ ಪಾಕಿಸ್ತಾನ ಗೆಲುವು ಸಾಧಿಸ್ತಾ ಇದ್ದಂತೆ ಸಾನಿಯಾ ಮಿರ್ಜಾ ಟ್ವೀಟರ್ ಅಕೌಂಟ್ ನಲ್ಲಿ ಸಂದೇಶ ರವಾನೆ ಮಾಡಿದ್ದಾರೆ ಎಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಾನಿಯಾ ಟ್ವಿಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ಏನೆ ಆಗಲಿ ಮಿರ್ಜಾ ಎರಡು ತಂಡಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ.!!

Read more about:
English summary
india's hockey team on their win over Pakistan. Indian hockey team thrashed Pakistan 7-1 in Hockey World League Semi-final tournament.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot