saregama ಕಾರ್ವಾನ್‌ ಗೋ 2.0 ಮ್ಯೂಸಿಕ್‌ ಡಿವೈಸ್‌ ಲಾಂಚ್‌!

|

ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್‌ ಡಿವೈಸ್‌ಗಳಿಗೆ ಒಳ್ಳೆಯ ಮಾರುಕಟ್ಟೆ ಲಭ್ಯವಾಗುತ್ತಿದೆ. ಬಹುತೇಕ ಜನರು ಹೆಚ್ಚಿನ ಪ್ರಮಾಣದಲ್ಲಿ ತಮ್ಮ ಬಿಡುವಿನ ಸಮಯವನ್ನ ಮ್ಯೂಸಿಕ್‌ ಕೇಳುವುದರಲ್ಲಿ ಕಳೆಯುತ್ತಾರೆ. ಮ್ಯೂಸಿಕ್‌ ಅನ್ನು ಆನಂದಿಸುತ್ತ ಸಮಯ ಕಳೆಯುವುದಕ್ಕೆ ಬಯಸುತ್ತಾರೆ. ಮ್ಯೂಸಿಕ್‌ ಕೇಳಿ ಆನಂದಿಸಲು ಡಿವೈಸ್‌ಗಳನ್ನ ಆವಲಂಬಿಸಿ ಬಿಟ್ಟಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಹಲವಾರು ಕಂಪೆನಿಗಳು ಮ್ಯೂಸಿಕ್‌ ಡಿವೈಸ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಅದರಲ್ಲಿ ಸರೆಗಾಮ ಕಾರ್ವಾನ್‌ ಕಂಪೆನಿ ಕೂಡ ಒಂದಾಗಿದೆ.

ಹೌದು

ಹೌದು, ಸರೆಗಾಮ ಕಾರ್ವಾನ್‌ ಕಂಪೆನಿ ಮ್ಯೂಸಿಕ್‌ ಡಿವೈಸ್‌ ಅನ್ನು ಭಾರತದಲ್ಲಿ ಪರಿಚಯಿಸುವ ಮೂಲಕ ಸಂಚಲನ ಸೃಷ್ಟಿಸಿತ್ತು. ಕಳೆದ ಬಾರಿ ಸರೆಗಾಮಾ ಕಾರ್ವಾನ್‌ ಗೋ ಡಿವೈಸ್‌ ಪರಿಚಯಿಸಿದ್ದ ಕಂಪೆನಿ ಇದೀಗ ಸರೆಗಾಮ ಕಾರ್ವಾನ್‌ ಗೋ 2.0 ಡಿವೈಸ್‌ ಅನ್ನು ಭಾರತದಲ್ಲಿ ಲಾಂಚ್‌ ಮಾಡಿದೆ. ವೈ-ಫೈ ಸಂಪರ್ಕ ಮತ್ತು ಇಂಟರ್ನೆಟ್ ಆಧಾರಿತ ಮ್ಯೂಸಿಕ್‌ ಪ್ಲೇ ಮಾಡುವ ಹೊಸ ಫಿಚರ್ಸ್‌ಗಳನ್ನ ಪರಚಯಿಸಿದ್ದ ಸರೆಗಮಾ ಕಾರ್ವಾನ್ , ಇದೀಗ ಸರೆಗಮಾ ಕಾರ್ವಾನ್ ಗೋ 2.0 ದಲ್ಲಿ ಹೊಸ ಫೀಚರ್ಸ್‌ಗಳ ಜೊತೆಗೆ ನೂತನ ವಿನ್ಯಾಸವನ್ನು ಸಹ ಪರಿಚಯಿಸಿದೆ.

ಸರೆಗಾಮ ಕಾರ್ವಾನ್‌ ಗೋ 2.0

ಸರೆಗಾಮ ಕಾರ್ವಾನ್‌ ಗೋ 2.0

ಮ್ಯೂಸಿಕ್‌ ಡಿವೈಸ್ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಸರೆಗಾಮಾ ಕಾರ್ವಾನ್‌ ಕಂಪೆನಿ ತನ್ನ ಹೊಸ ಕಾರ್ವಾನ್‌ ಗೋ 2.0ನಲ್ಲಿ ಹೊಸ ವಿನ್ಯಾಸಕ್ಕೆ ಆಧ್ಯತೆ ನೀಡಿದೆ. ಚಿಕ್ಕ ಗಾತ್ರದ ಕ್ಲಾಸಿಕ್‌ ವಿನ್ಯಾಸದ ಡಿವೈಸ್‌ ಇದಾಗಿದ್ದು, ಉತ್ತಮ ಮ್ಯೂಸಿಕ್‌ ಪ್ಲೇಬ್ಯಾಕ್‌ ಅನ್ನು ಹೊಂದಿದೆ. ಸರೆಗಮಾ ಕಾರ್ವಾನ್ ಗೋ 2.0 1W ಔಟ್‌ಪುಟ್‌ ನೀಡುವ ಎರಡು ಸ್ಪೀಕರ್‌ಗಳನ್ನು ಒಳಗೊಂಡಿದೆ. ಅಲ್ಲದೆ ಈ ಡಿವೈಸ್‌ ಒಮ್ಮೆಗೆ 7 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಕಾರ್ವಾನ್‌ ಗೋ 2.0 ವಿನ್ಯಾಸ

ಕಾರ್ವಾನ್‌ ಗೋ 2.0 ವಿನ್ಯಾಸ

ಈ ಮ್ಯೂಸಿಕ್‌ ಡಿವೈಸ್‌ ರೇಡಿಯೋ ಸಂಪರ್ಕಕ್ಕೆ ಬೆಂಬಲವನ್ನು ನೀಡುತ್ತದೆ, ಮತ್ತು ಮೆಮೊರಿ ಕಾರ್ಡ್‌ಮೂಲಕ 32GB ವರೆಗೆ ಸಂಗ್ರಹ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದ್ದು. ಮ್ಯೂಸಿಕ್‌ ಅನ್ನು ಶೇಖರಣೆ ಮಾಡಬಹುದಾಗಿದೆ. ಇನ್ನು ಈ ಹೊಸ ಕಾರ್ವಾನ್ ಗೋ 2.0 ಸುಮಾರು 141 ಗ್ರಾಂ ತೂಕವನ್ನು ಹೊಂದಿದ್ದು, ಲೋಹದ ಕವಚವನ್ನು ಒಳಗೊಂಡಿದೆ. ಇದರಿಂದಾಗಿ ಉತ್ತಮ ಸೌಂಡ್‌ ಸಿಸ್ಟಂ ಅನ್ನು ಸಹ ಇದರಲ್ಲಿ ಕೇಳಬಹುದಾಗಿದೆ. ಜೊತೆಗೆ ಇದನ್ನ ಸುಲಭವಾಗಿ ಕ್ಯಾರಿ ಮಾಡಬಹುದಾಗಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ.

ಪ್ರಮುಖ ವಿಶೇಷತೆ

ಪ್ರಮುಖ ವಿಶೇಷತೆ

ಇನ್ನು ಈ ಡಿವೈಸ್‌ ‘ಸರೆಗಮಾ ಕಾರ್ವಾನ್' ಅಪ್ಲಿಕೇಶನ್ ಅನ್ನು ಸಹ ಬೆಂಬಲಿಸುತ್ತದೆ, ಇದನ್ನು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್ ಎರಡರಲ್ಲೂ ಕಾಣಬಹುದು. ಜೊತೆಗೆ ಬ್ಲೂಟೂತ್ ಸ್ಪೀಕರ್ ಅಥವಾ ಆಕ್ಸ್ ಮೂಲಕ ಇದನ್ನು ಸಂಪರ್ಕಿಸಬಹುದಾಗಿದ್ದು, ಮನೆ ಅಥವಾ ಕಾರ್ ಸ್ಪೀಕರ್‌ಗಳಿಂದ ಪ್ಲೇ ಮಾಡಬಹುದಾಗಿದೆ. ಅಲ್ಲದೆ ಇದು 3,000ಕ್ಕೂ ಹೆಚ್ಚು ಇಂಟರ್‌ ಸ್ಟೋರೇಜ್‌ ಮ್ಯೂಸಿಕ್‌ ಟ್ರ್ಯಾಕ್‌ಗಳನ್ನು ಹೊಂದಿದೆ, ಮ್ಯೂಸಿಕ್‌ ಕ್ಯಾಟ್‌ಲಾಗ್‌ನಲ್ಲಿ ಹೆಚ್ಚಿನ ಪ್ರಮಾಣದ ರೆಟ್ರೊ ಕ್ಲಾಸಿಕ್‌ ಸಾಂಗ್‌ಗಳನ್ನ ಹೊಂದಿದೆ.

ಮ್ಯೂಸಿಕ್‌

ಮ್ಯೂಸಿಕ್‌

ಸಾರೆಗಾಮಾ ಕಾರ್ವಾನ್‌ ಗೋ 2.0 ಮ್ಯೂಸಿಕ್‌ ಸ್ಟ್ರೀಮಿಂಗ್‌ ಗಾಗಿಯೇ ಬಂದಿರುವ ಡಿವೈಸ್‌ ಆಗಿದ್ದು. ಮ್ಯೂಸಿಕ್‌ ಕೇಳಬಯಸುವವರಿಗೆ ಇದು ಅತ್ಯುತ್ತಮ ಅನುಭವ ನೀಡಲಿದೆ. ಇದು ವೈಫೈ ಹಾಗೂ ಇಂಟರ್‌ನೆಟ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದ್ದು, ಮೆಮೊರಿ ಕಾರ್ಡ್‌ ಸೌಲಭ್ಯವನ್ನು ಹೊಂದಿರುವುದರಿಂದ ಇಂಟರ್‌ನೆಟ್‌ ಇಲ್ಲದೆಯೂ ಮ್ಯೂಸಿಕ್‌ ಅನ್ನು ಕೇಳಬಹುದಾಗಿದೆ. ಅಷ್ಟೇ ಅಲ್ಲ ಈ ಡಿವೈಸ್‌ನ ಇಂಟರ್‌ ಸ್ಟೋರೇಜ್‌ನಲ್ಲಿ ರೆಟ್ರೋ ಸಾಂಗ್ಸ್‌ ಲಭ್ಯವಿದ್ದು ಕೇಳಿ ಆನಂದಿಸಬಹುದಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಇನ್ನು ಸಾರೆಗಾಮಾ ಕಾರ್ವಾನ್ ಗೋ 2.0 4,590.ರೂ ಬೆಲೆಯನ್ನ ಹೊಂದಿದೆ. ಅಲ್ಲದೆ ಇದು ನೀಲಿ, ಸಾಲ್ಸಾ ಕೆಂಪು, ಪಚ್ಚೆ ಹಸಿರು ಮತ್ತು ಕ್ಲಾಸಿಕ್ ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು. ಪ್ರಮುಖ ಮಾರಾಟ ಮಾಳಿಗೆಗಳಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
The latest Saregama Carvaan Go 2.0 comes with a price label of Rs 4,590 in India, and you can buy it via Saregama's official e-store.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X